ಭಾಗ — 328
ಬೆಳಿಗ್ಗೆ ಎಲ್ಲರೂ ರೆಡಿಯಾಗುತ್ತಿದ್ದರೆ ಅಮ್ಮನಿಂದ ಮೊದಲು ತಾನೆ ರೆಡಿಯಾಗಿದ್ದ ನಿಶಾಳಿನ್ನೂ ಮಂಚದಲ್ಲಿ ರಗ್ ಹೊದ್ದು ಕುಳಿತಿದ್ಳು.
ನೀತು.....ಕಂದ ಕುಳುಕುಳು ಆಗ್ತಿದ್ಯಾ ನನ್ ಚಿನ್ನಿ ಮರಿಗೆ ?
ನಿಶಾ.....ಹೂಂ ಮಮ್ಮ ನನ್ನಿ ಸೆಟರ್ ಹಾಕು ಬೇಗ ನಾನಿ ಪಪ್ಪ ಜೊತಿ ರೊಂಡ್ ಹೋತೀನಿ.
ನೀತು.....ನಿಮ್ಮಕ್ಕ ಬಂದ್ಳು ಹಾಕ್ತಾಳೆ ಕಂದ. ನಿಹಾ ಚಿನ್ನಿ ಮರಿಗೆ ಜರ್ಕಿನ್ ಟೋಪಿ ಹಾಕ್ಬಿಡಮ್ಮ.
ತಂಗಿಯನ್ನು ಮುದ್ದಾಡಿ ಜರ್ಕಿನ್ ತೊಡಿಸಿದ ನಿಹಾರಿಕ....ಅಮ್ಮ ರೆಡಿಯಾಗಿ ಬರುತ್ತೆ ನಡಿ ಪಪ್ಪ ನಿಂಗೆ ಕಾಂಪ್ಲಾನ್ ತಂದಿದೆ ಬಿಸಿಬಿಸಿ ಕುಡಿದ್ರೆ ಕುಳುಕುಳು ಆಗಲ್ಲ.
ಹರೀಶನ ಕುಟುಂಬವಿದ್ದ ವ್ಯಾನ್ ಆರ್ಮಿ ಕಂಟೋನ್ಮೇಟ್ ಗೇಟ್ ಬಳಿ ತಲುಪಿದಾಗ ಅಕ್ಷರಾ ಇವರನ್ನು ಬರಮಾಡಿಕೊಳ್ಳುವುದಕ್ಕೆ ಮುಂಚಿತವಾಗಿಯೇ ಅಪ್ಪನೊಟ್ಟಿಗೆ ಬಂದು ಕಾಯುತ್ತಿದ್ದಳು. ಮನೆಯಲ್ಲಿ ತಾಯಿಯನ್ನು ಪರಿಚಯಿಸಿದಾಗ ಅಕ್ಷರಾಳ ತಾಯಿ ಜಾನಕಿ ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿ ನೀರು....ಕಾಫಿ ತಂದಿಟ್ಟಾಗ.......
ನಿಶಾ.....ಆಂಟಿ ನಾನಿ ಕಾಪಿ ಕುಡಿಲ್ಲ ನಂಗಿ ಹೊಟ್ಟಿ ಹಸೀತು.
ನಿಧಿ.......ಆಂಟಿಗೆ ಕನ್ನಡ ಗೊತ್ತಿಲ್ಲ ಕಂದ.
ನಿಶಾ.....ಲಿಲ್ಲ ಆಂಟಿ ಗೊತ್ತು ಲಿಲ್ಲ ಆಂಟಿ ನಂಗಿ ತಿಂಡಿ ಬೇಕು.
ಇಷ್ಟು ವರ್ಷಗಳಿಂದಲೂ ಮಗಳಿಗೋಸ್ಕರ ಹೇಗೊ ತಡೆದಿದ್ದ ಕಣ್ಣೀರು ಜಾನಕಿ ಕಂಗಳಿಂದ ಝಳಝಳನೇ ಸುರಿಯತೊಡಗಿ ನಿಶಾಳನ್ನೆತ್ತಿ ಮುದ್ದಾಡುತ್ತ......
ಜಾನಕಿ......ನನ್ನೀ ಮುದ್ದು ಬಂಗಾರಿಗೆಲ್ಲ ಗೊತ್ತ ಹೊಟ್ಟೆ ಹಸಿತಿದ್ಯ ಕಂದ ನಡಿ ಆಲೂ ಪರೋಟ ಮಾಡಿದ್ದೀನಿ ನಿಂಗಿಷ್ಟ ಅಲ್ವ.
