• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Ravi gowda

New Member
73
99
19
take care bro
ಇನ್ನೊಂದು ವಾರ ಎರಡೂ ಕಥೆಯಲ್ಲೂ ಅಪ್ಡೇಟ್ ಸಿಗುವುದಿಲ್ಲ
ಎಂದು ಹೇಳಲು ವಿಷಾಧಿಸುತ್ತಿದ್ದೀನಿ.

ಮೊನ್ನೆ ಮಂಗಳವಾರ ನಾನು ನನ್ನ ಸೋದರ ಮಾವ ಇಬ್ಬರೂ ಗಾಡಿಯಲ್ಲಿ ಬರುವಾಗ ಅಪಘಾತವಾಯಿತು. ಕೈಕಾಲುಗಳಿಗೆ ಸ್ವಲ್ಪ ಜಾಸ್ತಿಯೇ ಪೆಟ್ಟಾಗಿದೆ ಕಥೆ ಟೈಪಿಂಗ್ ಮಾಡಲು ನನ್ನಿಂದ
ಸಾಧ್ಯವಾಗದು. ಈ ವಿಷಯ ತಿಳಿಸುವುದಕ್ಕೆ ಟೈಪ್ ಮಾಡಲು ತುಂಬ ಕಷ್ಟವಾಯಿತೆಂದರೆ ಕಥೆ ಅಪ್ಡೇಟ್ ಮಾಡುವುದಂತೂ ಸಾಧ್ಯವಿಲ್ಲದ ಮಾತು.

ದಯವಿಟ್ಟು ಯಾರೂ ಬೇಸರಗೊಳ್ಳದೆ ತಾಳ್ಮೆಯಿಂದಿರಿ ಮುಂದಿನ ವಾರದ ಅಂತ್ಯದಲ್ಲಿ ಖಂಡಿತ ನಿಮಗೆ ಅಪ್ಡೇಟ್ ನೀಡುವೆ.

ಧನ್ಯವಾದಗಳು ನಿಮ್ಮ ಸಮರ್.
 
  • Like
Reactions: Samar2154

hsrangaswamy

Active Member
841
178
43
ಇನ್ನೊಂದು ವಾರ ಎರಡೂ ಕಥೆಯಲ್ಲೂ ಅಪ್ಡೇಟ್ ಸಿಗುವುದಿಲ್ಲ
ಎಂದು ಹೇಳಲು ವಿಷಾಧಿಸುತ್ತಿದ್ದೀನಿ.

ಮೊನ್ನೆ ಮಂಗಳವಾರ ನಾನು ನನ್ನ ಸೋದರ ಮಾವ ಇಬ್ಬರೂ ಗಾಡಿಯಲ್ಲಿ ಬರುವಾಗ ಅಪಘಾತವಾಯಿತು. ಕೈಕಾಲುಗಳಿಗೆ ಸ್ವಲ್ಪ ಜಾಸ್ತಿಯೇ ಪೆಟ್ಟಾಗಿದೆ ಕಥೆ ಟೈಪಿಂಗ್ ಮಾಡಲು ನನ್ನಿಂದ
ಸಾಧ್ಯವಾಗದು. ಈ ವಿಷಯ ತಿಳಿಸುವುದಕ್ಕೆ ಟೈಪ್ ಮಾಡಲು ತುಂಬ ಕಷ್ಟವಾಯಿತೆಂದರೆ ಕಥೆ ಅಪ್ಡೇಟ್ ಮಾಡುವುದಂತೂ ಸಾಧ್ಯವಿಲ್ಲದ ಮಾತು.

ದಯವಿಟ್ಟು ಯಾರೂ ಬೇಸರಗೊಳ್ಳದೆ ತಾಳ್ಮೆಯಿಂದಿರಿ ಮುಂದಿನ ವಾರದ ಅಂತ್ಯದಲ್ಲಿ ಖಂಡಿತ ನಿಮಗೆ ಅಪ್ಡೇಟ್ ನೀಡುವೆ.

ಧನ್ಯವಾದಗಳು ನಿಮ್ಮ ಸಮರ್.
ಈಗ ಅವರ ಅರೋಗ್ಯ ಹೇಗಿದೆ. ನೀವು ಮಾನಸಿಕ ಆರೋಗ್ಯ ಆರಂಭವಾಯಿತೇ. ನಿಮ್ಮ ಅರೋಗ್ಯ ಕಾಪಾಡಿ ಕೊಳ್ಳಿ.
 
  • Like
Reactions: Mr.Gouda

Samar2154

Well-Known Member
2,260
1,250
159
ನನ್ನ ಆರೋಗ್ಯದ ಬಗ್ಗೆ ಕಳಕಳಿ ಮತ್ತು ಕಾಳಜಿ ತೋರಿಸಿದ ನಿಮ್ಮೆಲ್ಲರಿಗೂ ಹೃದಯಪೂರ್ವಕ ಧನ್ಯವಾದಗಳು.

ನಾಳೆ ಅಪ್ಡೇಟ್ ಕೊಡ್ತೀನಿ.
 

Samar2154

Well-Known Member
2,260
1,250
159
ಭಾಗ 193


ಕಾಮಾಕ್ಷಿಪುರ
ರಾತ್ರಿ 8:30.........

ವಿಕ್ರಂ.....ಏನಮ್ಮ ನೀತು ರಾತ್ರಿ ಒಂಬತ್ತಾಗುತ್ತ ಬಂದಿದೆ ನಿಧಿ ನಿಕಿತಾ ಇಬ್ಬರಿನ್ನೂ ಬಂದಿಲ್ಲವಲ್ಲ ಫೋನ್ ಕೂಡ ನಾಟ್ರೀಚಬಲ್ ಬರ್ತಿದೆ.

ನೀತು......ಅಣ್ಣ ಅವರೆಲ್ಲರೂ 7:00 ಘಂಟೆಗೆ ಹೊರಟರೆಂದು ಈಗ ಸುಭಾಷ್ ಹೇಳಿದ ಇನ್ನೇನು ತಲುಪಬಹುದು.

ಹರೀಶ.....ಲೇ ಇಲ್ಲಿಂದ ಮೂರು ಕಾರನ್ನು ಕಳಿಸಿದೆ ಅದರಲ್ಲಿ ಎಲ್ಲರು ಬರುವುದಕ್ಕೆ ಆಗುತ್ತಾ ?

ಸುಮ.....ಅಶೋಕ..ರೇವಂತ್..ಪ್ರೀತಿ ಮೂವರೂ ಯೂನಿಟ್ಟಿನಲ್ಲೇ ಇದ್ದಾರಲ್ಲ ಅವರ ಹತ್ತಿರವೂ ಎರಡು ಕಾರುಗಳಿವೆ ಸಾಕಾಗುತ್ತೆ.

ಇವರೆಲ್ಲರೂ ಮಾತನಾಡುತ್ತಿದ್ದಂತೆ ಮನೆ ಮುಂದೆ ಕಾರುಗಳು ಬಂದು ನಿಂತಿದ್ದು ಕೆಳಗಿಳಿದು ಒಳಬಂದ ನಿಧಿ—ನಿಕಿತಾ ಇಬ್ಬರನ್ನೂ ನೀತು ಗಟ್ಟಿಯಾಗಿ ತಬ್ಬಿಕೊಂಡಳು.

ರಾಜೀವ್......ಯಾಕಮ್ಮ ಇಷ್ಟು ಲೇಟ್ ಮಾಡಿಕೊಂಡ್ರಿ ಬೆಳಕಿರುವ ಸಮಯದಲ್ಲೇ ಬಂದು ಬಿಡಬಾರದಿತ್ತಾ ?

ನಿಕಿತಾ.......ತಾತ ಪರ್ಚೇಸಿಂಗ್ ಮಾಡುವುದರಲ್ಲೇ ಸ್ವಲ್ಪ ಲೇಟಾಗಿ ಹೋಯಿತು ಅದಕ್ಕೆ ತಡವಾಯ್ತು.

ಅಶೋಕ......ವಿಕ್ರಂ ಸಿಂಗ್—ರಾಣಾ ನೀವೇನೂ ಇಲ್ಲೇ ನಿಂತುಬಿಟ್ರಿ ನಡೀರಿ ಒಳಗೆ ಹೋಗೋಣ.

ರಾಣಾ.......ಸರ್ ನಾವೀಗಲೇ ರಾಜಸ್ಥಾನಕ್ಕೆ ಹಿಂದಿರುಗುತ್ತಿದ್ದೀವಿ ರಾಜಕುಮಾರಿ ಅವರನ್ನು ಮನೆಗೆ ಸುರಕ್ಷಿತವಾಗಿ ತಲುಪಿಸುವುದಕ್ಕೆ ಬಂದೆವು ಅಲ್ಲಿನ ಕೆಲಸಗಳನ್ನೂ ನೋಡಬೇಕಾಗಿದೆ.

ನೀತು......ನಮ್ಮ ಜೊತೆ ಊಟ ಮಾಡಿಕೊಂಡು ಆಮೇಲೆ ನೀವು ಹೋಗಿವಿರಂತೆ ಒಳಗೆ ನಡಿ.

ರಜನಿ......ಏನೇ ಇದು ನೀವಿಬ್ರೂ ಇಡೀ ಬೆಂಗಳೂರನ್ನೇ ಪರ್ಚೇಸ್ ಮಾಡ್ಕೊಂಡು ಬಂದಿರುವಂತಿದೆ.

ರಶ್ಮಿ.......ಅಕ್ಕ ಇದು ಮೋಸ ನೀವಿಬ್ರೂ ಇಷ್ಟೊಂದು ಶಾಪಿಂಗ್ ಮಾಡಿದ್ದೀರ ನಮ್ಮನ್ನು ಮಾತ್ರ ಕರೆದುಕೊಂಡೆ ಹೋಗಲಿಲ್ಲ.

ದೃಷ್ಟಿ.......ಹೂಂ ಅಕ್ಕ ನಾವೇನು ಮಾಡಿದ್ವಿ ನಮ್ಮನ್ನೂ ನಿಮ್ಮ ಜೊತೆ ಕರ್ಕೊಂಡು ಹೊಗ್ಬೇಕಿತ್ತು.

ನಿಕಿತಾ.......ನಿಮ್ಮನ್ನೆಲ್ಲ ಅಲ್ಲಿಗೆ ಕರ್ಕೊಂಡ್ ಹೋಗಿದ್ರೆ ಈಗ ನೀವು ಚಳಿ ಜ್ವರದಿಂದ ನಡುಗ್ತಾ ಮಲಗಿರುತ್ತಿದ್ರಿ.

ನಯನ.......ಯಾಕೆ ?

ನಿಧಿ.......ಇವಳನೋ ಸುಮ್ಮನೆ ತಮಾಷೆ ಮಾಡ್ತಿದ್ದಾಳಷ್ಟೆ ಮುಂದಿನ ಸಲ ನಾವೆಲ್ಲ ಒಟ್ಟಿಗೆ ಹೋಗೋಣ ಸರಿಯಾ ಈಗ ಎಲ್ಲಾ ಶಾಪಿಂಗ್ ಬ್ಯಾಗ್ ಮೇಲಿನ ರೂಮಲ್ಲಿಡಿ ಹೋಗಿ.

ಹರೀಶ........ಆ ರೌಡಿಗೆ ಸುಪಾರಿ ಕೊಟ್ಟಿದ್ದವರ ಬಗ್ಗೆ ತಿಳಿಯಿತಾ ?

ವಿಕ್ರಂ ಸಿಂಗ್........ಗೊತ್ತಾಯ್ತು ಸರ್ ನಮ್ಮ ಮಹರಾಜರ ಇಬ್ಬರು ಪರಿಚಯದ ಉದ್ಯಮಿಗಳೇ ಇಲ್ಲಿನ ಒಬ್ಬ ಎಂ.ಎಲ್.ಎ. ಮೂಲಕ ಆ ರೌಡಿಗೆ ಕಿರಿಯ ರಾಜಕುಮಾರಿಯನ್ನು ಅಪಹರಿಸಲು ಸುಪಾರಿ ಕೊಟ್ಟಿದ್ದು. ನಾಳೆ ಬೆಳಿಗ್ಗೆಗೆಲ್ಲಾ ಅವರನ್ನು ಹಿಡಿಯುತ್ತೀವಿ ಇನ್ನಿಲ್ಯಾವ ರೀತಿಯ ಸಮಸ್ಯೆಗಳೂ ಬರುವುದಿಲ್ಲ ಅದಕ್ಕೆ ವ್ಯವಸ್ಥೆ ಮಾಡಿದ್ದೀವಿ.

ರಾಣಾ......ಮಾತೆ ನಮ್ಮ ಪ್ರಾಣ ಇರುವವರೆಗೂ ಈ ಮನೆಯವರ ಒಂದು ಹನಿ ರಕ್ತವೂ ನಿಮ್ಮ ಮಡಿಲಲ್ಲಿ ಬೀಳದಂತೆ ಕಾಯುತ್ತೀವಿ.

