• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,314
1,275
159
continue......


ಶನಿವಾರ
ಕಾಮಾಕ್ಷಿಪುರದ ಮನೆ.......

ಹಿಂದಿನ ದಿನ ಸವಿತಾ—ಸುಕನ್ಯಾರ ಹೊಸ ಮನೆಯ ಗೃಹಪ್ರವೇಶದ ಪೂಜೆ ದೇವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿತ್ತು. ನಿಶಾ ಬಗ್ಗೆ ತಿಳಿದುಕೊಂಡು ಅವಳನ್ನು ಅಪಹರಿಸಲು ಸುಪಾರಿ ಪಡೆದಿದ್ದ ಭೂಗತ ಲೋಕದ ಡಾನ್ ಮತ್ತವನ ಸಹಚರರು ಮರಣಿಸಿದ್ದರೆ ಆತ ಯಾರಿಂದ ಸುಪಾರಿ ಪಡೆದಿದ್ದನೋ ಅವರನ್ನೆಲ್ಲಾ ರಾಜಸ್ಥಾನದಲ್ಲಿ ರಾಣಾ ತನ್ನ ವಶಕ್ಕೆ ಪಡೆದುಕೊಂಡಿದ್ದು ಈಗ್ಯಾವುದೇ ಆತಂಕವೂ ಸಹ ಇರಲಿಲ್ಲ. ಮುಂದೇನು ಎಂದು ಯೋಚಿಸುತ್ತ ಮನೆ ಮುಂದಿನ ಉಯ್ಯಾಲೆಯಲ್ಲಿ ಕುಳಿತಿದ್ದ ನೀತು ಪಕ್ಕದಲ್ಲವಳ ಗಂಡ ಕೂರುತ್ತ.....

ಹರೀಶ......ಏನು ಯೋಚಿಸ್ತಿದ್ದೀಯ ? ಈಗ ನಮ್ಮ ಕಂದನ ಮೇಲೆ ಆವರಿಸಿದ್ದ ಆತಂಕದ ಛಾಯೆ ನಿವಾರಣೆಗೊಂಡಿದೆ.

ನೀತು......ರಾಜಸ್ಥಾನದಲ್ಲಿರುವ ವಿರೋಧಿಗಳೆಲ್ಲರೂ ನಿರ್ಮೂಲನೆ ಆಗುವವರೆಗೂ ನಾವು ಯಾವುದನ್ನೂ ಸಲೀಸಾಗಿ ತೆಗೆದುಕೊಳ್ಳಲೇ ಬಾರದು ಕಣ್ರಿ. ನಮ್ಮ ಮಕ್ಕಳೀಗ ಅತ್ಯಂತ ಸುರಕ್ಷಿತವಾಗಿದ್ದಾರೆ ನಿಜ ಆದರೆ ಅವಳಿಂದ ತಂದೆ ತಾಯಿಯರನ್ನು ಬೇರ್ಪಡಿಸಿದ್ದವರಿನ್ನೂ ಜೀವಂತವಾಗಿದ್ದಾರೆ ಅವರೆಲ್ಲರೂ ಸಾಯುವವರೆಗೆ ನನಗೆ ಸ್ವಲ್ಪವೂ ಸಮಾಧಾನವಿಲ್ಲ.

ಹರೀಶ......ಸಧ್ಯಕ್ಕಿಲ್ಲೇನೂ ಕೆಲಸವಿಲ್ಲ ಅಂತ ನೀನು ಅವರಿಬ್ಬರನ್ನು ರಾಜಸ್ಥಾನಕ್ಕೆ ಕರೆದೊಯ್ಯುವ ಬಗ್ಗೆ ಯೋಚಿಸುತ್ತಿದ್ದೀಯ.

