hsrangaswamy
Active Member
- Messages
- 507
- Reaction score
- 58
- Points
- 28
ಶಿಲ್ಪ ಇವತ್ತು ಬಂದಿದ್ದಾಳೆ ನಾಳೆ ಅಥವ ಇವತ್ತು ರಾತ್ರಿ ನೀತು ಬರುವಳೆ
Very nice narration..!!ಭಾಗ 152
ಬೆಳಿಗ್ಗೆ ನೀತು ತಿಂಡಿಗೆ ರೆಡಿ ಮಾಡುತ್ತಿದ್ದಾಗ ರಶ್ಮಿ ಜೊತೆಯಲ್ಲಿ ಬಂದ ಮಗಳನ್ನು ನೋಡಿ.....ಏನಿವಳು ಇಷ್ಟು ಬೇಗ ಎದ್ದಿದ್ದಾಳೆ ?
ರಶ್ಮಿ.....ಮಮ್ಮ ಇವಳು ಎದ್ದು ಸ್ವಲ್ಪ ಹೊತ್ತಾಯಿತು ಅಪ್ಪನ ಜೊತೆ ಸ್ವಲ್ಪ ಆಟವಾಡಿ ಪಪ್ಪ ಬೇಕು ಎಂದುದ್ದಕ್ಕೆ ನಾನಿಲ್ಲಿಗೆ ಕರೆತಂದೆ.
ನಿಶಾ ಹಾಲಿನಲ್ಲೆಲ್ಲಾ ನೋಡಿದರೂ ಅಪ್ಪ ಕಾಣಿಸದೆ ಅಮ್ಮನೆದುರು ನಿಂತು ಕೈ ಅಳ್ಳಾಡಿಸುತ್ತ......ಮಮ್ಮ ಪಪ್ಪ ಲಿಲ್ಲ....ಪಪ್ಪ ಲಿಲ್ಲ.
ನೀತು ಮಗಳ ಕೆನ್ನೆಗೆ ಮುತ್ತಿಟ್ಟು.....ಪಪ್ಪ ಮೇಲೆ ರೆಡಿಯಾಗುತ್ತಿದೆ ಚಿನ್ನಿ ರಶ್ಮಿ ಇವಳನ್ನು ಮೇಲೆ ಕರೆದುಕೊಂಡೋಗಿ ಬಿಡಮ್ಮ ಇವಳಿಗೆ ಅಪ್ಪನನ್ನು ನೋಡದಿದ್ದರೆ ಬೆಳಿಗ್ಗೆ ಆಗಲ್ಲವೇನೋ.
ಐದು ನಿಮಿಷದಲ್ಲೇ ರಶ್ಮಿ ಹಿಂದಿರುಗಿದಾಗ......ಯಾಕೆ ಚಿನ್ನಿ ಅಲ್ಲೇ ಉಳಿದುಬಿಟ್ಟಳಾ ? ಬಾ ನಿನಗೆ ಹಾರ್ಲಿಕ್ಸ್ ಮಾಡಿಕೊಡ್ತೀನಿ ನೀನೂ ಗಿರೀಶನ ಜೊತೆ ಮಾರ್ಷಲ್ ಆರ್ಟ್ಸ್ ಕಲಿಯುವುದಕ್ಕೆ ಹೋಗಬೇಕು ಕಣಮ್ಮ. ಹೆಣ್ಣು ಮಕ್ಕಳಿಗೆ ತಮ್ಮ ಆತ್ಮರಕ್ಷಣೆ ಮಾಡಿಕೊಳ್ಳುವ ಕಲೆ ತಿಳಿದಿರಬೇಕು ಯಾಕೆ ನಿನಗೆ ಇಷ್ಟವಿಲ್ಲವಾ ?
ರಶ್ಮಿ......ಮಮ್ಮ ನಾನು ಸ್ನಾನ ಮಾಡಿಕೊಂಡು ಬಂದು ಕುಡಿತೀನಿ ಈಗಿನ್ನೂ ಬ್ರಷ್ ಮಾಡಿಲ್ಲ. ನಾನು ಗಿರೀಶನನ್ನ ಕೇಳಿದೆ ಆದರೆ ಜಾನಿ ಅಂಕಲ್ ಹುಡುಗಿಯರಿಗೆ ಹೇಳಿಕೊಡಲ್ಲ ಅಂದುಬಿಟ್ಟ ನೀವಾದರೂ ಜಾನಿ ಅಂಕಲ್ಲಿಗೆ ಹೇಳಿ ಮಮ್ಮ ನಾನೂ ಕಲಿಯಬೇಕು.
ನೀತು.....ಇವತ್ತೇ ಫೋನ್ ಮಾಡಿ ಮಾತನಾಡ್ತೀನಿ ಬರಲಿ ಗಿರೀಶ ತಾಳು ಹುಡುಗಿಯರೆಂದರೆ ಸುಮ್ಮನೆ ಅಂದುಕೊಂಡಿದ್ದಾನಾ ? ಚಿನ್ನಿ ಎಲ್ಲಿ ಅವರಪ್ಪನ ಜೊತೆಯೇ ಉಳಿದುಬಿಟ್ಟಳಾ ?
ರಶ್ಮಿ.....ಅಂಕಲ್ ರೆಡಿಯಾಗುತ್ತಿದ್ದರು ಆದರೆ ಚಿನ್ನಿ ಅವರನ್ನು ಜೊತೆ ಸೇರಿಸಿಕೊಂಡು ಮಲಗಿಬಿಟ್ಟಿದ್ದಾಳೆ.
ನೀತು.....ನೀನು ಹೋಗಿ ಸ್ನಾನ ಮುಗಿಸಿ ಬಾ ಅಪ್ಪ ಮಗಳಿಗೆ ನಾನು ಗ್ರಹಚಾರ ಬಿಡಿಸಿ ಬರುತ್ತೀನಿ.
ನೀತು ಮಹಡಿಗೆ ಹೋಗುವಾಗ ತನ್ನೊಂದಿಗೆ ಕುಕ್ಕಿ ಮರಿಯನ್ನು ಸಹ ಕರೆದೊಯ್ದರೆ ರೂಮಲ್ಲಿ ಅಪ್ಪನ ಮೇಲೆ ಕಾಲು ಚಾಚಿಕೊಂಡು ನಿಶಾ ಆರಾಮವಾಗಿ ಮಲಗಿದ್ದಳು. ಅದನ್ನು ನೋಡಿ ಮಗಳ ಮೇಲೆ ಪ್ರೀತಿ ಉಕ್ಕಿಬಂದರೂ ನೀತು ಕುಕ್ಕಿ ಮರಿಯನ್ನು ಹಾಸಿಗೆ ಮೇಲೆ ಬಿಟ್ಟಳು. ಪುಟ್ಟ ಟಾಯ್ ಪಾಮಿ ಅತ್ತಿತ್ತ ನೋಡುತ್ತ ನಿಶಾಳನ್ನು ಕಂಡೊಡನೇ ಅವಳತ್ತ ಓಡಿ ಕೈ ನೆಕ್ಕುತ್ತ ಮೆಲುದನಿಯಲ್ಲಿ ಬೌ..ಬೌ...ಎಂದು ಆಕೆ ಮುಂದೆ ಬೊಗಳಿತು. ನಿಶಾ ಕಣ್ತೆರೆದು ಕುಕ್ಕಿ ಮರಿಯನ್ನು ನೋಡಿ ಮುಗುಳ್ನಗುತ್ತ ಅದನ್ನೂ ತನ್ನೊಡನೆ ಸೇರಿಸಿಕೊಂಡು ಮಲಗಿದಳು.