ನೀತು......ನನಗೆ ನಿಮ್ಮೆಲ್ಲರ ಮೇಲೆ ನಂಬಿಕೆಯಿದೆ. ಬೆಂಗಳೂರಿನಲ್ಲಿ ಏನಾಯ್ತು ? ಆ ರೌಡಿ ರಮನಾಥ್......

ನಿಧಿ ಟಿವಿ ಆನ್ ಮಾಡಿ ಚಾನೆಲ್ ಬದಲಾಯಿಸುತ್ತ ಕನ್ನಡ ನ್ಯೂಸ್
ಛಾನೆಲ್ ಹಾಕಿದರೆ ಬೆಂಗಳೂರಿನಲ್ಲಿ ಇವರು ಮಾಡಿ ಬಂದಿರುವಂತ ಮಾರಣ ಹೋಮದ ಕುರಿತಾಗಿ ರಸವತ್ತಾಗಿ ವರ್ಣಿಸಲಾಗುತ್ತಿತ್ತು.

" ಬೆಂಗಳೂರು ಭೂಗತ ಜಗತ್ತಿನ ಅನಭಶಕ್ತ ದೊರೆಯಾಗಿ ಕುಖ್ಯಾತಿ ಗಳಿಸಿದ್ದ ಡಾನ್ ರಮನಾಥ್ ಅವನ ಮೂವರು ಮಕ್ಕಳು ಸೇರಿದಂತೆ ಒಬ್ಬ ಶಾಸಕ ಹಾಗು ಅವನ ಗ್ಯಾಂಗಿನ 68 ಜನ ರೌಡಿಗಳ ಜೊತೆಗೆ ಹತ್ಯೆಯಾಗಿದ್ದಾನೆ. ಇವರೆಲ್ಲರನ್ನು ಸಾಮಾನ್ಯ ರೀತಿಯಲ್ಲೇನು ಹತ್ಯೆ ಮಾಡಿರದೆ ಪ್ರತಿಯೊಬ್ಬರ ದೇಹಗಳನ್ನು ಹತ್ತಾರು ತುಂಡು ತುಂಡಾಗಿ ಕತ್ತರಿಸಿ ಹಾಕಲಾಗಿದೆ. ಸಂಜೆಯಿಂದ ಇಡೀ ಪೋಲಿಸ್ ಇಲಾಖೆಯೇ ಡಾನ್ ರಮನಾಥನ ಅಡ್ಡೆಯಲ್ಲಿ ಬೀಡು ಬಿಟ್ಟಿದ್ದು ತನಿಖೆ ಮಾಡುತ್ತ ಇದ್ದರೂ ಸಹ ಈ ಮಾರಣಹೋಮಕ್ಕೆ ಯಾರು ಕಾರಣಕರ್ತರೆಂಬ ಬಗ್ಗೆ ಸಣ್ಣದೊಂದು ಸುಳಿವೂ ಸಹ ದೊರೆತಿಲ್ಲ. ಕೆಲವು ರಾಜಕೀಯ ನಾಯಕರ ಬೆಂಬಲದೊಂದಿಗೆ ಬೆಂಗಳೂರನ್ನೇ ತನ್ನ ರೌಡಿ ಬಲದಿಂದ ಹೆದರಿಸಿ ಆಳುತ್ತಿದ್ದ ರಮನಾಥನ ಅಂತ್ಯವಾಗಿದೆ. ಇವರೆಲ್ಲರ ಹತ್ಯೆ ಎಷ್ಟು ಭೀಕರವಾಗಿತ್ತೆಂದರೆ ಅವರೆಲ್ಲರ ತಲೆಗಳನ್ನು ದೇಹದಿಂದಲೇ ಕತ್ತರಿಸಲ್ಪಟ್ಟಿರುವುದಲ್ಲದೆ ಯಾರ ದೇಹದ ಭಾಗ ಯಾವುದೆಂಬುದು ಸಹ ಗುರುತಿಸಲು ಸಾಧ್ಯವಾಗದಷ್ಟು ತುಂಡುಗಳನ್ನಾಗಿ ಕತ್ತರಿಸಿದ್ದಾರೆ
ಪೋಲಿಸರು ಎಲ್ಲರ ತಲೆಗಳನ್ನು ಬೇರ್ಪಡಿಸಿದ್ದು ಯಾರ ದೇಹದ ಭಾಗ ಯಾವುದೆಂದು ಹುಡುಕಾಡುವಂತಾಗಿದೆ. ಇಡೀ ಬೆಂಗಳೂರಿನ ಇತಿಹಾಸದಲ್ಲೇ ಇಂತಹ ಭೀಕರವಾದ ನರಮೇಧ ಹಿಂದೆಂದೂ ಕೂಡ ಕಂಡು ಕೇಳಿರದ ಘಟನೆಯಾಗಿದೆ. ಈ ಸಾಮೂಹಿಕ ನರಮೇಧಗಳ ತನಿಖೆಗಾಗಿ ಸರ್ಕಾರ ಐದು ವಿಶೇಷ ತನಿಖಾ ತಂಡಗಳನ್ನು ರಚಿಸಿದ್ದು ಅತಿ ಶೀಘ್ರದಲ್ಲಿಯೇ ಇದರ ಹಿಂದಿರುವವರನ್ನು ಬಂಧಿಸಿ ಅವರಿಗೆ ತಕ್ಕ ಶಿಕ್ಷೆ ಕೊಡಿಸಲಿಗುವುದೆಂಬ ಹೇಳಿಕೆಯನ್ನು ರಾಜ್ಯ ಸರ್ಕಾರದ ಗೃಹ ಇಲಾಖೆ ಬಿಡುಗಡೆ ಮಾಡಿದೆ. ಪೋಲಿಸ್ ಮೂಲಗಳ ಪ್ರಕಾರ ಅವರಿಗೆ ಯಾವುದೇ ರೀತಿಯ ಸಣ್ಣದೊಂದು ಸುಳಿವೂ ಸಹ ಸಿಗದೆ ಈ ಪ್ರಕರಣವನ್ನು ಭೇಧಿಸುವುದು ನೂರು ಕೆಜಿ ರಾಗಿ ಕಾಳಿನ ನಡುವೆ ಒಂದು ಸಾಸಿವೆ ಕಾಳನ್ನು ಹುಡುಕಿದಂತೆ ಎಂದು ತಮ್ಮ ಹೆಸರನ್ನೆಳಲು ಇಚ್ಚಿಸದ ಹಿರಿಯ ಪೋಲಿಸ್ ಅಧಿಕಾರಿಗಳು ನಮಗೆ ತಿಳಿಸಿದ್ದಾರೆ. ಏನೇ ಆಗಿರಲಿ ಬೆಂಗಳೂರಿನ ಜನತೆ ಈ ದಿನ ಡಾನ್ ರಮನಾಥನ ದುರಾಚಾರಗಳಿಂದ ಮುಕ್ತರಾಗಿರುವುದಕ್ಕೆ ತುಂಬ ಸಂತೋಷಪಡುತ್ತ ಈ ನರಮೇಧ ನಡೆಸಿದವರು ಪೋಲಿಸರಿಗೆ ಸಿಕ್ಕಿ ಬೀಳಬಾರದೆಂದು ಜೊತೆಗೆ ಅವರೆಲ್ಲೇ ಇರಲಿ ನೂರು ವರ್ಷ ಸುಖವಿಗಿರಲೆಂದು ಎಲ್ಲಾ ದೇವಸ್ಥಾನಗಳಲ್ಲೂ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ""

ನೀತು.....ನಿಕ್ಕಿ ಪುಟ್ಟ ಇದನ್ನೆಲ್ಲಾ ನೀನೆಗೆ ನೋಡಿದೆ ಭಯ ಆಗ್ಲಿಲ್ವಾ.

ನಿಧಿ ಬೇಡ ಬೇಡ ಎಂದು ಸನ್ನೆ ಮಾಡುತ್ತಿದ್ದರೆ ನಿಕಿತಾ ಅವಳ ಕಡೆ ನೋಡುತ್ತಿಲ್ಲದ ಕಾರಣ ಅದು ಗೊತ್ತಾಗದೆ.........ಆಂಟಿ ನಾವಲ್ಲಿಗೆ ಹೋದಾಗ ಅಕ್ಕ ಮೊದಲಿಗೆ ಆ ರೌಡಿಯ ಹಿರಿ ಮಗನ ತಲೆ ಕತ್ತರಿಸಿ ಬಿಟ್ಟಿದ್ದನ್ನು ಮಾತ್ರ ನೋಡಿದ್ದು. ಆಮೇಲೆ ಅಕ್ಕನೇ ಕಣ್ಮುಚ್ಚಿ ಆಕಡೆ ತಿರುಗಿ ನಿಲ್ಲುವಂತೆ ಹೇಳಿದ್ರು. ಮೊದಲಿಗೆ ಸ್ವಲ್ಪ ಭಯವಾಯ್ತು ಆದ್ರೆ ಅಕ್ಕ ಜೊತೆಯಲ್ಲಿದ್ರಲ್ಲ ಅದಕ್ಕೆ ಧೈರ್ಯವಾಗಿದ್ದೆ. ಅವನ ಮೂವರು ಮಕ್ಕಳು ಸತ್ತ ನಂತರ ನಾವಲ್ಲಿರದೆ ಹೊರಟು ಬಂದುಬಿಟ್ವಿ ಆಂಟಿ.

ಮನೆಯವರೆಲ್ಲರೂ ನಿಧಿಯನ್ನೇ ನೋಡುತ್ತಿದ್ದರೆ ಹಿರಿಮಗಳೆದುರು ನೀತು ಕೈಕಟ್ಟಿಕೊಂಡು ನಿಂತಾಗ ನಿಧಿ.....ಅಮ್ಮ ನಿಮ್ಜೊತೆ ಅಪ್ಪನ ಕಣ್ಣಲ್ಲಿ ಕಣ್ಣೀರು ಬರುತ್ತಿದ್ದುದನ್ನು ನೋಡಿದಾಗಿನಿಂದ ನಾನು ನನ್ನ ಕೋಪವನ್ನು ಸಹಿಸಿಕೊಂಡಿದ್ದೆ. ಈ ಮನೆಯ ಮುದ್ದಿನ ಮಗಳ ಕಡೆ ಕೆಟ್ಟ ದೃಷ್ಟಿ ಹಾಕಿದ್ದ ಪಾಪಿಗೆ ಬೇರೆಯವರ ಮನೆ ಮಕ್ಕಳ ಮೇಲೆ ಕಣ್ಣಾಕಿದರೆ ಏನಾಗುತ್ತದೆಂದು ತೋರಿಸಲು ಅವನ ಮೂರು ಜನ ಮಕ್ಕಳ ತಲೆ ಮಾತ್ರ ನಾನು ಕತ್ತರಿಸಿದ್ದು.

ನೀತು ಮುಗುಳ್ನಗುತ್ತ ಮಗಳ ತಲೆ ಸವರಿ ಹಣೆಗೆ ಮುತ್ತಿಡುತ್ತ....... ಆಗಿದ್ದಾಯ್ತು ಬಿಡು ಅದನ್ನೆಲ್ಲಾ ನೆನೆದು ಯಾವ ಪ್ರಯೋಜವಿಲ್ಲ..... ಎಂದಾಗ ನಿಧಿ ಅಮ್ಮನನ್ನು ಬಿಗಿದಪ್ಪಿಕೊಂಡಳು.


..........continue
 

Samar2154

Well-Known Member
2,260
1,250
159
continue.........


ಮಹಡಿಯಲ್ಲಿ ಅಣ್ಣಂದಿರ ಜೊತೆ ಕೀಟಲೆ ಮಾಡುತ್ತಿದ್ದ ನಿಶಾ ಕೆಳಗೆ ಬಂದಾಗ ಅಕ್ಕ ಅಮ್ಮನನ್ನು ತಬ್ಬಿಕೊಂಡಿರುವುದನ್ನು ಕಂಡು ಇಬ್ಬರ ಹತ್ತಿರಕ್ಕೆ ಬಂದವಳೇ ಅಕ್ಕನನ್ನು ದೂರಸರಿಸಿ ಅಮ್ಮನ ತೋಳಿಗೇರಿ..
ಮಮ್ಮ ನಂದು.....ಮಮ್ಮ ನಂದು....ಎನ್ನುತ್ತಿದ್ದಳು. ಕಿರಿಯ ಮಗಳ ಹೊಟ್ಟೆಯುರಿಗೆ ಮನೆಯವರೆಲ್ಲರು ನಗುತ್ತಿದ್ದರೆ ವಿಕ್ರಂ ಸಿಂಗ್ ಮತ್ತು ರಾಣಾ ಸಹ ಮುಗುಳ್ನಗುತ್ತಿದ್ದರು. ಊಟವಾದ ನಂತರ ಅವರಿಬ್ಬರು ರಾಜಸ್ಥಾನಕ್ಕೆ ಹೊರಟು......