ನಿಶಾ.......ಹೂಂ ತುಂಬ ಇಟ್ಟ ನಂಗಿ ಬೆಣ್ಣೆ ಬೇಕು.
ಜಾನಕಿ......ಆಲೂ ಪರೋಟ ಬೆಣ್ಣೆ ಎರಡೂ ಇದೆ ಕಂದ ಬಾ.
ನಿಧಿ ಶಾಕಿನಿಂದ.......ಆಂಟಿ ನಿಮಗೆ ಕನ್ನಡ ಬರುತ್ತಾ ? ಮತ್ಯಾಕೆ ಕಳೆದ ಸಲ ಬಂದಿದ್ದಾಗ ನನ್ಜೊತೆ ಮಾತಾಡ್ಲಿಲ್ಲ ?
ನಿಧಿಗಿಂತಲೂ ಶಾಕಿನಲ್ಲಿದ್ದ ಅಕ್ಷರಾ.....ಅಮ್ಮ ನಿಮಗೆ ಕನ್ನಡ ಗೊತ್ತಿದ್ಯಾ ಹೇಗೆ ? ನನಗ್ಯಾಕೆ ಮುಂಚೆ ಹೇಳಿರಲಿಲ್ಲ ?
ಜಾನಕಿ ಅವರಿಬ್ಬರಿಗೆ ಉತ್ತರಿಸುವ ಬದಲು ಕಣ್ಣೀರಿಡುತ್ತ ನಿಶಾಳ ಜೊತೆ ಕಿಚನ್ನಿಗೋದರೆ ನೀತು ಕೂಡ ಅವರಿಂದೆ ತೆರಳಿದಳು. ಅಮ್ಮನ ಹಿಂದೆ ಹೊರಟ ಮಗಳನ್ನು ತಡೆಯುತ್ತ.........
ಬ್ರಿಗೇಡಿಯರ್ ಕುಲ್ದೀಪ್ ಸಿಂಗ್.......ನೀನು ಹುಟ್ಟುವುದಕ್ಕಿಂತ ಮುಂಚಿನ ಗಾಯ ಕಣಮ್ಮ ಹಳೆಯದ್ದೆಲ್ಲ ನೆನಪಾಗಿರಬೇಕು ಅದಕ್ಕೆ ನಿಮ್ಮಮ್ಮನಿಗೆ ದುಃಖವಾಗ್ತಿದೆ.
ಹರೀಶ.......ಕ್ಷಮಿಸಿ ಸರ್ ನನ್ನ ಮಗಳಿಂದಾಗಿ........
ಕುಲ್ದೀಪ್ ಸಿಂಗ್.......ದಯವಿಟ್ಟು ನೀವು ಕ್ಷಮೆ ಕೇಳ್ಬೇಡಿ ಸರ್. ಆದ್ರೆ ಇಷ್ಟು ವರ್ಷಗಳಲ್ಲಿ ನನ್ನೀ ಮಗಳಿಗೊಮ್ಮೆಯೂ ತಿಳಿಯದ ಸತ್ಯ ಮೂರು ವರ್ಷದ ನಿಮ್ಮ ಮಗಳಿಗೇಗೆ ತಿಳಿಯಿತು ಅಂತಾನೇ ಗೊತ್ತಾಗ್ತಿಲ್ಲ.
ಗಿರೀಶ.......ಅಂಕಲ್ ನನ್ನ ಚಿನ್ನೀನ ಸಾಮಾನ್ಯ ಅಂದ್ಕೊಬೇಡಿ ಅವಳಿಂತದೆಷ್ಟೊ ಪವಾಡ ಮಾಡ್ತಾಳೆ ಹೇಳಕ್ಕಾಗಲ್ಲ ನೋಡ್ಬೇಕು.
ಕೆಲ ಹೊತ್ತು ಲಿವಿಂಗ್ ಹಾಲಿನಲ್ಲಿ ಮೌನ ಆವರಿಸಿಕೊಂಡಿದ್ದು ನೀತು ಮಗಳಿಗೆ ತಿಂಡಿ ತಿನ್ನಿಸುತ್ತ ಹೊರಬಂದು........
