• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

hsrangaswamy

Active Member
841
178
43
ಸೊಗಸಾದ ಬರಹ. ಎಲ್ಲರಿಗೂ ಮನಸ್ಸುನ್ನು ತಣಿಸಿವಿರಿ. ಸೂಪರ್ ಆಗಿ ಬರದಿದ್ದರಿ
ಮುಂದಿನ ಸಂಚಿಕೆಯಲ್ಲಿ ಎನು ಬರಬಹುದಾದ ವಿಷಯಗಳ ಬಗ್ಗೆ ಕುತೂಹಲ.
 

Samar2154

Well-Known Member
2,331
1,286
159
ಭಾಗ 223


ರಾಜಸ್ಥಾನ್ ಸ್ಪೆಷಲ್......

ಬೆಂಗಳೂರಿನಿಂದ ಸಂಸ್ಥಾನದ ವಿಶೇಷ ವಿಮಾನದಲ್ಲಿ ಜೋಧಪುರ ತಲುಪಿದ್ದು ಅಲ್ಲಿರುವ ಸಂಸ್ಥಾನದ ಅರಮನೆ ತಲುಪಿದರು. ಇಲ್ಲಿನ ಅರಮನೆ ಉದಯಪುರದ ಅರಮನೆಗೆ ಹೋಲಿಸಿದರೆ ವಿಶಾಲವಾಗಿ ಇಲ್ಲದಿದ್ದರೂ ಸುಸಜ್ಜಿತವಾಗಿ ಆಕರ್ಶಣೀಯವಾಗಿತ್ತು.

ನೀತು........ರಾಣಾ ಇಲ್ಲಿ ಊಟದ ವ್ಯವಸ್ಥೆ.........

ರಾಣಾ.....ಅಜಯ್ ಸಿಂಗ್ ನೆನ್ನೆಯೇ ಬಂದಿದ್ದಾನೆ ಮಾತೆ ಎಲ್ಲವೂ ಸಿದ್ದ ಮಾಡಿಸಿದ್ದಾನೆ ಅದರ ಬಗ್ಗೆ ಚಿಂತೆಬೇಡ.

ನೀತು......ಆರಾಧನ ಮತ್ತವಳ ಕುಟುಂಬವೆಲ್ಲಿ ?

ಅಜಯ್ ಸಿಂಜ್ ಹತ್ತಿರ ಬಂದು ಗೌರವ ಸೂಚಿಸಿ.....ಅವರನ್ನಿಲ್ಲೇ ನೆಲ ಮಾಳಿಗೆಯ ಕೋಣೆಯಲ್ಲಿ ಇಟ್ಟಿರುವೆ ಅಲ್ಲಿಗೆ ಹೋಗೋಣವ ಮಾತೆ ?

ನೀತು.....ಮಗಳಿಗೆ ಆಯಾಸವಾಗಿದೆ ಇವರನ್ನು ವಿಚಾರಿಸಿಕೊಳ್ತೀನಿ ನಂತರ ಹೋಗೋಣ.

ನಿಶಾ ಅರಮನೆಯಲ್ಲಿ ಗುಡುಗುಡುನೇ ಓಡಾಡುತ್ತ ಎಲ್ಲವನ್ನೂ ನೋಡಿ ಅಮ್ಮನ ಬಳಿ ಬಂದು......ಮಮ್ಮ ಆನಿ ಲಿಲ್ಲ....ಕುದ್ದಿ ಲಿಲ್ಲ ಏನಿ ಇಲ್ಲ ಮಮ್ಮ.

ನಿಧಿ ತಂಗಿಯನ್ನೆತ್ತಿಕೊಂಡು........ಅದೆಲ್ಲ ಇಲ್ಲಿಲ್ಲ ಚಿನ್ನಿ ನಾವು ದೊಡ್ಡ ಅರಮನೆಗೆ ಹೋಗ್ತೀವಲ್ಲ ಅಲ್ಲಿದೆ ಆಗ ನೋಡುವಂತೆ.

ಅನುಷ.....ನಡಿ ಕಂದ ಫ್ರೆಶಾಗಿ ಊಟ ಮಾಡಿಸ್ತೀನಿ.

ನಿಶಾ....ಆಂಟಿ ನನ್ನಿ ಐಸ್ ಬೇಕು.

ಅನುಷ......ಮಮ್ಮಂಗೆ ಹೇಳಲಾ ?

ನಿಶಾ ಅವಳ ಕೆನ್ನೆಗೆ ಮುತ್ತಿಟ್ಟು.......ಆಂಟಿ ಪೀಚ್ ತುಂಬ ಬಿಸಿ ಬಿಸಿ ಆತು ಆಂಟಿ ಪೀಚ್ ನನ್ನಿ ಐಸ್ ಕೊಲು.

ನಿಧಿ......ಒಳಗೆ ಬನ್ನಿ ಆಂಟಿ ಅಲ್ಲಿ ತಂಪಾಗಿರುತ್ತೆ.

ನೀತು.......ಅನು ನೀವ್ಮೂರು ಜನ ಊಟ ಮುಗಿಸಿ ರೆಸ್ಟ್ ಮಾಡ್ತಿರಿ ನಾನೂ ಆಮೇಲೆ ಬರ್ತೀನಿ ಸುಮೇರ್ ನೀನಿವರ ಜೊತೆಯಲ್ಲಿರು. ನಡಿ ರಾಣ ನಾವೀಗಲೇ ಆರಾಧನ ಬಳಿ ಹೋಗೋಣ.

ನಿಶಾ ಅರಮನೆಯನ್ನು ಅಚ್ಚರಿಯಿಂದ ನೋಡುತ್ತ ಎಲ್ಲಾ ಕಡೆಗೂ ಓಡಾಡುತ್ತಿದ್ದರೆ ಸಂಸ್ಥಾನದ ಯುವರಾಣಿಯರು ಬಂದಿರುವುದನ್ನು ನೋಡಿ ಅಲ್ಲಿನ ದಾಸಿಯರು ವಿನಂಮ್ರತಾ ಪೂರಕವಾಗಿ ಅವರಿಗೆ ನಮಸ್ಕರಿಸಿದರು. ಮೂವರು ರೂಮೀಗೆ ಬಂದಾಗ.......

ಅನುಷ......ಒಂದು ರೂಮೇ ಇಷ್ಟೊಂದು ದೊಡ್ಡದಾಗಿದೆಯಲ್ಲ ನಿಧಿ

ನಿಧಿ.....ಚಿಕ್ಕಮ್ಮ ಇಲ್ಲಿಯ ಅರಮನೆ ತುಂಬ ಚಿಕ್ಕದು ನಾವು ರಾತ್ರಿ ಉದಯಪುರಕ್ಕೆ ಹೋಗ್ತೀವಲ್ಲ ಅಲ್ಲಿನ ಅರಮನೆ ನೋಡಿದಾಗ ನೀವು ಇನ್ನೇನಂತೀರೋ ಅಷ್ಟು ವಿಶಾಲ ಮತ್ತು ಭವ್ಯವಾಗಿದೆ.

ನಿಶಾ......ಆಂಟಿ ನಿನ್ನಿ ಬಂತು ನಾನಿ ತಾಚಿ ಮಾತೀನಿ.

ಅನುಷ......ಮೊದಲು ಊಟ ಮಾಡಿ ಆಮೇಲೆ ತಾಚಿ ಮಾಡುವಂತೆ

ನಿಶಾ......ಆತು ಆಂಟಿ ನನ್ನಿ ಸೂ...ಬಂತು.

ಅನುಷ ಮುಗುಳ್ನಗುತ್ತ......ನಡಿ....ಎಂದವಳನ್ನು ಬಾತ್ರೂಮಿಗೆ ಕರೆದೊಯ್ದಳು.
* *
* *


........continue
 

Samar2154

Well-Known Member
2,331
1,286
159
Continue........


ಅರಮನೆಯ ನೆಲಮಾಳಿಗೆಗೆ ಬಂದಾಗ 55ರ ಅಸುಪಾಸಿನಲ್ಲಿರುವ ಗಂಡ ಹೆಂಡತಿ ಹಾಗು 25ರ ಇಬ್ಬರು ಯುವಕರನ್ನು ಗೋಡೆಯಲ್ಲಿದ್ದ ಕೊಂಡಿಗಳಿಗೆ ಸರಪಳಿಯಿಂದ ಕಟ್ಟಿಹಾಕಲಾಗಿತ್ತು.

ರಾಣಾ.......ಇವಳೇ ಮಾತೆ ಆರಾಧನಾ ಈತ ಇವಳ ಗಂಡ ಮತ್ತು ಇವಳ ಇಬ್ಬರು ಮಕ್ಕಳು ಇಷ್ಟೆ ಇವರ ಕುಟುಂಬ.

ನೀತು......ಅಜಯ್ ಸಿಂಗ್ ಇವಳ ಗಂಡನ ಎರಡೂ ಕೈ ಕತ್ತರಿಸು.

ಮಾತೆಯ ಆಜ್ಞೆ ಕೇಳಿದಾಕ್ಷಣ ಅಜಯ್ ಸಿಂಗ್ ತನ್ನ ಖಡ್ಗವನ್ನಿರಿದರೆ ಆರಾಧನ ಮತ್ತವಳ ಗಂಡ ಹಾಗು ಮಕ್ಕಳ ಮುಖದಲ್ಲಿ ಭಯವು ತಾಂಡವಾಡತೊಡಗಿತು. ಖಡ್ಗವನ್ನಿಡಿದು ಗಂಡನ ಕಡೆ ಹೋಗ್ತಿದ್ದ ಅಜಯ್ ಸಿಂಗ್ ನೋಡಿ ಆರಾಧನಾ ಜೋರಾಗಿ ಚೀರುತ್ತ......

ಆರಾಧನ.....ನಮ್ಮನ್ಯಾಕೆ ಬಂಧಿಸಿ ಹಿಂಸಿಸುತ್ತಿದ್ದೀರ ? ರಾಣಾ ನಿನಗೆ ನಾನ್ಯಾರೆಂಬುದು ಮರೆತು ಹೋಯಿತಾ ? ನಾನು ಮಹರಾಣಿಯ ಆಪ್ತ ಸಹಾಯಕಿ ಆಗಿದ್ದವಳು ನೀನು ನನ್ನನ್ನು ಅರಮನೆಯಲ್ಲವರ ಜೊತೆ ನೋಡಿರುವೆಯಲ್ಲ. ನಾವೇನು ಅನ್ಯಾಯ ಮಾಡಿದ್ದೀವಿ ?

ನೀತು......ಒಂದೇ ಒಂದು ಪ್ರಶ್ನೆ ಕೇಳ್ತೀನಿ ಉತ್ತರಿಸು. ಮಹರಾಣಿ ಸುಧಾಮಣಿಯವರ ಸಾವಿನ ಹಿಂದೆ ಯಾರ ಕೈವಾಡವಿದೆ ? ಅವರ ಸಾವಿನಲ್ಲಿ ನಿನ್ನ ಪಾತ್ರವೇನು ?

ನೀತುವಿನ ಬಾಯಿಂದ ಮಹರಾಣಿಯ ಸಾವಿನ ರಹಸ್ಯದ ಬಗ್ಗೆ ಪ್ರಶ್ನೆ ಕೇಳಿ ನಡುಗಿಹೋದ ಆರಾಧನಾ ಸಾವರಿಸಿಕೊಳ್ಳುತ್ತ........ನಾನು ಮಹರಾಣಿಯವರ ಆಪ್ತ ಸಹಾಯಕಿ ಆಗಿದ್ದವಳು ಅವರ ಸಾವಿನಲ್ಲಿ ನನ್ನ ಪಾತ್ರವೇನಿದೆ ? ಅದು ಸಹಜ ಸಾವು ತಾನೇ ?