ನೀತು.....ಆ ಬಗ್ಗೆಯೂ ಯೋಚಿಸ್ತಿದ್ದೆ ಅದರ ಜೊತೆ ಮಕ್ಕಳಿಬ್ಬರೂ ಒಂದೇ ದಿನ ಹುಟ್ಟಿದ್ದು ಅವರಿಬ್ಬರ ತಾರೀಖು ವರ್ಷಗಳೆರಡು ಬೇರೆ ಬೇರೆ ಆಗಿದ್ದರೂ ಇಬ್ಬರೂ ಜನಿಸಿದ್ದು ಮಾತ್ರ ವಿಜಯದಶಮಿಯ ದಿನದಂದೇ. ಹಳೆಯ ತಲೆಮಾರಿನಲ್ಲಿ ಹುಟ್ಟಿನ ದಿನದಂದು ಯಾವ ನಕ್ಷತ್ರ ಇರುತ್ತಿತ್ತೋ ಅಂದೇ ಅವರ ಜನ್ಮದಿನವನ್ನು ಆಚರಿಸುತ್ತಿದ್ದರು ಕಾಲಕ್ರಮೇಣ ನಾವದನ್ನು ತ್ಯಜಿಸಿ ತಾರೀಖಿನ ಪ್ರಕಾರ ಆಚರಿಸಲು ಮುಂದಾದೆವು. ನಮ್ಮ ಪೂರ್ವಜರು ಆಚರೆಣೆಗೆ ತಂದಿರುವಂತಹ ಸಂಪ್ರದಾಯವನ್ನೇ ಮುಂದುವರಿಸಲು ನಾನು ಇಚ್ಚಿಸುತ್ತೀನಿ ಕಣ್ರೀ ಅಂದ್ರೆ ಇಬ್ಬರೂ ಮಕ್ಕಳ ಹುಟ್ಟು ಹಬ್ಬವನ್ನು ವಿಜಯದಶಮಿಯಂದೆ ಆಚರಿಸಲು ತೀರ್ಮಾನಿಸಿರುವೆ ನೀವೇನಂತೀರಾ.

ಹರೀಶ......ಒಳ್ಳೆ ಯೋಚನೆ ಕಣೆ ವಿಜಯದಶಮಿಗಿಂತಲೂ ಒಳ್ಳೆಯ ದಿನ ಯಾವುದಿದೆ ಆ ದಿನವೇ ನಮ್ಮಿಬ್ಬರೂ ಹೆಣ್ಣುಮಕ್ಕಳ ಹುಟ್ಟಿದ ದಿನವನ್ನು ಆಚರಿಸೋಣ. ಇಡೀ ಮನೆಯನ್ನು ಅಲಂಕರಿಸಿ ನಮ್ಮ ಪರಿಚಯದವರನ್ನೆಲ್ಲಾ ಕರೆದು ಗ್ರಾಂಡಾಗಿ ಆಚರಿಸಬೇಕು.

ನೀತು......ಹೌದು ಭವ್ಯವಾಗಿಯೇ ಆಚರಿಸೋಣ ಆದರೆ ಇಲ್ಲಲ್ಲ ಅವರಿಬ್ಬರ ತಾಯ್ನಾಡಿನಲ್ಲಿ ಅಂದರೆ ಉದಯಪುರ ಅರಮನೆಯಲ್ಲಿ ಅದುವೇ ಸೂರ್ಯವಂಶಿ ರಾಜವಂಶದ ಪರಂಪರೆಯ ಅನುಸಾರವೆ ಆಚರಿಸಬೇಕು. ಆದರೆ ಅದಕ್ಕೂ ಮುನ್ನ ನನ್ನ ಮಕ್ಕಳಿಗೆ ಏದುರಾಗಿ ನಿಂತಿರುವ ಶತ್ರುಗಳನ್ನೆಲ್ಲಾ ನಾಶ ಮಾಡಬೇಕಿದೆ ಅದು ಮುಖ್ಯ.

ಹರೀಶ......ಈ ಮನೆಯಲ್ಯಾಕೆ ಆಚರಿಸುವುದು ಬೇಡ ? ಅವರು ನಮ್ಮ ಮಕ್ಕಳೇ ಅಲ್ಲವಾ.

