ಭಾಗ 252
ಹರೀಶ ಹೆಂಡತಿಯ ಜೊತೆ ಒಂದು ಪಾರ್ಕಿಗೆ ಬಂದಾಗ......
ನೀತು......ರೀ ನಾವು ಪಾರ್ಕಿಗ್ಯಾಕೆ ಬಂದಿದ್ದು ? ಇಲ್ಲಿಗೆ ಬರೋದಾದ್ರೆ ಚಿನ್ನೀನೂ ಕರೆತರಬಹುದಿತ್ತಲ್ಲ ಅವಳಿಲ್ಲಿ ಆಡಿಕೊಳ್ತಿದ್ಳು.
ಹರೀಶ.......ಲೇ ನಾನಿಲ್ಲಿ ಮಾತನಾಡಲು ಬಂದಿದ್ದು ವಿಶಾಲ್ ಮತ್ತು ಸುಜೋಯ್ ಇಬ್ರನ್ನೂ ಭಾರತಕ್ಕೆ ಕರೆತರುವ ಉಪಾಯ ಸಿಕ್ಕಿದೆ.
ನೀತು ಏಕ್ಸೈಟಾಗಿ.....ಏನದು ?
ಹರೀಶ.......ಅವರಿಬ್ಬರನ್ನು ಭಾರತಕ್ಕೆ ಕರೆತರಬೇಕಿದ್ದರೆ ಮೊದಲಿಗೆ ಅವರನ್ನು ದುಬೈಗೆ ಕರೆಸಬೇಕು.
ನೀತು.....ಅವರಲ್ಲಿಗ್ಯಾಕೆ ಬರ್ತಾರೆ ?
ಹರೀಶ......ಬರ್ತಾರೆ ಬಂದೇ ಬರ್ತಾರೆ.
ನೀತು........ನೀವಿಷ್ಟು ಗ್ಯಾರೆಂಟಿಯಿಂದೇಗೆ ಹೇಳ್ತೀರ ?
ಹರೀಶ......ಮೂರು ವರ್ಷದ ಹಿಂದೆ ರಾಣಾಪ್ರತಾಪ್ ಬದುಕಿದ್ದಾಗ ಸೂರ್ಯವಂಶಿ ಸಂಸ್ಥಾನದ ಅಧೀನದಲ್ಲಿ ಬರುವ ಎಲ್ಲಾ ದೇಶದ ಕಂಪನಿ ಮುಖ್ಯಸ್ಥರನ್ನೂ ಕರೆಸಿ ದುಬೈನಲ್ಲಿ ಮೀಟಿಂಗ್ ಮಾಡಿದ್ರು ಇದರ ಬಗ್ಗೆ ನಾನು ಬೆಳಿಗ್ಗೆ ರಾವ್ ಸರ್ ಜೊತೆ ಮಾತನಾಡಿದಾಗಷ್ಟೇ ತಿಳಿಯಿತು.
ನೀತು.......ನನಗಿದು ಗೊತ್ತಿತ್ತು ದುಬೈ ಒಂದೇ ಕಡೆಯಲ್ಲ ಇದೇ ರೀತಿ ಹಲವಾರು ದೇಶಗಳಲ್ಲೂ ಮೀಟಿಂಗ್ಸ್ ನಡೆದಿದೆ ಆದರೆ ಯಾವಾಗ್ಲೂ ಭಾರತದಲ್ಲೇ ಜಾಸ್ತಿ ನಡೆದಿರೋದು.