ನೀತು.....ರೀ ನೀವು ಸ್ನಾನ ಮಾಡಿದ ಮೇಲೂ ಮಲಗಬೇಕ ನಿಮ್ಮ ಪುಟ್ಟ ಕೋತಿಮರಿ ಜೊತೆ ಸೇರಿ ನೀವೂ ಗಡವಾ ಕೋತಿಯ ರೀತಿ ಆಗುತ್ತಿದ್ದೀರ. ಚಿನ್ನಿ ಏಳಮ್ಮ ಪುಟ್ಟಿ ನಿನಗೆ ಚಾನ ಮಾಡಿಸ್ತೀನಿ.
ನಿಶಾ ಕಣ್ಮುಚ್ಚಿಕೊಂಡೇ.....ಮಮ್ಮ ಚಾನ ಬೇಲ ನಿನ್ನಿ ಬೇಕು.
ನೀತು ಮಗಳಿಗೆ ಮೆಲ್ಲನೆ ಎರಡು ತಟ್ಟಿ ಎತ್ತಿಕೊಂಡು.....ರೀ ನೀವು ಕುಕ್ಕಿ ಮರಿ ಜೊತೆ ಕೆಳಗೆ ಹೋಗಿರಿ ನಾನಿವಳನ್ನು ರೆಡಿ ಮಾಡಿಸಿ ಕರೆತರುತ್ತೀನಿ.
ಹರೀಶ ಕುಕ್ಕಿಯನ್ನೆತ್ತಿಕೊಂಡು ಹೆಂಡತಿ ಕುಂಡೆ ಮೇಲೆ ಎರಡೇಟನ್ನು ಭಾರಿಸಿ.....ಇದು ನೆಮ್ಮದಿಯಾಗಿ ಮಲಗಿದ್ದ ನನ್ನ ಮಗಳಿಗೆ ನೀನು ತಟ್ಟಿದೆಯಲ್ಲ ಅದಕ್ಕೆ......ಎಂದರೆ ನೀತು ಗಂಡನತ್ತ ಗುರಾಯಿಸಿ ನೋಡಿದರೆ ನಿಶಾ ಕಿಲಕಿಲನೆ ನಕ್ಕಳು.
ನಿಶಾಳಿಗೆ ಸ್ನಾನ ಮಾಡಿ ರೆಡಿ ಮಾಡುತ್ತಿದ್ದಾಗ ರೂಮಿನೊಳಗೆ ಬಂದ ಸುರೇಶನನ್ನು ತಬ್ಬಿಕೊಂಡು ಹಣೆಗೆ ಮುತ್ತಿಟ್ಟ ನೀತು ಹುಟ್ಟುಹಬ್ಬದ ಶುಭಾಷಯ ಹೇಳಿದಳು. ಸುರೇಶ ಅಮ್ಮನಿಗೆ ನಮಸ್ಕರಿಸಿ ಕೆನ್ನೆಗೆ ಮುತ್ತಿಟ್ಟು ತಂಗಿಯನ್ನು ಸಹ ಅಪ್ಪಿ ಮುತ್ತಿಟ್ಟನು.
ನೀತು.....ಚಿನ್ನಿ ಇವತ್ತು ಅಣ್ಣನ ಬರ್ತಡೇ ನೀನೂ ಅಣ್ಣನಿಗೆ ವಿಶ್ ಮಾಡು ಪುಟ್ಟಿ.
ಪುಟ್ಟವಳಾದ ನಿಶಾಳಿಗೆ ಅದೇನೂ ಅರ್ಥವಾಗದಿದ್ದರೂ ಅಮ್ಮನಂತೆ ತಾನೂ ಅಣ್ಣನನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತಿಟ್ಟು ಕಚ್ಚಿಬಿಟ್ಟಳು.
ಸುರೇಶ......ನೋಡಮ್ಮ ಇವಳು ಯಾವಾಗಲೂ ಹೀಗೇ ಮಾಡ್ತಾಳೆ ಮೊದಲು ಮುತ್ತು ಕೊಟ್ಟು ಆಮೇಲೆ ಕಚ್ತಾಳೆ.
ನೀತು.......ನಿನ್ನ ಪುಟ್ಟ ತಂಗಿ ಅಲ್ಲವೇನೋ ಅವಳು ನಿನ್ನ ಜೊತೆ ಆಡದೆ ಇನ್ಯಾರ ಜೊತೆ ಆಡ್ತಾಳೆ ಹೇಳು ನೋಡಲ್ಲಿ ಖುಷಿಯಿಂದ ಎಷ್ಟು ನಗ್ತಿದ್ದಾಳೆ.
ಸುರೇಶ.....ತುಂಬ ಮಳ್ಳಿ ಕಣಮ್ಮ ಇವಳು ಸರಿ ನಾನೀಗ ತಿಂಡಿಯ ನಂತರ ಅಣ್ಣ ಅಕ್ಕನ ಜೊತೆ ಟೌನಿಗೆ ಹೋಗಿ ಬರ್ತೀನಿ.
ನೀತು ಮಗನಿಗೆ ಹೊಸ ಬಟ್ಟೆ ಕೊಡುತ್ತ......ಮೊದಲು ಇದನ್ನ ನೀನು ಹಾಕಿಕೋ ಹುಟ್ಟಿದ ದಿನ ಯಾಕೆ ಹಳೆ ಬಟ್ಟೆಯನ್ನೇ ಹಾಕಿದ್ದೀಯ ?
ಸುರೇಶ......ಥ್ಯಾಂಕ್ಸ್ ಅಮ್ಮ ಹೊಸ ಬಟ್ಟೆ ತುಂಬ ಚೆನ್ನಾಗಿದೆ ನಾನು ಈಗಲೇ ಹಾಕಿಕೊಂಡು ಬರ್ತೀನಿ.
ಗಿರೀಶ ಮತ್ತು ಅನುಷ ರೂಮಿನೊಳಗೆ ಬಂದು ಸುರೇಶನಿಗೆ ಬರ್ತಡೆ ವಿಶ್ ಮಾಡಿದರೆ ನಿಶಾ ಹಿರಿಯಣ್ಣನ ಹೆಗಲನ್ನೇರಿ ಅವನ ಜೊತೆಗೇ ಕೆಳಮನೆಗೆ ಹೋದಳು.
ನೀತು......ಅನು ಸಂಜೆ ಎರಡು ಕೇಕ್ ಅವರೇ ತಲುಪಿಸುತ್ತಾರೋ ಅಥವ ನಾವೇ ಹೋಗಿ ತರಬೇಕೋ ?
ಅನುಷ.....ನಾನೀವತ್ತು ಫ್ಯಾಕ್ಟರಿಗೆ ಹೋಗುತ್ತಿಲ್ಲ ಅಕ್ಕ ಇನ್ನು ಸ್ವಲ್ಪ ಹೊತ್ತಿನ ಬಳಿಕ ನಾನು ರಜನಿ ಅಕ್ಕ ಮಾರ್ಕೆಟ್ಟಿಗೆ ಹೋಗ್ತಿದ್ದೀವಿಲ್ಲ ಬರುವಾಗ ಕೇಕನ್ನೂ ತರ್ತೀವಿ. ನಡೀರಿ ಎಲ್ಲರು ತಿಂಡಿಗೆ ನಿಮ್ಮನ್ನೇ ಕಾಯ್ತಾಯಿದ್ದಾರೆ.