ರಾಣಾ.....ಮಾತೆ ಶೀಘ್ರದಲ್ಲಿಯೇ ನಿಮ್ಮನ್ನು ಕರೆದೊಯ್ಯಲು ನಾವು ಬರುತ್ತೀವಿ ಈಗ ನಮಗೆ ಅಪ್ಪಣೆ ನೀಡಿ.

ನೀತು.......ಹೋಗಿ ಬನ್ನಿರಿ ದೇವರ ಆಶೀರ್ವಾದ ಸದಾ ನಿಮ್ಮೆಲ್ಲರ ಮೇಲೂ ಕಾವಲಿಗಿರಲಿ. ಏನೇ ಮಾಡಿದರೂ ಸಹ ಯಾರಿಗೂ ನೀವೆ ಈ ಕಾರ್ಯ ಮಾಡಿರುವಿರೆಂದು ಸಣ್ಣ ಸುಳಿವು ಸಹ ಸಿಗಬಾರದು ಅದರ ಬಗ್ಗೆ ವಿಶೇಷವಾಗಿ ಎಚ್ಚರಿಕೆ ಇರಲಿ.

ಇಬ್ಬರೂ.....ಆಗಲಿ ಮಾತೆ.....ಎಂದೇಳಿ ಮನೆಯವರಿಗೆ ವಂಧಿಸಿ ಅವರಿಂದ ಬೀಳ್ಗೊಂಡರು. ಹರೀಶ ಮುದ್ದಿನ ಮಗಳಿಂದ ಕಾಣಿಕೆಯ ರೂಪದಲ್ಲಿ ಇಬ್ಬರಿಗೂ " ॐ " ಕಾರದ ಎರಡು ಚಿನ್ನದ ಡಾಲರನ್ನು ಕೊಡಿಸಿ ಸಂತೋಷದಿಂದ ಕಳುಹಿಸಿಕೊಟ್ಟನು.

ರಜನಿ......ನಿಧಿ ಬೆಂಗಳೂರಿನಲ್ಲಿ ನಿನಗ್ಯಾವುದೇ ನಿಧಿ ಸಿಗಲಿಲ್ಲವಾ ? ಏಕೆಂದರೆ ಇದಕ್ಕೂ ಮುಂಚೆ ದುಷ್ಟರ ಸಂಹಾರ ಮಾಡಿದಾಗಲೆಲ್ಲಾ ನಮಗೆ ಅಪಾರ ನಿಧಿ ದೊರಕಿತ್ತು.

ನಿಧಿ......ಆಂಟಿ ರೌಡಿಯ ಅಡ್ಡೆಯಲ್ಲಿದ್ದ ನಗದು ಹಣವೇ ಸುಮಾರು 8—9 ಸಾವಿರ ಕೋಟಿಗಳಷ್ಟಿತ್ತು. ಅದೆಲ್ಲ ರಾಜಕೀಯ ನಾಯಕರಿಗೆ ಸೇರಿದ ಕಪ್ಪು ಹಣವಂತೆ ಹವಾಲಾ ಮೂಲಕ ವಿದೇಶಿ ಬ್ಯಾಂಕುಗಳಿಗೆ ಇವನ ಮೂಲಕ ಕಳಿಸುತ್ತಿದ್ದರಂತೆ.

ಅನುಷ......ಅದನ್ನೆಲ್ಲಾ ಏನ್ಮಾಡಿದ್ಯೆ ?

ನಿಧಿ......ಆಂಟಿ ಎಲ್ಲವನ್ನೂ ರಾಜಸ್ಥಾನಕ್ಕೆ ಕಳಿಸಿಬಿಟ್ಟೆ ಅಮ್ಮನನ್ನು ಕೇಳಿಯೇ ಈ ಕೆಲಸ ಮಾಡಿದ್ದು.

ರಜನಿ.....ಲೇ ಕಳ್ಳಿ ಮಗಳೊಂದು ಫೋನ್ ಕೂಡ ಮಾಡಿಲ್ಲ ಅದು ಇದು ಅಂತ ನಮಗೇ ಓಳು ಬಿಡ್ತಿದ್ದೆ ಈಗೇನು ಹೇಳ್ತೀಯಾ ?

ನೀತು ನಗುತ್ತಿದ್ದರೆ ನಿಕಿತಾ.....ಅಷ್ಟೇ ಅಲ್ಲ ಆಂಟಿ ಅಲ್ಲಿಯೇ ಹವಾಲ ವ್ಯವಹಾರ ನೋಡಿಕೊಳ್ಳುವವನೂ ಇದ್ದ. ಅವನ ಮೂಲಕ ವಿದೇಶಿ ಬ್ಯಾಂಕುಗಳ ಅಕೌಂಟ್ ವಿವರಗಳನ್ನೂ ಪಡೆದುಕೊಂಡು ಅಲ್ಲಿಂದ ಕೂಡ ಎಲ್ಲಾ ಹಣ ವರ್ಗಾವಣೆ ಮಾಡಿ ನಾವು ರಂಗೋಲಿ ಇಟ್ಟೆವು.

ಪ್ರೀತಿ.....ಅದರಲ್ಲೆಷ್ಟು ಹಣವಿತ್ತು ನಿಕ್ಕಿ ?

ನಿಕಿತಾ.....ಆಂಟಿ ಕಡಿಮೆಯೇನಲ್ಲ ಬರೋಬ್ಬರಿ 23 ಸಾವಿರ ಕೋಟಿ ಹಣವಿತ್ತು ಅದನ್ನೆಲ್ಲಾ ಅಕ್ಕ ಹೇಳಿದ ಅಕೌಂಟಿಗೆ ವರ್ಗಾಯಿಸಿದೆ.

ಮನೆಮಂದಿ ಅಷ್ಟು ದೊಡ್ಡ ಮೊತ್ತ ಕೇಳಿ ಕಣ್ಬಾಯಿ ತೆರೆದುಕೊಂಡು ಅವರಿಬ್ಬರನ್ನೇ ನೋಡುತ್ತಿದ್ದರೆ.......

ನಿಧಿ......ಆಂಟಿ ಕ್ಯಾಶಿನಲ್ಲಿದ್ದ ಹಣವೆಲ್ಲಾ ನಾಳೆ ಸಂಸ್ಥಾನದ ಬ್ಯಾಂಕ್ ಅಕೌಂಟಿಗೆ ಜಮೆಯಾಗುತ್ತೆ. ನಾನಾಗಲೇ ಅಲ್ಲಿನ ವ್ಯವಸ್ಥಾಪಕ ನಿರ್ದೇಶಕರಾಗಿರುವ ರಾವ್ ಅವರಿಗೆ ಫೋನ್ ಮಾಡಿ ಬಂಡವಾಳ ಹೂಡಿಕೆಯ ಬಗ್ಗೆ ಡಾಂಕ್ಯುಮೆಂಟ್ಸ್ ಮಾಡಿಸಿ ಇಲ್ಲಿನ ಮೂರೂ ಫ್ಯಾಕ್ಟರಿಗಳ ಅಕೌಂಟಿಗೆ ತಲಾ ಒಂದೊಂದು ಸಾವಿರ ಕೋಟಿ ಹಣ ವರ್ಗಾಯಿಸುವಂತೆ ಹೇಳಿದ್ದೀನಿ. ಉಳಿದಿರುವ ಹಣದಲ್ಲಿ ಸರ್ಕಾರಕ್ಕೆ ತೆರಿಗೆ ಪಾವತಿಸಿದ ನಂತರ ಅಮ್ಮನ ಅಕೌಂಟಿಗೆ ಉಳಿದ ಹಣವನ್ನು ವರ್ಗಾವಣೆ ಮಾಡ್ತಾರೆ.

ಹರೀಶ........ನಿಮ್ಮಮ್ಮನ ಅಕೌಂಟಿಗ್ಯಾಕೆ ಪುಟ್ಟಿ ನನ್ನ ಚಿನ್ನಾರಿಯ ಅಕೌಂಟಿಗೆ ಹಾಕಿಸಬೇಕಿತ್ತು ಅಲ್ಲವಾ ಕಂದ......ಎಂದರೆ ಅಪ್ಪನ ತೋಳಿನಲ್ಲಿದ್ದ ನಿಶಾಳಿಗೇನೂ ಅರ್ಥವಾಗದಿದ್ದರೂ ಅಪ್ಪನ ತಾಳಕ್ಕೆ ತಾನೂ ಹೂಂ...ಹೂಂ.....ಎಂದು ತಲೆಯಾಡಿಸಿದಳು.

ನಿಧಿ.....ಏನ್ಬೇಕು ನಿಂಗೆ ಚೋಟ್ ಮೆಣಸಿನಕಾಯ್ ?

ನಿಶಾಳಿಗೇನು ಹೇಳಬೇಕೆಂದು ತಿಳಿಯದೆ ಅಪ್ಪನ ಕಡೆ ನೋಡಿದಾಗ ಅಪ್ಪ ಮಗಳಿಬ್ಬರೂ ಅಲ್ಲಿಂದ ತೆಪ್ಪಗೆ ಸೋಫಾದಲ್ಲಿ ಕುಳಿತರು.

ವಿಕ್ರಂ.....ನಿಧಿ ಅಷ್ಟು ದೊಡ್ಡ ಅಮೌಂಟಿನ ಅವಶ್ಯಕತೆ ಏನಿತ್ತಮ್ಮ ಪುಟ್ಟಿ ?

ಅಶೋಕ.....ಅದುವೇ ನೇರ ಬಂಡವಾಳದ ರೂಪದಲ್ಲಿ ತುಂಬಾನೇ ದೊಡ್ಡ ಮೊತ್ತ ಕಣಮ್ಮ ಹಿಂದಿರುಗಿಸುವುದು ಕಷ್ಟವಾಗುತ್ತೆ.

ನಿಧಿ.....ಮಾವ...ಅಂಕಲ್ ನೀವಿಬ್ಬರೂ ನನ್ನ ಪ್ರೀತೀನ ದುಡ್ಡಿನಿಂದ ಅಳೆಯುತ್ತಿದ್ದೀರಾ ? ಈ ಹಣವನ್ಯಾರಿಗೂ ಹಿಂದಿರುಗಿಸಬೇಕಾಗಿಲ್ಲ ಆದರೆ ನೀವಾಡಿದ ಮಾತಿನಿಂದ ನನಗೆ ತುಂಬ ಬೇಜಾರಾಯಿತು. ನೋಡಿ ಅತ್ತೆ ರಜನಿ ಆಂಟಿ ನಿಮ್ಮಿಬ್ಬರ ಯಜಮಾನರಾಡಿದ ಮಾತು ಕೇಳಿ ನನ್ನನ್ನು ಬೇರೆಯವಳಂತೆ ನೋಡುತ್ತಿದ್ದಾರೆ.

ರಜನಿ ನಗುತ್ತ......ಈಗ ನೀನು ನಿಜವಾಗಿಯೂ ನನ್ನೀ ಚಿಲ್ಟಾರಿಯ ಅಕ್ಕ ಕಣೆ ಅವಳಂತೆಯೇ ನೌಟಂಕಿ ಮಾಡ್ತಿದ್ದೀಯ.

ನಿಧಿ ಮುಗುಳ್ನಗುತ್ತ......ನೋಡಿ ಅತ್ತೆ ಇಷ್ಟಕ್ಕೇ ಮಾವ ಅಂಕಲ್ಲಿಬ್ಬರ ಮುಖ ಬಾಡಿ ಹೋಯಿತು ಸಾರಿ ತಮಾಷೆ ಮಾಡ್ತಿದ್ದೆ ಅಷ್ಟೆ.

ವಿಕ್ರಂ......ಇನ್ಯಾವತ್ತೂ ನಿನ್ನನ್ನು ಬೇರೆಯವಳೆಂದು ನೋಡುತ್ತೀವಿ ಅಂತ ಮಾತ್ರ ಹೇಳಬೇಡಮ್ಮ ಮನಸ್ಸಿಗೆ ತುಂಬ ನೋವಾಗುತ್ತೆ.

ಅಶೋಕ....ನಿನ್ನ ಪ್ರೀತಿಯನ್ನು ಹಣದಿಂದ ಅಳೆಯುವಂತ ಮನುಷ್ಯ ನಾನಲ್ಲ ಕಣಮ್ಮ ಪುಟ್ಟಿ. ಹಣ ಇಂದಿರುತ್ತೆ ನಾಳೆ ಹೋಗುತ್ತೆ ನಾಳಿದ್ದು ಪುನಃ ಬರುತ್ತೆ ಆದರೆ ನಮ್ಮ ನಡುವಿನ ಪ್ರೀತಿಯೇ ಶಾಶ್ವತವಾಗಿ ಜೀವನವಿಡೀ ಇರೋದು.

ಇಬ್ಬರನ್ನೂ ತಬ್ಬಿಕೊಂಡ ನಿಧಿ......ಕ್ಷಮಿಸಿಬಿಡಿ ನಾನು ತಮಾಷೆಗಾಗಿ ಹೇಳಿದೆನಷ್ಟೆ ಇನ್ಯಾವತ್ತೂ ನನ್ನ ಬಾಯಲ್ಲಿ ಇಂತ ಮಾತು ಬರಲ್ಲ.