ನೀತು.....ಅಂದರೆ ನೀನು ಸತ್ಯ ಹೇಳುವುದಿಲ್ಲ ಅಂತಾಯ್ತು.

ಆರಾಧನಾ.....ನನಗೇನಾದರೂ ಗೊತ್ತಿದ್ದರೆ ತಾನೇ ಹೇಳುವುದಕ್ಕೆ...

ನೀತು ತಲೆಯಾಡಿಸಿದ ಮರುಕ್ಷಣ ಆರಾಧನಾಳ ಗಂಡನ ಹೃದಯ ವಿದ್ರಾವಕ ಚೀರಾಟ ನೆಲಮಾಳಿಗೆಯಲ್ಲಿ ಮಾರ್ಧನಿಸಿತು. ಅವಳ ಗಂಡನ ಎರಡು ಕೈಗಳೂ ಕತ್ತರಿಸಲ್ಪಟ್ಟಿದ್ದು ಅವನ ಭುಜದಿಂದ ರಕ್ತ ಕಾರಂಜಿಯಂತೆ ಚಿಮ್ಮುತ್ತಿದ್ದಾಗಲೇ ನಿಧಿ ಕೂಡ ಅಲ್ಲಿಗೆ ಬಂದಳು.
ಆ ಹೆಂಗಸನ್ನು ಸೂಕ್ಷ್ಮವಾಗಿ ಗಮನಿಸುತ್ತ........

ನಿಧಿ......ಆರಾಧನಾ ತಾಯಿ ನೀನಾ ?

ಗಂಡನ ಕೈಗಳು ಕತ್ತರಿಸಿದ್ದ ಕಾರಣ ಆರಾಧನಾ ದುಃಖದಿ ಅಳುತ್ತಿದ್ದು ತಾನು ಮಾಡಿರುವ ಪಾಪ ಕೃತ್ಯಗಳನ್ನು ನೆನೆಯುತ್ತ ಅದಕ್ಕೀಗ ತಕ್ಕ ಪ್ರತಿಫಲ ಸಿಗುತ್ತಿದೆ ಎಂದುಕೊಂಡು ತಪ್ಪಿಗಾಗಿ ಕೊರಗುತ್ತಿದ್ದಳು.

ನೀತು......ನೀನೀಗಲೂ ಸತ್ಯ ಹೇಳದಿದ್ದರೆ ಮುಂದಿನ ಸರದಿ ಕಿರಿಯ ಮಗನದ್ದು ಬೇಗ ಯೋಚಿಸು.

ಆರಾಧನಾಳ ಕಿರಿಯ ಮಗನ ಕಡೆ ಅಜಯ್ ಸಿಂಗ್ ತಿರುಗಿದಾಗ ಆಕೆ ಬೇಡವೆಂದು ಎಲ್ಲಾ ಸತ್ಯ ಸಂಗತಿಗಳನ್ನು ಹೇಳುವೆನೆಂದಳು.

ನೀತು......ಒಂದೇ ಒಂದು ಸುಳ್ಳನ್ನೂ ಹೇಳದೆ ಎಲ್ಲಾ ನಿಜ ಸಂಗತಿ ನಿನ್ನ ಬಾಯಿಂದ ಹೊರಬರಬೇಕು ಎಚ್ಚರವಿರಲಿ.

ಆರಾಧನಾ.....ಮಹರಾಣಿಯವರ ಸಾವಿಗೆ ಕಾರಣ ಯಶೋಮತಿ.

ನೀತು......ಯಾರವಳು ?

ಆರಾಧನಾ........ಚಂಚಲಾದೇವಿಯವರ ಹಿರಿಮಗಳು ಎಲ್ಲವನ್ನೂ ಅವಳೇ ಯೋಚಿಸಿ ಪ್ಲಾನ್ ಮಾಡ್ತಿದ್ದಳು ಆದರೆ ಮುಂದ್ಯಾವತ್ತೂ ಬರುತ್ತಿರಲಿಲ್ಲ ಹಿಂದೆಯೇ ನಿಂತು ತನಗಿಷ್ಟ ಬಂದಂತೆ ಎಲ್ಲರನ್ನೂ ಆಡಿಸುತ್ತಿದ್ದಳು. ಮಹರಾಣಿಯವರಿಗೆ ಮದುವೆಯಾದ ಮೊದಲನೇ ವರ್ಷ ಕಾಶಿಯ ಸನ್ನಿಧಾನಕ್ಕೆ ಮಹರಾಜರ ಜೊತೆ ತೆರಳಿದ್ದರು ಆಗ ನಾವೂ ಕೆಲವರು ಅವರ ಜೊತೆಗಿದ್ದೆವು. ಗಂಗಾ ನದಿ ದಂಢೆಯಲ್ಲಿನ ಮಣಿಕರ್ಣಿಕಾ ಘಾಟಿಗೆ ಹೋಗಿದ್ದಾಗ ಅಲ್ಲಿ 4—5 ತಿಂಗಳಿನ ತುಂಬ ಮುದ್ದಾಗಿರುವ ಹೆಣ್ಣು ಮಗುವನ್ಯಾರೋ ಮಲಗಿಸಿ ಹೋಗಿದ್ದರು. ಅಲ್ಲಿ ಜಮಾಯಿಸಿದ್ದ ಜನರೆಲ್ಲರೂ ನಿಂತು ಮಗುವನ್ನು ನೋಡುತ್ತಾ ಇದ್ದರೇ ವಿನಃ ಯಾರೊಬ್ಬರೂ ಅಳುತ್ತಿರುವ ಮಗುವನ್ನೆತ್ತಿಕೊಂಡು ಸಮಾಧಾನ ಮಾಡುವ ಪ್ರಯತ್ನ ಮಾಡಲು ಮುಂದಾಗಲಿಲ್ಲ. ನಾವು ಅಲ್ಲಿಗೆ ಬಂದಾಗ ಮಹರಾಣಿಯವರ ದೃಷ್ಟಿ ಮಗುವಿನತ್ತ ಹೊರಳಿ ಅವರೇ ಖುದ್ದಾಗಿ ಮಗುವನ್ನೆತ್ತಿಕೊಂಡರು. ಮಹರಾಣಿಯವರ ಮಡಿಲಿಗೆ ಬರುತ್ತಿದ್ದ ಹಾಗೆಯೇ ಮಗು ಅಳುವುದನ್ನು ನಿಲ್ಲಿಸಿ ತನ್ನ ಪುಟ್ಟ ಕೈಗಳಿಂದ ಅವರ ಮುಖ ತಡವುತ್ತ ಮುಗುಳ್ನಗುತ್ತಿತ್ತು. ಮಗು ಜೊತೆ ನಾವು ಕಾಶಿಯಲ್ಲಿ ಉಳಿದುಕೊಂಡಿದ್ದ ಸ್ಥಳಕ್ಕೆ ಹಿಂದಿರುಗಿದ ಬಳಿಕ ಮಹರಾಜರ ಆದೇಶದಂತೆ ಆ ಮಗುವಿನ ಬಗ್ಗೆ ವಿಚಾರಿಸಲು ಕೆಲವರು ತೆರಳಿದರು. ಒಂದು ದಿನದ ನಂತರ ಮಗುವಿನ ವಿಷಯದ ಬಗ್ಗೆ ಎಲ್ಲವನ್ನೂ ತಿಳಿದುಕೊಂಡು ಬಂದಿದ್ದರು. ಶ್ರೀನಾಥ ವಸಿಷ್ಠ ಮತ್ತು ರಾಜಲಕ್ಷ್ಮಿ ವಸಿಷ್ಠ ಎಂಬ ದಂಪತಿಗಳಿಗೆ ಜನಿಸಿದ ಮಗಳು ಈ ಹಸುಗೂಸಾಗಿದ್ದಳು. ಆದರೆ ಮಗುವಿನ ಜನನದ ಸಮಯದಲ್ಲಿ ಅತೀವ ರಕ್ತಸ್ರಾವದಿಂದ ರಾಜಲಕ್ಷ್ಮಿಯವರು ಮರಣ ಹೊಂದಿದ್ದು ಆ ಆಘಾತವನ್ನು ಸಹಿಸಲಾರದೆ ಶ್ರೀನಾಥ ವಸಿಷ್ಠರಿಗೆ ಹೃದಯಾಘಾತ ಸಂಭವಿಸಿ ಅವರೂ ಮರಣಿಸಿದ್ದರೆಂದು ತಿಳಿಯಿತು. ಕಾಶಿಯಲ್ಲಿ ಆ ಇಬ್ಬರು ದಂಪತಿಗಳು ಸತ್ಯ....ನಿಷ್ಠೆ...ಧರ್ಮ ಮತ್ತು ಪ್ರಾಮಾಣಿಕತೆಗೆ ತುಂಬ ಹೆಸರುವಾಸಿಯಾಗಿದ್ದು ಜನರಿಗೆ ತಮ್ಮಿಂದಾಗುವ ಎಲ್ಲಾ ರೀತಿ ಸಹಾಯ ಮಾಡುತ್ತಿದ್ದರೆಂದು ತಿಳಿಯಿತು. ಅವರಿಗ್ಯಾರೂ ಬಂಧು ಭಾಂಧವರಿಲ್ಲದೆ ದಂಪತಿಗಳ ಮರಣದ ಬಳಿಕ ಮಗುವಿನ ಲಾಲನೆ ಪೋಷಣೆ ಮಾಡಲು ಕೆಲವರು ಮುಂದೆ ಬಂದಿದ್ದರೂ ಅವರಲ್ಯಾರೂ ಸಹ ಮಗುವಿನ ಪೂರ್ಣ ಪ್ರಮಾಣದಲ್ಲಿ ಜವಾಬ್ದಾರಿ ಹೊರುವುದಕ್ಕೆ ಸಿದ್ದರಾಗಿರಲಿಲ್ಲ. ಕಷ್ಟವೆಂದು ಮನೆ ಬಾಗಿಲಿಗೆ ಬಂದವರನ್ನೆಂದೂ ಬರಿಗೈಯಲ್ಲಿ ಹಿಂದಿರುಗಿಸಿರದ ದಂಪತಿಗಳು ಮರಣ ಹೊಂದಿದಾಗ ಅವರ ಮಗಳನ್ನು ನೋಡಿಕೊಳ್ಳಲು ಯಾರೂ ಮುಂದೆ ಬರಲಿಲ್ಲ. ಎಲ್ಲಾ ವಿಷಯ ತಿಳಿದ ಬಳಿಕ ಮಹರಾಣಿಯವರು ಆ ಮಗುವನ್ನು ತಾವೇ ದತ್ತು ಸ್ವೀಕರಿಸುವುದಾಗಿ ತೀರ್ಮಾನಿಸಿದರೆ ಮಹರಾಜರೂ ಸಹ ಸಂತೋಷದಿಂದ ಸಮ್ಮತಿಸಿದರು.