ಸುರೇಶ ಕೆಳಗೆ ಬಂದು ಅಪ್ಪ ಮತ್ತು ಹಿರಿಯರಿಗೆ ನಮಸ್ಕರಿಸಿ ಅವರ ಆಶೀರ್ವಾದ ಪಡೆದರೆ ಎಲ್ಲರೂ ಅವನಿಗೆ ವಿಶ್ ಮಾಡಿದರು. ಆಗ ಸುರೇಶನ ಕೈಗೊಂದು ಕೀ ಕೊಟ್ಟ ಪ್ರತಾಪ್....ಇದು ನನ್ನ ಅನುಷ ಆಂಟಿಯ ಕಡೆಯಿಂದ ನಿನ್ನ ಹುಟ್ಟುಹಬ್ಬದ ಉಡುಗೊರೆ.
ಸುರೇಶ.....ಚಿಕ್ಕಪ್ಪ ಈ ಕೀ ಯಾವುದರದ್ದು ?
ಪ್ರತಾಪ್.....ನೀನೆ ಹೊರಗೆ ಹೋಗಿ ನೋಡು.
ಮನೆಯಂಗಳದಲ್ಲಿ ಎರಡು ರೇಸ್ ಮಾಡುವಂತ ಸೈಕಲ್ ನಿಂತಿದ್ದು ಅದನ್ನು ನೋಡಿ ಸುರೇಶನ ಜೊತೆ ಗಿರೀಶನೂ ಖುಷಿಯಾದನು.
ಗಿರೀಶ......ಚಿಕ್ಕಪ್ಪ ನಾನೇ ಈ ರೀತಿ ಸೈಕಲ್ ತೆಗೆದುಕೊಳ್ಳಬೇಕೆಂದು ಯೋಚಿಸುತ್ತಿದ್ದೆ ಅಷ್ಟರಲ್ಲಿ ನೀವೇ ಕೊಟ್ಟಿದ್ದೀರ ಥಾಂಕ್ಯೂ.
ಪ್ರತಾಪ್......ಅಣ್ಣ ನಿಮಗೆ ಮೊದಲು ಸೈಕಲ್ ತೆಗೆದುಕೊಟ್ಟಾಗ ಈ ರೀತಿಯ ರೇಸ್ ಸೈಕಲ್ ತಂದಿರಲ್ಲಿಲ್ಲ ಅದನ್ನು ಅಂಗಡಿಗೇ ವಾಪಸ್ ಮಾಡಿ ನೆನ್ನೆ ದಿನ ನಾನು ಅಣ್ಣ ಇದನ್ನು ತಂದೆವು. ನಾಳೆಯಿಂದಲೇ ನೀವು ಮಾರ್ಷಲ್ ಆರ್ಟ್ಸ್ ತರಬೇತಿಗೆ ಇದರಲ್ಲೇ ಹೋಗಬೇಕು. ನೀವಲ್ಲಿ ರನ್ನಿಂಗ್ ಮಾಡುವ ಬದಲು ಇಲ್ಲಿಂದಲೇ ಫಾಸ್ಟಾಗಿ ಸೈಕಲ್ ಹೊಡೆದುಕೊಂಡು ಹೋದರೆ ನಿಮ್ಮ ವ್ಯಾಯಾಮ ಆಗಿಹೋಗುತ್ತೆ.
ನೀತು.....ಸರಿಯಾಗಿ ಯೋಚಿಸಿದೆ ಪ್ರತಾಪ್ ನೀವು ಊರಿನಾಚೆ ರೇಸ್ ಮಾಡುತ್ತ ಸೈಕಲ್ ಹೊಡೆದರೆ ವ್ಯಾಯಾಮದ ಜೊತೆ ತಿಂದಿದ್ದು ಕರಗುತ್ತೆ. ಇವರಿಬ್ಬರಿಗೆ ಕೊಟ್ಟೆ ನನ್ನ ಸೊಸೆಗೇನೂ ಇಲ್ಲವಾ ?
ರಶ್ಮಿ ಕತ್ತಿನ ಚೈನ್ ತೋರಿಸುತ್ತ......ಅಂಕಲ್ ಇದನ್ನು ನನಗೆ ಬೆಳಿಗ್ಗೆ ಮೊದಲಿಗೆ ಕೊಟ್ಟರು.
ನೀತು....ಅಲ್ನೋಡು ನನ್ನ ಲಿಲಿಪುಟ್ ನನಗೇನೂ ಕೊಡಲಿಲ್ಲ ಅಂತ
ಅವರಪ್ಪನಿಗೆ ಕಂಪ್ಲೇಂಟ್ ಮಾಡ್ತಿದ್ದಾಳೆ.
ನಿಶಾ ಅಪ್ಪನ ಪಕ್ಕ ಸೋಫಾದಲ್ಲಿ ನಿಂತು ಪ್ರತಾಪನತ್ತ ಕೈ ತೋರಿಸಿ ಚಾಡಿ ಹೇಳುತ್ತ ಮುಖ ಸಪ್ಪಗೆ ಮಾಡಿಕೊಂಡಿದ್ದಳು.
ಹರೀಶ......ಪ್ರತಾಪ್ ನೀನು ನನ್ನ ಬಂಗಾರಿಗೆ ಗಿಫ್ಟ್ ಕೊಡಲಿಲ್ಲವಲ್ಲ ಅದಕ್ಕೆ ನಾನು ಚಿನ್ನಿ ನಿನ್ನ ಜೊತೆ ಮಾತನಾಡಲ್ಲ ಅಲ್ಲವಾ ಚಿನ್ನಿ.
ನಿಶಾ ಹೂಂ ಎಂದು ತಲೆಯಾಡಿಸುತ್ತ ತನ್ನನ್ನೆತ್ತಿಕೊಳ್ಳಲು ಬಂದಂತ ಪ್ರತಾಪನಿಗೆ ಸಿಗದೆ ಕೊಸರಾಡುತ್ತ ಅಪ್ಪನ ಹಿಂದೆ ನಿಂತಳು.
ಪ್ರತಾಪ್.....ಚಿನ್ನಿಯ ಗಿಫ್ಟ್ ಇಷ್ಟರಲ್ಲಾಗಲೇ ಬರಬೇಕಿತ್ತು ಅದ್ಯಾಕೆ ಇನ್ನೂ ಬಂದಿಲ್ಲವೋ ಗೊತ್ತಿಲ್ಲ.
ಅಶೋಕ.....ಅದನ್ಯಾರು ತರುತ್ತಿದ್ದಾರೋ ಅದೇನು ಬೇರೆಯವರು ತರುವಂತಹ ಗಿಫ್ಟು ?
ರವಿ.....ರಾತ್ರಿ ನನ್ನ ಅಶೋಕನ ಜೊತೆಯಲ್ಲೇ ಇದ್ದೆ ಆಗ ನಮಗೇನು ಹೇಳಲ್ಲಿಲ್ಲವಲ್ಲ ನೀನು.