ನೀತು......ನಿಮ್ಮಮ್ಮ ನಿನ್ನಿಂದ್ಯಾವ ವಿಷಯ ಮುಚ್ಚಿಟ್ಟಿದ್ರು ಅಂತ ನಿನಗೆ ತಿಳಿಯುತ್ತೆ ಅಕ್ಷರಾ ಮೊದಲು ತಿಂಡಿ ತಿನ್ನು.
ಅಕ್ಷರಾ.....ಆಂಟಿ......
ನೀತು......ನನ್ನ ಮಾತಿಗೆ ಗೌರವ ಕೊಡಲ್ವ ?
ಎಲ್ಲರೂ ಮರುಮಾತಿಲ್ಲದೆ ತಿಂಡಿ ಮುಗಿಸಿದಾಗ........
ಜಾನಕಿ........ನಾನು ಹುಟ್ಟಿ ಬೆಳಿದಿದ್ದೆಲ್ಲವೂ ಬೆಂಗಳೂರು ಕನ್ನಡ ನನ್ನ ಮಾತೃಭಾಷೆ. ನಮ್ಮದು ಚಿಕ್ಕ ಚೊಕ್ಕನಾದ ಕುಟುಂಬ ನನ್ನ ತಂದೆ..ತಾಯಿ...ಅಣ್ಣ ಮತ್ತೆ ನಾನು ನಾಲ್ವರು ಮಾತ್ರ. ನಾನು ಡಿಗ್ರಿ ಮಾಡ್ತಿದ್ದ ಕಾಲೇಜ್ ಆರ್ಮಿ ಕಂಟೋನ್ಮೆಂಟ್ ಹತ್ತಿರವೇ ಇದ್ದಿದ್ದು. ಆಗಲೇ ದೀಪು (ಕುಲ್ದೀಪ್ ಸಿಂಗ್) ಆರ್ಮಿಯಲ್ಲಿ ಹೊಸದಾಗಿ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ಪಡೆದು ಆರು ತಿಂಗಳ ಮಟ್ಟಿಗೆ ಬೆಂಗಳೂರಿನ ಕಂಟೋನ್ಮೆಂಟಲ್ಲಿ ಕಾರ್ಯ ನಿರ್ವಹಿಸುವುದಕ್ಕಾಗಿ ಬಂದಿದ್ರು ಇವರ ಮೂಲತಃ ಹರಿಯಾಣದವರು. ದೀಪು ನಮ್ಮ ಕಾಲೇಜಿನ ಹತ್ತಿರವಿದ್ದ ಜ್ಯೂಸ್ ಅಂಗಡಿಗೆ ಬರ್ತಿದ್ರು ನಾನು ನನ್ನ ಗೆಳತಿಯರೊಟ್ಟಿಗೆ ಅಂಗಡಿ ಪಕ್ಕದಲ್ಲಿನ ಬಸ್ ಸ್ಟಾಪಲ್ಲಿ ಬಸ್ಸಿಗಾಗಿ ಕಾಯ್ತಿರ್ತಿದ್ದೆ. ಇವರ ಆಕರ್ಶಕ ವ್ಯಕ್ತಿತ್ವ...ನಡೆನುಡಿ ನನ್ನ ಫ್ರೆಂಡ್ಸ್ ಗುಂಪಿನಲ್ಲಿ ಮಾತಿನ ವಿಷಯವಾಗಿದ್ದು ನನನ್ನೂ ಇವರ ಕಡೆಗೆ ಆಕರ್ಶಿತಳಾಗುವಂತೆ ಮಾಡಿತ್ತು. ಒಂದೆರಡು ತಿಂಗಳಲ್ಲೇ ಇಬ್ಬರ ನಡುವೆ ಪ್ರೀತಿ ಚಿಗುರೊಡೆದು ಹೆಮ್ಮರವಾಗಿ ಬೆಳೆದುಬಿಟ್ಟಿತು. ದೀಪುಗೆ ತನ್ನವರೆಂದು ಯಾರೂ ಇರದಿದ್ದ ಕಾರಣ ನಾನೇ ಇವರಿಗೆ ಸರ್ವಸ್ವವಾಗಿದ್ದೆ. ನಮ್ಮಿಬ್ಬರ ಪ್ರೀತಿಯ ಬಗ್ಗೆ ನಾನು ಮನೆಯಲ್ಲಿ ಹೇಳಿದಾಗ ಅಂತರ್ಜಾತಿ ವಿವಾಹವೆಂದು ಅಪ್ಪ..