ಆರಾಧನ......ಉದಯಪುರ ಅರಮನೆಯಲ್ಲಿ ಅದ್ದೂರಿಯಾಗಿ ಹೋಮ ಹವನಗಳನ್ನು ಆಯೋಜಿಸಿ ಮಗುವಿಗೆ ನಿಧಿ ಎಂಬುದಾಗಿ ನಾಮಕರಣ ಮಾಡಿದ ಮಹರಾಜರು ಅವಳನ್ನು ಸೂರ್ಯವಂಶಿ ಸಂಸ್ಥಾನದ ಯುವರಾಣಿ ಎಂದು ಘೋಷಿಸಿದರು. ಶ್ರೀನಾಥ್ ವಸಿಷ್ಠ ಅವರಿಗೆ ಸೇರಿದ್ದ ಮನೆ ಮತ್ತು ಕೆಲವು ಆಸ್ತಿಗಳನ್ನು ಕೂಡ ನಿಧಿಯ ಹೆಸರಿಗೆ ವರ್ಗಾವಣೆ ಮಾಡಿ ಅದನ್ನೆಲ್ಲಾ ಸಂಸ್ಥಾನದ ಅಧೀನದಲ್ಲಿ ತೆಗೆದುಕೊಂಡು ಸುರಕ್ಷಿತವಾಗಿ ನೋಡಿಕೊಳ್ಳುತ್ತಿದ್ದರು. ಮಹರಾಣಿ ಪ್ರಕಾರ ನಿಧಿ ವಯಸ್ಕಳಾಗಿ ತಿಳುವಳಿಕೆ ಬಂದಾಗ ಅವಳಿಗೆ ತನ್ನ ಜನ್ಮಕ್ಕೆ ಕಾರಣರಾದ ತಂದೆ ತಾಯಿಯರ ಬಗ್ಗೆ ತಿಳಿಸಿ ಜನಿಸಿರುವ ಮನೆಗೆ ಕರೆದೊಯ್ಯುವ ಯೋಚನೆ ಅವರದಾಗಿತ್ತು. ಈ ಸತ್ಯವನ್ನು ತಿಳಿದವರಲ್ಲಿ ನನ್ನನ್ನು ಬಿಟ್ಟರೆ ಬಹುಶಃ ಬೇರಾರೂ ಈಗ ಬದುಕಿಲ್ಲ ಅಂದುಕೊಳ್ತೀನಿ.

ನಿಧಿ ತನ್ನ ಜನ್ಮರಹಸ್ಯ ಮತ್ತು ಇಷ್ಟು ವರ್ಷಗಳ ಬಳಿಕ ತನ್ನ ಜನ್ಮಕ್ಕೆ ಕಾರಣರಾದ ತಂದೆ ತಾಯಿಯ ಬಗ್ಗೆ ತಿಳಿದು ಕಣ್ಣೀರು ಸುರಿಸುತ್ತಿದ್ದರೆ ನೀತು ಮಗಳನ್ನು ತಬ್ಬಿಕೊಂಡು ಸಮಾಧಾನ ಮಾಡುತ್ತಿದ್ದಳು.



.......continue
 

Samar2154

Well-Known Member
2,331
1,286
159
Continue.......


ಆರಾಧನಾ......ಸೂರ್ಯವಂಶಿ ಸಂಸ್ಥಾನಕ್ಕೆ ಉತ್ತರಾಧಿಕಾರಿಯಾಗಿ ಯಾವಾಗ ನಿಧಿಯ ಆಗಮನವಾಯಿತೋ ಆಗಿನಿಂದ ಯಶೋಮತಿ ತನ್ನ ಕುಕೃತ್ಯಗಳನ್ನು ಪ್ರಾರಂಭಿಸಿದಳು. ನಿಧಿಗೆ ಐದು ವರ್ಷಗಳಾಗುವ ತನಕ ಅವಳನ್ನು ಸಾಯಿಸುವುದಕ್ಕೆ ಹಲವಾ ಪ್ರಯತ್ನ ನಡೆದಿದ್ದರೂ ಯಾವುದೂ ಫಲಿಸಲಿಲ್ಲ. ನಿಧಿಯ ಪ್ರಾಣ ಅರಮನೆಯಲ್ಲೆಂದೂ ಸುರಕ್ಷಿತವಲ್ಲ ಎಂಬುದನ್ನು ತಿಳಿದೇ ಗುರುಗಳಾದ ಶ್ಯಾಮ ವಸಿಷ್ಠರು ತಮ್ಮೊಂದಿಗೆ ನಿಧಿಯನ್ನು ಆಶ್ರಮಕ್ಕೆ ಕರೆಯೊದ್ದರು. ಆದರೆ ಆಶ್ರಮ ಎಲ್ಲಿದೆ ಎಂಬುದು ಮಾತ್ರ ನನಗೆ ತಿಳಿದಿಲ್ಲ. ಆದಾದ ಬಳಿಕ ಹಲವು ವರ್ಷಗಳ್ಯಾವುದೇ ಚಟುವಟಿಕೆಗಳು ನಡೆದಿರಲಿಲ್ಲ ಆದರೆ ನಮ್ಮ ಮಹರಾಣಿಯವರು ಮದುವೆಯಾಗಿ 18 ವರ್ಷಗಳ ನಂತರ ಗರ್ಭ ಧರಿಸಿದಾಗ ಸಂಸ್ಥಾನದ ಎಲ್ಲಾ ವಿರೋಧಿಗಳೂ ಒಂದಾಗಿದ್ದು ಆ ಮಗು ಜನಿಸುವುದಕ್ಕೂ ಮುಂಚೆಯೇ ಕೊಲ್ಲುವ ಸಂಚುಗಳನ್ನು ರೂಪಿಸತೊಡಗಿದರು. ಯಶೋಮತಿ ನನ್ನನ್ನು ಸಂಪರ್ಕಿಸಿ ನನ್ನಿಂದ ಮಹರಾಣಿಯವರ ಊಟದಲ್ಲಿ ಪ್ರತಿನಿತ್ಯವೂ ವಿಶಿಷ್ಟವಾದ ಒಂದು ವಿಷವನ್ನು ಬೆರೆಸುವ ಉಪಾಯ ಹೇಳಿ ಅದಕ್ಕೆ ಪ್ರತಿಫಲವಾಗಿ ಕೆಲ ಕೋಟಿ ರೂಪಾಯಿಗಳನ್ನು ನೀಡುವ ಅಮಿಷವನ್ನೊಡ್ಡಿದರು. ನಾನು ನನ್ನ ಗಂಡ ಮಕ್ಕಳ ಜೊತೆ ಚರ್ಚಿಸಿದ ನಂತರ ಆ ಕೆಲಸ ಮಾಡಲು ಸಮ್ಮತಿಸಿ ಮುಂಗಡ ಹಣವನ್ನೂ ಪಡೆದುಕೊಂಡೆ. ಪ್ರತಿನಿತ್ಯವೂ ಮಹರಾಣಿಯವರಿಗೆ ನಾನೇ ಊಟ ತೆಗೆದುಕೊಂಡು ಹೋಗುತ್ತಿದ್ದ ಕಾರಣ ಅದಕ್ಕೆ ವಿಷ ಬೆರೆಸುವುದು ಕಷ್ಟದ ಕೆಲಸವಾಗಿರಲಿಲ್ಲ. ಹುಟ್ಟುವುದಕ್ಕೂ ಮುಂಚೆಯೇ ಮಹರಾಣಿಯವರ ಗರ್ಭದಲ್ಲಿರುವ ಮಗುವನ್ನು ಸಾಯಿಸುವುದು ಪಾಪದ ಕೃತ್ಯವೆಂದು ತಿಳಿದಿದ್ದರೂ ಸಹ ಹಣದ ಮೇಲಿನ ವ್ಯಾಮೋಹಕ್ಕೆ ನಾನು ದುಶ್ಕೃತ್ಯ ಮಾಡುತ್ತಲಿದ್ದೆ. ಮಹರಾಣಿಯವರಿಗೆ ಏಳನೇ ತಿಂಗಳು ನಡೆಯುತ್ತಿದ್ದಾಗ ಅವರ ಆರೋಗ್ಯದಲ್ಲಿ ತೀರ ಏರುಪೇರಾದಾಗ ಮಹರಾಜರ ಆದೇಶದಿಂದ ಎಲ್ಲಾ ಆಪ್ತ ಸಹಾಯಕ ಸಿಬ್ಬಂದಿಗಳನ್ನು ಬದಲಾಯಿಸಲಾಯಿತು. ನನ್ನ ಮೇಲೆ ಅನುಮಾನ ಬರುವುದಕ್ಕೂ ಮುಂಚೆ ನಾನು ಮಾಡುವ ಕೆಲಸವನ್ನು ಮಾಡಿದ್ದರಿಂದ ಅರಮನೆಯಿಂದೇಗೋ ಹೊರಬಂದು ಯಶೋಮತಿ ಬಳಿ ಉಳಿದ ಹಣವನ್ನು ಪಡೆದು ಕುಟುಂಬದವರ ಜೊತೆ ಕೇರಳಕ್ಕೆ ಹೋಗಿ ನೆಲೆಸಿದೆ. ಕೆಲವು ದಿನಗಳಾದ ನಂತರವೇ ಮಹರಾಣಿ ಮತ್ತು ಮಗು ಮರಣ ಹೊಂದಿದರೆಂಬ ಸುದ್ದಿ ನನಗೂ ತಿಳಿಯಿತು ಆದರೆ ನಿಧಿ ಬಗ್ಗೆ ನನಗೇನೂ ಗೊತ್ತಿಲ್ಲ. ನನಗೆ ಗೊತ್ತಿದ್ದ ಎಲ್ಲವನ್ನೂ ಹೇಳಿರುವೆ ಮಾಡಿದ ತಪ್ಪನ್ನೂ ಒಪ್ಪಿಕೊಂಡಿದ್ದೀನಿ ಶಿಕ್ಷೆ ನೀಡುವುದಾದರೆ ನನಗೆ ನೀಡಿ ನನ್ನ ಮಕ್ಕಳಿಗೇನೂ ಮಾಡ್ಬೇಡಿ.

ನೀತು.......ಹುಟ್ಟುವುದಕ್ಕೂ ಮುಂಚೆಯೇ ತಾಯಿಯ ಗರ್ಭದಲ್ಲೇ ಮಗುವನ್ನು ಸಾಯಿಸುವ ಪ್ರಯತ್ನ ಮಾಡಿದ ನೀನು ನಿನ್ನ ಮಕ್ಕಳ ಜೀವದಾನ ಬೇಡಿಕೊಳ್ಳುತ್ತಿದ್ದೀಯ ಇದೊಂದು ರೀತಿ ತಮಾಷೆಯೇ ಅಲ್ಲವಾ. ನಿನಗೊಂದು ವಿಷಯ ಹೇಳುವುದಿತ್ತು ನೀನು ತಿಳಿದಂತೆ ಮಹರಾಣಿಯವರು ಸಾಯುವ ಮುನ್ನ ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿ ಮರಣ ಹೊಂದಿದರು ಆದರೆ ಮಗುವಿಗೆ ಏನೊಂದೂ ತೊಂದರೆಯಾಗಲಿಲ್ಲ ಈಗವಳು ಆರೋಗ್ಯವಂತಳಾಗಿ ಇದ್ದಾಳೆ. ನಿಧಿ ಬಗ್ಗೆ ನಿನಗೇನೂ ಗೊತ್ತಿಲ್ಲವಲ್ಲವಾ ಇವಳೇ ಮಹರಾಣಿಯ ಹಿರಿಯ ಮಗಳು ನಿಧಿ ಸೂರ್ಯವಂಶಿ. ರಾಣಾ ಈ ಹೆಂಗಸು ಮಾಡಿರುವುದು ಘನಘೋರವಾದ ದುಶ್ಕೃತ್ಯ ಅದಕ್ಕಾಗಿ ಇವಳ ಗಂಡ ಮಕ್ಕಳಿಬ್ಬರ ತಲೆಕಡಿದು ಇವಳ ಮಡಿಲಲ್ಲಿಡಿ.....ಎಂದು ಘರ್ಜಿಸಿದಳು.

ಆರಾಧನಾ ಗೋಳಾಡುತ್ತ ಬೇಡಿಕೊಂಡರೂ ಅವಳ ಗಂಡ ಮತ್ತು ಗಂಡು ಮಕ್ಕಳಿಬ್ಬರ ತಲೆಗಳನ್ನು ಕಡಿದು ಅವಳ ಮಡಿಲಲ್ಲಿ ಇಟ್ಟರು.