ನಿಧಿ ಕಣ್ಣೀರಿಡುತ್ತಿದ್ದರೆ ಮಿಕ್ಕವರೆಲ್ಲರೂ ಅವಳನ್ನು ಸಮಾಧಾನ ಮಾಡುತ್ತಿದ್ದನ್ನು ಅಪ್ಪನ ತೋಳಿನಲ್ಲಿದ್ದ ನಿಶಾ ನೋಡುತ್ತ ಅಮ್ಮನತ್ತ ತಿರುಗಿ.......ಮಮ್ಮ ನಂಗಿ ಐಸ್ ಕೊಲು.

ನೀತು.....ಎಲ್ಲರೂ ಸೀರಸ್ಸಾಗಿದ್ದರೆ ಇವಳದ್ದೇ ಇನ್ನೊಂದು ಕಥೆ ನಾ ಕೊಡಲ್ಲ ಹೋಗೆ.

ನಿಶಾ......ಪಪ್ಪ ಮಮ್ಮ ಐಸ್ ಕೊಲಲ್ಲ ನಾನಿ ಹೋತೀನಿ.....

ನೀತು.....ರೀ ಬರ್ತಾ ಬರ್ತಾ ಇವಳದ್ದು ಜಾಸ್ತಿಯಾಗ್ತಿದೆ ಕೆಳಗಿಳಿ ಬಾ ಅದೆಲ್ಲಿಗೆ ಹೋಗ್ತೀಯೋ ಹೋಗು....ಎಂದು ಗಂಡನಿಂದ ಮಗಳನ್ನು ಎತ್ತಿತಂದು ಮುಂಬಾಗಿಲಾಚೆ ನಿಲ್ಲಿಸಿಬಿಟ್ಟಳು.

ಅಮ್ಮ ಕೈಕಟ್ಟಿಕೊಂಡು ತನ್ನನ್ನೇ ದುರುಗುಟ್ಟಿ ನೋಡುತ್ತಿರುವುದನ್ನು ಕಂಡ ನಿಶಾ ಈಗ ಅಮ್ಮ ಏಟು ಕೊಡ್ತಾಳೆಂದು ಯೋಚಿಸಿ ಮೆಲ್ಲನೆ ಅಲ್ಲಿಂದ ಪಕ್ಕಕ್ಕೆ ಸರಿದು ಮನೆಯೊಳಗೋಡಿ ಶೀಲಾಳನ್ನು ಬಿಗಿದಪ್ಪಿ ಕುಳಿತು ಬಿಟ್ಟಳು.

ನೀತು ಹಣೆ ಚಚ್ಚಿಕೊಳ್ಳುತ್ತ.......ಸರಿ ಬಾ ನಿಂಗೆ ಐಸ್ ಕೊಡ್ತೀನಿ..... ಎಂದು ಕಿಚನ್ನಿನತ್ತ ತಿರುಗಿದರೆ ನಿಶಾ ಸಂತೋಷದಿಂದ ಕಿರುಚುತ್ತಾ ಅಮ್ಮನ ಹಿಂದೆ ತಾನೂ ಕಿಚನ್ನಿಗೋಡಿದಳು.
* *
* *
ಶುಕ್ರವಾರ........

ಸವಿತಾ—ಸುಕನ್ಯಾರ ಹೊಸ ಮನೆಯ ಗೃಹಪ್ರವೇಶದ ತಯಾರಿಗಳು ಪೂರ್ಣಗೊಂಡಿದ್ದು ದೇವಾನಂದ ಸ್ವಾಮಿಗಳ ಮುಂದಾಳತ್ವದಲ್ಲಿ ಸವಿತಾ ಮತ್ತು ವಿವೇಕ್ ಗೃಹಪ್ರವೇಶದ ಪೂಜೆಯನ್ನು ಮಾಡಿದರು. ರೋಹನ್ ತಂದೆ ತಾಯಿ ಬರದಿದ್ದರೂ ಅವನ ಚಿಕ್ಕಪ್ಪನ ಫ್ಯಾಮಿಲಿ ಹಾಗು ಇತರೆ ನೆಂಟರಿಷ್ಟರೆಲ್ಲ ತುಂಬ ಸಡಗರ ಸಂಭ್ರಮದಿಂದ ಅವನ ಸಂತೋಷದಲ್ಲಿ ಪಾಲ್ಗೊಂಡಿದ್ದರೆ ಸುಕನ್ಯಾಳಿಗೆ ತಂದೆ ತಾಯಿ ಇರದೇ ಇದ್ದರೂ ಅವಳ ಹತ್ತಿರದ ಕೆಲವು ನೆಂಟರು ಸಹ ಆಗಮಿಸಿ ಅವಳಿಗೆ ಶುಭ ಹಾರೈಸಿದರು. ನೀತು ಹಾಗು ಮನೆಯವರು ಮೊದಲ ಬಾರಿಗೆ ಸವಿತಾಳ ತಂದೆ ತಾಯಿಯನ್ನು ಬೇಟಿಯಾಗುತ್ತಿದ್ದರೆ ನಿಕಿತಾ ಅಜ್ಜಿ ತಾತನ ಜೊತೆ ತನ್ನೆಲ್ಲಾ ಕಸಿನ್ಸುಗಳಿಗೂ ನಿಧಿಯನ್ನು ಹೆಮ್ಮೆಯಿಂದ ತನ್ನಕ್ಕ ಎಂದು ಪರಿಚಯ ಮಾಡಿಸುತ್ತಿದ್ದಳು. ರೇಷ್ಮೆ ಲಂಗ ಬ್ಲೌಸನ್ನು ಧರಿಸಿ ಪುಟ್ಟ ದೇವತೆಯಂತೆ ಕಾಣಿಸುತ್ತಿದ್ದ ನಿಶಾ ಅಲ್ಲಿಗೆ ಬಂದಿದ್ದವರ ದೃಷ್ಟಿಯ ಕೇಂದ್ರ ಬಿಂದುವಾಗಿದ್ದರೆ ಪೂಜೆಗೆ ಅವಳನ್ನೇ ಮಡಿಲಲ್ಲಿ ಕೂರಿಸಿಕೊಂಡ ಸವಿತಾ ಪೂಜಾ ಕಾರ್ಯ ನೆರವೇರಿಸಿದಳು. ಬಂದಿದ್ದ ಎಲ್ಲರಿಗೂ ಅತಿಥಿ ಸತ್ಕಾರ ಮಾಡುವ ಹೊಣೆಗಾರಿಕೆ ರಜನಿ...ಸುಮ ಮತ್ತು ಪ್ರೀತಿಯ ಹೆಗಲಿಗಿದ್ದರೆ ಸುಕನ್ಯಾ ಬಸುರಿಯಾಗಿದ್ದ ಕಾರಣ ಅವಳು ಪೂಜೆಗೂ ಸಹ ಕೂರಲಿಲ್ಲ. ಯಾವುದೇ ಅಡಚಣೆಗಳು ಸಹ ಇರದೆ ನಿರ್ವಿಘ್ಞವಾಗಿ ಗೃಹಪ್ರವೇಶದ ಕಾರ್ಯ ಪೂರ್ಣಗೊಂಡಿತು.
* *
* *

..........continue
 

Samar2154

Well-Known Member
2,260
1,250
159
continue........


ಎರಡು ದಿನಗಳ ಹಿಂದೆ
ಬುಧವಾರ ಬೆಳಿಗ್ಗೆ 10:00
ರಾಜಸ್ಥಾನ.......

ಸೇಠ್ ಧನಿಕ್ ಲಾಲ್ ಮತ್ತು ಬ್ರಿಜೇಶ್ ಮಿಶ್ರಾ ಜೈಪುರದಿಂದ 15 ಕಿಮಿ.. ದೂರದಲ್ಲಿರುವ ಅವರದ್ದೇ ಒಂದು ಐಷಾರಾಮಿ ಬಂಗಲೆಯ ಒಳಗೆ ಕುಳಿತು ಟೀ ಕುಡಿಯುತ್ತ ಮಾತುಕತೆಯಲ್ಲಿ ತೊಡಗಿದ್ದಾಗಲ್ಲಿಗೆ ಈ ಗುಂಪಿನ ಪ್ರಮುಖ ವ್ಯಕ್ತಿಯಾದ 55 ವರ್ಷದ ಕಿಶೋರಿ ಸಿಂಗ್ ಜಗಮಲ್ ಆಗಮಿಸಿದನು. ಇಬ್ಬರೂ ಮೇಲೆದ್ದು ವಿಶ್ ಮಾಡಿದಾಗ

ಕಿಶೋರಿ ಸಿಂಗ್......ಬ್ರಿಜೇಶ್ ಕೆಲಸ ಎಲ್ಲಿವರೆಗೆ ಬಂತು ?

ಬ್ರಿಜೇಶ್.....ನಾವು ಪ್ರಾರಂಭಿಸಿದ ಕೆಲಸಗಳಲ್ಲಿ ಇಲ್ಲಿವರೆಗೆ ಯಾವ ಕೆಲಸ ತಾನೇ ಪೂರ್ಣಗೊಳ್ಳದೆ ಉಳಿದಿದೆ ಸರ್. ನಾವು ಯಾರಿಗೆ ಸುಪಾರಿ ನೀಡಿದ್ದೇವೋ ಅವನ ಕಡೆಯ ಜನ ಅಲ್ಲಿಗೆ ತೆರಳಿದ್ದು ಇಡೀ ಕುಟುಂಬಕ್ಕೇ ಎಚ್ಚರಿಕೆ ನೀಡಿದ್ದಾರೆ. ನಾವಿಲ್ಲಿಂದ ಬರೆದು ಕಳಿಸಿದ್ದ ಪತ್ರ ಮಗುವನ್ನು ದತ್ತು ತೆಗೆದುಕೊಂಡಿರುವ ದಂಪತಿ ಕೈಗೆ ಸೇರಿದೆ.

ಸೇಠ್......ಈಗ ಅವರಿಗ್ಯಾವುದೇ ದಾರಿಗಳಿಲ್ಲ ಸರ್ ಮಗುವನ್ನು ನಮ್ಮ ವಶಕ್ಕೆ ನೀಡದಿದ್ದರೆ ಮನೆಯ ಸದಸ್ಯರನ್ನೆಲ್ಲಾ ಒಬ್ಬೊಬ್ಬರಾಗಿ ಸಾಯಿಸುವ ಏರ್ಪಾಡನ್ನೂ ಮಾಡಲಾಗಿದೆ.

ಬ್ರಿಜೇಶ್......ಹೌದು ಸರ್ ನೆನ್ನೆ ಮುಂಜಾನೆಯಷ್ಟೇ ರಮಣ ದಾಸ್ ಫೋನ್ ಮಾಡಿ ಅಲ್ಲಿನ ಸ್ಥಿತಿಗತಿಗಳ ಬಗ್ಗೆ ತಿಳಿಸಿದ.

ಕಿಶೋರಿ ಸಿಂಗ್....ಆದರೂ ನಾವು ತುಂಬ ಎಚ್ಚರಿಕೆಯಿಂದ ಕೆಲಸ ಮಾಡಬೇಕಿದೆ. ಅವರು ಖಂಡಿತ ಅರಮನೆಯಲ್ಲಿ ಸುಮೇರ್ ಸಿಂಗ್ ಅವನಿಗೆ ವಿಷಯ ತಿಳಿಸಿರುತ್ತಾರೆ. ಸೂರ್ಯವಂಶಿಗಳ ಕಟ್ಟಕಡೆಯ ವಾರಸುದಾರಳನ್ನು ಅಪಹರಿಸಲು ಯಾರೋ ಸಂಚು ರೂಪಿಸಿದ್ದಾರೆ ಎಂಬುದನ್ನೂ ತಿಳಿಸಿರುತ್ತಾರೆ.

ಬ್ರಿಜೇಶ್.....ಯಾರಿಗೇ ವಿಷಯ ತಿಳಿದರೂ ಏನೂ ಮಾಡಲಾಗದು ಸರ್ ಅದು ಕರ್ನಾಟಕ ರಾಜಸ್ಥಿನವಲ್ಲ. ಅದಲ್ಲದೆ ನಾವು ಸುಪಾರಿ ನೀಡಿರುವ ವ್ಯಕ್ತಿ ಅಲ್ಲಿನ ಭೂಗತ ಜಗತ್ತಿನ ಅನಭಿಶಕ್ತ ದೊರೆ ಅವನ ಬೆನ್ನೆಲುಬಾಗಿ ಸರ್ಕಾರದ ಕೆಲವು ಮಂತ್ರಿಗಳ ಜೊತೆ ಅಧಿಕಾರಿಗಳು ಕೂಡ ಬೆಂಬಲ ನೀಡುತ್ತಿದ್ದಾರೆ. ನಾವು ಕೊಟ್ಟಿರುವ ಹಣದ ಆಫರ್ ಕೇಳಿಯೇ ಅವನು ಕೆಲಸ ಮಾಡಿಕೊಡಲು ತಕ್ಷಣ ಒಪ್ಪಿಕೊಂಡ ಅಂತ ಶಾಸಕ ರಮಣದಾಸ್ ಹೇಳ್ತಿದ್ದ. ಆ ಮಗು ಖಂಡಿತವಾಗಿಯೂ ನಮ್ಮ ವಶಕ್ಕೆ ಸಿಕ್ಕೇ ಸಿಕ್ತಾಳೆ.