ಅಮ್ಮ ಇಬ್ಬರೂ ಒಪ್ಪಿಕೊಳ್ಳಲಿಲ್ಲ. ನಮ್ಮಣ್ಣನಿಗೆ ನಾನೇ ಪ್ರಪಂಚ ನನಗೂ ಅಣ್ಣನೇ ದೇವರ ಸಮಾನ. ನಮ್ಮಿಬ್ಬರನ್ನು ಒಂದಾಗಿಸಲು ಅಣ್ಣ ಸಾಕಷ್ಟು ಪ್ರಯತ್ನಿಸಿದ್ರೂ ಅಪ್ಪ...ಅಮ್ಮ ಸುತಾರಾಂ ಒಪ್ಪಿಕೊಳ್ಳಲಿಲ್ಲ. ಕಡೆಯದಾಗಿ ಅಪ್ಪ ಒಂದೇ ಮಾತು ಹೇಳಿದು ನಿನಗೆ ಅಪ್ಪ..ಅಮ್ಮ ಅಥವ ನಿನ್ನಾ ಹುಡುಗನ ಪ್ರೀತಿ ಎರಡರಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊ ಅಂತ. ಅಪ್ಪನ ಮಾತಿನಿಂದ ನನ್ನ ಅಸ್ತಿತ್ವವೇ ಅಳ್ಳಾಡಿ ಹೋಗಿತ್ತು. ಅಪ್ಪ..ಅಮ್ಮನನ್ನು ಬಿಟ್ಟು ಕೆಲವು ತಿಂಗಳಿಂದ ಪ್ರೀತಿಸುತ್ತಿರುವ ಹುಡುಗನನ್ನ ಆಯ್ಕೆ ಮಾಡುವುದಕ್ಕೆ ಮನಸ್ಸು ಒಪ್ಪುತ್ತಿರಲಿಲ್ಲ. ಆದರೆ ದೀಪುಗೆ ನಾನೇ ಇಡೀ ಪ್ರಪಂಚ ನನ್ನನ್ನು ಬಿಟ್ಟರೆ ಇವನಿಗ್ಯಾರಿಲ್ಲ ಅಂತ ಹೃದಯ ಕೂಗಿ ಹೇಳ್ತಿತ್ತು. ಕೆಲವು ದಿನ ನಾನಿದೇ ತೊಳಲಾಟದಲ್ಲಿದ್ದಾಗ ಅಣ್ಣನೇ ಸಮಸ್ಯೆಗೆ ಸಲಹೆ ನೀಡುತ್ತ ನಿಮ್ಮಿಬ್ಬರ ಪರಿಶುದ್ದವಾದ ಪ್ರೀತಿಗೆ ಸದಾ ನನ್ನ ಬೆಂಬಲವಿದೆ. ಸಧ್ಯದ ಪರಿಸ್ಥಿತಿಯಲ್ಲಿ ಅಪ್ಪ..ಅಮ್ಮನನ್ನು ಒಪ್ಪಿಸಿ ನಿನ್ನ ಮದುವೆ ಮಾಡಿಸುವುದಕ್ಕೆ ಸಾಧ್ಯವಿಲ್ಲ. ನೀನು ದೀಪುವಿನ ಜೊತೆ ಬೇರೆಯೂರಿಗೆ ಹೋಗಿ ಮದುವೆಯಾಗಮ್ಮ ಮುಂದೆ ಮಗುವಾದಾಗ ಮೊಮ್ಮಗುವಿನ ಮುಖ ನೋಡಿ ಅಪ್ಪ..ಅಮ್ಮ ಕೂಡ ನಿಮ್ಮಿಬ್ಬರನ್ನು ಸ್ವೀಕರಿಸ್ತಾರೆ. ಅಣ್ಣನ ಮಾತಿನಂತೆ ದೀಪು ದೆಹಲಿಗೆ ಹಿಂದಿರುವಾಗ ನಾನೂ ಇವರ ಜೊತೆ ಮನೆಯಿಂದೋಡಿ ಬಂದ್ಬಿಟ್ಟೆ ದೆಹಲಿಯಲ್ಲೇ ನಾವಿಬ್ಬರೂ ಮದುವೆಯಾದ್ವಿ. ನಮ್ಮನ್ನು ಒಂದು ಮಾಡಿದ್ದ ನಮ್ಮಣ್ಣ ಇವತ್ತಿಗೂ ನಮ್ಮೆಜಮಾನರನ್ನೊಮ್ಮೆ ಕೂಡ ಬೇಟಿ ಮಾಡಿಲ್ಲ. ವರ್ಷದ ಬಳಿಕ ಅಕ್ಷರಾ ಹುಟ್ಟಿದಾಗ ನಮ್ಮಿಂದ ಬೆಂಗಳೂರಿಗೆ ಹೋಗಲಾಗಲಿಲ್ಲ ಆಗಿವರು ಬಾರ್ಡರ್ ಏರಿಯಾದಲ್ಲಿ ನಿಯೋಜನೆಗೊಂಡಿದ್ರು ರಜೆ ಸಿಗ್ತಿರಲಿಲ್ಲ. ಅಕ್ಷರಾ ಒಂದುವರೆ ವರ್ಷ ತುಂಬಿದಾಗ ನಾವು ಬೆಂಗಳುರಿಗೆ ಬಂದ್ವಿ ಆದ್ರೆ ಅಷ್ಟರಲ್ಲಾಗಲೇ ತಡವಾಗಿ ಹೋಗಿತ್ತು. ವರ್ಷದ ಹಿಂದೆ ಅಪ್ಪ... ಅಮ್ಮ ಮರಣಿಸಿದ್ದು ಅಣ್ಣನಿಗೂ ಮದುವೆಯಾಗಿ ನಾವು ಹುಟ್ಟಿ ಬೆಳಿದಿದ್ದ ಮನೆ ಮಾರಾಟ ಮಾಡಿ ಅಣ್ಣ ಬೇರೆಯೂರಿಗೆ ಶಿಫ್ಟಾಗಿ ಹೋಗಿದ್ರು. ನಮ್ಮನೇ ಅಕ್ಕಪಕ್ಕದವರಿಗೂ ಅಣ್ಣ ಯಾವೂರಿಗೆ ಶಿಫ್ಟಾದನೆಂಬ ವಿಷಯ ಗೊತ್ತಿರಲಿಲ್ಲ. ಅಣ್ಣ ಕೆಲಸ ಮಾಡ್ತಿದ್ದ ಕಂಪನಿಯಲ್ಲೂ ವಿಚಾರಿಸಿದ್ವಿ ಆದ್ರೆ ಅಣ್ಣ ಅಲ್ಲಿ ಕೆಲಸ ಬಿಟ್ಟಿದ್ದು ನನ್ನ ಪ್ರೀತಿಯ ಅಣ್ಣನನ್ನು ನೋಡುವೆಲ್ಲ ದಾರಿ ಮುಚ್ಚಿಹೋಗಿತ್ತು.
ಅಂದಿನಿಂದ ಇಂದಿನವರೆಗೂ ನಾನೀ ವಿಷಯ ನನ್ನ ಮಗಳಿಗೂ ಹೇಳಲಾಗದೆ ಮುಚ್ಚಿಟ್ಟಿದ್ದೆ. ಅಕ್ಷರಾ ತನ್ನ ಸಹಪಾಠಿಗಳ ಅಜ್ಜಿ.. ತಾತ ಅಥವ ಇನ್ಯಾರೇ ನೆಂಟರಿಷ್ಟರನ್ನು ನೋಡಿದಾಗ ನನಗ್ಯಾಕೆ ಯಾರೂ ಇಲ್ಲವೆಂದು ಕೇಳ್ತಿದ್ದ ಪ್ರಶ್ನೆ ನನ್ನೆದೆಗೆ ಶೂಲದ ರೀತಿಯಲ್ಲಿ ಚುಚ್ತಿತ್ತು ಹಾಗಾಗಿ ಸತ್ಯ ಹೇಳುವ ಧೈರ್ಯ ನಮ್ಮಿಬ್ಬರಿಗ್ಯಾವತ್ತೂ ಬರಲೇ ಇಲ್ಲ. ನೀತು ನಿಂಗೆ ಗೊತ್ತಿಲ್ಲ ನನ್ನ ಮಗಳು ಹೃದಯದಿಂದ ತನ್ನಾಪ್ತ ಸ್ನೇಹಿತೆಯೆಂದು ಸ್ವೀಕರಿಸಿದ್ದು ನಿಧಿಯನ್ನೇ ಅದಕ್ಕಿಬ್ಬರೂ ಘಂಟೆಗಟ್ಟಲೇ ಫೋನಲ್ಲಿ ಮಾತಾಡ್ತಿದ್ದೇ ಸಾಕ್ಷಿ. ಇವತ್ತು ಈ ಪುಟ್ಟ ಚಿನ್ನಾರಿಯಿಂದ ನಮ್ಮ ಮನಸ್ಸಿನಲ್ಲಿದ್ದ ಭಾರ ಕಡಿಮೆಯಾಗುವ ದಾರಿ ಸಿಗುವಂತಾಗಿ ನನ್ನ ಮಗಳಿಗೂ ಸತ್ಯ ತಿಳಿಯಿತು.
