ಭಾಗ 192
ಇಂಜಕ್ಷನ್ ಚುಚ್ಚಿಸಿಕೊಂಡ ನೋವನ್ನು ಅಮ್ಮನ ಪ್ರೀತಿ ವಾತ್ಸಲ್ಯದ ಅಪ್ಪುಗೆಯಲ್ಲಿ ಸರಿದೂಗಿಸಿಕೊಂಡಿದ್ದ ನಿಶಾ......ಮಮ್ಮ ನಲಿ ನಾನಿ ಗುಡುಗುಡು ಟಾಟಾ ಹೋಗನ.......ಎಂದು ಪೀಡಿಸುತ್ತಿದ್ದಾಗ ಆಚಾರ್ಯರ ಜೊತೆ ವಿಕ್ರಂ ಸಿಂಗ್ ಮತ್ತು ರಾಣಾ ಆಗಮಿಸಿದರು.
ಆಚಾರ್ಯರು.......ಹರೀಶ ನಾವಿಲ್ಲಿಗೆ ಬಂದಿದ್ದ ಕಾರ್ಯವೆಲ್ಲವೂ ಸಂಪನ್ನಗೊಂಡಿದೆ ನಾವೀಗ ಹೊರಡುವ ಸಮಯ ಬಂದಿದೆ. ನನ್ನ ಶಿಷ್ಯ ದೇವಾನಂದ ಇಲ್ಲಿಯೇ ಉಳಿದು ಸವಿತಾ—ಸುಕನ್ಯಾರ ಮನೆ ಗೃಹಪ್ರವೇಶದ ಶುಭಕಾರ್ಯ ಮುಗಿಸಿಕೊಟ್ಟು ನಮ್ಮಲ್ಲಿಗೆ ಬರ್ತಾನೆ. ನೀತು ರಾಜಕುಮಾರಿಯರು ತಮ್ಮ ಜನ್ಮಭೂಮಿಗೆ ಯಾವ ದಿನ ಹೊರಡಬೇಕೆಂದು ನೀನು ನಿರ್ಣಯಿಸುವೆಯೋ ಅಂದೆ ನಿಮ್ಮನ್ನೆಲ್ಲ ಕರೆದೊಯ್ಯಲು ರಾಣಾ ಮತ್ತು ವಿಕ್ರಂ ಸಿಂಗ್ ಇಬ್ಬರೂ ಬರುತ್ತಾರೆ. ಎಲ್ಲರಿಗೂ ಒಳ್ಳೆಯದಾಗಲಿ ದೇವರ ಆಶೀರ್ವಾದ ಮತ್ತು ಅನುಗ್ರಹ ಸದಾ ಕಾಲ ನಿಮ್ಮೆಲ್ಲರ ಮೇಲೂ ಇರಲಿ......ಎಂದು ಹಾರೈಸಿ ನಿಶಾಳ ತಲೆಯ ಮೇಲೆ ಕೈಯಿಟ್ಟು ಮಂತ್ರೋಚ್ಚಾರ ಮಾಡಿದ ನಂತರ ತಮ್ಮ ಶಿಷ್ಯ ರಾಮಚಂದ್ರ ಗುರುಗಳ ಜೊತೆ ಪ್ರಸ್ಥಾನಿಸಿದರು.
ಆಚಾರ್ಯರು ತೆರಳುವ ತನಕ ಸುಮ್ಮನಿದ್ದ ನಿಶಾ ಪುನಃ ಅಮ್ಮನ ಹತ್ತಿರ ಟಾಟಾ ಹೋಗನ ಎಂದು ಪೀಡಿಸಿದಾಗ ಹರೀಶನ ಮುದ್ದಿನ ಮಗಳನ್ನೆತ್ತಿಕೊಂಡು........ನಡಿ ಕಂದ ನಾನು ನೀನು ಹೋಗೋಣ ನಿಮ್ಮಮ್ಮ ಇಲ್ಲೇ ಇರಲಿ.