ಕಿಶೋರಿ ಸಿಂಗ್......ಆ ಮಗು ನಮ್ಮ ವಶಕ್ಕೆ ಬಂದರೆ ಸಾಕು ಇಡೀ ಸೂರ್ಯವಂಶಿ ಸಂಸ್ಥಾನದ ಆಸ್ತಿಯನ್ನೆಲ್ಲಾ ನಾವು ಕಬಳಿಸಿಕೊಳ್ಳಲು ತುಂಬ ಅನುಕೂಲವಾಗುತ್ತೆ.

ಸೇಠ್......ಹೌದು ಸರ್ ಆ ಮಗು ಸಿಕ್ಕಿಬಿಟ್ಟರೆ ಸಾಕು ನಮ್ಮನ್ಯಾರೂ ತಡೆಯಲ್ಲಿಕ್ಕೆ ಸಾಧ್ಯವಾಗುವುದಿಲ್ಲ. ಈ ಸುಮೇರ್ ಸಿಂಗ್ ಇಂತಹ ಸಣ್ಣ ಪುಟ್ಟ ರಕ್ಷಕರನ್ನೆಲ್ಲಾ ಕ್ರಿಮಿಗಳಂತೆ ಹೊಸಕಿ ಹಾಕಬಹುದು.

ಮೂವರೂ ಸಂತೋಷದಿಂದ ಮಾತನಾಡುತ್ತ ಟೀ ಕುಡಿಯುವಾಗ ಅಲ್ಲಿಗೆ ತುಂಬ ಬೆದರಿದವನಂತೆ ಬಂದ ಗುಂಪಿನ ನಾಲ್ಕನೇ ವ್ಯಕ್ತಿ ವಿನೋದ್ ಪಾಠಕನನ್ನು ನೋಡಿ.....

ಕಿಶೋರಿ ಸಿಂಗ್.......ಏನಾಯ್ತು ವಿನೋದ್ ಮುಖದಲ್ಲಿ ಯಾಕಿಷ್ಟು
ಭಯ ಆವರಿಸಿಕೊಂಡಿದೆ ?

ವಿನೋದ್.....ಸರ್ ನಿಮಗಿನ್ನೂ ವಿಷಯ ತಿಳಿದಿಲ್ಲವಾ ?

ಬ್ರಿಜೇಶ್.....ಯಾವುದರ ಬಗ್ಗೆ ಹೇಳ್ತಿದ್ದೀಯ ?

ವಿನೋದ್......ನಾನೀಗಷ್ಟೇ ಮನೆಯಿಂದ ನ್ಯೂಸ್ ನೋಡಿಕೊಂಡು ಇಲ್ಲಿಗೆ ಬರುತ್ತಿದ್ದೀನಿ.

ಕಿಶೋರಿ ಸಿಂಗ್.....ನಾನೂ ನ್ಯೂಸ್ ನೋಡಿದೆ ಆದರೆ ಅದರಲ್ಲೇನು ವಿಶೇಷವಾದ ಸುದ್ದಿಯೇ ಇರಲಿಲ್ಲವಲ್ಲ.

ವಿನೋದ್......ಸರ್ ನನ್ನ ಹೆಂಡತಿ ಕರ್ನಾಟಕದವಳಲ್ಲವಾ ಅವಳು ಸಾಮಾನ್ಯವಾಗಿ ಕನ್ನಡ ನ್ಯೂಸ್ ಛಾನೆಲ್ ನೋಡ್ತಾಳೆ.

ಸೇಠ್.....ವಿಷಯವೇನೆಂದು ಹೇಳುವುದರ ಬದಲು ಹೀಗ್ಯಾಕೆ ಸುತ್ತಿ ಬಳಸಿಕೊಂಡು ಬರ್ತಿದ್ದೀಯ.

ವಿನೋದ್.....ಸೇಠ್ ಜೀ ನೀವು ಬ್ರಿಜೇಶ್ ಇಬ್ಬರೂ ಸೂರ್ಯವಂಶಿ
ರಾಜಮನೆತನದ ಯುವರಾಣಿಯನ್ನು ಅಪಹರಿಸಲು ಶಾಸಕನಿಗೆ ಸುಪಾರಿ ಕೊಟ್ಟಿದ್ರಲ್ಲ......

ಬ್ರಿಜೇಶ್.......ಹೌದು ಏನಾಯ್ತೀಗ ? ಮಗುವಿನ ಅಪಹರಣವಾಗಿ ಹೋಯಿತಾ ? ಮತ್ತೆ ನಮಗಿನ್ನೂ ಫೋನೇ ಬಂದಿಲ್ಲವಲ್ಲ.

ವಿನೋದ್......ಮಗುವಿನ ಅಪಹರಣ ಆಗುವುದಿರಲಿ ಆ ಶಾಸಕ ರಮಣದಾಸ್ ಯಾವ ಭೂಗತ ದೊರೆಗೆ ಈ ಕೆಲಸ ವಹಿಸಿದ್ದನೋ ಅದೇ ಡಾನ್ ರಮನಾಥ್ ಅವರಿಬ್ಬರ ಜೊತೆ ಅವನ ಗ್ಯಾಂಗಿನ ಎಲ್ಲ ರೌಡಿಗಳನ್ನು ನೆನ್ನೆ ಯಾರೋ ಸಾಯಿಸಿದ್ದಾರೆ.

ಮೂವರೂ ಕುಳಿತಲ್ಲಿಂದ ಜಿಗಿದು ನಿಂತರೆ ಸೇಠ್......ಏನೇಳ್ತಿದ್ದೀಯ ನೀನು ವಿನೋದ್ ? ಅವನೊಬ್ಬ ದೊಡ್ಡ ಡಾನ್ ಅವನನ್ಯಾರೋ ಸಾಯಿಸಿರೋರು ?

ವಿನೋದ್.....ಕೇವಲ ಸಾಯಿಸಿದ್ದು ಮಾತ್ರವಲ್ಲ ಆ ಡಾನ್ ಅವನ ಮೂರು ಜನ ಮಕ್ಕಳು...ನಿಮ್ಮ ಪರಿಚಯದ ಶಾಸಕ ರಮಣದಾಸ್ ಮತ್ತು ರೌಡಿಯ ಇಡೀ ಗ್ಯಾಂಗಿನವರನ್ನೆಲ್ಲಾ ತುಂಡು ತುಂಡುಗಳಾಗಿ ಕತ್ತರಿಸಿ ಹಾಕಿದ್ದಾರೆ. ಪೋಲಿಸರಿಗಿನ್ನೂ ಯಾರ ಬಾಡಿಯ ಪಾರ್ಟ್ ಯಾವುದೆಂದೇ ಗೊತ್ತಾಗುತ್ತಿಲ್ಲವಂತೆ ಜೊತೆಗೆ ಯಾರು ಮಾಡಿದ್ದೆಂದು ಸಣ್ಣದೊಂದು ಸುಳಿವೂ ಸಹ ದೊರಕಿಲ್ಲವಂತೆ.

ಆ ಸುದ್ದಿ ಕೇಳಿ ಮೂವರ ಮುಖದಲ್ಲೂ ಬೆವರು ಮೂಡಿ ಅವರೆಲ್ಲರ ಎದೆಯೊಳಗೆ ಭಯದ ನಡುಕವುಂಟಾಯಿತು. ಹತ್ತು ಹದಿನೈದು ನಿಮಿಷ ಅಲ್ಲಿ ಮೌನ ಆವರಿಸಿಕೊಂಡಿದ್ದು ನಂತರ......

ಕಿಶೋರಿ ಸಿಂಗ್........ಇದೆಲ್ಲವನ್ನು ಖಂಡಿತವಾಗಿ ರಾಜಮನೆತನದ ರಕ್ಷಕರದ್ದೇ ಕೆಲಸ. ಶಾಸಕ ಸಾಯುವಾಗ ಈ ಕೆಲಸ ಅವನಿಗ್ಯಾರು ಕೊಟ್ಟರೆಂದು ಹೇಳಿರದಿದ್ದರೆ ಸಾಕು.

"" ಹೇಳದಿದ್ದರೆ ನಾವು ಬಿಡಬೇಕಲ್ಲ ನಮಕ್ ಹರಾಂ ""

ನಾಲ್ವರೂ ಧ್ವನಿ ಬಂದತ್ತತಿರುಗಿದರೆ ಉದ್ದನೇ ಖಡ್ಗವನ್ನಿಡಿದ ರಾಣಾ ಸಾಕ್ಷಾತ್ ಯಮ ಸ್ವರೂಪಿಯಾಗಿ ನಿಂತಿದ್ದರೆ ಅವನ ಜೊತೆಯಲ್ಲೇ ಬಷೀರ್ ಖಾನ್....ವಿಕ್ರಂ ಸಿಂಗ್ ಮತ್ತು ವೀರ್ ಸಿಂಗ್ ರಾಣಾ ಜೊತೆ ಇಪ್ಪತ್ತು ಜನ ರಕ್ಷಕರು ಮನೆಯೊಳಗೆ ಕಾಲಿಟ್ಟರು. ರಕ್ಷಕರು ತಕ್ಷಣವೇ ಕಾರ್ಯಪ್ರವೃತ್ತರಾಗಿ ನಾಲ್ವರನ್ನು ಸುತ್ತುವರಿದು ಕುತ್ತಿಗೆಯ ಮೇಲೆ ಕತ್ತಿಯನ್ನಿಟ್ಟು ನಿಂತರು. ನಾಲ್ವರೂ ಭಯದಿಂದ ನಡುಗಿ ಬೆವರುತ್ತಾ ತಮ್ಮ ಕಣ್ಣೆದುರಿಗೇ ಸಾವನ್ನು ನೋಡುತ್ತಿದ್ದರೆ ಕಿಶೋರಿ ಸಿಂಗ್ ತನ್ನ ನಡುಗುತ್ತಿರುವ ಧ್ವನಿಯಲ್ಲಿ.......ಶಂಷೇರ್ ಸಿಂಗ್ ರಾಣಾ ನೀನಾ... ಎಂದನು.

ರಾಣಾ ಅಲ್ಲಿದ್ದ ಕುರ್ಚಿಯೊಂದರ ಮೇಲೆ ಕುಳಿತು......ಯುವರಾಣಿ ನಮಗೆ ದೇವರ ಸಮಾನ ನಮ್ಮ ಗೌರವದ ಪ್ರತೀಕ. ನೀವು ಅವರನ್ನ ಅಪಹರಿಸಲು ಸಂಚು ಮಾಡುತ್ತಿದ್ದರೂ ನಾವು ನೋಡಿಕೊಂಡು ಸುಮ್ಮನಿರುತ್ತೀವಿ ಅಂತ ಹೇಗೆ ಯೋಚಿಸಿದಿರೋ ನಮಕ್ ಹರಾಂ. ನೀವೆಲ್ಲ ನಮ್ಮ ಮಹರಾಜರ ಸ್ನೇಹಿತರಾಗಿದ್ರಿ ಅಲ್ಲವ ? ಅದರೂ ಮಹರಾಜರ ಮಗಳನ್ನೇ ಅಪಹರಿಸುವಂತ ನೀಚ ಕೆಲಸ ಮಾಡಲು ಸಂಚು ಮಾಡಿದ್ದೀರ. ಇದು ನೆನ್ನೆ ಮೊನ್ನೆಯ ಯೋಜನೆ ಅಲ್ಲವೇಅಲ್ಲ ಹಲವಾರು ವರ್ಷಗಳಿಂದ ನೀವೆಲ್ಲರೂ ಯಾವುದೋ ಒಳಸಂಚನ್ನು ರೂಪಿಸುತ್ತಿದ್ರಿ ಅಂತ ತಿಳಿಯುತ್ತೆ. ಬಷೀರ್—ವೀರ್ ಸಿಂಗ್ ಇಂದು ಸಂಜೆಯೊಳಗೆ ಈ ನಾಲ್ವರ ವಂಶದಲ್ಲಿನ ಪ್ರತಿಯೊಬ್ಬ ವ್ಯಕ್ತಿಯೂ ನಮ್ಮ ವಶದಲ್ಲಿರಬೇಕು. ಹೆಂಗಸರು—ಮುದುಕರು— ಮಕ್ಕಳೆಂದು ನೋಡದೆ ಯಾರನ್ನೂ ಬಿಡದಂತೆ ಎಳೆದೊಯ್ದು ಜೈಸಲ್ಮೇರಿನ ನಮ್ಮ ಬಂಧಿಖಾನೆಗೆ ತಳ್ಳಿರಿ. ಇವರಲ್ಯಾರೂ ಸಾಯಬಾರದು ಅದರ ಬಗ್ಗೆ ಎಚ್ಚರವಿರಲಿ ರಾಜಕುಮಾರಿ ಕೆಲವು ದಿನಗಳ ನಂತರ ಬರುತ್ತಾರೆ ಅವರೇ ಇವರೆಲ್ಲರ ಬಗ್ಗೆ ನಿರ್ಣಯ ಕೈಗೊಳ್ಳುತ್ತಾರೆ ಅಲ್ಲಿಯವರೆಗೂ ಇವರೆಲ್ಲ ಜೀವಂತವಾಗಿರಲಿ. ಎಷ್ಟು ಹಿಂಸೂಯನ್ನಾದರೂ ನೀಡಿ ಇವರೆದೆಯಲ್ಲಿ ಬಚ್ಚಿಟ್ಟುಕೊಂಡಿರುವ ಸತ್ಯವನ್ನೆಲ್ಲಾ ಹೊರಗೆ ಕಕ್ಕಿಸಿ ಆದರೂ ಸಾಯಬಾರದಷ್ಟೆ.