ಜಾನಕಿ ಅಳುತ್ತಿದ್ದರೆ ಅಕ್ಷರಾ ತಾಯಿಗೆ ಸಮಾಧಾನ ಮಾಡುತ್ತ ತಾನೂ ಅಳುತ್ತಿದ್ದಳು.
ನೀತು ಸ್ವಲ್ಪ ಯೋಚಿಸಿ......ನನ್ನೀ ಮಗಳು ಇಷ್ಟು ವರ್ಷವಾದ್ಮೇಲೆ ನಿಮ್ಮಿಂದ ಸತ್ಯ ಹೊರಬರುವಂತೆ ಮಾಡಿದ್ದಾಳೆಂದ್ರೆ ಇದಕ್ಕೊಂದು ಕಾರಣವಿದ್ದೇ ಇರುತ್ತೆ. ನಿಮ್ಮಣ್ಣನ ಹೆಸರೇನು ?
ಜಾನಕಿ ಸ್ವಲ್ಪ ಸಮಾಧಾನಗೊಂಡಿದ್ದು.......ವಿವೇಕ್ ಶರ್ಮ ಅಂತ
ನೀತು ಚಕಿತಳಾಗಿ........ವಿವೇಕ್ ಶರ್ಮ ನಿಮ್ಮತ್ತಿಗೆ ಹೆಸರು ?
ಜಾನಕಿ......ನಾವು ಬೆಂಗಳೂರಿಗೆ ಹೋಗುವಷ್ಟರಲ್ಲಿ ಅಣ್ಣನಿಗೆ ಮದುವೆಯಾಗಿತ್ತು ನಾನತ್ತಿಗೆಯನ್ನು ನೋಡಿಲ್ಲ. ನಮ್ಮ ಮನೆಯ ಅಕ್ಕಪಕ್ಕದವರಿಂದ ಅತ್ತಿಗೆ ಬಗ್ಗೆ ಗೊತ್ತಾಯ್ತು. ಅತ್ತಿಗೆಯ ಹೆಸರು ಸವಿತಾ ಅಂತೆ xxxx ಊರಿನವರು ಜೊತೆಗೆ ಸ್ಕೂಲ್ ಟೀಚರ್ ಅಂತಷ್ಟೆ ನನಗೆ ತಿಳಿದಿದ್ದು ಇನ್ನೇನೂ ಗೊತ್ತಿಲ್ಲ.
ಹರೀಶ ಏನೋ ಹೇಳಲು ಹೊರಟಾಗ ನೀತು ಗಂಡನ ಕೈಯನ್ನು ಅಮುಕಿ ಮಕ್ಕಳಿಗೂ ಕಣ್ಸನ್ನೆಯಲ್ಲಿ ಮಾತಾಡದಂತೆ ತಾಕೀತು ಮಾಡಿದಳು.
ನೀತು.......ನಿಮ್ಮಣ್ಣನ ಫೋಟೋ ಇದ್ಯಾ ?
ಜಾನಕಿ....ನಾನು ಮನೆ ಬಿಟ್ಟು ಬರುವುದಕ್ಕಿಂತ ಒಂದು ವಾರದ ಮುಂಚೆಯಷ್ಟೆ ಅಪ್ಪ..ಅಮ್ಮ...ಅಣ್ಣನೊಟ್ಟಿಗಿರುವ ಫೋಟೋ ನನ್ನ ಬಳಿಯಿದೆ....ಎಂದೇಳಿ ತಂದುಕೊಟ್ಟಳು.
ಫೋಟೋ ನೋಡಿದಾಗ ನೀತು ತುಟಿಗಳಲ್ಲಿ ಕಿರುನಗೆ ಮೂಡಿದ್ದು ಮುದ್ದಿನ ಮಗಳನ್ನು ಹೆಮ್ಮೆಯಿಂದ ನೋಡಿದಳು.