ಪ್ರತಾಪ್ ಯಾರಿಗೋ ಫೋನ್ ಮಾಡಿ ಮಾತನಾಡಿ.....ಅಣ್ಣ ಇನ್ನು ಹತ್ತು ನಿಮಿಷದಲ್ಲಿ ನಮ್ಮ ಚಿನ್ನಿಯ ಗಿಫ್ಟೂ ಬರುತ್ತದೆ.
ರಜನಿ......ಲೇ ಮಳ್ಳಿ ನೀನೂ ನನಗೇನು ಹೇಳಲಿಲ್ಲ.
ಅನುಷ......ಅಕ್ಕ ನಾನೆಲ್ಲಿ ಹೇಳಿಬಿಡುತ್ತೀನೋ ಅಂತ ಇವರು ನನ್ನ ಕೈಯಿಂದ ಮೊದಲೇ ಪ್ರಾಮಿಸ್ ತೆಗೆದುಕೊಂಡಿದ್ದರು.
ಹತ್ತು ನಿಮಿಷದ ನಂತರ ಹೊರಗೆ ವ್ಯಾನ್ ನಿಂತಾಗ ಪ್ರತಾಪ್....ಚಿನ್ನಿ ಗಿಫ್ಟ್ ಕೂಡ ಬಂತು ನಡೀರಿ.....ಎಂದು ಅಣ್ಣನಿಂದ ಅವಳನ್ನು ತನ್ನ ತೋಳಿನಲ್ಲೆತ್ತಿಕೊಂಡು ಮನೆಯಾಚೆ ಹೋದರೆ ಮಿಕ್ಕವರೂ ಅವನ ಹಿಂದೆ ಹೊರಬಂದರು. ವ್ಯಾನಿನಿಂದ ಕೆಲವರು ಉಯ್ಯಾಲೆ...ಟಕ್ಕಾ ಟಿಕ್ಕಿ....ಜಾರುಗುಪ್ಪೆ ಹಾಗು ಇನ್ನೂ ಮೂರ್ನಾಲ್ಕು ತರಹದ ಆಟದ ಸಾಮಾನುಗಳನ್ನು ಕೆಳಗಿಳಿಸುತ್ತಿದ್ದರು.
ಅಶೋಕ.....ಇದಾ ನಿನ್ನ ಗಿಫ್ಟು ಇದನ್ನು ಹಾಕಲು ಜಾಗ ಎಲ್ಲಿದೆ ?
ಪ್ರತಾಪ್.....ನೆನ್ನೆ ತಾನೇ ಪಕ್ಕದ ಸೈಟು ಕ್ಲೀನಾಗಿದೆಯಲ್ಲ ಅಣ್ಣ ಅಲ್ಲೆ ಇದನ್ನೆಲ್ಲಾ ಹಾಕಿಸಿ ಬಿಡುವೆ.
ರವಿ.....ಆ ಸೈಟ್ ಯಾರದ್ದೋ ಕಣೋ ಅವರು ಬಂದು ನೋಡಿದರೆ ಗಲಾಟೆ ಮಾಡ್ತಾರೆ. ನೆನ್ನೆ ಮೊನ್ನೆಯಷ್ಟೇ ಕ್ಲೀನ್ ಮಾಡಿಸಿ ಸುತ್ತಲೂ ಕಾಂಪೌಂಡ್ ಸಹ ಹಾಕಿಸಿದ್ದಾರೆ ಅಲ್ಲಿ ಬೇಡ ಕಣೋ.
ಪ್ರತಾಪ್.....ಅಣ್ಣ ಪಕ್ಕದ ಸೈಟು ನನ್ನ ಪರಿಚಯದವರದ್ದೇ ಅವರ ಮಗಳಿಗೆ ಮದುವೆಯ ಗಿಫ್ಟ್ ನೀಡುವುದಕ್ಕಾಗಿ ಇದನ್ನು ಖರೀಧಿಸಿ ಕೊಟ್ಟಿದ್ದಾರೆ. ಅವರ ಮಗಳು ಅಳಿಯ ಯೂರೋಪಿನಲ್ಲಿದ್ದಾರೆ ಈ ಕಡೆ ಇನ್ನೂ ಐದತ್ತು ವರ್ಷ ಬರುವುದಿಲ್ಲ. ನಾನು ಅವರೆಲ್ಲರ ಹತ್ತಿರ ಮಾತನಾಡಿ ಪರ್ಮಿಶನ್ ತೆಗೆದುಕೊಂಡೇ ಈ ನಿರ್ಧಾರ ಮಾಡಿದ್ದು. ಇನ್ಮುಂದೆ ಚಿನ್ನಿ ಪಾರ್ಕಿನಲ್ಲಿ ಸರದಿಗಾಗಿ ಕಾಯುವ ಅಗತ್ಯವಿಲ್ಲ ಇಲ್ಲಿ ಎಷ್ಟು ಹೊತ್ತಾದರೂ ಆಡಬಹುದು.
ಮೂವರು ಅಣ್ಣಂದಿರೂ ತಮ್ಮನ ಬೆನ್ನಿಗೆ ಗುದ್ದಿ ಅವನಿಗೆ ಶಭಾಷ್ ಕೊಟ್ಟರೆ ಉಯ್ಯಾಲೆ....ಜಾರುಗುಪ್ಪೆ ನೋಡಿ ನಿಶಾಳ ಆನಂದಕ್ಕೆ ಕೊನೆಯಿಲ್ಲದಂತಾಗಿ ಚಪ್ಪಾಳೆ ತಟ್ಟುತ್ತ ಕುಣಿದಾಡುತ್ತಿದ್ದಳು.
ನೀತು.....ಇದರಲ್ಲಿ ಮಕ್ಕಳು ಮಾತ್ರ ಕೂರಬೇಕಾ ಅಥವ ನಾವೂ ಕೂರಬಹುದಾ ?
ಹರೀಶ....ಬಿ ನಿಮ್ಮಜ್ಜಿನೂ ಕೂರಬಹುದು ಅದು ಮಕ್ಕಳಿಗೆ ಕಣೆ.
ಪ್ರತಾಪ್....ಇಲ್ಲ ಅಣ್ಣ ಎಲ್ಲವೂ ಸಾಲಿಡ್ ಸ್ಟೀಲಿನಿಂದ ಮಾಡಿದ್ದಾರೆ ಮೇಲೆ ಒಳ್ಳೆ ಗುಣಮಟ್ಟದ ಪ್ಲಾಸ್ಟಿಕ್ ಹಾಕಲಾಗಿದೆ. ಸುಮಾರು 100 ಕೆಜಿಗೂ ಅಧಿಕ ತಡೆದುಕೊಳ್ಳುವ ಸಾಮರ್ಥ್ಯವಿದೆ.
ನೀತು ಗಂಡನಿಗೆ ನಾಲಿಗೆ ತೋರಿಸಿ ಅಣಕಿಸಿದರೆ ಸುರೇಶಣ್ಣನ ಕೈ ಹಿಡಿದು ನಿಂತಿದ್ದ ನಿಶಾ ಆಟದ ಸಾಮಾನುಗಳನ್ನು ವ್ಯಾನಿನಿಂದ ಕೆಳಗಿಳಿಸುವುದನ್ನೇ ಕುತೂಹಲದಿಂದ ನೋಡುತ್ತಿದ್ದಳು.
ಅನುಷ....ಹಾಗಿದ್ದರಿನ್ನೂ ಸೂಪರ್ ಚಿನ್ನಿ ಜೊತೆ ನಾನೂ ಉಯ್ಯಾಲೆ
ಮೇಲೆ ಆರಾಮವಾಗಿ ಕೂರಬಹುದು.
ರಜನಿ......ಲೇ ನಿನಗೆ ಮದುವೆಯಾಗಿದೆ ಕಣೆ ಇನ್ನೂ ಚಿಕ್ಕ ಹುಡುಗಿ ರೀತಿ ಆಡುತ್ತೀಯಲ್ಲ.
ಅನುಷ.....ನನಗೆ ಮಾದುವೆಯಾಗಿದೆ ಎಂಬ ಕಾರಣಕ್ಕೆ ಉಯ್ಯಾಲೆ ಮೇಲೆ ಕೂರಬಾರದ ಅಕ್ಕ ನಾನಂತು ಆಡೇ ಆಡ್ತೀನಿ ನೀವೆಲ್ಲರೂ ಬೇಕಿದ್ದರೆ ಕೂರಬೇಡಿ.
ರಜನಿ.....ಅದ್ಯಾಕೆ ನಾನೂ ಚಿನ್ನಿ ಜೊತೆ ಕೂರುತ್ತೀನಿ.
ಇವರ ಮಾತಿನ ಕಡೆ ಗಮನವನ್ನೇ ಹರಿಸದೆ ಅಪ್ಪನ ತೋಳಿಗೇರಿದ್ದ ನಿಶಾ ಆಟದ ಸಾಮಾನುಗಳನ್ನು ಫಿಟ್ಟಿಂಗ್ ಮಾಡುತ್ತಿರುವ ಕೆಲಸದ ಕಡೆಯೇ ಗಮನ ನೆಟ್ಟಿದ್ದಳು. ಮಗಳ ಗಮನವೆಲ್ಲಾ ಅತ್ತ ಇರುವುದು ಗಮನಿಸಿದ ಶೀಲಾ ಮೂವರು ಮಕ್ಕಳಿಗೆ ಸನ್ನೆ ಮಾಡಿ ಪಟ್ಟಣದ ಕಡೆ ಹೋಗುವಂತೇಳಿ ಕಳುಹಿಸಿದಳು. ಎಲ್ಲಾ ಆಟದ ಸಾಮಾನುಗಳನ್ನು ಫಿಟ್ಟಿಂಗ್ ಮಾಡಿದ ಕೆಲಸಗಾರರು ಈ ದಿನ ಸಿಮೆಂಟ್ ಒಣಗಿದರೆ ಸಾಕು ನಾಳೆಯಿಂದ ಆಡಬಹುದೆಂದೇಳಿ ತೆರಳಿದರು. ಅಷ್ಟು ಹೊತ್ತು ಅಪ್ಪನ ತೋಳಿನಲ್ಲಿ ತೆಪ್ಪಗೆ ನೋಡುತ್ತಿದ್ದ ನಿಶಾ ತಾನೀಗಲೇ ಅದರ ಮೇಲೆ ಕುಳಿತು ಆಡಬೇಕೆಂದು ಹಠ ಹಿಡಿದಾಗ ಸಮಾಧಾನ ಮಾಡಿ ಅವಳನ್ನು ಮನೆಯೊಳಗೆ ಕರೆತರುವಷ್ಟರಲ್ಲಿ ಹರೀಶನಿಗೆ ಸಾಕಾಗಿ ಹೋಯಿತು. ಕೆಲ ಹೊತ್ತಿನಲ್ಲೇ ಸುಕನ್ಯ....ಸವಿತ...ನಿಕಿತಾ ಹಾಗು ನಮಿತ ಮನೆಗೆ ಬಂದಿದ್ದು ಎಲ್ಲರಿಂದಲೂ ಮುದ್ದು ಮಾಡಿಸಿಕೊಂಡ ನಿಶಾ ತನ್ನ ಫೇವರೇಟ್ ನಮಿತ ಅಕ್ಕನ ಜೊತೆ ಆಡಲು ಕುಳಿತಳು.
ನಿಕಿತಾ.....ಆಂಟಿ ರಶ್ಮಿ...ಗಿರೀಶ ಯಾರೂ ಕಾಣಿಸುತ್ತಿಲ್ಲವಲ್ಲ ?
ರಜನಿ.....ಗಿರೀಶ ತನ್ನ ಮೊದಲನೇ ಸಂಪಾದನೆಯಲ್ಲಿ ತಂಗಿಗೆ ಗಿಫ್ಟ್ ಕೊಡಬೇಕೆಂದು ತರುವುದಕ್ಕೆ ರಶ್ಮಿ ಸುರೇಶನ ಜೊತೆ ಹೋಗಿದ್ದಾನೆ ಇನ್ನೇನು ಬರಬಹುದು.
ಸುಕನ್ಯಾ...ಸರ್ ಕೊನೆಗಾದರೂ ನೀವು ಮಗನ ಬರ್ತಡೇ ಮಾಡುವ ಯೋಚನೆ ಮಾಡಿದಿರಲ್ಲ ಅದೇ ಸಂತೋಷ. ನಾವೆಲ್ಲರೂ ಶಾಲೆಯ ಇತರೆ ಅಧ್ಯಾಪಕರ ಮಕ್ಕಳ ಬರ್ತಡೇ ಬಗ್ಗೆ ಕೇಳಿದ್ದೆವು ಆದರೆ ನೀವು ಮಾತ್ರ ಆಚರಿಸುತ್ತಿರಲಿಲ್ಲ.
ಹರೀಶ.....ನೀನು ಹೇಳಿದ್ದು ನಿಜ ಸುಕನ್ಯಾ ಇಷ್ಟು ವರ್ಷಗಳಲ್ಲಿ ನನ್ನ ಮಕ್ಕಳ ಆಸೆಯ ಕಡೆ ನಾನು ಗಮನವನ್ನೇ ಹರಿಸಿರಲಿಲ್ಲ ಇನ್ಮುಂದೆ ಅವರ ಆಶಯಕ್ಕೆ ತಕ್ಕಂತೆ ಪ್ರತಿಯೊಂದು ಘಟನೆಯನ್ನು ನಾವೆಲ್ಲರು ಸೇರಿ ಆಚರಿಸೋಣವೆಂದು ನಿರ್ಧರಿಸಿದ್ದೀವಿ.
ಮನೆಗೆ ಮರಳಿದ ಗಿರೀಶ...ರಶ್ಮಿಯ ಕೈಯಲ್ಲಿ ಬೀನ್ ಬ್ಯಾಗ್ ಮತ್ತು ಕೆಲವು ಡ್ರೆಸ್ಸುಗಳಿದ್ದ ಕವರ್ ಹಿಡಿದು ಬಂದರು.
ಶೀಲಾ.....ಸುರೇಶ ಎಲ್ಲಿ ?
ರಶ್ಮಿ.....ಆಂಟಿ ಅವನು ಇನ್ನೊಂದು ಆಟೋದಲ್ಲಿ ಬರುತ್ತಿದ್ದಾನೆ ಎಲ್ಲ ಸಾಮಾನುಗಳನ್ನೂ ಒಂದೇ ಆಟೋದಲ್ಲಿ ತರುವುದಕ್ಕೆ ಆಗಲಿಲ್ಲವಲ್ಲ ಅದಕ್ಕೆ ಬೇರೆ ಬೇರೆ ಬಂದೆವು.