ನೀತು......ಸಂಜೆವರೆಗೂ ನೀನೀ ದುಃಖವನ್ನು ಸಹಿಸಿಕೊಂಡಿದ್ದರೆ ನಿನಗೆ ಮುಕ್ತಿ ನೀಡುವುದಕ್ಕೆ ನೀನ್ಯಾವ ಮಗುವನ್ನು ಗರ್ಭದಲ್ಲಿಯೇ ಕೊಲ್ಲಲು ಮಹರಾಣಿಯವರಿಗೆ ವಿಷ ನೀಡುತ್ತಿದ್ದೆಯೇ ಅವಳೇ ಖುದ್ದು ಬರುತ್ತಾಳೆ ನಡಿಯಮ್ಮ ನಿಧಿ ಮೇಲೆ ಹೋಗೋಣ.
* *
* *
ಅನುಷಾ ಆಂಟಿಯಿಂದ ಊಟ ಮಾಡಿಸಿಕೊಂಡ ನಿಶಾ ಅವಳ್ಜೊತೆ ಸೇರಿಕೊಂಡು ನಿದ್ರಾದೇವಿಗೆ ಶರಣಾಗಿದ್ದಳು.

ನೀತು......ಏನು ಚಿಂತೆಯಮ್ಮ ? ಯಾಕಿಷ್ಟು ಬೇಸರವಾಗಿರುವೆ ?

ನಿಧಿ ಅಮ್ಮನ ಮಡಿಲಲ್ಲಿ ತಲೆಯಿಟ್ಟು........ಅಮ್ಮ ನಾನು ನಿಶಾ ಇಬ್ಬರೆಷ್ಟು ನತದೃಷ್ಟರಲ್ಲವಾ ಅಮ್ಮ. ನಾವಿಬ್ಬರೂ ಜನಿದಾಗಲೇ ನಮ್ಮಿಬ್ಬರನ್ನೂ ಹೆತ್ತ ತಾಯಂದಿರು ಈ ಲೋಕವನ್ನು ತ್ಯಜಿಸಿದರು. ಅಮ್ಮ ಹೆತ್ತ ತಾಯಿಯ ಮಡಿಲಿನ ಮಮತೆಯನ್ನು ನಾನು ಸುಧಾ ಅಮ್ಮನಿಂದ ಪಡೆದುಕೊಂಡಿದ್ದರೆ ನಿಶಾ ನಿಮ್ಮಿಂದ ಪಡೆದಿದ್ದಾಳೆ. ಈಗ ನಾವಿಬ್ಬರೂ ನಿಮ್ಮ ಪ್ರೀತಿ..ಮಮತೆಯ ಆಶ್ರಯದಲ್ಲಿದ್ದೀವಿ ಅಕಸ್ಮಾತ್ ನಿಮಗೇನಾದರೂ ಸಂಭವಿಸಿದರೆ ಅಮ್ಮ ನಿಮಗಿದೆಲ್ಲಾ ಜಂಜಾಟಳೇ ಬೇಡಾಮ್ಮ ದಯವಿಟ್ಟು ಇಲ್ಲಿಂದ ಹೊರಟುಬಿಡಿ. ಇಲ್ಲಿ ಎಂತಹುದೇ ಸಂಕಷ್ಟಳು ಏದುರಾದರೂ ಅದನ್ನು ನಾನೆದುರಿಸುತ್ತೀನಿ ನಿಮಗೇನಾದ್ರೂ ಆದರೆ ಮಾತ್ರ ನಾನು ಜೀವಂತ ಶವವಾಗಿರ್ತೀನಿ.

ನೀತು ಮಗಳ ತಲೆ ನೇವರಿಸುತ್ತ.......ನನಗೇನೂ ಆಗುವುದಿಲ್ಲಮ್ಮ ನಾನು ಜೀವಂತವಾಗಿರುವಾಗ ನನ್ನ ಮಗಳನ್ನು ಕಷ್ಟಕೂಪದೊಳಗೆ ತಳ್ಳಿ ಇಲ್ಲಿಂದ ಪಲಾಯನ ಮಾಡುವುದಾ ಅದು ಸಾಧ್ಯವೇ ಇಲ್ಲ.

ನೀತು ಮಗಳಿಗೆ ಸಮಾಧಾನ ಮಾಡುತ್ತ ಅವಳನ್ನು ತಟ್ಟುತ್ತ ನಿದ್ದೆಗೆ ಶರಣಾಗಿಸಿ ತಾನೊಬ್ಬಳೇ ಯೋಚಿಸುತ್ತ ಹೊರಗಿನ ಉದ್ಯಾನದಲ್ಲಿ ಕುಳಿತಳು. ಅಪ್ಪ..ಅಮ್ಮ..ಅತ್ತಿಗೆಯರು..ಶೀಲಾ..ರಜನಿ....ಸವಿತಾ ಮತ್ತು ಸುಕನ್ಯಾರೆಲ್ಲರ ಜೊತೆಗೂ ಮಾತನಾಡಿ ಇಲ್ಲಿನ ಸಂಪೂರ್ಣ ಸಂಗತಿಗಳನ್ನು ತಿಳಿಸಿದಳು.

ರೇವತಿ........ನಿಧಿ ಬಗ್ಗೆ ಎಚ್ಚರ ವಹಿಸಿರಮ್ಮ ಅವಳು ತುಂಬಾನೇ ಸಂವೇಧನಾಶೀಲತೆಯುಳ್ಳ ಹುಡುಗಿ ನೀನ್ಯಾವಗಲೂ ಅವಳ್ಜೊತೆಗೆ ಇರಬೇಕು. ಈಗ ತಾನೇ ಅವಳಿಗೆ ತನ್ನ ಹೆತ್ತ ತಂದೆ ತಾಯಿಯ ಬಗ್ಗೆ ತಿಳಿದಿದೆ ಮನಸ್ಸು ಡೋಲಾಯಮಾನ ಸ್ಥಿತಿಯಲ್ಲಿರುತ್ತೆ ಅದನ್ನು ನೀನೇ ಸಂಭಾಳಿಸಬೇಕು ಕಣಮ್ಮ.

ನೀತು.....ಆಯ್ತಮ್ಮ ನಾನೆಲ್ಲ ನೋಡಿಕೊಳ್ತೀನಿ....ಎಂದು ಫೋನ್ ಕಟ್ ಮಾಡಿದಳು.

ಸುಮ......ನಿಧಿ ಮನಸ್ಥಿತಿಯ ಬಗ್ಗೆ ಹರೀಶರಿಗೆ ಹೇಳುವುದಾ ಬೇಡ್ವಾ ನೀತು ಸಹ ಈಗ ಗಂಡನಿಗೆ ಫೋನ್ ಮಾಡಲ್ಲ ಅಂತೇಳಿದ್ದಾಳೆ.

ಭಾನುವಾರವಾಗಿದ್ದರಿಂದ ಗಂಡಸರೆಲ್ಲರೂ ಏದುರು ಮನೆಯಲ್ಲಿದ್ದು ತಮ್ಮದೇ ಚರ್ಚೆಯಲ್ಲಿ ನಿರತರಾಗಿದ್ದರು. ರಜನಿ ಅಲ್ಲಿಗೆ ಬಂದು ಎಲ್ಲ ವಿಷಯವನ್ನೂ ಹೇಳಿದಾಗ ಹರೀಶ ತಕ್ಷಣ ಮುಖ್ಯೋಪಾಧ್ಯಾಯರ ನಂಬರಿಗೆ ಕರೆ ಮಾಡಿ ಎರಡು ವಾರಗಳ ರಜೆ ಕೋರಿಕೊಂಡನು. ಹರೀಶನ ಕಾರ್ಯಕ್ಷಮತೆ ಬಗ್ಗೆ ಚೆನ್ನಾಗಿ ತಿಳಿದಿದ್ದು ಅವನ ವ್ಯಕ್ತಿತ್ವದ ಬಗ್ಗೆಯೂ ಚಿರಪರಿಚಿತರಾಗಿದ್ದ ಮುಖ್ಯೋಪಾಧ್ಯಾಯರು ತಮ್ಮ ಸಹಮತಿ ನೀಡಿ ರಜೆ ಮಂಜೂರು ಮಾಡುವುದಾಗಿ ಹೇಳಿಬಿಟ್ಟರು. ಆನಂತರ ರಾಣಾನಿಗೆ ಫೋನ್ ಮಾಡಿದ ಹರೀಶ ತಕ್ಷಣ ಊರಿಗೆ ಹೆಲಿಕಾಪ್ಟರ್ ಕಳಿಸುವಂತೇಳಿ ನೀತು ಬಳಿ ಇದ್ಯಾವುದನ್ನೂ ಪ್ರಸ್ತಾಪ ಮಾಡದಂತೆ ತಿಳಿಸಿದನು.

ಅಶೋಕ........ನೀನೊಬ್ಬನೇ ಹೋಗುವೆಯಾ ?

ರಜನಿ......ನಾನೂ ಬರ್ತೀನಿ ನಡೀರಿ ಅಲ್ಲಿ ನೀತುವಿನ ಜೊತೆಯಲ್ಲಿ ನಾವಿರಬೇಕಾದ್ದು ತುಂಬ ಅವಶ್ಯಕ. ಅಪ್ಪ ಅಮ್ಮನ ಬಗ್ಗೆ ತಿಳಿದಿರುವ ನಿಧಿ ಕೂಡ ಅಪ್ಸೆಟ್ ಆಗಿರುತ್ತಾಳೆ.

ಪ್ರೀತಿ......ಹೌದು ಕಣೆ ನೀನೂ ಹರೀಶರ ಜೊತೆ ಹೋಗುವುದೇ ಸರಿ.

ಅಲ್ಲಿಂದ ಮನೆಗೆ ವಾಪಸ್ ಬಂದು ಅತ್ತೆ ಮಾವನಿಗೆ ವಿಷಯ ತಿಳಿಸಿ ಶಾಲೆಯಲ್ಲಿ ಮಕ್ಕಳ ಪಾಠದ ಬಗ್ಗೆ ನಿಗಾ ವಹಿಸಿಕೊಳ್ಳುವಂತೆ ಸವಿತ ಹತ್ತಿರ ತಿಳಿಸಿದನು. ರಕ್ಷಕರಲ್ಲಿ ಒಬ್ಬನಿಗೆ ಸವಿತಾ...ಸುಕನ್ಯಾ..ಸುರೇಶ ಮತ್ತು ನಯನಾಳನ್ನು ಶಾಲೆಗೆ ಕರೆದೊಯ್ದು ಕರೆತರುವ ಕಾರ್ಯ ವಹಿಸಿದನು. ಬಟ್ಟೆ ಪ್ಯಾಕಿಂಗ್ ಮಾಡಿಕೊಳ್ಳಲು ಹೋದರೆ ಸುಮ ಆಗಲೇ ಆ ಕೆಲಸ ಮಾಡುತ್ತಿದ್ದು ಮಕ್ಕಳಿಬ್ಬರು ರೂಮಿಗೆ ಬಂದು.....

ಗಿರೀಶ......ಅಮ್ಮ ಇವತ್ತು ಬೆಳಿಗ್ಗೆ ತಾನೇ ಹೋದರಲ್ಲ ನೀವಾಗಲೇ ಹೋಗುವ ಬದಲು ಇದ್ದಕ್ಕಿದ್ದಂತೆ ಹೊರಟಿದ್ದೀರ ಅಲ್ಲೇನಾಯ್ತಪ್ಪ.