ನೀತು....ಮೊಬೈಲಲ್ಲಿ ಇದರ ಸ್ನಾಪ್ ತಗೊತೀನಿ ನಮಗೆಲ್ಲಾದ್ರೂ ನಿಮ್ಮಣ್ಣ ಸಿಕ್ಕಿದ್ರೆ ಅಂತ.
ಜಾನಕಿ......ತಗೊಳ್ಳಿ ನೀವೂ ಕರ್ನಾಟಕದವರೆ ಅಲ್ವ ಅಕಸ್ಮಾತ್ ನಮ್ಮಣ್ಣ ಏದುರಾದ್ರೆ ಇಷ್ಟು ವರ್ಷಗಳಿಂದ ಅಣ್ಣನಿಗೋಸ್ಕರ ಪರಿತಪಿಸುತ್ತಿರುವ ನನ್ನ ಕಾಯುವಿಕೆ ಅಂತ್ಯವಾಗಬಹುದು.
ನೀತು......ನಿಮ್ಮಣ್ಣನನ್ನು ಹುಡುಕಿಸುವ ಜವಾಬ್ದಾರಿ ನನಗಿರಲಿ ಅದರ ಬದಲಿಗೆ ನೀವೇನು ಕೊಡ್ತೀರ ?
ಜಾನಕಿ ಕೈ ಮುಗಿದು.......ನೀವಿಷ್ಟು ಮಾಡಿದ್ರೆ ನಾ ನಿಮಗೆ ಇಡೀ ಜೀವನ ಜೀತದಾಳಾಗಿರಲು ಸಿದ್ದ.
ನೀತು.....ಈ ರೀತಿ ಮಾತಾಡ್ಬೇಡಿ ಜಾನಕಿ. ನೀವಿಬ್ರೂ ನಿಮ್ಮ ಜೀವನದ ಹತ್ತು ದಿನ ನಿಮ್ಮ ಮಗಳಿಗೋಸ್ಕರ ಕೊಡ್ಬೇಕು ಅಷ್ಟೆ. ನೀವಿದಕ್ಕೆ ರೆಡಿಯಿದ್ದೀರಾ ?
ಬ್ರಿಗೇಡಿಯರ್.....ನೀವು ಹೇಳಿದ್ದೇನೂ ಅರ್ಥವಾಗ್ಲಿಲ್ಲ ?
ನೀತು......ನಾವಿಲ್ಲಿಂದ ಕಾಶ್ಮೀರಕ್ಕೆ ಹೋಗ್ತಿದ್ದೀವಿ ನಮ್ಜೊತೆಯಲ್ಲಿ ನಿಮ್ಮ ಮಗಳನ್ನು ಕರ್ಕೊಂಡೋಗೋಣ ಅಂತ ನೀವದಕ್ಕೆ ಪರ್ಮಿಶನ್ ಕೊಡ್ಬೇಕು.
ಜಾನಕಿ........ಧಾರಾಳವಾಗಿ ಕರ್ಕೊಂಡ್ ಹೋಗಿ ನಿಧಿ ಇವಳ ಮೊಟ್ಟಮೊದಲ ಪರಮಾಪ್ತೆ ಇಬ್ಬರೂ ಜೊತೆಯಲ್ಲಿ ಸಮಯ ಕಳೆದರೆ ಮನಸ್ಸುಗಳಿನ್ನೂ ಹತ್ತಿರವಾಗುತ್ತೆ.
ನೀತು......ಶ್ರೀನಗರದಿಂದ ನಾವು ನೇರವಾಗಿ ದೆಹಲಿಗೆ ಹೋಗ್ತಿವಿ ನೀವಿಬ್ರೂ ದೆಹಲಿಗೆ ಮಗಳನ್ನಿಲ್ಲಿಗೆ ಕರೆತರುಲು ದೆಹಲಿಗೆ ಬನ್ನಿ ಆಗಲೇ ನಿಮ್ಮ ಮಗಳನ್ನು ಕಳಿಸ್ತೀನಿ.
ಬ್ರಿಗೇಡಿಯರ್ ಕುಲ್ದೀಪ್......ಖಂಡಿತವಾಗಿ ಬರ್ತೀವಿ ಯಾವತ್ತು ಬರ್ಬೇಕಂತ ಹೇಳ್ಬಿಡಿ ಸಾಕು.