ಹರೀಶ.....ಇನ್ನೇನು ತರುತ್ತಿದ್ದೀರಮ್ಮ ಇಲ್ಲೇ ಇಷ್ಟೊಂದು ಕವರುಗಳು ತಂದಿದ್ದೀರಲ್ಲ.
ಗಿರೀಶ.....ಅಪ್ಪ ನಾವು ಎಲ್ಲರಿಗೂ ಡ್ರೆಸ್ ಗಿಫ್ಟ್ ಮಾತ್ರ ತಂದಿದ್ದೀವಿ ಸುರೇಶನ ಆಟೋದಲ್ಲಿ ಚಿನ್ನಿಯ ಆಟದ ಸಾಮಾನು ಮತ್ತವಳಿಗೆ ತೆಗೆದುಕೊಂಡ ಡ್ರೆಸ್ಸುಗಳಿವೆ.
ಸುರೇಶನಿದ್ದ ಆಟೋ ಮನೆ ಮುಂದೆ ನಿಂತಾಗ ಅದರ ಹಿಂದೆ ಸೀಟ್ ತುಂಬ ಸಾಮಾನುಗಳೇ ತುಂಬಿದ್ದು ಅವನು ಡ್ರೈವರ್ ಪಕ್ಕ ಮುಂದೆ ಕುಳಿತು ಬಂದಿದ್ದನು.
ನೀತು.....ಏನೋ ಇದು ಜಾಸ್ತಿ ತಂದಿಲ್ಲ ಅಂತ ಇಡೀ ಆಟೋದಲ್ಲಿ ತುಂಬಿಸಿಕೊಂಡು ಬಂದಿದ್ದೀರಲ್ಲ.
ನಮಿತ........ಏನಪ್ಪ ಕೋಟ್ಯಾಧಿಪತಿ ನನಗೂ ಏನಾದರು ಗಿಫ್ಟನ್ನು ತಂದಿದ್ದೀಯಾ ಅಥವ ದೊಡ್ಡ ಮನುಷ್ಯನಾದ ಮೇಲೆ ನಮ್ಮಂತಹ ಬಡಪಾಯಿಗಳನ್ನು ಮರೆತು ಬಿಟ್ಟೆಯಾ ?
ಸವಿತಾ.....ನಮಿ ಏನಿದು ಚಿಕ್ಕ ಹುಡುಗಿಯಂತೆ ಆಡುತ್ತಿದ್ದೀಯಲ್ಲ ?
ನಮಿತ......ಅಮ್ಮ ನಾವಿಬ್ಬರೂ ಫ್ರೆಂಡ್ಸ್ ನಾನು ಅವನನ್ನು ಕೇಳಿದ್ದು ನೀನು ನಮ್ಮಿಬ್ಬರ ಮಧ್ಯೆ ಬರಬೇಡ.
ನೀತು.....ಇವಳು ಹೇಳಿದ್ದರಲ್ಲಿ ತಪ್ಪೇನಿದೆ ಇಬ್ಬರು ಸ್ನೇಹಿತರ ಮಧ್ಯೆ ನಾವ್ಯಾಕೆ ಹೋಗಬೇಕು ಏನಾದರು ಮಾಡಿಕೊಳ್ಳಲಿ ಸುಮ್ಮನಿರು.
ನಮಿತ....ಈಗ ಹೇಳು ನನಗೇನು ತಂದಿದ್ದೀಯ ಇಷ್ಟವಾಗದಿದ್ದರೆ ನೀನು ಬೇರೆ ಗಿಫ್ಟ್ ತೆಗೆದುಕೊಡಬೇಕಾಗುತ್ತೆ.
ಗಿರೀಶ......ನಿನಗೂ ತಂದ್ದಿದ್ದೀನಿ ಕಣಮ್ಮ ತಾಯಿ ನಿನಗೆ ಇಷ್ಟವಾದರೆ ಅಥವ ಆಗದಿದ್ದರೂ ನೀನು ಬೇರೆ ಯಾವ ಗಿಫ್ಟ್ ಕೇಳಿದರು ನಾನೇ ನಿನಗೆ ತೆಗೆದುಕೊಡ್ತೀನಿ ಸರಿಯಾ. ಈಗ ಸಾಮಾನುಗಳನ್ನೆಲ್ಲ ಒಳಗೆ ಸಾಗಿಸೋಣ.
ನಮಿತ.....ಅದನ್ನೆಲ್ಲಾ ಆಗಲೇ ಅಂಕಲ್...ಮತ್ತಿತರರು ಸಾಗಿಸಿದ್ದಾರೆ ನಡೀ ಹೋಗಿ ನೋಡೋಣ ಏನೇನು ತಂದಿದ್ದೀಯೋ.
ಲಿವಿಂಗ್ ಹಾಲಿನಲ್ಲಿ ತಂದಿಡಲಾದ ಬಾಕ್ಸುಗಳನ್ನು ಕುತೂಹಲದಿಂದ ನೋಡುತ್ತಿದ್ದ ನಿಶಾಳ ಕೈಗೆ ಸುರೇಶ ಎರಡು ಟೆಡ್ಡಿ ಕೊಟ್ಟಾಗ ತುಂಬ ಖುಷಿಯಿಂದ ಕುಣಿದಾಡುತ್ತ ಎಲ್ಲರಿಗೂ ತೋರಿಸತೊಡಗಿದಳು.
ನೀತು......ಚಿನ್ನಿಗೆ ತಂದಿರುವ ಬಾಕ್ಸ್ ಓಪನ್ ಮಾಡದೆ ಒಳಗಿಡು ಆಮೇಲೆ ತೆಗೆಯೋಣ. ಈಗೇನಾದರು ಅದನ್ನು ತೆಗೆದರೆ ಇಲ್ಲಿಯೇ ಎಲ್ಲವನ್ನು ಹರಡಿಕೊಂಡು ಕೂರುತ್ತಾಳಷ್ಟೆ. ಇದೇನೊ ಇಷ್ಟೊಂದು ಬಟ್ಟೆ ಬ್ಯಾಗುಗಳಿವೆ ?
ಗಿರೀಶ......ಅಮ್ಮ ಇದರಲ್ಲಿ ನಿಮ್ಮೆಲ್ಲರಿಗೂ ಸೀರೆ ಮತ್ತು ಅಪ್ಪನ ಜೊತೆ ಅಂಕಲ್ಲುಗಳಿಗೆ ಬಟ್ಟೆಗಳಿವೆ. ಇದು ನನಗೆ...ಸುರೇಶ...ನಮಿತ
.....ರಶ್ಮಿ ಮತ್ತು ನಿಕಿತಾಳಿಗೆ ಬಟ್ಟೆಗಳು ಕೊನೇ ಐದರಲ್ಲಿ ಚಿನ್ನಿಯದ್ದೇ ಬಟ್ಟೆಗಳಿವೆ.
ರಜನಿ.....ನಮಗೂ ಸೀರೆ ತಂದಿದ್ದಕ್ಕೆ ತುಂಬ ಥಾಂಕ್ಸ್ ಕಣೋ.
ನಮಿತ......ಗಿರೀಶ ನಮಗೆಲ್ಲ ಯಾಕೆ ತಂದಿದ್ದು ಸುಮ್ಮನೆ ಧುಂದು ವೆಚ್ಚ ಮಾಡಿರುವೆ ಕಣಪ್ಪ.