ಹರೀಶ ಮಗನಿಗೆ ಸಂಕ್ಷಿಪ್ತವಾಗಿ ತಿಳಿಸಿ.......ಅದಕ್ಕೆ ನಾನು ನಿಮ್ಮ ಅಕ್ಕನ ಜೊತೆಗಿರಲು ಹೋಗ್ತಿದ್ದೀನಿ ಕಣಪ್ಪ ಗಾಬರಿ ಪಡುವಂತದ್ದು ಏನೂ ಆಗಿಲ್ಲ. ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಓದಿನ ಕಡೆಯೇ ನಿಮ್ಮ ಗಮನವಿರಬೇಕು.
* *
* *


......continue
 

Samar2154

Well-Known Member
2,331
1,286
159
Continue......


ಸಂಜೆ ಲವಲವಿಕೆಯಿಂದ ಏದ್ದು ರೆಡಿಯಾದ ನಿಶಾ ಆಂಟಿಯ ಜೊತೆ ಅರಮನೆಯಲ್ಲಿ ಸುತ್ತಾಡುತ್ತ ಎಲ್ಲವನ್ನು ನೋಡುತ್ತಿದ್ದಳು. ಅನುಷ ಕೂಡ ಜೀವನದಲ್ಲಿ ಮೊದಲ ಬಾರಿ ಅರಮನೆಗೆ ಬಂದಿದ್ದುಅವಳಿಗೂ ಇದೊಂದು ಹೊಸ ಅನುಭವವಾಗಿತ್ತು.

ನೀತು.....ನನ್ನ ಚಿನ್ನಿ ಮರಿ ರೆಡಿಯಾಗಿದ್ದೀಯಾ ?

ನಿಶಾ.....ಮಮ್ಮ ನಂಗಿ ಆನಿ ಬೇಕು.

ನೀತು ಮಗಳನ್ನೆತ್ತಿಕೊಂಡು.....ನನ್ನ ಕಂದನಿಗೆ ಆನೆ ಬೇಕಾ ?

ನಿಶಾ ತಲೆ ಕುಣಿಸಿ.....ಬೇಕು..ಬೇಕು...ನಾನಿ ಕೂಚಿ ಮಾತೀನಿ.

ನೀತು.....ಆಯ್ತು ಕಂದ ಇನ್ನು ಸ್ವಲ್ಪ ಹೊತ್ತಲ್ಲಿ ನಾವು ಇನ್ನೊಂದು ಅರಮನೆಗೆ ಹೋಗ್ತೀವಲ್ಲ ಅಲ್ಲಿ ನಿಂಗೆ ಆನೆ...ಕುದುರೆ ಎಲ್ಲ ಸಿಗುತ್ತೆ. ಈಗ ನನ್ನ ಜೊತೆ ಬರ್ತೀಯಾ.

ನಿಶಾ......ಆತು ಮಮ್ಮ.

ಅನುಷ......ಯಾಕೆ ನಿಧಿ ಬೇಸರದಲ್ಲಿದ್ದೀಯಾ ? ಏನಾಯ್ತಮ್ಮ ?

ನಿಧಿ......ಅದು ಚಿಕ್ಕಮ್ಮ....

ನೀತು......ಹೇಳಿಕೊಳ್ಳಮ್ಮ ಮನಸ್ಸಿನ ಭಾರ ಕಡಿಮೆಯಾಗುತ್ತೆ.

ಆರಾಧನಾ ಹೇಳಿದ್ದನ್ನೆಲ್ಲಾ ನಿಧಿ ಹೇಳಿದಾಗ ಅದನ್ನು ಕೇಳಿ ಅನುಷ ಕೂಡ ದುಃಖಿತಳಾಗಿದ್ದು.......ನೋಡು ನಿಧಿ ಇದಕ್ಕೆಲ್ಲಾ ಬೇಜಾರು ಮಾಡಿಕೊಳ್ಬೇಡ. ಮೊನ್ನೆ ದಿನ ನೀನು ಅಕ್ಕನ ಜೀವನಗಾಥೆ ಕೇಳಿದ್ದೆ ಅವರು ಕೂಡ ತಮ್ಮ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಇಬ್ಬರನ್ನೂ ಕಳೆದುಕೊಂಡವರು. ಇದರಲ್ಲಿ ಅವರ ತಪ್ಪೇನಿದೆ ಹೇಳು ಅದೇ ರೀತಿ ನೀನು ಚಿನ್ನಿ ಇಬ್ಬರೂ ಹುಟ್ಟಿದಾಗಲೇ ನಿಮ್ಮಿಬ್ಬರನ್ನು ಹೆತ್ತ ತಾಯಿ ಮರಣಿಸಿದರೆ ಅದರಲ್ಲಿ ನಿಮ್ಮ ಪಾತ್ರವೇನಿದೆ. ನೀನು ಆಚಾರ್ಯರ ಕೈಗೆಳಗೆ ಆಶ್ರಮದಲ್ಲಿ ಬೆಳೆದಿರುವವಳು ಈ ರೀತಿಯ ಸಣ್ಣಪುಟ್ಟ ವಿಷಯಗಳಿಗೆಲ್ಲ ಧೃತಿಗೆಡುತ್ತಾರಾ ನಡಿ ಅಕ್ಕ ಕರೆಯುತ್ತಿದ್ದಾರಲ್ಲ ನಾವೂ ಹೋಗೋಣ.

ನೀತು ಮಗಳ ಜೊತೆ ನೆಲಮಾಳಿಗೆಗೆ ಬರುವಷ್ಟರಲ್ಲಿ ಆರಾಧನಾಳನ್ನ ಬೇರೊಂದು ಕೊಠಡಿಗೆ ಕರೆತಂದು ಕೂರಿಸಲಾಗಿತ್ತು. ಆರಾಧನಾ ತನ್ನ ಗಂಡ ಮಕ್ಕಳ ಸಾವನ್ನು ಕಣ್ಣಾರೆ ನೋಡಿ ಅತ್ತು...ಅತ್ತು... ಅವಳ ಕಣ್ಣುಗಳೆರಡೂ ಕೆಂಪಗೆ ಊದಿಕೊಂಡಿದ್ದವು.

ನೀತು......ಆರಾಧನಾ ಈ ಮಗು ಯಾರೆಂದು ಗೊತ್ತಾ ?

ಆರಾಧನಾ ದುಃಖದಲ್ಲಿ.....ನನ್ನ ಗಂಡ ಮಕ್ಕಳನ್ಯಾಕೆ ಕೊಂದಿದ್ದು ?

ನೀತು........ಅದು ನೀನು ಮಾಡಿದ ಪಾಪ ಕರ್ಮದ ಫಲ. ನೀನು ಮಹರಾಣಿಗೆ ಆಪ್ತ ಸಹಾಯಕಿ ಆಗಿದ್ದರೂ ಅವರು ನಿನ್ನನ್ನೆಂದೂ ದಾಸಿಯಂತೆ ನೋಡುತ್ತಿರಲಿಲ್ಲ. ಅದಕ್ಕೆ ಪ್ರತಿಫಲವಾಗಿ ನೀನೇನು ಮಾಡಿದ್ದು ಹಣಕಾಸಿನ ಆಸೆಯಿಂದ ಅವರ ಗರ್ಭದೊಳಗಿರುವ ಮಗುವನ್ನೇ ಕೊಲ್ಲಲು ಊಟಕ್ಕೆ ವಿಷ ಬೆರೆಸುತ್ತಿದ್ದೆ. ಆಗ ನೀನು ಮಾಡಿದ್ದ ಕುಕೃತ್ಯದ ಫಲ ಸ್ವರೂಪದಿಂದ ನಿನ್ನ ಗಂಡ ಮಕ್ಕಳಿಬ್ಬರು ಸತ್ತು ಬಿದ್ದಿದ್ದು. ಈ ಮಗು ಸುಧಾಮಣಿಯವರು ಹೆತ್ತಿರುವ ಸ್ವಂತ ಮಗಳು ಆದರೀಗ ನನ್ನ ಮಗಳಾಗಿ ಬೆಳೆಯುತ್ತಿದ್ದಾಳೆ. ಇವಳನ್ನು ಹುಟ್ಟುವುದಕ್ಕೂ ಮುಂಚೆ ಸಾಯಿಸಲು ಯೋಚಿಸಿದ್ದೆಯಲ್ಲ ನೀನು ಅದೆಷ್ಟು ಕ್ರೂರ ಹೆಂಗಸೆಂಬುದು ಇದರಿಂದಲೇ ತಿಳಿಯುತ್ತಿದೆ.

ಅಮ್ಮನ ತೋಳಿನಲ್ಲಿದ್ದ ನಿಶಾ ತನ್ನೆದುರಿಗೆ ಕುಳಿತು ಅಳುತ್ತಿರುವ ಹೆಂಗಸನ್ನೇ ನೋಡುತ್ತಿದ್ದಳು. ನೀತು ಮಗಳ ಕೈಯಿಂದಲೇ ಒಂದು ಮಾತ್ರೆಯನ್ನು ಆರಾಧನಾಳಿಗೆ ನುಂಗಿಸಿದಳು.

ನೀತು......ನೀನೀಗಲೇ ಸಾಯುವುದಿಲ್ಲ ಆರಾಧನಾ ಇನ್ನೊಂದು ವಾರ ಹತ್ತು ದಿನಗಳ ಕಾಲ ನರಕದ ಸಮಸ್ತ ನೋವನ್ನು ಅನುಭವಿಸಿ ಆನಂತರವೇ ನಿನ್ನ ದೇಹದಿಂದ ಪ್ರಾಣ ದೂರವಾಗೋದು. ನನ್ನೀ ಮುದ್ದಾದ ಕಂದನನ್ನು ಸಾಯಿಸಲು ಯೋಚಿಸಿದ ನಿನಗಿದು ಸ್ವಲ್ಪ ಕಡಿಮೆ ಶಿಕ್ಷೆಯಾಗಿದೆ ಆದರೂ ನಿನ್ನೊಬ್ಬಳ ಹತ್ತಿರವೇ ಸಮಯ ವ್ಯರ್ಥಗೊಳಿಸಲು ನನ್ನ ಬಳಿ ಸಮಯದ ಕೊರತೆಯಿದೆ ಇನ್ನೂ ಇಲ್ಲಿ ಮಾಡಬೇಕಾಗಿರುವ ಕೆಲಸ ಬಹಳಷ್ಟಿದೆ. ರಾಣಾ ಹೊರಡುವುದಕ್ಕೆ ಎಲ್ಲಾ ಸಿದ್ದತೆಗಳು ಆಗಿದೆಯಾ ?

ರಾಣಾ.....ಎಲ್ಲವೂ ಸಿದ್ದವಾಗಿದೆ ಮಾತೆ.

ನೀತು.....ಇವಳಿಲ್ಲಿಯೇ ಕೊಳೆಯುತ್ತಿರಲಿ 10 ದಿನಗಳಲ್ಲಿ ಇವಳಿಗೆ ಸಾವು ಸಂಭವಿಸಿದಾಗ ಸಂಸ್ಕಾರ ಮಾಡಿಬಿಡುವಂತೆ ತಿಳಿಸು ಅಲ್ಲಿ ತನಕವೂ ಪ್ರತಿಕ್ಷಣ ನರಕದ ನೋವು ಅನುಭವಿಸುತ್ತಿರಲಿ.

ನೀತುವಿನ ಮಾತು ಮುಗಿಯುತ್ತಿದ್ದಂತೆ ಆರಾಧನಾಳ ದೇಹದೊಳಗೆ ಸಹಿಸಿಕೊಳ್ಳಲು ಆಸಾಧ್ಯವಾದ ನೋವು ಪ್ರಾರಭವಾಗಿ ಅವಳು ಕಿರುಚಿ ನೆಲದಲ್ಲಿ ಬಿದ್ದು ಒದ್ದಾಡತೊಡಗಿದಳು. ನೀತು ತಕ್ಷಣ ಮಗಳ ಜೊತೆ ಅಲ್ಲಿಂದ ಹೊರಬಂದು ಉದಯಪುರದ ಅರಮನೆಯತ್ತ ಹೊರಡಲು ರೆಡಿಯಾದಳು.