ಹರೀಶನ ಜೊತೆ ಮನೆಯ ಮಕ್ಕಳು ಹಾಗು ವಿಕ್ರಂ ಸಿಂಗ್ ಮತ್ತು ಕೆಲ ರಕ್ಷಕರು ಫುಡ್ ಯೂನಿಟ್ಟಿನಲ್ಲಿ ನಿಲ್ಲಿಸಿದ್ದ ಹೆಲಿಕಾಪ್ಟರ್ ರೌಂಡಿಗಾಗಿ ತೆರಳಿದರು. ಅಷ್ಟೊತ್ತಿಗಾಗಲೇ ರಾಣಾ ಅನುಚರರು ಪಾವನ xxxx ರಿಸಾರ್ಟಿಗೆ ಮೀಟಿಂಗಿಗೆಂದು ತೆರಳಿದ್ದಾಗ ಕೌಃಟರಿನಿಂದ ಅವಳ ಫೋನ್ ತೆಗೆದುಕೊಂಡು ಅದಕ್ಕೆ ಬಗ್ ಹಾಕಿಸಿದ್ದ ವ್ಯಕ್ತಿಯನ್ನು ತಮ್ಮ ವಶಕ್ಕೆ ಪಡೆದುಕೊಂಡಿದ್ದು ರಾಣಾನಿಗೆ ವಿಷಯ ಮುಟ್ಟಿಸಿದ್ದರು.
ರಾಣಾ......ಮಾತೆ ಪಾವನಾಳ ಪೋನಲ್ಲಿ ಬಗ್ ಹಾಕಿ ನಿಮ್ಮಿಬ್ಬರ ಮಾತುಕತೆ ಕದ್ದಾಲಿಸುತ್ತಿದ್ದ ವ್ಯಕ್ತಿಯೀಗ ನಮ್ಮ ವಶದಲ್ಲಿದ್ದಾನೆ. ನಮ್ಮ ನಿಕಟಪೂರ್ವ ಮಹರಾಜರಾಗಿದ್ದ ರಾಣಾಪ್ರತಾಪ್ ಅವರಿಗೆ ಸ್ನೇಹಿತ ಮತ್ತು ಸಂಸ್ಥಾನದ ಕಂಪನಿ ಜೊತೆ ವ್ಯವಹಾರ ನಡೆಸುತ್ತಿದ್ದ ಸೇರ್ ಧನಿಕ್ ಲಾಲ್ ಎಂಬುವವನ ದೂರದ ಸಂಬಂಧಿಯಾಗಿರುವ ಸೇಠ್ ಚಂದಾನಿ ಇದನ್ನೆಲ್ಲಾ ಮಾಡಿದ್ದು. ನಾಳೆ ಮುಂಜಾನೆ ಹೊತ್ತಿಗೆ ಭೂಗತ ಲೋಕದ ವ್ಯಕ್ತಿಗಳಿಗೆ ನಮ್ಮ ಕಿರಿಯ ಯುವರಾಣಿಯನ್ನು ಅಪಹರಿಸಲು ಸುಪಾರಿ ಕೊಟ್ಟಿದ್ದ ವ್ಯಕ್ತಿ ಯಾರೆಂದು ಪತ್ತೆ ಹಚ್ಚಿದ ಬಳಿಕ ಆತನನ್ನೂ ವಶಕ್ಕೆ ಪಡೆದುಕೊಳ್ಳುತ್ತೇವೆ.
ನೀತು.......ರಾಣಾ ನನಗೊಂದು ಅಲೋಚನೆ ಬಂದಿದೆ ಇವರನ್ನು ಈಗಲೇ ಜೀವನದ ಜಂಜಾಟಗಳಿಂದ ಮುಕ್ತಿ ನೀಡಿದರೆ ಅವರುಗಳು ತಾವು ಮಾಡಿದ ಹೀನ ಕಾರ್ಯಗಳಿಗೆ ಪಶ್ಚಾತ್ತಾಪ ಪಡುವ ಅವಕಾಶ ಇಲ್ಲದಂತಾಗುತ್ತೆ. ಅದರ ಬದಲು ನವರಾತ್ರಿಯ ವಿಜಯದಶಮಿಯ ದಿನದಂದೇ ನನ್ನ ಮಕ್ಕಳ ವಿರೋಧಿಗಳನ್ನೆಲ್ಲಾ ಈ ಭೂಮಿಯಿಂದ ಒಟ್ಟಿಗೇ ಬೀಳ್ಕೊಡೋಣ. ಅಲ್ಲಿಯವರೆಗೂ ನನ್ನ ಮಕ್ಕಳು ನಿತ್ಯವೂ ನೋವನುಭವಿಸುವಂತೆ ಮಾಡಿದ್ದವರೆಲ್ಲರಿಗೂ ಕೂಡ ಪ್ರತಿನಿತ್ಯವೂ ನರಕದ ದರ್ಶನ ಆಗುತ್ತಿರಬೇಕು. ನನ್ನ ಪುಟ್ಟ ಕಂದಮ್ಮನ ಕಡೆ ತಮ್ಮ ಕ್ರೂರ ನೋಟ ಬೀರಿದವರೆಲ್ಲರಿಗೂ ನರಕವೇ ಧರಿಗಿಳಿದು ಬಂದಂತೆ ಅನಿಸುವಂತಾಗಿ ತಾವೇನು ತಪ್ಪು ಮಾಡಿದೆವೆಂದು ಅರಿವಾಗಬೇಕು.