ನೀತು......ರೀ ಅವರಿಬ್ಬರೂ ನಮ್ಮ ಮಕ್ಕಳೇ ಕಣ್ರಿ ಅದನ್ಯಾರೂ ಸಹ ಬದಲಾಯಿಸಲು ಸಾಧ್ಯವಿಲ್ಲ ಹಾಗಾಗುವುದಕ್ಕೆ ನಾನು ಬಿಡುವುದೂ ಇಲ್ಲ. ಆದರೆ ರಾಜಸ್ಥಾನ ಅವರಿಬ್ಬರ ಜನ್ಮಭೂಮಿಯೂ ಹೌದು ಅದರ ಜೊತೆಗೆ ಅವರಿಬ್ಬರ ಕರ್ಮಭೂಮಿ ಕೂಡ. ಅಲ್ಲಿ ಅವರಿಗೆ ತಮ್ಮದೇ ಆದ ಬಹಳಷ್ಟು ಜವಾಬ್ದಾರಿಗಳಿವೆ ಅದನ್ನವರಿಬ್ಬರೂ ನಿಭಾಯಿಸಲೇಬೇಕಿದೆ. ನಿಶಾ ಇನ್ನೂ ಚಿಕ್ಕವಳು ಅವಳಿಗಿನ್ನೂ 17— 18 ವರ್ಷಗಳವರೆಗೆ ಜೀವನದ ಹಲವಾರು ಪಾಠಗಳನ್ನು ಕಲಿಸುವ ಜೊತೆಗೆ ಸರಿತಪ್ಪುಗಳ ಅರಿವನ್ನೂ ಮೂಡಿಸುವ ಜವಾಬ್ದಾರಿಗಳು ನಮ್ಮಿಬ್ಬರ ಮೇಲಿದೆ. ಆದರೆ ನಿಧಿ ಆಚಾರ್ಯರ ಆಶ್ರಮದಲ್ಲಿಯೇ ಬೆಳೆದಿರುವುದರಿಂದ ಅವಳು ಸಂಪೂರ್ಣ ಪರಿಪಕ್ವಳಾಗಿದ್ದಾಳೆ ಈಗ ಅವಳೇ ಅಲ್ಲಿನ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ ಆದರೆ ಅವಳಿಲ್ಲೇ ನಮ್ಮ ಜೊತೆಯಲ್ಲಿದ್ದುಕೊಂಡು ತನ್ನ ಕರ್ತವ್ಯವನ್ನೂ ಸಹ ಯಾವುದೇ ಚ್ಯುತಿಬಾರದಂತೆ ನಿಭಾಯಿಸಬೇಕು.

ಹರೀಶ....ನಿನ್ನ ಪ್ರತಿಯೊಂದು ನಿರ್ಧಾರದಲ್ಲೂ ನಾನು ಜೊತೆಗಿರುವೆ ಆದರೆ ನೀನೀ ಮೊದಲೇ ಹೇಳಿರುವಂತೆ ಮಕ್ಕಳಿಗೆ ಅವರ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರವನ್ನೂ ತಂದೆ ತಾಯಿಗಳಾಗಿ ನಾವಿಬ್ಬರೂ ನೀಡಬೇಕಾಗಿರುವುದು ನಮ್ಮ ಕರ್ತವ್ಯ.

ಗೇಟ್ ತೆರೆದುಕೊಂಡು ಒಳಗೆ ಬಂದ ನಿಧಿ ಅಪ್ಪ ಅಮ್ಮನನ್ನು ನೋಡಿ ಉಯ್ಯಾಲೆ ಹತ್ತಿರ ನಿಂತು......ಏನಪ್ಪ ಅಮ್ಮನ ಜೊತೆಯಲ್ಲಿ ನೀವು ಆರಾಮವಾಗಿ ಉಯ್ಯಾಲೆ ಆಡ್ತಿದ್ದೀರಾ ?

ಹರೀಶ ಮಗಳನ್ನು ಮಧ್ಯ ಕೂರಿಸಿಕೊಳ್ಳುತ್ತ.......ನಿನ್ನ ವಿಷಯವಾಗಿ ಮಾತನಾಡ್ತಿದ್ವಿ ಅಷ್ಟರಲ್ಲೇ ನೀನು ಬಂದೆ. ಈಗೆಲ್ಲಿಗಮ್ಮ ಹೋಗಿದ್ದೆ ?