ಹರೀಶ.....ಅವನ ಸಂತೋಷವನ್ನು ಎಲ್ಲರ ಜೊತೆ ಹಂಚಿಕೊಳ್ಳಲು ಹೀಗೆ ಮಾಡಿದ್ದಾನೆ ಅವನಿಗೆ ಅಡ್ಡಿಪಡಿಸಬೇಡ ಆದರೆ ನಿನ್ನ ತಲೆಗೆ ಇದೆಲ್ಲವೂ ಹೊಳೆಯುತ್ತೆ ಅಂತ ನನಗೆ ಗೊತ್ತಿರಲಿಲ್ಲ ಕಣೋ ಇದು ರಶ್ಮಿಯ ಐಡಿಯಾನಾ ?
ಗಿರೀಶ.....ಇದೆಲ್ಲ ನನಗೆಲ್ಲಿಂದ ಹೊಳೆಯಬೇಕಪ್ಪ ರಶ್ಶಿನೂ ಗುಲ್ಡು. ಬೆಳಿಗ್ಗೆ ನಮಿತ ಜೊತೆ ಮಾತನಾಡುತ್ತ ಕೇಳಿದಾಗ ಅವಳೇ ಇದನ್ನೆಲ್ಲ ನನಗೆ ಹೇಳಿಕೊಟ್ಟಿದ್ದು ಆದರೆ ಬರೀ ಅಪ್ಪ ಅಮ್ಮನಿಗೆ ಅಂತ ಮಾತ್ರ ಹೇಳಿದ್ದಳು ನಾನು ಎಲ್ಲರನ್ನೂ ಸೇರಿಸಿಕೊಂಡೆ.
ಶೀಲಾ.....ಶಭಾಷ್ ಪುಟ್ಟಿ ಗಿರೀಶ ಇನ್ಮುಂದೆ ನೀನೇ ಮಾಡಬೇಕು ಅಂದುಕೊಂಡರೂ ಈ ನನ್ನ ಇಂಟಲಿಜೆಂಟ್ ಜೊತೆ ಮೊದಲು ಕೇಳಿ ನಂತರ ಮಾಡು.
ನಮಿತ.....ನೋಡಿದ್ಯಾ ಅಮ್ಮ ಎಲ್ಲರೂ ನನ್ನ ಹೊಗಳುವವರೇ ನೀ ಮಾತ್ರ ನನಗೆ ಬೈಯ್ಯುವವಳು.
ಸುರೇಶ.....ಅಮ್ಮ ಅಣ್ಣ ನನ್ನ ಬರ್ತಡೇ ಗಿಫ್ಟೆಂದು ಈ ವಾಚ್ ನನಗೆ ತೆಗೆದುಕೊಟ್ಟಿದ್ದಾನೆ.
ನೀತು ನಗುತ್ತ......ಅಪ್ಪ ಮಗ ಇಬ್ಬರೂ ಒಂದೇ ನಿಮ್ಮಪ್ಪನೂ ನಿನಗೆ ವಾಚನ್ನೇ ತಂದಿರುವುದು ಕಣೋ.
ಸುರೇಶ.....ಇರಲಿ ಬಿಡಮ್ಮ ಎರಡನ್ನೂ ಒಂದೊಂದು ದಿನ ಶಾಲೆಗೆ ಕಟ್ಟಿಕೊಂಡು ಹೋದರಾಯಿತು.
ಮಧ್ಯಾಹ್ನ ಮನೆಗೆ ಮರಳಿದ ರವಿ ಮತ್ತು ಅಶೋಕನ ಆದಿಯಾಗಿ ಎಲ್ಲರಿಗೂ ತಾನು ತಂದಿದ್ದ ಗಿಫ್ಟ್ ನೀಡಿದ ಗಿರೀಶ ದೊಡ್ಡವರೆಲ್ಲರಿಂದ ಆಶೀರ್ವಾದ ಪಡೆದನು. ಸಂಜೆ ಎಚ್ಚರಗೊಂಡ ನಿಶಾ ಹಾಲಿನಲ್ಲೆಲ್ಲಾ ಡೆಕೊರೇಶನ್ ಮಾಡಿರುವುದನ್ನು ಅಚ್ಚರಿಯಿಂದ ನೋಡುತ್ತಿದ್ದಾಗ ಅವಳ ಕಣ್ಣಿಗೆ ಬೆಲೂನ್ ಕಂಡವು. ನಿಶಾಳಿಗೆ ಏಟುಕಿಸದಷ್ಟು ಮೇಲೆ ಬಲುನ್ ಕಟ್ಟಲಾಗಿದ್ದು ತನಗೆ ಸಿಗದ ಕಾರಣ ಅಲ್ಲಿದ್ದ ಅಶೋಕನನ್ನು ತಟ್ಟಿ ತನಗೆ ಬೆಲೂನ್ ತೆಗೆದುಕೊಡುವಂತೆ ಕೈ ತೋರಿಸಿ ಆತನಿಂದ ಪಡೆದುಕೊಂಡು ಮನೆಯ ತುಂಬ ಕುಣಿದಾಡುತ್ತಿದ್ದ ನಿಶಾ ಎದುರಿಗೆ ಅನುಷ ಆಂಟಿ ಕೇಕ್ ತರುತ್ತಿರುವುದನ್ನು ಕಂಡು ಬಲೂನ್ ಬಿಟ್ಟವಳೆ ಕೇಕಿನತ್ತ ದೌಡಾಯಿಸಿದಳು.
ನೀತು......ರೀ ಹಿಡ್ಕೊಳ್ರಿ ಅವಳನ್ನ ಇಲ್ಲಾಂದ್ರೆ ಈಗಲೇ ಕೇಕ್ ಚಿಂದಿ ಮಾಡಿಬಿಡುತ್ತಾಳೆ.
ಹರೀಶ ಮಗಳನ್ನಿಡಿದು ಎತ್ತಿಕೊಳ್ಳುತ್ತ.....ಚಿನ್ನಿ ಸುರೇಶಣ್ಣ ಕೇಕ್ ಕಟ್ ಮಾಡ್ತಾನೆ ನಾವು ತಿನ್ನೋಣ.
ನಿಶಾ ಇಲ್ಲ....ಇಲ್ಲ.....ಬೇಲ...ಬೇಲ....ಎಂದು ತಲೆಯನ್ನು ಅತ್ತಿತ್ತ ಅಳ್ಳಾಡಿಸಿ ನಾನು...ನಾನು....ಎಂದು ಕೇಕಿನತ್ತ ಬಗ್ಗಿದಳು. ರಜನಿ ಎರಡನೇ ಕೇಕನ್ನು ತಂದಿಟ್ಟಾಗ ನೀತು ಗಂಡನಿಂದ ಮಗಳನ್ನು ತನ್ನ ಮಡಿಲಿಗೆತ್ಥಿಕೊಂಡು ಎರಡು ಕೈಯನ್ನು ಹಿಡಿದಿಟ್ಟುಕೊಂಡರೂ ನಿಶಾ ಅಮ್ಮನಿಂದ ಬಿಡಿಸಿಕೊಂಡು ಕೇಕಿನತ್ತ ಹೋಗಲು ಕೊಸರಾಡಿದಳು.