ರಾಣಾ......ನೀವು ಆಜ್ಞಾಪಿಸಿದಂತೆಯೇ ಆಗುತ್ತೆ ಮಾತೆ ಅದಕ್ಕಾಗಿ ಬೇಕಾದ ಎಲ್ಲಾ ಏರ್ಪಾಡುಗಳೂ ಜೈಸಲ್ಮೇರಿನ ನಮ್ಶ ಅರಮನೆಯ ಹಿಂಭಾಗದಲ್ಲಿರುವ ಶೈತಾನಿ ಕೋಟಾ ಎಂಬ ಬಂಧಿ ಖಾನೆಯೊಳಗೆ ನರಕ ತೋರಿಸಲು ಸಕಲ ಸರಂಜಾಮುಗಳೂ ಇದೆ.
ನೀತು.....ಸುಧಾಮಣಿಯವರ ಆಪ್ತ ಸಹಾಯಕಿಯಾಗಿದ್ದ ಆರಾಧನ ಬಗ್ಗೆ ಸುಳಿವು ಸಿಕ್ಕಿದೆ ಅಂತ ವಿಕ್ರಂ ಸಿಂಗ್ ಎರಡು ದಿನಗಳ ಮುಂಚೆ ನನಗೆ ಹೇಳಿದ್ದ ಅವಳ ಬಗ್ಗೆ ಏನಾದರೂ ತಿಳಿಯಿತಾ ?
ರಾಣಾ..........ಈಗಷ್ಟೆ ವಿಕ್ರಂ ಸಿಂಗ್ ಅದರ ಬಗ್ಗೆ ನನಗೆ ಹೇಳ್ತಿದ್ದ ಆರಾಧನ ಬಗ್ಗೆ ಮಾಹಿತೆ ಸಿಕ್ಕಿದೆಯಂತೆ ಅವಳನ್ನು ಹಿಡಿದುತರಲು ಸಂಸ್ಥಾನದ ರಕ್ಷಕರು ಸಹ ಹೋಗಿದ್ದಾರೆ ಆದರಿನ್ನೂ ಅವರಿಂದ್ಯಾವ ಮಾಹಿತಿ ಬಂದಿಲ್ಲ. ನೀವೇನೂ ಚಿಂತಿಸದಿರಿ ಯಾರೇ ಆಗಲಿ ನಮ್ಶ ಯುವರಾಣಿಯರ ವಿರುದ್ದ ನಿಂತಿರುವವರನ್ನು ಮುಂದಿನ ಕೆಲವೇ ದಿನಗಳಲ್ಲಿ ನಾನು ವಶಕ್ಕೆ ಪಡೆದುಕೊಳ್ತೀನಿ. ಅಲ್ಲಿನ ಸಿಎಂ ಮತ್ತು ಕೆಲವು ಪ್ರತಿಷ್ಠಿತ ವ್ಯಕ್ತಿಗಳನ್ನು ದಿಲೇರ್ ಸಿಂಗ್ ಮತ್ತವನ ಪಡೆಗಳು ಎಲ್ಲಾ ಕಡೆಯಿಂದಲೂ ಸುತ್ತುವರಿದಿದ್ದಾರೆ. ನಿಮ್ಮ ಆದೇಶದಂತೆಯೇ ಅವರ ನೆರಳಿಗೂ ಸಹ ಸುಳಿವು ಸಿಗದ ರೀತಿ ಪ್ರತಿಯೊಬ್ಬರೂ ಕಣ್ಮರೆ ಆಗುತ್ತಾರೆ. ಅಲ್ಲಿನ ಕಾರ್ಯಗಳನ್ನೆಲ್ಲಾ ಮುಗಿಸಿದ ನಂತರ ನಾನೇ ನಿಮ್ಮನ್ನು ಹಾಗು ರಾಜಕುಮಾರಿಯನ್ನು ಕರೆದೊಯ್ಯಲು ಬರುವೆ.
ನಿಧಿ.....ನೀವೀಗ ರಾಜಸ್ಥಾನಕ್ಕೆ ಹಿಂದಿರುಗಬೇಕೇನು ?