ನಾಲ್ವರೂ ಭಯದಿಂದ ನಡುಗುತ್ತ ಕ್ಷಮೆಯಾಚಿಸುತ್ತಿದ್ದರೆ ರಕ್ಷಕರು ಅವರ ಕೈಗಳನ್ನು ಹಿಂದಕ್ಕೆ ಸೇರಿಸಿ ಕಟ್ಟಿಬಿಟ್ಟರು.

ಕಿಶೋರಿ ಸಿಂಗ್......ರಾಣಾ ಕ್ಷಮಿಸಿಬಿಡು ಇನ್ಯಾವತ್ತೂ ಅರಮನೆ ಅಥವ ರಾಜಕುಮಿರಿಯ ಕಡೆ ತಿರುಗಿಯೂ ನೋಡುವುದಿಲ್ಲ.

ರಾಣಾ......ನೋಡುವುದಕ್ಕೆ ನಾನು ಬಿಡಬೇಕಲ್ಲ.

ಸೇಠ್......ನಿನಗೇನು ಬೇಕು ಕೇಳು ರಾಣಾ ಎಷ್ಟು ದುಡ್ಡು ಬೇಕಿದ್ರೂ ಕೊಡುವುದಕ್ಕೆ ನಾವು ಸಿದ್ದ.

ಅವನ ಮಾತನ್ನು ಕೇಳಿ ರಾಣಾ ಸಹಿತ ಅಲ್ಲಿದ್ದವರೆಲ್ಲ ನಗುತ್ತಿದ್ದರೆ ನಾಲ್ವರಿಗೂ ತಮ್ಮ ಕಡೇ ಅವಕಾಶವೂ ಜಾರಿ ಹೋಯಿತೆಂಬುದು ತಿಳಿಯಿತು.

ಕಿಶೋರಿ ಸಿಂಗ್.....ಇದನ್ನೆಲ್ಲಾ ಮಾಡಿದ್ದು ನಾವು ನಮ್ಮ ಕುಟುಂಬದ
ಸದಸ್ಯರನ್ನಾದರೂ ಕ್ಷಮಿಸಿಬಿಡು.

ರಾಣಾ.......ತಂದೆ ಹೆಸರನ್ನು ಹೇಳುವುದಕ್ಕೂ ತೊದಲಿಸುವ ಪುಟ್ಟ ಮಗುವನ್ನು ಅಪಹರಿಸಿ ಸಂಸ್ಥಾನದ ಆಸ್ತಿ ದೋಚಲು ನೀವೆಲ್ಲರೂ ಹೊಂಚು ಹಾಕಿದರೆ ನಾವು ನಿಮ್ಮ ಕುಟುಂಬದವರನ್ನು ಕ್ಷಮಿಸಬೇಕ.
ನಿಮ್ಮ ನಾಲ್ವರ ಖಾಂದಾನಲ್ಯಾರೂ ಸಹ ಜೀವಂತವಾಗಿ ಉಳಿಯಲ್ಲ. ನಿಮ್ಶನ್ನು ಕಾಪಾಡುವುದಕ್ಕೆ ನಿಮ್ಮ ಬೆನ್ನ ಹಿಂದಿರುವ ರಾಜಕೀಯದ ನಾಯಕರು ಬರುತ್ತಾರೆಂದು ಭಾವಿಸಬೇಡಿ. ಇನ್ನು ಕೆಲವು ದಿನಗಳಲ್ಲಿ ಅವರೂ ನಿಮ್ಮ ಜೊತೆ ಬಂಧಿ ಖಾನೆಯಲ್ಲಿರ್ತಾರೆ. ಇವರನ್ನೆಲ್ಲಾ ನೇರವಾಗಿ ಜೈಸಲ್ಮೇರಿಗೆ ರವಾನಿಸಿ ಮುಂದಿನದ್ದನ್ನೆಲ್ಲಾ ಅಜಯ್ ಮತ್ತು ದಿಲೇರ್ ಸಿಂಗ್ ನೋಡಿಕೊಳ್ತಾರೆ ಎಳೆದೊಯ್ಯಿರಿ.

ಕ್ಷಮಿಸುವಂತೆ ಬೇಡಿಕೊಳ್ಳುತ್ತ ಕಿರುಚಾಡಿದಾಗ ರಕ್ಷಕರು ನಾಲ್ವರ ಬಾಯೊಳಗೂ ಬಟ್ಟೆ ತುರುಕಿ ತಮ್ಮ ಜೀಪಿನೊಳಗೆ ತುಂಬಿಸಿಕೊಂಡು ಅಲ್ಲಿಂದ ಹೊರಟರು. ರಾಣಾ...ವಿಕ್ರಂ ಸಿಂಗ್ ಇಬ್ಬರೂ ಇಡೀ ಮನೆ ಜಾಲಾಡಿ ತಮಗೆ ಬೇಕಾಗಿರುವಂತ ದಾಖಲೆಗಳು...ಹತ್ತಾರು ಪೆನ್ ಡ್ರೈವ್....ಮೂರು ಲ್ಯಾಪ್ಟಾಪ್ ಹಾಗು ಇನ್ನಿತರ ವಸ್ತುಗಳನ್ನು ವಶಕ್ಕೆ ತೆಗೆದುಕೊಂಡು ತಾವಲ್ಲಿಗೆ ಬಂದಿದ್ದ ಬಗ್ಗೆ ಸಣ್ಣನೇ ಸುಳಿವು ಕೂಡ ಸಿಗದಂತೆ ಮಾಡಿ ತೆರಳಿದರು.
* *
* *

........continue
 

Samar2154

Well-Known Member
2,260
1,250
159
continue......


ಶನಿವಾರ
ಕಾಮಾಕ್ಷಿಪುರದ ಮನೆ.......

ಹಿಂದಿನ ದಿನ ಸವಿತಾ—ಸುಕನ್ಯಾರ ಹೊಸ ಮನೆಯ ಗೃಹಪ್ರವೇಶದ ಪೂಜೆ ದೇವಾನಂದ ಸ್ವಾಮೀಜಿಗಳ ನೇತೃತ್ವದಲ್ಲಿ ನೆರವೇರಿತ್ತು. ನಿಶಾ ಬಗ್ಗೆ ತಿಳಿದುಕೊಂಡು ಅವಳನ್ನು ಅಪಹರಿಸಲು ಸುಪಾರಿ ಪಡೆದಿದ್ದ ಭೂಗತ ಲೋಕದ ಡಾನ್ ಮತ್ತವನ ಸಹಚರರು ಮರಣಿಸಿದ್ದರೆ ಆತ ಯಾರಿಂದ ಸುಪಾರಿ ಪಡೆದಿದ್ದನೋ ಅವರನ್ನೆಲ್ಲಾ ರಾಜಸ್ಥಾನದಲ್ಲಿ ರಾಣಾ ತನ್ನ ವಶಕ್ಕೆ ಪಡೆದುಕೊಂಡಿದ್ದು ಈಗ್ಯಾವುದೇ ಆತಂಕವೂ ಸಹ ಇರಲಿಲ್ಲ. ಮುಂದೇನು ಎಂದು ಯೋಚಿಸುತ್ತ ಮನೆ ಮುಂದಿನ ಉಯ್ಯಾಲೆಯಲ್ಲಿ ಕುಳಿತಿದ್ದ ನೀತು ಪಕ್ಕದಲ್ಲವಳ ಗಂಡ ಕೂರುತ್ತ.....

ಹರೀಶ......ಏನು ಯೋಚಿಸ್ತಿದ್ದೀಯ ? ಈಗ ನಮ್ಮ ಕಂದನ ಮೇಲೆ ಆವರಿಸಿದ್ದ ಆತಂಕದ ಛಾಯೆ ನಿವಾರಣೆಗೊಂಡಿದೆ.

ನೀತು......ರಾಜಸ್ಥಾನದಲ್ಲಿರುವ ವಿರೋಧಿಗಳೆಲ್ಲರೂ ನಿರ್ಮೂಲನೆ ಆಗುವವರೆಗೂ ನಾವು ಯಾವುದನ್ನೂ ಸಲೀಸಾಗಿ ತೆಗೆದುಕೊಳ್ಳಲೇ ಬಾರದು ಕಣ್ರಿ. ನಮ್ಮ ಮಕ್ಕಳೀಗ ಅತ್ಯಂತ ಸುರಕ್ಷಿತವಾಗಿದ್ದಾರೆ ನಿಜ ಆದರೆ ಅವಳಿಂದ ತಂದೆ ತಾಯಿಯರನ್ನು ಬೇರ್ಪಡಿಸಿದ್ದವರಿನ್ನೂ ಜೀವಂತವಾಗಿದ್ದಾರೆ ಅವರೆಲ್ಲರೂ ಸಾಯುವವರೆಗೆ ನನಗೆ ಸ್ವಲ್ಪವೂ ಸಮಾಧಾನವಿಲ್ಲ.

ಹರೀಶ......ಸಧ್ಯಕ್ಕಿಲ್ಲೇನೂ ಕೆಲಸವಿಲ್ಲ ಅಂತ ನೀನು ಅವರಿಬ್ಬರನ್ನು ರಾಜಸ್ಥಾನಕ್ಕೆ ಕರೆದೊಯ್ಯುವ ಬಗ್ಗೆ ಯೋಚಿಸುತ್ತಿದ್ದೀಯ.

ನೀತು.....ಆ ಬಗ್ಗೆಯೂ ಯೋಚಿಸ್ತಿದ್ದೆ ಅದರ ಜೊತೆ ಮಕ್ಕಳಿಬ್ಬರೂ ಒಂದೇ ದಿನ ಹುಟ್ಟಿದ್ದು ಅವರಿಬ್ಬರ ತಾರೀಖು ವರ್ಷಗಳೆರಡು ಬೇರೆ ಬೇರೆ ಆಗಿದ್ದರೂ ಇಬ್ಬರೂ ಜನಿಸಿದ್ದು ಮಾತ್ರ ವಿಜಯದಶಮಿಯ ದಿನದಂದೇ. ಹಳೆಯ ತಲೆಮಾರಿನಲ್ಲಿ ಹುಟ್ಟಿನ ದಿನದಂದು ಯಾವ ನಕ್ಷತ್ರ ಇರುತ್ತಿತ್ತೋ ಅಂದೇ ಅವರ ಜನ್ಮದಿನವನ್ನು ಆಚರಿಸುತ್ತಿದ್ದರು ಕಾಲಕ್ರಮೇಣ ನಾವದನ್ನು ತ್ಯಜಿಸಿ ತಾರೀಖಿನ ಪ್ರಕಾರ ಆಚರಿಸಲು ಮುಂದಾದೆವು. ನಮ್ಮ ಪೂರ್ವಜರು ಆಚರೆಣೆಗೆ ತಂದಿರುವಂತಹ ಸಂಪ್ರದಾಯವನ್ನೇ ಮುಂದುವರಿಸಲು ನಾನು ಇಚ್ಚಿಸುತ್ತೀನಿ ಕಣ್ರೀ ಅಂದ್ರೆ ಇಬ್ಬರೂ ಮಕ್ಕಳ ಹುಟ್ಟು ಹಬ್ಬವನ್ನು ವಿಜಯದಶಮಿಯಂದೆ ಆಚರಿಸಲು ತೀರ್ಮಾನಿಸಿರುವೆ ನೀವೇನಂತೀರಾ.

ಹರೀಶ......ಒಳ್ಳೆ ಯೋಚನೆ ಕಣೆ ವಿಜಯದಶಮಿಗಿಂತಲೂ ಒಳ್ಳೆಯ ದಿನ ಯಾವುದಿದೆ ಆ ದಿನವೇ ನಮ್ಮಿಬ್ಬರೂ ಹೆಣ್ಣುಮಕ್ಕಳ ಹುಟ್ಟಿದ ದಿನವನ್ನು ಆಚರಿಸೋಣ. ಇಡೀ ಮನೆಯನ್ನು ಅಲಂಕರಿಸಿ ನಮ್ಮ ಪರಿಚಯದವರನ್ನೆಲ್ಲಾ ಕರೆದು ಗ್ರಾಂಡಾಗಿ ಆಚರಿಸಬೇಕು.