ನೀತು......ಚಿನ್ನಿ ಸ್ವಲ್ಪ ಸುಮ್ಮನಿರು ಬಂಗಾರಿ ಅಣ್ಣ ಮೊದಲು ಕೇಕ್ ಕಟ್ ಮಾಡಲಿ ನಂತರ ನೀನೂ ಕಟ್ ಮಾಡುವಿಯಂತೆ.
ನಿಶಾ ಬಿಡಿಸಿಕೊಳ್ಳಲು ಹರಸಾಹಸ ಮಾಡುತ್ತ ಕೈಗಳನ್ನು ಬಡಿದಾಡಿ ಲಿಲ್ಲ.....ಲಿಲ್ಲ....ನಾನು....ನಾನು....ಎನ್ನುತ್ತ ಅಣ್ಣನನ್ನು ಕೇಕಿನತ್ತ ಬರಬೇಡವೆಂದು ಕೈ ತೋರಿಸುತ್ತಿದ್ದಳು.
ಶೀಲಾ.....ಮೊದಲು ಇವಳಿಂದಲೇ ಕಟ್ ಮಾಡಿಸಿ ಬಿಡಮ್ಮ ಇಲ್ಲದೆ ಹೋದರೂ ಸುರೇಶನನ್ನು ಕಟ್ ಮಾಡಲು ಬಿಡುವುದಿಲ್ಲ.
ಸುರೇಶ.....ಚಿನ್ನಿ ಬಾ ನೀನೇ ಕಟ್ ಮಾಡುವಿಯಂತೆ...ಎಂದೇಳಿ ತಂಗಿಯನ್ನೆತ್ತಿಕೊಳ್ಳಲು ಹೊರಟಾಗ ನೀತು ಮಗನನ್ನು ತಡೆಯುತ್ತ ಇಬ್ಬರೂ ಒಟ್ಟಿಗೆಯೇ ಒಂದೊಂದು ಕೇಕ್ ಕಟ್ ಮಾಡಿಬಿಡಿರೆಂದು ಮಗಳ ಕೈಗೆ ಪ್ಲಾಸ್ಟಿಕ್ ಚಾಕು ಹಿಡಿಸಿ ತಾನೇ ಅವಳಿಂದ ಕಟಿಂಗ್ ಮಾಡಿಸಿದರೆ ಇನ್ನೊಂದನ್ನು ಸುರೇಶ ಕಟ್ ಮಾಡಿದನು. ಕೇಕ್ ಕಟ್ ಮಾಡಿ ಮಗಳ ಕೈಗೊಂದು ಪೀಸ್ ಕೊಟ್ಟು ಅಣ್ಣನಿಗೆ ತಿನ್ನಿಸೆಂದರೆ ನಿಶಾ ಅವನ ಬಾಯಿಯ ಮುಂದೆ ಹಿಡಿದು ತಾನೇ ಕವರಿಕೊಳ್ಳಲು ಶುರುವಾದಳು. ಎಲ್ಲರೂ ಸುರೇಶನಿಗೆ ಉಡುಗೊರೆ ನೀಡಿ ಹಾರೈಸಿ ತಾವೂ ಅವನಿಗೆ ಕೇಕ್ ತಿನ್ನಿಸಿದರು. ಮೊದಲ ಬಾರಿ ಹುಟ್ಟಿದ ಹಬ್ಬ ಇಷ್ಟು ಗ್ರಾಂಡಾಗಿ ಆಚರಿಸಿಕೊಂಡಿದ್ದಕ್ಕೆ ಸುರೇಶ ಖುಷಿಯಾಗಿದ್ದು ತಂಗಿಯ ಜೊತೆ ನಾಯಿಗಳಿಗೂ ಕೇಕ್ ತಿನ್ನಿಸುತ್ತ ಸಂತೋಷದಲ್ಲಿದ್ದ. ಎರಡೂ ಕೈಯಲ್ಲಿ ಕೇಕ್ ಪೀಸ್ ಹಿಡಿದು ಕವರುತ್ತಿದ್ದ ಮಗಳೆದುರಿಗೆ ಹರೀಶ ಬಾಯ್ತೆರೆದು ತನಗೆ ತಿನ್ನಿಸುವಂತೇಳಿದಾಗ ನೀತು ಮಗಳ ಕಿವಿಯಲ್ಲೇನೋ ಪಿಸುಗುಟ್ಟಿದಳು. ಅಮ್ಮನ ಮಾತನ್ನು ಕೇಳಿ ನಿಶಾ ತನ್ನ ಕೈಗಳಲ್ಲಿದ್ದ ಕೇಕ್ ಪೀಸನ್ನು ಅಪ್ಪನ ಮುಖಕ್ಕೆ ಬಳಿದು ಕಿಲಕಿಲನೆ ನಗುತ್ತ ಚಪ್ಪಾಳೆ ತಟ್ಟುತ್ತಿದ್ದಳು. ಹರೀಶ.....ಚಿನ್ನೀ ಎಂದು ಕೂಗುತ್ತ ತಾನೂ ಒಂದು ಕೇಕ್ ಪೀಸ್ ಎತ್ತಿಕೊಂಡರೆ ಮಗಳನ್ನೆತ್ತಿಕೊಂಡು ನೀತು ಹೊರಗೋಡಿದಳು. ಅಪ್ಪ ಅಮ್ಮನ ಜೂಟಾಟದಲ್ಲಿ ಅಮ್ಮನ ಹೆಗಲಿನಲ್ಲಿದ್ದ ನಿಶಾ ಕಿಲಕಾರಿ ಹಾಕುತ್ತ ಖುಷಿಯಲ್ಲಿದ್ದರೆ ಕೊನೆಗೂ ಹೆಂಡತಿಯನ್ನಿಡಿದ ಹರೀಶ ಅಮ್ಮ ಮಗಳ ಮುಖಕ್ಕೆ ಕೇಕ್ ಬಳಿದು ತಾನು ನಗುತ್ತಿದ್ದನು. ಎಲ್ಲರೂ ಸೇರಿ ಡ್ಯಾನ್ಸ್ ಮಾಡುತ್ತ ಸುರೇಶನ ಜನ್ಮದಿನವನ್ನು ಅವಿಸ್ಮರಣೀಯ ಮಾಡಿದ್ದರು. ಅಶೋಕ ಈಗಾಗಲೆ ಹೋಟೆಲ್ಲಿನಿಂದ ತರಸಿದ್ದ ವಿವಿಧ ಬಗೆಯ ತಿನಿಸುಗಳನ್ನು ಸವಿಯುತ್ತ ಎಲ್ಲರೂ ರಾತ್ರಿ ಭೋಜನವನ್ನು ಮುಗಿಸಿದರು. ಸುಕನ್ಯಾ...ಸವಿತಾ ಮತ್ತವಳ ಇಬ್ಬರು ಮಕ್ಕಳನ್ನು ಮನೆಗೆ ಡ್ರಾಪ್ ಮಾಡಲು ಹರೀಶ ತೆರಳಿದರೆ ನಿಶಾ ಅಣ್ಣಂದಿರ ಜೊತೆ ಕುಣಿದಾಡುತ್ತಲೇ ಸೋಫ ಏರಿ ನಿದ್ರೆಗೆ ಜಾರಿಕೊಂಡಳು.
Dear User!
We found that you are blocking the display of ads on our site.
Please add it to the exception list or disable AdBlock.
Our materials are provided for FREE and the only revenue is advertising.
Thank you for understanding!