ನಿಧಿ.......ಅಮ್ಮಈ ಚಂಚಲಾದೇವಿಯ ಮಗಳಾದ ಯಶೋಮತಿ ಇವಳನ್ನು ನನಗೊಪ್ಪಿಸಿ ಪ್ಲೀಸ್.

ನೀತು......ಯಶೋಮತಿ ನಮ್ಮ ಬಂಧಿಯಾಗಿರುವಳಾ ರಾಣಾ ?

ರಾಣಾ........ಚಂಚಲಾದೇವಿಯ ಅರಮನೆಯಿಂದ ಅವರ ಗಂಡು ಮಕ್ಕಳನ್ನು ಮಾತ್ರ ಎಳೆದು ತಂದಿದ್ದು ಅಲ್ಲಿವರ ಮಗಳು ಇರಲಿಲ್ಲ. ಅವಳ ಬಗ್ಗೆ ವಿಚಾರಿಸುವುದಕ್ಕೆ ನಾನಾಗಲೇ ದಿಲೇರ್ ಸಿಂಗ್ ಬಳಿ ಸೂಚನೆ ಕಳುಹಿಸಿದ್ದೀನಿ.

ನೀತು ತಂಗಿ ಮತ್ತು ಮಕ್ಕಳ ಜೊತೆ ಉದಯಪುರಕ್ಕೆ ತೆರಳುವುದಕ್ಕೆ ಹೆಲಿಕಾಪ್ಟರಿನಲ್ಲಿ ಕುಳಿತಾಗ ನಿಶಾ ಕುಣಿದಾಡುತ್ತ ಕಿಟಕಿಯಿಂದಾಚೆ ನೋಡುತ್ತ ನಿಂತಳು. ಉದಯಪುರದ ಅರಮನೆಯಲ್ಲಿ ಸಡಗರ ಸಂಭ್ರಮದ ವಾತಾವರಣ ನಿರ್ಮಾಣವಾಗಿತ್ತು. ಸೂರ್ಯವಂಶಿ ಸಂಸ್ಥಾನದ ಇಬ್ಬರು ರಾಜಕುಮಾರಿಯರಿಂದು ತಮ್ಮ ಅರಮನೆಗೆ ಆಗಮಿಸುತ್ತಿದ್ದು ಅಲ್ಲಿನ ಕಂಬ ಕಮಾನುಗಳಿಗೆಲ್ಲ ಹೂವಿನ ತೋರಣ ಕಟ್ಟಿ ಭವ್ಯವಾಗಿ ಅಲಂಕರಿಸುವುದರ ಜೊತೆ ಹಣತೆಯ ದೀಪಗಳನ್ನು ಬೆಳಗಿ ಸ್ವಾಗತ ಕೋರಲು ಸಜ್ಜುಗೊಳಿಸಲಾಗಿತ್ತು. ಹೆಲಿಕಾಪ್ಟರಿನಿಂದ ಕೆಳಗಿಳಿದಾಗ ಅಮ್ಮನ ಹೆಗಲಿನಲ್ಲಿದ್ದ ನಿಶಾ ಸುತ್ತಮುತ್ತಲೆಲ್ಲಾ ಕಡೆ ನೋಡುತ್ತಿದ್ದರೆ ತನ್ನ ಜನ್ಮರಹಸ್ಯ ತಿಳಿದು ಡಿಸ್ಟರ್ಬಾಗಿದ್ದ ನಿಧಿ ಫುಲ್ ಸೈಲೆಂಟಾಗಿ ಅನುಷ ಚಿಕ್ಕಮ್ಮನ ಕೈ ಹಿಡಿದು ಬರುತ್ತಿದ್ದಳು. ನಾಲ್ಕು ಆನೆಗಳು ತಮ್ಮ ಸೊಂಡಲಿನಲ್ಲಿ ಹೂವಿನ ಹಾರಗಳನ್ನಿಡಿದು ನಿಂತರೆ ಮಾವುತನ ಆದೇಶದಂತೆ ಇವರ ಕೊರಳಿಗೆ ಹಾರ ಹಾಕಿ ಸ್ವಾಗತ ಕೋರಿದವು.

ನಿಶಾ ಫುಲ್ ಖುಷಿಯಾಗಿ.......ಮಮ್ಮ ನೋಲು ಆನಿ ನಂದು ಆನಿ.

ನೀತು ಮುಗುಳ್ನಕ್ಕು.......ಹೂಂ ಕಂದ ಆನೆ ನಿಂದೆ ಈಗ ಒಳಗಡೆ ಹೋಗೋಣ ನಾಳೆ ಬೆಳಿಗ್ಗೆ ನೀನು ಆನೆಯ ಮೇಲೆ ಕುಳಿತು ರೌಂಡ್ ಹೋಗುವಂತೆ ಈಗ ಹೋಗ್ತೀನೀಂತ ಗಲಾಟೆ ಮಾಡಬಾರದು.

ನಿಶಾ.....ಆತು ಮಮ್ಮ ನಾನಿ ಗುಲ್ ಗಲ್.

ಅರಮನೆಯಲ್ಲಿ ಹಲವಾರು ವರ್ಷಗಳಿಂದ ಪರಿಚಾರಕಿಯರಾಗಿ ಸೇವೆ ಸಲ್ಲಿಸುತ್ತಿದ್ದ ಕೆಲವು ಮಹಿಳೆಯರು ಇವರಿಗೆ ಆರತಿ ಬೆಳಗುತ್ತ ಸ್ವಾಗತ ಕೋರಿದರು. ನೀತು ಮಕ್ಕಳಿಬ್ಬರ ಕೈಯಿಂದ ಅವರಿಗೆಲ್ಲಾ ದುಡ್ಡು ಕೊಡಿಸಿ ಅವರ ಆಶೀರ್ವಾದ ಕೊಡಿಸಿದಳು. ಐದು ವರ್ಷದ ಮಗುವಾಗಿದ್ದಾಗ ಈ ಅರಮನೆಯಿಂದ ಆಶ್ರಮಕ್ಕೆ ತೆರಳಿದ್ದ ನಿಧಿ ಇಂದು 14 ವರ್ಷಗಳ ನಂತರ ಅರಮನೆಯಲ್ಲಿ ಕಾಲಿಟ್ಟಿದ್ದಳು. ಆದರೆ ತನ್ನನ್ನು ಈ ಅರಮನೆಯ ಮಗಳು...ಯುವರಾಣಿಯನ್ನಾಗಿಸಿದ್ದ ಅಪ್ಪ ಅಮ್ಮ ಈಗ ಬದುಕಿಲ್ಲದಿರುವುದನ್ನು ನೆನೆದು ನಿಧಿಯ ಕಂಗಳು ಕಂಬನಿ ಸುರಿಸತೊಡಗಿತು. ಅನುಷಾಳಿಗೆ ಮಗಳನ್ನು ಸಂಭಾಳಿಸಲು ಕೊಟ್ಟ ನೀತು ಹಿರಿಮಗಳನ್ನು ತನ್ನ ತೆಕ್ಕೆಯಲ್ಲಿ ತೆಗೆದುಕೊಂಡವಳೇ ಬಚ್ಚಿಟ್ಟುಕೊಳ್ಳುತ್ತ ಸಂತೈಸಿ......

ನೀತು......ನೋಡಮ್ಮ ನಿಧಿ ನಾವು ಮನುಜರಾಗಿ ಜನಿಸಿದ ಕ್ಷಣವೇ ಮುಂದೊಂದು ದಿನ ಮರಣ ಹೊಂದುತ್ತೀವೆಂಬುದು ನಮ್ಮ ಜೊತೆಗೆ ಹುಟ್ಟುವ ಕಟುಸತ್ಯ. ಆದರೆ ಈ ಜನನ ಮತ್ತು ಮರಣದ ನಡುವಿನ ನಮ್ಮ ಜೀವನವನ್ನು ಹೇಗೆ ಸಾರ್ಥಕಗೊಳಿಸುತ್ತ ಬಾಳುತ್ತೀವೆಂಬುದು ತುಂಬಾನೇ ಮುಖ್ಯವಾದದ್ದು. ನಮಗೆ ದುಃಖವಾಗುತ್ತಿದ್ದರೂ ಅದನ್ನು ಸಹಿಸಿಕೊಂಡು ನಮ್ಮ ಬಳಿಯಿರುವ ಸಿಹಿಯಾದ ನೆನಪುಗಳನ್ನೇ ನೆನೆದು ನಾವು ಜೀವನದಲ್ಲಿ ಮುಂದೆ ಸಾಗುತ್ತಿರಬೇಕು. ಅಪ್ಪ ಅಮ್ಮ ಇಬ್ಬರ ನೆನೆಪು ನಿನಗೆ ತುಂಬ ಕಾಡುತ್ತಿದೆ ಅಂತ ಗೊತ್ತಿದೆ ಆದರೆ ವಿಧಿ ಮುಂದೆ ನಾವೆಲ್ಲರೂ ಶೂನ್ಯಕ್ಕೆ ಸಮಾನರು. ಅಪ್ಪ ಅಮ್ಮನನ್ನು ನೆನೆಯಬೇಡ ಅಂತ ಹೇಳಲ್ಲ ಆದರೆ ನೀನು ದುಃಖಿಸುತ್ತಿರುವುದನ್ನು ನೋಡುತ್ತಿರುವ ಅವರ ಆತ್ಮಗಳೂ ಸಹ ದುಃಖ ಪಡುತ್ತಿರುತ್ತೆಂದು ಮಾತ್ರ ಮರೆಯಬೇಡ ಕಂದ.

ಅಮ್ಮನ ಎದೆಯಲ್ಲಿ ಮುಖ ಹುದುಗಿಸಿದ್ದ ನಿಧಿ.......14 ವರ್ಷಗಳ ನಂತರ ಮತ್ತೊಮ್ಮೆ ಅರಮನೆಗೆ ಮರಳಿರುವಾಗ ಅಪ್ಪ ಅಮ್ಮನನ್ನು ನೆನೆದು ದುಃಖವಾಗ್ತಿದೆ ಕಣಮ್ಮ ನಮ್ಮ ಜೊತೆಯಲ್ಲಿ ಅಪ್ಪ ಕೂಡ ಬಂದಿದ್ದರೆ ಚೆನ್ನಾಗಿರುತ್ತಿತ್ತು ಅವರನ್ನು ಮಿಸ್ ಮಾಡಿಕೊಳ್ತಿದ್ದೀನಿ.

ನೀತು......ಇಲ್ಲಿನ ಕರ್ತವ್ಯಗಳನ್ನು ಮುಗಿಸಿ ಮನೆಗೆ ಹಿಂದಿರುಗಿದಾಗ ನಿನ್ನಿಷ್ಟ ಬಂದಷ್ಟು ದಿನ ನಿಮ್ಮಪ್ಪನ ಜೊತೆಗೇ ಇರುವಂತೆ ಆಯ್ತಾ. ಈಗ ದುಃಖ ಬದಿಗೊತ್ತು ನೋಡಲ್ಲಿ ನಿನ್ನ ಪುಟಾಣಿ ತಂಗಿ ಎಷ್ಟು ಖುಷಾಯಲ್ಲಿದ್ದಾಳೆ ನೀನು ಹಾಗೆಯೇ ಇರಬೇಕಮ್ಮ.