ನೀತು......ಹೌದು ಭವ್ಯವಾಗಿಯೇ ಆಚರಿಸೋಣ ಆದರೆ ಇಲ್ಲಲ್ಲ ಅವರಿಬ್ಬರ ತಾಯ್ನಾಡಿನಲ್ಲಿ ಅಂದರೆ ಉದಯಪುರ ಅರಮನೆಯಲ್ಲಿ ಅದುವೇ ಸೂರ್ಯವಂಶಿ ರಾಜವಂಶದ ಪರಂಪರೆಯ ಅನುಸಾರವೆ ಆಚರಿಸಬೇಕು. ಆದರೆ ಅದಕ್ಕೂ ಮುನ್ನ ನನ್ನ ಮಕ್ಕಳಿಗೆ ಏದುರಾಗಿ ನಿಂತಿರುವ ಶತ್ರುಗಳನ್ನೆಲ್ಲಾ ನಾಶ ಮಾಡಬೇಕಿದೆ ಅದು ಮುಖ್ಯ.

ಹರೀಶ......ಈ ಮನೆಯಲ್ಯಾಕೆ ಆಚರಿಸುವುದು ಬೇಡ ? ಅವರು ನಮ್ಮ ಮಕ್ಕಳೇ ಅಲ್ಲವಾ.

ನೀತು......ರೀ ಅವರಿಬ್ಬರೂ ನಮ್ಮ ಮಕ್ಕಳೇ ಕಣ್ರಿ ಅದನ್ಯಾರೂ ಸಹ ಬದಲಾಯಿಸಲು ಸಾಧ್ಯವಿಲ್ಲ ಹಾಗಾಗುವುದಕ್ಕೆ ನಾನು ಬಿಡುವುದೂ ಇಲ್ಲ. ಆದರೆ ರಾಜಸ್ಥಾನ ಅವರಿಬ್ಬರ ಜನ್ಮಭೂಮಿಯೂ ಹೌದು ಅದರ ಜೊತೆಗೆ ಅವರಿಬ್ಬರ ಕರ್ಮಭೂಮಿ ಕೂಡ. ಅಲ್ಲಿ ಅವರಿಗೆ ತಮ್ಮದೇ ಆದ ಬಹಳಷ್ಟು ಜವಾಬ್ದಾರಿಗಳಿವೆ ಅದನ್ನವರಿಬ್ಬರೂ ನಿಭಾಯಿಸಲೇಬೇಕಿದೆ. ನಿಶಾ ಇನ್ನೂ ಚಿಕ್ಕವಳು ಅವಳಿಗಿನ್ನೂ 17— 18 ವರ್ಷಗಳವರೆಗೆ ಜೀವನದ ಹಲವಾರು ಪಾಠಗಳನ್ನು ಕಲಿಸುವ ಜೊತೆಗೆ ಸರಿತಪ್ಪುಗಳ ಅರಿವನ್ನೂ ಮೂಡಿಸುವ ಜವಾಬ್ದಾರಿಗಳು ನಮ್ಮಿಬ್ಬರ ಮೇಲಿದೆ. ಆದರೆ ನಿಧಿ ಆಚಾರ್ಯರ ಆಶ್ರಮದಲ್ಲಿಯೇ ಬೆಳೆದಿರುವುದರಿಂದ ಅವಳು ಸಂಪೂರ್ಣ ಪರಿಪಕ್ವಳಾಗಿದ್ದಾಳೆ ಈಗ ಅವಳೇ ಅಲ್ಲಿನ ಜವಾಬ್ದಾರಿಗಳನ್ನು ನಿಭಾಯಿಸಬೇಕಾಗಿದೆ ಆದರೆ ಅವಳಿಲ್ಲೇ ನಮ್ಮ ಜೊತೆಯಲ್ಲಿದ್ದುಕೊಂಡು ತನ್ನ ಕರ್ತವ್ಯವನ್ನೂ ಸಹ ಯಾವುದೇ ಚ್ಯುತಿಬಾರದಂತೆ ನಿಭಾಯಿಸಬೇಕು.

ಹರೀಶ....ನಿನ್ನ ಪ್ರತಿಯೊಂದು ನಿರ್ಧಾರದಲ್ಲೂ ನಾನು ಜೊತೆಗಿರುವೆ ಆದರೆ ನೀನೀ ಮೊದಲೇ ಹೇಳಿರುವಂತೆ ಮಕ್ಕಳಿಗೆ ಅವರ ನಿರ್ಧಾರ ತೆಗೆದುಕೊಳ್ಳುವ ಸ್ವಾತಂತ್ರವನ್ನೂ ತಂದೆ ತಾಯಿಗಳಾಗಿ ನಾವಿಬ್ಬರೂ ನೀಡಬೇಕಾಗಿರುವುದು ನಮ್ಮ ಕರ್ತವ್ಯ.

ಗೇಟ್ ತೆರೆದುಕೊಂಡು ಒಳಗೆ ಬಂದ ನಿಧಿ ಅಪ್ಪ ಅಮ್ಮನನ್ನು ನೋಡಿ ಉಯ್ಯಾಲೆ ಹತ್ತಿರ ನಿಂತು......ಏನಪ್ಪ ಅಮ್ಮನ ಜೊತೆಯಲ್ಲಿ ನೀವು ಆರಾಮವಾಗಿ ಉಯ್ಯಾಲೆ ಆಡ್ತಿದ್ದೀರಾ ?

ಹರೀಶ ಮಗಳನ್ನು ಮಧ್ಯ ಕೂರಿಸಿಕೊಳ್ಳುತ್ತ.......ನಿನ್ನ ವಿಷಯವಾಗಿ ಮಾತನಾಡ್ತಿದ್ವಿ ಅಷ್ಟರಲ್ಲೇ ನೀನು ಬಂದೆ. ಈಗೆಲ್ಲಿಗಮ್ಮ ಹೋಗಿದ್ದೆ ?

ನಿಧಿ......ಅಪ್ಪ ನಾಳೆ ಭಾನುವಾರ ಸವಿತಾ ಆಂಟಿ ಮತ್ತು ಸುಕನ್ಯಾ ಆಂಟಿ ಇಬ್ಬರೂ ತಮ್ಮ ಹೊಸ ಮನೆಗೆ ಶಿಫ್ಟಾಗುತ್ತಿದ್ದಾರಲ್ಲ ಅದಕ್ಕೇ ಸವಿತಾ ಆಂಟಿ ಮನೆಗೆ ಹೋಗಿದ್ದೆ.

ನೀತು......ಬಸ್ಯನಿಗೆ ನೆನ್ನೆ ಇಬ್ಬರ ಮನೆಗೆ ಹುಡುಗರನ್ನು ಕಳಿಸೆಂದು ಹೇಳಿದ್ದೆ ಪ್ಯಾಕಿಂಗ್ ಮಾಡಲು ಸಹಾಯವಾಗಲಿ ಅಂತ ಇನ್ನೊಮ್ಮೆ ಜ್ಞಾಪಿಸಿ ಬಿಡ್ತೀನಿ.

ನಿಧಿ.....ಚಿಂತೆಯಿಲ್ಲಮ್ಮ ನಾನೂ ಫೋನ್ ಮಾಡಿದ್ದೆ ಬಸ್ಯನೇ ಇಬ್ಬರ ಮನೆಗೂ 4—4 ಜನರನ್ನು ಕರೆತಂದು ಬಿಟ್ಟಿದ್ದಾನೆ ಜೊತೆಗೆ ಪ್ಯಾಕಿಂಗ್ ಸಹ ಮುಗಿದಿದೆ ನಾಳೆ ಶಿಫ್ಟ್ ಮಾಡುವ ಸಮಯಕ್ಕೆ ಅವರೇ ನಮ್ಮ ಫ್ಯಾಕ್ಟರಿಯ ಗಾಡಿ ತೆಗೆದುಕೊಂಡು ಬರ್ತಾರೆ.

ಹರೀಶ....ಸರಿ ಬಿಡಮ್ಮ ಅದರ ಬಗ್ಗೆ ಚಿಂತೆಯಿಲ್ಲ. ಈಗ ನಾನೊಂದು ವಿಷಯ ಕೇಳುವೆ ನಿನ್ನ ಮನಸ್ಸಿನಲ್ಲಿರುವುದನ್ನು ನೀನು ನಮ್ಮಿಬ್ಬರಿಗೆ ಯಾವುದೇ ಮುಚ್ಚುಮರೆಯಿಲ್ಲದೆ ಹೇಳಬೇಕು.

ಅಪ್ಪ ಅಮ್ಮನ ಮುಖಚರ್ಯೆ ಸೂಕ್ಷ್ಮವಾಗಿ ಗಮನಿಸಿದ ನಿಧಿ ಅಪ್ಪ ಯಾವ ವಿಷಯದ ಬಗ್ಗೆ ಮಾತನಾಡಬೇಕೆಂದಿದ್ದಾರೆ ಎಂಬುದನ್ನರಿತು
........ಅಪ್ಪ ನೀವೇನು ಕೇಳಬೇಕೆಂದಿದ್ದೀರೋ ನನಗೆ ಅರಿವಾಯಿತು. ಅಮ್ಮ ನಾನು ಜವಾಬ್ದಾರಿಗಳನ್ನು ಹೊರುವುದಕ್ಕೆ ಸಿದ್ದಳಾಗಿದ್ದೀನಿ ಆದರೆ ನೀವು ನನ್ನ ಜೊತೆಗಿದ್ದರೆ ಮಾತ್ರ. ನಾನ್ಯಾವುದೇ ಕಾರಣಕ್ಕೂ ರಾಜಸ್ಥಾನದಲ್ಲೇ ಉಳಿದುಕೊಂಡು ಸಂಸ್ಥಾನದ ಕಂಪನಿಯಲ್ಲಿನ ವ್ಯವಹಾರಗಳನ್ನು ನೋಡಿಕೊಳ್ಳಲಾರೆ ಅದಕ್ಕೆ ನಾನಂತೂ ಈಗಲೇ ಸಿದ್ದಳಿಲ್ಲ. 13 ವರ್ಷಗಳಿಂದ ಆಶ್ರಮದ ಕಠಿಣ ಜೀವನವನ್ನು ನಾನು ಬದುಕಿದ್ದೆ ಈಗ ಅಪ್ಪ ಅಮ್ಮನ ಪ್ರೀತಿ ನನಗೆ ಒಲಿದು ಬಂದಿರುವಾಗ ನಿಮ್ಮನ್ನು ಬಿಟ್ಟು ನಾನೆಲ್ಲಿಗೂ ಹೋಗುವುದಿಲ್ಲ.

ನೀತು......ಹುಚ್ಚುಡುಗಿ ನಿನ್ನ ನಮ್ಮಿಂದ ದೂರ ಕಳಿಸುವುದಕ್ಕೆ ನಾವು ಕೂಡ ಸಿದ್ದರಿಲ್ಲ ಗೊತ್ತಾಯ್ತಾ. ನಾವು ಹೇಳ್ತಿರೋದು ಸಂಸ್ಥಾನದ ಅಧೀನದಲ್ಲಿರುವ ಕಂಪನಿಗೆ ಈಗ್ಯಾರೂ ಯಜಮಾನರಿಲ್ಲ ನೀನು ಆ ಸ್ಥಾನದಲ್ಲಿ ಕೂರಬೇಕು ಆದರೆ ಇಲ್ಲಿಂದಲೇ ಎಲ್ಲಾ ಕೆಲಸಗಳನ್ನೂ ನಿರ್ವಹಣೆ ಮಾಡು ನಿನ್ನ ಜೊತೆ ನಾನಿರುತ್ತೀನಿ.

ನಿಧಿ......ಅಮ್ಮ ನನಗೆ 18 ವರ್ಷ ತುಂಬಿದ್ದು ಸೂರ್ಯವಂಶಿ ರಾಜ ಮನೆತನದ ಯುವರಾಣಿಯಾಗಿ ಅಲ್ಲಿನ ಅಧಿಕಾರಗಳೆಲ್ಲವೂ ನನಗೆ ದೊರೆಯುತ್ತದೆ. ಆದರೆ ಕಂಪನಿಗೆ ಸಂಬಂಧಪಟ್ಟಂತೆ ನಿರ್ಧಾರವನ್ನು ಅಮ್ಮನೇ ತೆಗೆದುಕೊಳ್ಳಬೇಕು.

ಹರೀಶ......ನಿಮ್ಮಮ್ಮ ಯಾವ ಅಧಿಕಾರದಿಂದ ಕಂಪನಿ ನಿರ್ಧಾರ ತೆಗೆದುಕೊಳ್ಳುವುದಕ್ಕೆ ಸಾಧ್ಯವಿದೆ ಪುಟ್ಟಿ ಅದರ ಬಗ್ಗೆ ಯೋಚಿಸು.