ನಿಧಿ......ಅಪ್ಪ ನಾಳೆ ಭಾನುವಾರ ಸವಿತಾ ಆಂಟಿ ಮತ್ತು ಸುಕನ್ಯಾ ಆಂಟಿ ಇಬ್ಬರೂ ತಮ್ಮ ಹೊಸ ಮನೆಗೆ ಶಿಫ್ಟಾಗುತ್ತಿದ್ದಾರಲ್ಲ ಅದಕ್ಕೇ ಸವಿತಾ ಆಂಟಿ ಮನೆಗೆ ಹೋಗಿದ್ದೆ.

ನೀತು......ಬಸ್ಯನಿಗೆ ನೆನ್ನೆ ಇಬ್ಬರ ಮನೆಗೆ ಹುಡುಗರನ್ನು ಕಳಿಸೆಂದು ಹೇಳಿದ್ದೆ ಪ್ಯಾಕಿಂಗ್ ಮಾಡಲು ಸಹಾಯವಾಗಲಿ ಅಂತ ಇನ್ನೊಮ್ಮೆ ಜ್ಞಾಪಿಸಿ ಬಿಡ್ತೀನಿ.

ನಿಧಿ.....ಚಿಂತೆಯಿಲ್ಲಮ್ಮ ನಾನೂ ಫೋನ್ ಮಾಡಿದ್ದೆ ಬಸ್ಯನೇ ಇಬ್ಬರ ಮನೆಗೂ 4—4 ಜನರನ್ನು ಕರೆತಂದು ಬಿಟ್ಟಿದ್ದಾನೆ ಜೊತೆಗೆ ಪ್ಯಾಕಿಂಗ್ ಸಹ ಮುಗಿದಿದೆ ನಾಳೆ ಶಿಫ್ಟ್ ಮಾಡುವ ಸಮಯಕ್ಕೆ ಅವರೇ ನಮ್ಮ ಫ್ಯಾಕ್ಟರಿಯ ಗಾಡಿ ತೆಗೆದುಕೊಂಡು ಬರ್ತಾರೆ.

ಹರೀಶ....ಸರಿ ಬಿಡಮ್ಮ ಅದರ ಬಗ್ಗೆ ಚಿಂತೆಯಿಲ್ಲ. ಈಗ ನಾನೊಂದು ವಿಷಯ ಕೇಳುವೆ ನಿನ್ನ ಮನಸ್ಸಿನಲ್ಲಿರುವುದನ್ನು ನೀನು ನಮ್ಮಿಬ್ಬರಿಗೆ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಬೇಕು.

ಅಪ್ಪ ಅಮ್ಮನ ಮುಖಚರ್ಯೆ ಸೂಕ್ಷ್ಮವಾಗಿ ಗಮನಿಸಿದ ನಿಧಿ ಅಪ್ಪ ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದಿದ್ದಾರೆ ಎಂಬುದನ್ನರಿತು
........ಅಪ್ಪ ನೀವೇನು ಕೇಳಬೇಕೆಂದಿದ್ದೀರೋ ನನಗೆ ಅರಿವಾಯಿತು. ಅಮ್ಮ ನಾನು ಜವಾಬ್ದಾರಿಗಳನ್ನು ಹೊರುವುದಕ್ಕೆ ಸಿದ್ದಳಾಗಿದ್ದೀನಿ ಆದರೆ ನೀವು ನನ್ನ ಜೊತೆಗಿದ್ದರೆ ಮಾತ್ರ. ನಾನ್ಯಾವುದೇ ಕಾರಣಕ್ಕೂ ರಾಜಸ್ಥಾನದಲ್ಲೇ ಉಳಿದುಕೊಂಡು ಸಂಸ್ಥಾನದ ಕಂಪನಿಯಲ್ಲಿನ ವ್ಯವಹಾರಗಳನ್ನು ನೋಡಿಕೊಳ್ಳಲಾರೆ ಅದಕ್ಕೆ ನಾನಂತೂ ಈಗಲೇ ಸಿದ್ದಳಿಲ್ಲ. 13 ವರ್ಷಗಳಿಂದ ಆಶ್ರಮದ ಕಠಿಣ ಜೀವನವನ್ನು ನಾನು ಬದುಕಿದ್ದೆ ಈಗ ಅಪ್ಪ ಅಮ್ಮನ ಪ್ರೀತಿ ನನಗೆ ಒಲಿದು ಬಂದಿರುವಾಗ ನಿಮ್ಮನ್ನು ಬಿಟ್ಟು ನಾನೆಲ್ಲಿಗೂ ಹೋಗುವುದಿಲ್ಲ.