ನೀತು.......ಅಕ್ಷರಾ ನಿಮ್ಮಪ್ಪ ಅಮ್ಮ ಪರ್ಮಿಶನ್ ಕೊಟ್ಟಾಯ್ತಲ್ಲ ಪುಟ್ಟಿ ಹೋಗಿ ನಿನ್ನ ಬಟ್ಟೆ ಪ್ಯಾಕ್ ಮಾಡ್ಕೊಳಮ್ಮ ನಿನ್ನ ಸ್ನೇಹಿತೆ ಜೊತೆ ಜಾಲಿಯಾಗಿದ್ದು ಬರುವಂತೆ.
ಅಕ್ಷರಾ ಖುಷಿಯಿಂದ ಅಮ್ಮನ ಕೆನ್ನೆಗೆ ಮುತ್ತಿಟ್ಟು ನಿಧಿ ಜೊತೆ ತನ್ನ ರೂಮಿಗೆ ತೆರಳಿದರೆ ನಿಶಾ ಸಪ್ಪಗೆ ಬಂದಪ್ಪನನ್ನು ಸೇರುತ್ತ......
ನಿಶಾ.........ಪಪ್ಪ ನಾನಿ ಅಲ್ಲಿ ಹೋತೀನಿ ಅಂದಿ ಅಣ್ಣ ಬೇಡ ನನ್ನಿ ಬೇತಾರೆ ಅಂತು. ನನ್ನಿ ಬೇತಾರೆ ಪಪ್ಪ ?
ಜಾನಕಿ........ನಿನ್ನನ್ಯಾರೂ ಬೈಯಲ್ಲ ಕಂದ ಎಲ್ಲಿಗೊಗ್ಬೇಕಮ್ಮ ?
ಸುರೇಶ......ಆಂಟಿ ಇಲ್ಲಿನ ಕ್ಯಾಂಪಸೊಳಗೆ ಸುತ್ತಾಡ್ಬೇಕಂತೆ.
ಜಾನಕಿ ಗಂಡನಿಗೆ ಹಿಂದಿಯಲ್ಲಿ ಹೇಳಿದಾಗ ಕುಲ್ದೀಪ್......ನಡಿ ಪುಟ್ಟಿ ನಾನೇ ಕರ್ಕೊಂಡೋಗ್ತೀನಿ.
ನಿಶಾ ಅವರ ಕೈ ಹಿಡಿದು ಆರ್ಮಿ ಕಂಟೋನ್ಮೆಂಟ್ ಸುತ್ತಾಡಲು ಹೊರಟರೆ ಗಿರೀಶ..ಸುರೇಶ...ನಿಹಾರಿಕ ಕೂಡ ಜೊತೆಯಾದರು.
ಅಣ್ಣ ಮೊದಲೇ ಹೇಳಿಕೊಟ್ಟಂತೆ ತನ್ನೆದುರಿಗೆ ಬಂದಂತ ಆರ್ಮಿ ಜವಾನರಿಗೆ ನಿಶಾ ಸೆಲ್ಯೂಟ್ ಮಾಡಿ ಜೈಹಿಂದ್ ಎನ್ನುತ್ತ ಎಲ್ಲರ ಮನಸ್ಸಿನಲ್ಲೂ ತನ್ನ ಛಾಪು ಮೂಡಿಸುತ್ತಿದ್ದಳು. ಕಂಟೋನ್ಮೆಂಟ್ ಸುತ್ತಾಡಿ ಖುಷಿಯಿಂದ ಹಿಂದಿರುಗಿದ ನಿಶಾ ಅತ್ತಿಗೆ ಮಡಿಲಿಗೇರಿ ವಿವರಣೆ ನೀಡತೊಡಗಿದಳು.
ಸುರೇಶ......ಅತ್ತಿಗೆ ಈ ಚಿಲ್ಟಾರೀನ ನಾಲ್ಕೈದು ದಿನ ಇಲ್ಲಿ ಬಿಟ್ಬಿಟ್ರೆ ಇವಳಿಲ್ಲಿಗೇ ಬಾಸಾಗಿ ಹೋಗ್ತಾಳಷ್ಟೆ.
ನಿಹಾರಿಕ......ಅಮ್ಮ ಎಲ್ರಿಗೂ ಸೆಲ್ಯೂಟ್ ಮಾಡಿದ್ದೇ ಮಾಡಿದ್ದು ಅವರೂ ಪ್ರತಿಯಾಗಿವಳಿಗೆ ಸೆಲ್ಯೂಟ್ ಮಾಡ್ತಿದ್ರು.
.........continue