ನಿಧಿ.......ಅಪ್ಪ ಕಂಪನಿಯ ಕಾರ್ಯಚಟುವಟಿಕೆಗೆ ಒಂದು ಗ್ರೂಪ್ ಸ್ಥಾಪನೆ ಮಾಡಲಾಗುತ್ತೆ ಅದೇ ಬೋರ್ಡ್ ಆಫ್ ಡೈರೆಕ್ಟರ್ಸ್ ಅದಕ್ಕೆ ನಾನು ಚೇರ್ಮನ್ ಆಗುವ ಬದಲಿಗೆ ಆ ಸ್ಥಾನದಲ್ಲಿ ಅಮ್ಮನನ್ನು ಕೂರಿಸುವೆ. ಆಗ ಅಮ್ಮ ಯಾವುದೇ ಅಡಚಣೆಗಳೂ ಇಲ್ಲದ ರೀತಿ ಕಂಪನಿಯ ಎಲ್ಲಾ ನಿರ್ಧಾರಗಳನ್ನು ತೆಗೆದುಕೊಳ್ಳಲು ಸ್ವತಂತ್ರಳು. ನಾನೀಗಲೇ ಆ ಜವಾಬ್ದಾರಿಗಳನ್ನು ನಿರ್ವಹಿಸಲು ಸಿದ್ದಳಿಲ್ಲ ತಮ್ಮ ತಂಗಿಯರ ಜೊತೆ ನನ್ನ ಜೀವನದ ಸುವರ್ಣ ಯುಗವನ್ನು ನಾನೀಗ ಕಳೆಯಲು ಇಚ್ಚಿಸಿಕೊಂಡಿರುವ ಮನಸ್ಸಿದೆ. ಕಂಪನಿಯ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳಲು ಅಮ್ಮನಿಗಿಂತ ಸೂಕ್ತಳಾದ ವ್ಯಕ್ತಿ ಮಗಳಿಗ್ಯಾರಿದ್ದಾರೆ ಹೇಳಿ.

ಹರೀಶ ನಾಟಕವಾಡುತ್ತ......ನನ್ನಿಬ್ಬರೂ ಮಕ್ಕಳೂ ಅಪ್ಪನಿಂದಲೇ ಚೆನ್ನಾಗಿ ಮುದ್ದು ಮಾಡಿಸಿಕೊಳ್ತಾರೆ ಆದರೆಲ್ಲಾ ಜವಾಬ್ದಾರಿಗಳನ್ನೂ ಅಮ್ಮನಿಗೇ ವಹಿಸುತ್ತಾರೆ ಅಪ್ಪ ಲೆಕ್ಕಕ್ಕೇ ಇಲ್ಲ.

ನೀತು......ಲೇ ನಿಮ್ಮಪ್ಪನಿಗೆ ಹೊಟ್ಟೆ ಉರಿಯುತ್ತಿದೆ ಆ ಹಿಂದಿ ಭಾಷೆ ಸಿನಿಮಾಗಳಲ್ಲಿ ಸಾಹುಕಾರನ ಪಕ್ಕದಲ್ಲಿರುತ್ತಾರಲ್ಲ ಮುನ್ಷಿ ಅಂತೇಳಿ ನಿಮ್ಮಪ್ಪನಿಗೆ ಆ ಪೋಸ್ಟ್ ಕೊಟ್ಬಿಡೋಣ ಕಣೆ ಖುಷಿಯಾಗ್ತಾರೆ.

ಹರೀಶ.......ಅದನ್ನೆಲ್ಲಾ ನೀವಿಬ್ಬರೇ ನೋಡಿಕೊಳ್ಳಿ ನಾನಂತು ನನ್ನ ಮುದ್ದಿನ ಕಂದನ ಜೊತೆ ಆಡಿಕೊಂಡಿರ್ತೀನಿ.

ನೀತು.....ಸರಿ ಕಣಮ್ಮ ಅದರ ವಿಷಯ ಆಮೇಲೆ ಮಾತನಾಡೋಣ ಈಗ್ಯಾಕೆ ಯೋಚಿಸೋದು ಬಿಡು. ಎಲ್ಲಿ ತಿಂಡಿ ತಿಂದಾಗಿನಿಂದ ನನ್ನ ಚಿಲ್ಟಾರಿಯ ಸದ್ದೇ ಇಲ್ವಲ್ಲ ಮನೆಯಲ್ಲೇ ಇದ್ದಾಳೋ ಯಾರದ್ರೂ ಹೊರಗೆ ಕರೆದುಕೊಂಡು ಹೋಗಿದ್ದಾರೋ ನೋಡೋಣ ನಡಿ.

ಮೂವರೂ ಮನೆಯೊಳಗೆ ಬಂದರೆ ಸೋಫಾದಲ್ಲಿ ಪೇಪರ್ ಓದುತ್ತ ಕುಳಿತಿದ್ದ ತಾತನನ್ನು ಒರಗಿಕೊಂಡು ನಿಂತಿದ್ದ ನಿಶಾ ಕಣ್ಣು ಬಾಯನ್ನು ತೆರೆದುಕೊಂಡು ಟಿವಿಯೊಳಗೆ ಮುಳುಗಿ ಹೋಗಿದ್ದಳು. ಒಂದ್ನಿಮಿಷ ಸಮಯದಲ್ಲೇ ಅವಳ ಮುಖದಲ್ಲಿ ಕೋಪ....ಆಕ್ರೋಶ.....ಭಯ...
ಖುಷಿ ಹೀಗೇ ಹಲವಾರು ಭಾವನೆಗಳು ಮೂಡುತ್ತಿರುವುದನ್ನು ಮೂವರೂ ನೋಡುತ್ತಿದ್ದರೆ ನಿಶಾ ಅವರ ಕಡೆ ತಿರುಗಿಯೂ ಕೂಡ ನೋಡದೆ ಟಿವಿಯಲ್ಲೇ ಮುಳುಗಿದ್ದಳು.

ನೀತು.....ಇದೇನ್ರಿ ನಿಮ್ಮ ಚಿಲ್ಟಾರಿ ಈ ಕಡೆ ತಿರುಗಿಯೂ ನೋಡ್ತಿಲ್ಲ.

ನಿಧಿ.......ಅಮ್ಮ ಟಿವಿ ಕಡೆ ನೋಡಿ ಅಲ್ಲಿ ಜಿಂಕೆಯೊಂದನ್ನು ಹುಲಿ ಅಟ್ಟಿಸಿಕೊಂಡು ಹೋಗ್ತಿದೆಯಲ್ಲ ಅದನ್ನೇ ಬಾಯ್ತೆರೆದುಕೊಂಡು ನೋಡುತ್ತ ಸುತ್ತಮುತ್ತ ಏನಿದೆ ಅನ್ನುವುದನ್ನೂ ಮರೆತಿದ್ದಾಳೆ.

ನೀತು......ಪ್ರಾಣಿಗಳೆಂದರೆ ಇವಳಿಗದೇನು ಪಂಚಪ್ರಾಣವೋ.

ಹರೀಶ......ಮುಂದಿನ ಶುಕ್ರವಾರ ಸರ್ಕಾರದ ಯಾವುದೋ ಒಂದು ಇಲಾಖೆಯಲ್ಲಿನ ಬಡ್ತಿಗಾಗಿ ನಮ್ಮ ಶಾಲೆಯಲ್ಲಿ ಪರೀಕ್ಷೆ ನಡೀತಿದೆ ಹಾಗಾಗಿ ಅಂದು ಶಾಲೆಗೆ ರಜೆಯಿರುತ್ತೆ. ಒಟ್ಟು ಮೂರು ದಿನ ರಜೆ ಇರುತ್ತಲ್ಲ ಮಕ್ಕಳಿಗೊಂದು ದಿನ ಕಾಲೇಜಿಗೆ ರಜೆ ಹಾಕಿಸಿ ನಾವ್ಯಾಕೆ ಮೈಸೂರಿಗೆ ಹೋಗಿ ಬರಬಾರದು.

ನೀತು......ಮೈಸೂರಿಗಾ ?

ರಜನಿ ಹತ್ತಿರ ಬಂದು.......ಏನಮ್ಮ ಇದು ನಿಮ್ಮ ಚರ್ಚೆ ಫ್ಯಾಮಿಲಿ ಸೀಕ್ರೆಟ್ ಮೀಟಿಂಗಾ ನಮಗೆ ಹೇಳೋ ಹಾಗಿಲ್ಲವಾ ?

ನೀತು ಗೆಳತಿಯ ಭುಜಕ್ಕೆ ಗುದ್ದಿದರೆ ನಿಧಿ.......ಅಂಟಿ ಮುಂದಿನವಾರ ಅಪ್ಪ ಮೈಸೂರಿಗೆ ಹೋಗಿಬರೋಣ ಅಂತಿದ್ದಾರೆ.

ರಜನಿ......ಮೈಸೂರಿಗಾ ಅಲ್ಯಾರಿದ್ದಾರೆ ?

ನೀತು......ನನಗೇನು ಗೊತ್ತು.

ಹರೀಶ......ನಾವು ಇದಕ್ಕೂ ಮುಂಚೆ ಮೈಸೂರಿಗೆ ಹೋಗಿಲ್ಲ ಅಲ್ಲಿನ ಕೆ.ಆರ್.ಎಸ್. ಡ್ಯಾಂ....ಚಾಮುಂಡಿಬೆಟ್ಟ......ಅರಮನೆ ಎಲ್ಲಕ್ಕಿಂತ ಮುಖ್ಯವಾಗಿ ನನ್ನ ಮುದ್ದಿನ ಮಗಳಿಗೆ ಝೂ ತೋರಿಸಬೇಕಿದೆ.

ನೀತು.....ಎಲ್ಲಿಗಾದ್ರೂ ಕರ್ಕೊಂಡ್ ಹೋಗಿ ಆದರೆ ಝೂ ಒಳಗಡೆ ಹೋಗಿ ಹೊರಗೆ ಬರುವವರೆಗೂ ನಿಮ್ಮ ಮುದ್ದಿನ ಮಗಳ ಎಲ್ಲಾ ಜವಾಬ್ದಾರಿಯೂ ನಿಮ್ಮದೇ ನನಗೂ ಅವಳಿಗೆ ಆ ಜಾಗದಲ್ಯಾವ ಸಂಬಂಧವೂ ಇಲ್ಲ.

ಸುಮ......ನೀತು ಹಾಗ್ಯಾಕೇ ಹೇಳ್ತೀಯಾ ?

ನೀತು.....ನೀವೂ ನೋಡಿಲ್ಲವಾ ಅತ್ತಿಗೆ ಮನೆಯಲ್ಲೇ ನಾಯಿ...ಗಿಣಿ ಗುಬ್ಬಚ್ಚಿ ಎಲ್ಲವನ್ನೂ ಸೇರಿಸಿಕೊಂಡಿರ್ತಾಳೆ. ಅಲ್ನೋಡಿ ಟಿವಿಯಲ್ಲಿ ಪ್ರಾಣಿಗಳನ್ನು ನೋಡುತ್ತ ನಮ್ಮ ಕಡೆ ತಿರುಗಿಯೂ ನೋಡ್ತಿಲ್ಲವಲ್ಲ. ಇನ್ನು ಝೂ ಒಳಗೆಷ್ಟು ಪ್ರಾಣಿಗಳಿರುವುದಿಲ್ಲ ಅಲ್ಲಿಂದ ಇವಳಾಚೆಗೆ ಬರ್ತಾಳೆ ಅಂತ ನನಗೆ ಸ್ವಲ್ಪವೂ ನಂಬಿಕೆಯಿಲ್ಲ ನನ್ನನ್ನೂ ಒಂದು ಬೋನಿನೊಳಗೆ ಕೂರಿಸಿಬಿಡಿ ಅಂತ ಹೇಳಿದ್ರೂ ಆಶ್ಚರ್ಯವಿಲ್ಲ.

ಅವಳ ಮಾತಿಗೆ ಎಲ್ಲರೂ ನಗುತ್ತಿದ್ದಾಗ ಟಿವಿ ಹತ್ತಿರಕ್ಕೋಡಿದ ನಿಶಾ ಅದಕ್ಕೆ ಎಚ್ಚರಿಕೆ ನೀಡುವಂತೆ ಬೆರಳು ತೋರಿಸುತ್ತ......ಏಯ್ ಏತ್ ಕೊತ್ತಿನಿ.....ಪಪ್ಪ ನೋಲು ಬತ್ತಿಲ್ಲ.....ಎಲ್ಲ ಹೋತು ಬತ್ತಿಲ್ಲ.

ನೀತು......ನೋಡಿದ್ರಾ ಅತ್ತಿಗೆ ಪ್ರೋಗ್ರಾಂ ನಡುವೆ ಜಾಹೀರಾತು ಬಂದಿದ್ದಕ್ಕೇ ಹೀಗಾಡ್ತಾಳೆ ಇನ್ನು ಝೂ ಒಳಗೆ ಹೇಗಾಡ್ತಾಳೋ
.
 
Top