ನೀತು......ಹುಚ್ಚುಡುಗಿ ನಿನ್ನ ನಮ್ಮಿಂದ ದೂರ ಕಳಿಸುವುದಕ್ಕೆ ನಾವು ಕೂಡ ಸಿದ್ದರಿಲ್ಲ ಗೊತ್ತಾಯ್ತಾ. ನಾವು ಹೇಳ್ತಿರೋದು ಸಂಸ್ಥಾನದ ಅಧೀನದಲ್ಲಿರುವ ಕಂಪನಿಗೆ ಈಗ್ಯಾರೂ ಯಜಮಾನರಿಲ್ಲ ನೀನು ಆ ಸ್ಥಾನದಲ್ಲಿ ಕೂರಬೇಕು ಆದರೆ ಇಲ್ಲಿಂದಲೇ ಎಲ್ಲಾ ಕೆಲಸಗಳನ್ನೂ ನಿರ್ವಹಣೆ ಮಾಡು ನಿನ್ನ ಜೊತೆ ನಾನಿರುತ್ತೀನಿ.

ನಿಧಿ......ಅಮ್ಮ ನನಗೆ 18 ವರ್ಷ ತುಂಬಿದ್ದು ಸೂರ್ಯವಂಶಿ ರಾಜ ಮನೆತನದ ಯುವರಾಣಿಯಾಗಿ ಅಲ್ಲಿನ ಅಧಿಕಾರಗಳೆಲ್ಲವೂ ನನಗೆ ದೊರೆಯುತ್ತದೆ. ಆದರೆ ಕಂಪನಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಅಮ್ಮನೇ ತೆಗೆದುಕೊಳ್ಳಬೇಕು.

ಹರೀಶ......ನಿಮ್ಮಮ್ಮ ಯಾವ ಅಧಿಕಾರದಿಂದ ಕಂಪನಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿದೆ ಪುಟ್ಟಿ ಅದರ ಬಗ್ಗೆ ಯೋಚಿಸು.

ನಿಧಿ.......ಅಪ್ಪ ಕಂಪನಿಯ ಕಾರ್ಯಚಟುವಟಿಕೆಗೆ ಒಂದು ಗ್ರೂಪ್ ಸ್ಥಾಪನೆ ಮಾಡಲಾಗುತ್ತೆ ಅದೇ ಬೋರ್ಡ್ ಆಫ್ ಡೈರೆಕ್ಟರ್ಸ್ ಅದಕ್ಕೆ ನಾನು ಚೇರ್ಮನ್ ಆಗುವ ಬದಲಿಗೆ ಆ ಸ್ಥಾನದಲ್ಲಿ ಅಮ್ಮನನ್ನು ಕೂರಿಸುವೆ. ಆಗ ಅಮ್ಮ ಯಾವುದೇ ಅಡಚಣೆಗಳೂ ಇಲ್ಲದ ರೀತಿ ಕಂಪನಿಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರಳು. ನಾನೀಗಲೇ ಆ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ದಳಿಲ್ಲ ತಮ್ಮ ತಂಗಿಯರ ಜೊತೆ ನನ್ನ ಜೀವನದ ಸುವರ್ಣ ಯುಗವನ್ನು ನಾನೀಗ ಕಳೆಯಲು ಇಚ್ಚಿಸಿಕೊಂಡಿರುವ ಮನಸ್ಸಿದೆ. ಕಂಪನಿಯ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳಲು ಅಮ್ಮನಿಗಿಂತ ಸೂಕ್ತಳಾದ ವ್ಯಕ್ತಿ ಮಗಳಿಗ್ಯಾರಿದ್ದಾರೆ ಹೇಳಿ.