ರಾಣಾ.......ಇಲ್ಲ ರಾಜಕುಮಾರಿ ನಾಳೆ ಬೆಂಗಳೂರಿಗೆ ತೆರಳಿ ಅಲ್ಲಿನ ಭೂಗತ ದೊರೆಯಿಂದ ನಮ್ಮ ರಾಜಕುಮಾರಿಯನ್ನು ಅಪಹರಿಸಲು ಯಾರು ಸುಪಾರಿ ಕೊಟ್ಟವರೆಂಬ ವಿಷಯ ತಿಳಿದುಕೊಂಡು ನಂತರ ರಾಜಸ್ಥಾನಕ್ಕೆ ಹೊರಡುತ್ತೀವಿ. ಸುಭಾಷ್ ನೀನು ಬೆಂಗಳೂರಿನಲ್ಲಿ ಪೋಲಿಸ್ ಇಲಾಖೆಯ ಉನ್ನತ ಹುದ್ದೆಯಲ್ಲಿರುವೆ ಎಂದು ತಿಳಿಯಿತು ನಿನಗೆ ಸಾಧ್ಯವಿದ್ದರೆ ನಮಗೆ ಈ ರೌಡಿ ರಮನಾಥನ ಹಿಂದೆ ಯಾರ ಶೀರಕ್ಷೆಯಿದೆ ಅವನ ಸುತ್ತಲಿನ ಜನರ ಬಗ್ಗೆ ತಿಳಿದುಕೊಳ್ಳುವುದಕ್ಕೆ ಸಹಾಯ ಮಾಡುವೆಯಾ.
ಸುಭಾಷ್ ಉತ್ತರಿಸುವ ಮುನ್ನ ಅವನ ತಾಯಿ......ಹರೀಶ—ನೀತು ತಮಗೆ ಮಾಡಿದ್ದ ಸಹಾಯವನ್ನು ರಾಣಾ ಮತ್ತು ಮನೆಯವರಿಗೆಲ್ಲಾ ತಿಳಿಸಿ.......ನಾನವನನ್ನು ಹೆತ್ತಿರಬಹುದು ಆದರೆ ಸಮಾಜದಲ್ಲಿಂದು ಒಳ್ಳೆಯ ಉದ್ಯೋಗ ಮತ್ತು ಗೌರವದೊಂದಿಗೆ ಬದುಕುವ ಜೀವನ ಕಲ್ಪಿಸಿಕೊಟ್ಟಿದ್ದು ಮಾತ್ರ ನೀತು—ಹರೀಶ. ಈ ಕುಟುಂಬದವರಿಗೆ ಯಾವುದೇ ಸಹಾಯ ಮಾಡಲು ನನ್ನ ಮಗ ಸದಾ ಸಿದ್ದನಿರುತ್ತಾನೆ.
ನೀತು......ಅಕ್ಕ ನೀವು ಸುಮ್ಮನೆ ಏನೇನೋ ಹೇಳಬೇಡಿ ಸುಭಾಷ್ ಜೀವನದಲ್ಲೇನಾದರೂ ಸಾಧಿಸಿದ್ದರೆ ಅದರಲ್ಲಿ ಅವನ ಪರಿಶ್ರಮವೇ ಕಾರಣ ನಾವು ಜೊತೆಗಿದ್ದು ಬೆಂಬಲ ನೀಡಿದೆವಷ್ಟೆ.
ಸುಭಾಷ್ ತಾಯಿ......ನಾವು ಕಷ್ಟದಲ್ಲಿದ್ದಾಗ ನಮ್ಮ ಸಹಾಯಕ್ಕಾಗಿ ಯಾರೂ ಬರದಿದ್ದ ಸಮಯದಲ್ಲಿ ನನ್ನ ಮತ್ತು ನನ್ನ ಮಗನನ್ನು ಕೈ ಹಿಡಿದಿದ್ದು ಯಾರು ನೀತು ? ನೀನು ಹರೀಶ ತಾನೇ ಅದನ್ನೆಲ್ಲರಿಗೂ ಹೇಳುವುದರಲ್ಲಿ ತಪ್ಪೇನಿದೆ.
ಸುಭಾಷ್........ಹೌದು ಚಿಕ್ಕಮ್ಮ ಅಮ್ಮ ಹೇಳಿದ್ದರಲ್ಲೇನೂ ತಪ್ಪಿಲ್ಲಾ ರಾಣಾ ನಾಳೆ ಹೇಗಿದ್ದರೂ ನಾನು ಅಮ್ಮ ಊರಿಗೆ ಹೊರಡುತ್ತಿದ್ದೆವು ಈಗ ನಿಮ್ಮ ಜೊತೆಯಲ್ಲೇ ಬರ್ತೀವಿ ನಿಮಗ್ಯಾವುದೇ ರೀತಿ ಸಹಾಯ ಮಾಡಲು ನಾನು ರೆಡಿ.
.....continue