ಇವರು ಬಂದಾಗಿನಿಂದ ಅರಮನೆ ಮಹಡಿಯ ಕಂಬದ ಹಿಂದಿನಿಂದ ಕದ್ದು ಮುಚ್ಚಿ ಇವರನ್ನೇ ಗಮನಿಸುತ್ತಿದ್ದ ಹೆಂಗಸೊಬ್ಬಳು ಇವರಿಗೆ ಹಿಡಿ ಶಾಪ ಹಾಕುತ್ತ......ಕಳೆದ ಬಾರಿ ಈ ಮಗು ಬಂದಿದ್ದಾಗ ನಾನು ಅರಮನೆಯಲ್ಲಿ ಇರಲಿಲ್ಲ ಆದರೀಗಿಲ್ಲೇ ಇದ್ದೀನಿ. ಯಾವ ವಂಶದ ನಿರ್ವಂಶಕ್ಕಾಗಿ ಇಷ್ಟು ವರ್ಷಗಳಿಂದ ನನ್ನ ಕಾರ್ಯಗಳನ್ನು ಮಾಡುತ್ತ ಬಂದಿರುವೆನೋ ಅದೇ ವಂಶದ ಇಬ್ಬರು ಕುಡಿಗಳು ಬಂದಿದ್ದಾರೆ. ಈ ಬಾರಿ ಅರಮನೆಯಲ್ಲಿ ರಕ್ತ ಹರಿಯುವುದು ನಿಶ್ಚಿತ ಆಗಲೇ ನನಗೆ ಗೆಲುವಾಗೋದು. ಸೂರ್ಯವಂಶಿ ಸಂಸ್ಥಾನದ ಸಮಸ್ತ ಆಸ್ತಿಗಳಿಗೆ ನಾನೊಬ್ಬಳೇ ವಾರಸುದಾರಳು ನಾನೇ ಇಲ್ಲಿನ ಏಕೈಕ ಮಹಾರಾಣಿ ನನ್ನೀ ಕನಸು ಅಲ್ಲಲ್ಲ ನನ್ನೀ ಉದ್ದೇಶ ಮತ್ತು ಆಶಯ ನೆರವೇರುವ ಸಮಯ ಸಮೀಪಿಸಿದೆ.......ಎಂದು ತನ್ನಲ್ಲೇ ಹೇಳಿಕೊಳ್ಳುತ್ತ ತುಂಬ ಕ್ರೂರವಾದ ನಗೆ ಬೀರುತ್ತಿದ್ದಳು.
* *
* *

......continue
 

Samar2154

Well-Known Member
2,331
1,286
159
Continue.......


ಯುವರಾಣಿಯರು ಅರಮನೆಗೆ ಆಗಮಿಸಿರುವುದರಿಂದ ವಿಶೇಷ ಅಡುಗೆಗಳನ್ನು ಸಿದ್ದಪಡಿಸಲಾಗಿದ್ದು ಪ್ರತಿಯೊಂದನ್ನೂ ಸುಮೇರ್ ಸಿಂಗ್ ಮುಂದಾಳತ್ವದಲ್ಲಿ ಅವನ ತಂಡದವರು ಪರೀಕ್ಷಿಸಿಯಾದ ನಂತರ ಅದನ್ನು ಡೈನಿಂಗ್ ಟೇಬಲ್ಲಿಗೆ ಕಳುಹಿಸಿಕೊಡಲಾಗುತ್ತಿತ್ತು. ಇದನ್ನೂ ಸಹ ಗಮನಿಸಿದ್ದ ಆ ಹೆಂಗಸು ಊಟದಲ್ಲಿ ವಿಷ ಬೆರೆಸುವ ತನ್ನ ಯೋಜನೆ ವಿಫಲವಾಗುತ್ತೆಂದು ಅರ್ಥವಾಗಿದ್ದು ಆ ಯೋಚನೆ ತ್ಯಜಿಸಿ ಬೇರೆ ಯೋಜನೆಗಳನ್ನು ರೂಪಿಸುವ ಬಗ್ಗೆ ಚಿಂತಿಸುತ್ತಿದ್ದಳು. ನಿಶಾ ವಿವಿಧ ವ್ಯಂಜನಗಳನ್ನು ನೋಡಿ ಖುಷಿಯಿಂದ ಊಟ ಮಾಡಿ ತನಗಿಷ್ಟವಾದ ಐಸ್ ಕ್ರೀಂ ಕೂಡ ಸೇವಿಸಿದಳು. ನಾಲ್ವರು ನಿಕಟ ಪೂರ್ವ ಮಹಾರಾಜ—ಮಹಾರಾಣಿಯವರ ಕೊಠಡಿಯಲ್ಲಿದ್ದು ನಿಶಾ ತನಗೆ ಜನ್ಮ ನೀಡಿದ ತಂದೆ ತಾಯಿಯ ಮಂಚದಲ್ಲಿ ಹಾಕಲಾಗಿರುವ ಮೆತ್ತನೆಯ ಹಾಸಿಗೆ ಮೇಲೆ ಕುಣಿದಾಡುತ್ತ ತನಗಾಗುತ್ತಿದ್ದ ಸಂತೋಷ ವ್ಯಕ್ತಪಡಿಸುತ್ತಿದ್ದಳು.

ನೀತು......ನಾಲ್ಕು ಜನರೂ ಇಲ್ಲಿಯೇ ಆರಾಮವಾಗಿ ಮಲಗೋಣ ಮಂಚವೂ ತುಂಬ ದೊಡ್ಡದಾಗಿದೆ.

ಅನುಷ.......ಹೌದಕ್ಕ ಇಷ್ಟು ದೊಡ್ಡ ಮಂಚವನ್ನು ನಾನಿದೇ ಮೊದಲ ಸಲ ನೋಡ್ತಿರೋದು.

ನಿಧಿ ಮುಗುಳ್ನಕ್ಕು.......ಚಿಕ್ಕಮ್ಮ ನಾನಿದೇ ಮಂಚದ ಮೇಲೆ ನಿಶಾಳ ರೀತಿ ಕುಣಿದಾಡುತ್ತ ಬೆಳಿದಿದ್ದು ಈಗಿವಳು ಕುಣಿಯುತ್ತಿದ್ದಾಳೆ.

ಅನುಷ.......ಅರಮನೆ ತುಂಬ ಭವ್ಯವಾಗಿದೆ ಕಣಮ್ಮ ನಿಧಿ.

ನಿಧಿ......ನಾವು ಬಂದಾಗ ಕತ್ತಲಾಗಿ ಹೋಗಿತ್ತಲ್ವಾ ನಾಳೆಯ ಬೆಳಿಗ್ಗೆ ನಿಮಗೆಲ್ಲಾ ಕಡೆ ತೋರಿಸ್ತೀನಿ ಚಿಕ್ಕಮ್ಮ. ಅಮ್ಮ ನೀವು ಚಿನ್ನಿ ಇಲ್ಲೇ ಮಲಗಿ ನಾವು ಪಕ್ಕದ ರೂಮಿನಲ್ಲಿರ್ತೀವಿ.

ನೀತು......ಇಲ್ಲೇ ಮಲಗಮ್ಮ ಕಂದ.

ನಿಧಿ.......ಬೇಡಮ್ಮ ನೀವು ಚಿನ್ನಿ ಮಲಗಿ ಈ ಚಿಲ್ಟಾರಿ ಚೆನ್ನಾಗಿಯೇ ಕುಣಿದು ಕುಪ್ಪಳಿಸಲಿ ನಾಳೆ ಒಟ್ಟಿಗೆ ಮಲಗೋಣ.

ನಿಧಿ—ಅನುಷ ಪಕ್ಕದ ರೂಮಿಗೆ ತೆರಳಿದರೆ ಇನ್ನೂ ಕುಣಿದಾಡುತ್ತಿದ್ದ ಮಗಳನ್ನಿಡಿದು ಮಲಗಿಸುವುದೇ ನೀತುಳಿಗೆ ದೊಡ್ಡ ಕೆಲಸವಾಯ್ತು.

ರಾತ್ರಿ 11ರ ಸುಮಾರಿಗೆ ಹರೀಶ—ರಜನಿ ಅರಮನೆಗೆ ಆಗಮಿಸಿದ್ದು ವಿಕ್ರಂ ಸಿಂಗ್ ತುಂಬ ಆಗ್ರಹಿಸಿಕೊಂಡಾಗ ಇಬ್ಬರೂ ಊಟ ಮುಗಿಸಿ ಹಿರಿ ಮಗಳಿರುವ ಕೋಣೆಯ ಬಾಗಿಲು ತಟ್ಟಿದರು. ಈ ರಾತ್ರಿಯಲ್ಲಿ ಯಾರು ಬಂದಿರಬಹುದೆಂದು ಯೋಚಿಸುತ್ತಲೇ ಅನುಷ ಬಾಗಿಲನ್ನು ತೆರೆದಾಗ ಅವರಿಬ್ಬರನ್ನು ನೋಡಿ.....

ಅನುಷ......ಅಕ್ಕ ಭಾವ ನೀವಿಲ್ಲಿ ಯಾವಾಗ ಬಂದ್ರಿ ಬೆಳಿಗ್ಗೆ ನಮ್ಮ ಜೊತೆಯಲ್ಲೇ ಬರಬಹುದಿತ್ತಲ್ವಾ ?

ರಜನಿ.....ನೀನು ಬಾ ನಾವಿಬ್ಬರು ಏದುರಿನ ರೂಮಲ್ಲಿ ಮಲಗೋಣ
ನಿಧಿಯ ಜೊತೆ ಅವಳಪ್ಪ ಇರಲಿ.

ಅನುಷ.......ಹೌದು ಭಾವ ಹೆತ್ತ ತಂದೆ ತಾಯಿ ಬಗ್ಗೆ ತಿಳಿದಾಗಿನಿಂದ ನಿಧಿ ತುಂಬ ಸೈಲೆಂಟಾಗಿ ಹೋಗಿದ್ದಾಳೆ. ನಮ್ಮ ಮುಂದೆ ಏನನ್ನೂ ತೋರ್ಪಡಿಸಿಕೊಳ್ಳದಿದ್ದರೂ ಅವಳ ಮನಸ್ಸಿನಲ್ಲಿ ನೋವಿದೆ.

ಹರೀಶ ಅವರಿಬ್ಬರನ್ನು ಕಳುಹಿಸಿ ಮಂಚವನ್ನೊರಗಿ ಕೂರುತ್ತ ಕಣ್ಣು ಮುಚ್ಚಿ ಮಲಗಿದ್ದ ಹಿರಿಮಗಳ ತಲೆಯನ್ನು ನೇವರಿಸಿದನು. ನಿಧಿ ಅನ್ಯಮನಸ್ಕಳಾಗಿಯೇ ಕಣ್ತೆರೆದಾಗ ಪಕ್ಕದಲ್ಲಿ ಅಪ್ಪ ಕುಳಿತಿದ್ದನ್ನು ನೋಡಿ ತಾನೂ ಏದ್ದು ಕುಳಿತಳು.

ನಿಧಿ......ಅಪ್ಪ ನೀವಾ ? ಯಾವಾಗ ಬಂದ್ರಿ ?

ಹರೀಶ......ಮಗಳಿಲ್ಲಿ ದುಃಖಿಸುತ್ತಿರುವಾಗ ಅಪ್ಪನಾದವನು ಹೇಗೆ ದೂರದಲ್ಲಿ ಸಂತೋಷವಾಗಿರಲು ಸಾಧ್ಯ ಅದಕ್ಕೆ ರಜೆ ಹಾಕಿ ಬಂದೆ.

ನಿಧಿ......ಥಾಂಕ್ಸ್ ಅಪ್ಪ ಈ ಕೆಲವು ಘಂಟೆಗಳಲ್ಲೇ ನಿಮ್ಮನ್ನು ನಾನು ತುಂಬ ಮಿಸ್ ಮಾಡ್ಕೊಳ್ತಿದ್ದೆ ಅಷ್ಟರಲ್ಲಿ ನೀವೇ ಬಂದ್ಬಿಟ್ರಿ.