ಹರೀಶ ನಾಟಕವಾಡುತ್ತ......ನನ್ನಿಬ್ಬರೂ ಮಕ್ಕಳೂ ಅಪ್ಪನಿಂದಲೇ ಚೆನ್ನಾಗಿ ಮುದ್ದು ಮಾಡಿಸಿಕೊಳ್ತಾರೆ ಆದರೆಲ್ಲಾ ಜವಾಬ್ದಾರಿಗಳನ್ನೂ ಅಮ್ಮನಿಗೇ ವಹಿಸುತ್ತಾರೆ ಅಪ್ಪ ಲೆಕ್ಕಕ್ಕೇ ಇಲ್ಲ.

ನೀತು......ಲೇ ನಿಮ್ಮಪ್ಪನಿಗೆ ಹೊಟ್ಟೆ ಉರಿಯುತ್ತಿದೆ ಆ ಹಿಂದಿ ಭಾಷೆ ಸಿನಿಮಾಗಳಲ್ಲಿ ಸಾಹುಕಾರನ ಪಕ್ಕದಲ್ಲಿರುತ್ತಾರಲ್ಲ ಮುನ್ಷಿ ಅಂತೇಳಿ ನಿಮ್ಮಪ್ಪನಿಗೆ ಆ ಪೋಸ್ಟ್ ಕೊಟ್ಬಿಡೋಣ ಕಣೆ ಖುಷಿಯಾಗ್ತಾರೆ.

ಹರೀಶ.......ಅದನ್ನೆಲ್ಲಾ ನೀವಿಬ್ಬರೇ ನೋಡಿಕೊಳ್ಳಿ ನಾನಂತು ನನ್ನ ಮುದ್ದಿನ ಕಂದನ ಜೊತೆ ಆಡಿಕೊಂಡಿರ್ತೀನಿ.

ನೀತು.....ಸರಿ ಕಣಮ್ಮ ಅದರ ವಿಷಯ ಆಮೇಲೆ ಮಾತನಾಡೋಣ ಈಗ್ಯಾಕೆ ಯೋಚಿಸೋದು ಬಿಡು. ಎಲ್ಲಿ ತಿಂಡಿ ತಿಂದಾಗಿನಿಂದ ನನ್ನ ಚಿಲ್ಟಾರಿಯ ಸದ್ದೇ ಇಲ್ವಲ್ಲ ಮನೆಯಲ್ಲೇ ಇದ್ದಾಳೋ ಯಾರದ್ರೂ ಹೊರಗೆ ಕರೆದುಕೊಂಡು ಹೋಗಿದ್ದಾರೋ ನೋಡೋಣ ನಡಿ.

ಮೂವರೂ ಮನೆಯೊಳಗೆ ಬಂದರೆ ಸೋಫಾದಲ್ಲಿ ಪೇಪರ್ ಓದುತ್ತ ಕುಳಿತಿದ್ದ ತಾತನನ್ನು ಒರಗಿಕೊಂಡು ನಿಂತಿದ್ದ ನಿಶಾ ಕಣ್ಣು ಬಾಯನ್ನು ತೆರೆದುಕೊಂಡು ಟಿವಿಯೊಳಗೆ ಮುಳುಗಿ ಹೋಗಿದ್ದಳು. ಒಂದ್ನಿಮಿಷ ಸಮಯದಲ್ಲೇ ಅವಳ ಮುಖದಲ್ಲಿ ಕೋಪ....ಆಕ್ರೋಶ.....ಭಯ...
ಖುಷಿ ಹೀಗೇ ಹಲವಾರು ಭಾವನೆಗಳು ಮೂಡುತ್ತಿರುವುದನ್ನು ಮೂವರೂ ನೋಡುತ್ತಿದ್ದರೆ ನಿಶಾ ಅವರ ಕಡೆ ತಿರುಗಿಯೂ ಕೂಡ ನೋಡದೆ ಟಿವಿಯಲ್ಲೇ ಮುಳುಗಿದ್ದಳು.

ನೀತು.....ಇದೇನ್ರಿ ನಿಮ್ಮ ಚಿಲ್ಟಾರಿ ಈ ಕಡೆ ತಿರುಗಿಯೂ ನೋಡ್ತಿಲ್ಲ.

ನಿಧಿ.......ಅಮ್ಮ ಟಿವಿ ಕಡೆ ನೋಡಿ ಅಲ್ಲಿ ಜಿಂಕೆಯೊಂದನ್ನು ಹುಲಿ ಅಟ್ಟಿಸಿಕೊಂಡು ಹೋಗ್ತಿದೆಯಲ್ಲ ಅದನ್ನೇ ಬಾಯ್ತೆರೆದುಕೊಂಡು ನೋಡುತ್ತ ಸುತ್ತಮುತ್ತ ಏನಿದೆ ಅನ್ನುವುದನ್ನೂ ಮರೆತಿದ್ದಾಳೆ.

ನೀತು......ಪ್ರಾಣಿಗಳೆಂದರೆ ಇವಳಿಗದೇನು ಪಂಚಪ್ರಾಣವೋ.

ಹರೀಶ......ಮುಂದಿನ ಶುಕ್ರವಾರ ಸರ್ಕಾರದ ಯಾವುದೋ ಒಂದು ಇಲಾಖೆಯಲ್ಲಿನ ಬಡ್ತಿಗಾಗಿ ನಮ್ಮ ಶಾಲೆಯಲ್ಲಿ ಪರೀಕ್ಷೆ ನಡೀತಿದೆ ಹಾಗಾಗಿ ಅಂದು ಶಾಲೆಗೆ ರಜೆಯಿರುತ್ತೆ. ಒಟ್ಟು ಮೂರು ದಿನ ರಜೆ ಇರುತ್ತಲ್ಲ ಮಕ್ಕಳಿಗೊಂದು ದಿನ ಕಾಲೇಜಿಗೆ ರಜೆ ಹಾಕಿಸಿ ನಾವ್ಯಾಕೆ ಮೈಸೂರಿಗೆ ಹೋಗಿ ಬರಬಾರದು.

ನೀತು......ಮೈಸೂರಿಗಾ ?

ರಜನಿ ಹತ್ತಿರ ಬಂದು.......ಏನಮ್ಮ ಇದು ನಿಮ್ಮ ಚರ್ಚೆ ಫ್ಯಾಮಿಲಿ ಸೀಕ್ರೆಟ್ ಮೀಟಿಂಗಾ ನಮಗೆ ಹೇಳೋ ಹಾಗಿಲ್ಲವಾ ?

ನೀತು ಗೆಳತಿಯ ಭುಜಕ್ಕೆ ಗುದ್ದಿದರೆ ನಿಧಿ.......ಅಂಟಿ ಮುಂದಿನವಾರ ಅಪ್ಪ ಮೈಸೂರಿಗೆ ಹೋಗಿಬರೋಣ ಅಂತಿದ್ದಾರೆ.

ರಜನಿ......ಮೈಸೂರಿಗಾ ಅಲ್ಯಾರಿದ್ದಾರೆ ?

ನೀತು......ನನಗೇನು ಗೊತ್ತು.

ಹರೀಶ......ನಾವು ಇದಕ್ಕೂ ಮುಂಚೆ ಮೈಸೂರಿಗೆ ಹೋಗಿಲ್ಲ ಅಲ್ಲಿನ ಕೆ.ಆರ್.ಎಸ್. ಡ್ಯಾಂ....ಚಾಮುಂಡಿಬೆಟ್ಟ......ಅರಮನೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮುದ್ದಿನ ಮಗಳಿಗೆ ಝೂ ತೋರಿಸಬೇಕಿದೆ.

ನೀತು.....ಎಲ್ಲಿಗಾದ್ರೂ ಕರ್ಕೊಂಡ್ ಹೋಗಿ ಆದರೆ ಝೂ ಒಳಗಡೆ ಹೋಗಿ ಹೊರಗೆ ಬರುವವರೆಗೂ ನಿಮ್ಮ ಮುದ್ದಿನ ಮಗಳ ಎಲ್ಲಾ ಜವಾಬ್ದಾರಿಯೂ ನಿಮ್ಮದೇ ನನಗೂ ಅವಳಿಗೆ ಆ ಜಾಗದಲ್ಯಾವ ಸಂಬಂಧವೂ ಇಲ್ಲ.