ಹರೀಶ.......ಹುಚ್ಚುಡುಗಿ ಅಪ್ಪನಿಗೆ ಮಗಳು ಥಾಂಕ್ಸ್ ಹೇಳ್ತಾರಾ ಕಂದ ಬಾ ಆರಾಮವಾಗಿ ಮಲಗು ನಾನು ನಿನ್ನ ಜೊತೆಯಲ್ಲಿದ್ದೀನಲ್ಲ ಯಾವುದಕ್ಕೂ ಬೇಸರ ಮಾಡಿಕೊಳ್ಬೇಡ.

ಅಪ್ಪನ ಎದೆಯಲ್ಲಿ ತಲೆಯಿಟ್ಟ ನಿಧಿ ತನ್ನ ಮನಸ್ಸಿನ ನೋವನ್ನೆಲ್ಲಾ ಮರೆತು ನಿದ್ದೆಗೆ ಜಾರಿಕೊಂಡರೆ ಹರೀಶ ಮಗಳ ತಲೆ ನೇವರಿಸುತ್ತ ತಾನೂ ಕಣ್ಮುಚ್ಚಿಕೊಂಡನು.
* *
* *
ಮುಂಜಾನೆ ಬೆಗನೆದ್ದ ನೀತು ಹೇಗೇಗೋ ಮಲಗಿದ್ದ ಮಗಳನ್ನೆತ್ತಿ ಸರಿಯಾಗಿ ಮಲಗಿಸಿ ಫ್ರೆಶಾಗುತ್ತ ಹಿರಿಮಗಳ ರೂಮಿಗೆ ಅವಳನ್ನು ವಿಚಾರಿಸಿಕೊಳ್ಳಲು ಹೋದಳು. ನಿಧಿ ಜೊತೆ ಗಂಡ ಇರುವುದನ್ನು ನೋಡಿ ಆಶ್ಚರ್ಯಗೊಂಡು........

ನೀತು.......ರೀ ನೀವ್ಯಾವಾಗ ಬಂದ್ರಿ ?

ಹರೀಶ.....ನಾನು ರಜನಿ ರಾತ್ರಿಯೇ ಬಂದ್ವಿ ನೀನು ಚಿನ್ನಿ ಮಲಗಿರಲಿ ಅಂತ ಡಿಸ್ಟರ್ಬ್ ಮಾಡದೆ ನನ್ನೀ ಮಗಳ ಹತ್ತಿರ ಬಂದ್ಬಿಟ್ಟೆ.

ಅಷ್ಟರಲ್ಲಿ ರಜನಿ—ಅನುಷ ಕೂಡ ಫ್ರೆಶಾಗಿ ಬಂದಿದ್ದು......

ರಜನಿ.....ನನ್ನ ಕಂದ ಎಲ್ಲೆ ?

ನೀತು.....ಅವಳಿನ್ನೂ ಮಲಗಿದ್ದಾಳೆ.

ರಜನಿ.....ಸರಿ ನಾನು ನನ್ನ ಬಂಗಾರಿಯ ಹತ್ತಿರ ಹೋಗ್ತೀನಿ.

ನೀತು.....ತಾಳು ನಾನೇ ಬರ್ತೀನಿ ಹೊರಗೆ ಕಾವಲಿರುವವರಿಗೆ ನೀನ್ಯಾರೆಂದು ಗೊತ್ತಿಲ್ಲ ಅದಕ್ಕೆ ನಿನ್ನ ಒಳಗೆ ಬಿಡಲ್ಲ.

ನೀತು—ರಜನಿ ಮಹಾರಾಣಿಯ ಕೊಣೆಯೊಳಗೆ ಕಾಲಿಟ್ಟಾಗ ಅದೇ ಸಮಯಕ್ಕೆ ನಿಶಾ ಎಚ್ಚಗೊಂಡು ರಜನಿಯನ್ನು ನೋಡಿ.......

ನಿಶಾ.....ಮಮ್ಮ ಸೂ... ಬಂತು.

ರಜನಿ.....ನಡಿ ಕಂದ ನಿನ್ನ ಫ್ರೆಶಾಗಿಸಿ ಸ್ನಾನ ಮಾಡಿಸಿ ಬಿಡ್ತೀನಿ.

ಎಲ್ಲರೂ ರೆಡಿಯಾಗಿ ತಿಂಡಿ ತಿನ್ನುತ್ತಿದ್ದಾಗ ಪಾವನ ಕೂಡ ಆಗಮಿಸಿ ಎಲ್ಲರಿಗೂ ವಿಷ್ ಮಾಡಿದಳು.

ಪಾವನ.......ಅಕ್ಕ ರಾವ್ ಸರ್ ಮತ್ತು ಬೋರ್ಡ್ ಮೆಂಮಬರ್ಸ್ ಬರುವುದಕ್ಕೆ ನಿಮ್ಮ ಅನುಮತಿ ಕೇಳ್ತಿದ್ದರು.

ನೀತು ಫೋನ್ ಮಾಡಿ.....ರಾವ್ ಸರ್ ನಾನೇ ಅಲ್ಲಿಗೆ ಬರ್ತಿದ್ದೀನಿ ಎಲ್ಲರಿಗೂ ಅಲ್ಲಿಯೇ ಇರುವುದಕ್ಕೆ ತಿಳಿಸಿಬಿಡಿ (ಫೋನಿಟ್ಟು) ಪಾವನ ಕಂಪನಿ ಒಳಗಿರುವ ದ್ರೋಹಿಗಳ ಪತ್ತೆಯಾಗಿದೆಯಾ ?

ಪಾವನ......ಹುಂ ಅಕ್ಕ ನಾಲ್ವರು ಮಾನೇಜರ್ ಹುದ್ದೆಯಲ್ಲಿರುವವರ ಜೊತೆ ಇನ್ನೂ ಐವರು ಸಿಬ್ಬಂದಿಗಳು ಸೇರಿ ಕಂಪನಿಯಲ್ಲಿ ಗಫಲಾ ಮಾಡಿ ಹಣ ಲೂಟಿ ಮಾಡುತ್ತಿರುವ ಬಗ್ಗೆ ಸಾಕ್ಷಿ ದೊರೆಯಿತು. ರಾಣಾ ಅಣ್ಣನಿಗೆ ವಿಷಯ ತಿಳಿದು ಅವರೆಲ್ಲರನ್ನಾಗಲೇ ಹಿಡಿದೊಯ್ದರು ನಂತರ ಅವರುಔಮೋಸ ಮಾಡಿದ್ದ ಹಣವನ್ನೂ ವಸೂಲಿ ಮಾಡಿ ಕಂಪನಿಯ ಅಕೌಂಟಿಗೆ ಜಮೆ ಮಾಡಲಾಗಿದೆ.

ನಿಶಾ......ಪಪ್ಪ ನಾನಿ ಆನಿ ಮೇಲೆ ಕೂಚಿ ಮಾತೀನಿ ಆನಿ ನಂದು.

ಹರೀಶ ಮಗಳಿಗೆ ತಿಂಡಿ ತಿನ್ನಿಸುತ್ತ........ನನ್ನ ಕಂದನಿಗೆ ಆನೆ ಮೇಲೆ ಸವಾರಿ ಮಾಡುವಾಸೆಯಾ ಆಯ್ತಮ್ಮ ಈಗ ತಿಂಡಿ ತಿನ್ನು.

ನಿಶಾ.......ಹೂಂ ಪಪ್ಪ ಆನಿ ನಂದು ನಾನಿ ಲೋಂಡ್ ಹೋತಿನಿ.

ಇದನ್ನೆಲ್ಲಾ ದೂರದಿಂದ ನೋಡುತ್ತಿದ್ದ ಆ ಹೆಂಗಸು ಈ ಕುಟುಂಬದ ಜನರುಗಳು ಯಾರು ? ಇವರಿಗೂ ರಾಜಕುಮಾರಾಗಳಿಗೂ ಎಲ್ಲಿಯ ಸಂಬಂಧ ? ವಿಕ್ರಂ ಸಿಂಗ್....ರಾಣಾ ಕೂಡ ಇವಳೆದುರು (ನೀತು ) ಗೌರವದಿಂದ ನಡೆದುಕೊಳ್ತಾರೆ ಎಲ್ಲಿಯದ್ದೋ ಮಹಾರಾಣಿ ಎನ್ನುವ ರೀತಿಯಲ್ಲಿ. ಯಾರಾದರೆ ನನಗೇನಾಗ್ಬೇಕು ಈ ರಾಜಕುಮಾರಿಯರ ಚಟ್ಟ ಮಾತ್ರ ನಾನೇ ಕಟ್ಟೋದು. ಈ ಸಮಸ್ತ ಸಾಮ್ರಾಜ್ಯಕ್ಕೆ ಆಗಲೇ ನಾನು ಒಡತಿಯಾಗುವುದಕ್ಕೆ ಸಾಧ್ಯ.

ಅರಮನೆಯಲ್ಲೇ ತನ್ನಿಬ್ಬರು ಮಕ್ಕಳ ಜೀವಕ್ಕೆ ಅಪಾಯವಿದೆ ಅದು ಕೂಡ ತುಂಬ ಸನಿಹದಲ್ಲೇ ಎಂಬುದರ ಬಗ್ಗೆ ಸುಳಿವೇ ಇರದಿದ್ದ ನೀತು ಹೊರಗೆ ರಾಣಾ....ವಿಕ್ರಂ ಸಿಂಗ್ ಜೊತೆಯಲ್ಲಿ ಹಲವಾರು ವಿಷಯಗಳ ಬಗ್ಗೆ ಚರ್ಚಿಸುತ್ತಿದ್ದಳು.
 
Last edited:

Samar2154

Well-Known Member
2,331
1,286
159
Update posted in 5 parts.

ಒಮ್ಮೆಲೇ ರಾಜಸ್ಥಾನಕ್ಕೆ ಕಥೆಯನ್ನು ತಂದಿರುವಾಗ ಇಲ್ಲಿನ ಎಲ್ಲಾ ಕರ್ತವ್ಯಗಳನ್ನು ಮುಗಿಸಿ ಬಿಡೋಣ ಅಂತ ಯೋಚಿಸಿ ಬರೆಯುತ್ತಿರುವೆ. ಸೆಕ್ಸ್ ಇಲ್ಲದೆ ಕೆಲವರಿಗೆ ಬೇಸರವಾಗಬಹುದು ಆದರೆ ಇದನ್ನೆಲ್ಲಾ ಬರೆಯುವುದಕ್ಕೆ ನನಗೆಷ್ಟು ಸಮಯ ಹಿಡಿಯುತ್ತೆಂದು ಯೋಚಿಸಿದರೆ ನನ್ನ ಯೋಚನೆಗೆ ನೀವು ನನಗೆ ಪ್ರೋತ್ಸಾಹ ನೀಡುತ್ತೀರೆಂದು ನಂಬಿದ್ದೀನಿ.

ಧನ್ಯವಾದಗಳು ರಾಜಸ್ಥಾನದ ಕಥೆ ಮುಂದುವರಿಯುತ್ತೆ ಮುಂದಿನ ಎರಡು ಅಪ್ಡೇಟ್ ಕೂಡ ಟೈಪ್ ಮಾಡಿದ್ದು ಮುಗಿದಿದೆ ನಿಮ್ಮ ಪ್ರತಿಕ್ರಿಯೆ ನೋಡಿಕೊಂಡು ನಂತರ ಪೋಸ್ಟ್ ಮಾಡೋಣವೆಂದು ಸುಮ್ಮನಿದ್ದೀನಿ.
 
Last edited:
Top