ಸುಮ......ನೀತು ಹಾಗ್ಯಾಕೇ ಹೇಳ್ತೀಯಾ ?

ನೀತು.....ನೀವೂ ನೋಡಿಲ್ಲವಾ ಅತ್ತಿಗೆ ಮನೆಯಲ್ಲೇ ನಾಯಿ...ಗಿಣಿ ಗುಬ್ಬಚ್ಚಿ ಎಲ್ಲವನ್ನೂ ಸೇರಿಸಿಕೊಂಡಿರ್ತಾಳೆ. ಅಲ್ನೋಡಿ ಟಿವಿಯಲ್ಲಿ ಪ್ರಾಣಿಗಳನ್ನು ನೋಡುತ್ತ ನಮ್ಮ ಕಡೆ ತಿರುಗಿಯೂ ನೋಡ್ತಿಲ್ಲವಲ್ಲ. ಇನ್ನು ಝೂ ಒಳಗೆಷ್ಟು ಪ್ರಾಣಿಗಳಿರುವುದಿಲ್ಲ ಅಲ್ಲಿಂದ ಇವಳಾಚೆಗೆ ಬರ್ತಾಳೆ ಅಂತ ನನಗೆ ಸ್ವಲ್ಪವೂ ನಂಬಿಕೆಯಿಲ್ಲ ನನ್ನನ್ನೂ ಒಂದು ಬೋನಿನೊಳಗೆ ಕೂರಿಸಿಬಿಡಿ ಅಂತ ಹೇಳಿದ್ರೂ ಆಶ್ಚರ್ಯವಿಲ್ಲ.

ಅವಳ ಮಾತಿಗೆ ಎಲ್ಲರೂ ನಗುತ್ತಿದ್ದಾಗ ಟಿವಿ ಹತ್ತಿರಕ್ಕೋಡಿದ ನಿಶಾ ಅದಕ್ಕೆ ಎಚ್ಚರಿಕೆ ನೀಡುವಂತೆ ಬೆರಳು ತೋರಿಸುತ್ತ......ಏಯ್ ಏತ್ ಕೊತ್ತಿನಿ.....ಪಪ್ಪ ನೋಲು ಬತ್ತಿಲ್ಲ.....ಎಲ್ಲ ಹೋತು ಬತ್ತಿಲ್ಲ.

ನೀತು......ನೋಡಿದ್ರಾ ಅತ್ತಿಗೆ ಪ್ರೋಗ್ರಾಂ ನಡುವೆ ಜಾಹೀರಾತು ಬಂದಿದ್ದಕ್ಕೇ ಹೀಗಾಡ್ತಾಳೆ ಇನ್ನು ಝೂ ಒಳಗೆ ಹೇಗಾಡ್ತಾಳೋ
.
 
  • Like
Reactions: hsrangaswamy

Tharavarshu07

New Member
91
41
19
ಬರೇ ಕಥೆ ಅಯ್ತು
ಓದೋಕೆ ಇಂಟ್ರೆಸ್ಟ್ ಇಲ್ಲದ ಆಗೇ ಫುಲ್ ಬೋರ್ ಓಡುಸ್ಬೇಕು ಹಂತಾ ಬರಿ
ತಿದೀಯ ಅಷ್ಟೇ
 

hsrangaswamy

Active Member
841
178
43
ಬರೇ ಕಥೆ ಅಯ್ತು
ಓದೋಕೆ ಇಂಟ್ರೆಸ್ಟ್ ಇಲ್ಲದ ಆಗೇ ಫುಲ್ ಬೋರ್ ಓಡುಸ್ಬೇಕು ಹಂತಾ ಬರಿ
ತಿದೀಯ ಅಷ್ಟೇ
ಸೆಕ್ಸ್ ಇದ್ದರೆ ಮಾತ್ರ ಅದು ಕತೆಯೆ
 
Top