ಹರೀಶ.......ಅವರಿಬ್ಬರೂ ಭಾರತಕ್ಕೆ ಬರಬಾರದೆಂದು ಡಿಸೈಡ್ ಮಾಡಿರುವ ವಿಷಯ ನಿನಗೆ ಗೊತ್ತಿದೆ ಅದಕ್ಕವರನ್ನಿಲ್ಲಿಗೆ ಕರೆತರಲು ಅತ್ಯಂತ ಪ್ರಶಸ್ತವಾದ ಸ್ಥಳವೆಂದರೆ ದುಬೈ. ಅಲ್ಲಿನ ರಾಜಮನೆತನದ ಜೊತೆ ವರ್ಧನ್ ಅತ್ಯಂತ ನಿಕಟವಾದ ಮಿತೃತ್ವ ಹೊಂದಿದ್ದಾನೆ. ಈಗ ಅವನ ಜೊತೆ ನಾನೆಲ್ಲವನ್ನೂ ಚರ್ಚಿಸಿದ್ದೀನಿ ಜೊತೆಗೆ ರಾಣಾ ಜೊತೆ ಕೂಡ ನಾವಿಬ್ರೂ ಕಾನ್ಫರೆನ್ಸ್ ಮಾಡಿ ಮುಂದೇನು ಮಾಡಬೇಕೆಂದು ಕೂಡ ಚರ್ಚೆ ನಡೆಸಿದ್ವಿ. ದುಬೈನಲ್ಯಾವುದೇ ತೊಂದರೆಯಾಗದಂತೆ ವಿಶಾಲ್ ಮತ್ತು ಸುಜೋಯ್ ಇಬ್ರನ್ನೂ ಭಾರತಕ್ಕೆ ಕರೆತರುವುದಕ್ಕೆ ಬೇಕಾದ ಏರ್ಪಾಡುಗಳನ್ನು ವರ್ಧನ್ ಮಾಡ್ತಾನೆ.
ನೀತು.......ರೀ ಅದು ವಿದೇಶಿ ನೆಲ ಅಲ್ಲಿಂದ.......
ಹರೀಶ......ಶ್!!!! ಏನು ಮಾಡ್ಬೇಕು ? ಹೇಗೆ ಮಾಡ್ಬೇಕು ಅಂತೆಲ್ಲಾ ನಿರ್ಧಾರವಾಗಿದೆ. ನೀನು ಮಾಡಬೇಕಾಗಿರೋದಿಷ್ಟೇ ರಾವ್ ಸರ್ ಅವರಿಗೆ ಫೋನ್ ಮಾಡಿ ದೀಪಾವಳಿಯ ನಂತರ ದುಬೈನಲ್ಲೊಂದು ಮೀಟಿಂಗ್ ಅರೇಂಜ್ ಮಾಡಿಸ್ಬೇಕು. ಅಲ್ಲಿಗೆ ಪ್ರಪಂಚದಲ್ಲಿರುವಂತ ಸಂಸ್ಥಾನದ ಕಂಪನಿಗಳನ್ನು ನೋಡಿಕೊಳ್ಳುತ್ತಿರುವ ಪ್ರಮುಖರೆಲ್ಲರು ಬರಲೇಬೇಕೆಂದು ಅಫಿಶಿಯಲ್ ಆರ್ಡರ್ ಪಾಸ್ ಮಾಡಿಸು ಸಾಕು. ಅದಕ್ಕಿಂತ ಒಂದ್ವಾರ ಮುಂಚೆ ಬಷೀರ್ ಖಾನ್ ದುಬೈಗೆ ಹೋಗ್ತಾನೆ ಅಲ್ಲವನಿಗೆ ರಾಜಮನೆತನ ಹಾಗು ಪ್ರಮುಖ ಅಧಿಕಾರಿಗಳ ಸಂಪರ್ಕ ಮತ್ತವರನ್ನು ಪರಿಚಯಿಸುವ ಕೆಲಸ ವರ್ಧನ್ ನೋಡಿಕೊಳ್ತಾನೆ.
ನೀತು......ರೀ ಅದೆಲ್ಲವೂ ಸರಿ ಪ್ಲಾನ್ ಏನು ಅದನ್ನೇಳಿ ?
ಹರೀಶ ತಾನೇನು ಪ್ಲಾನ್ ಮಾಡಿರುವೆನೆಂದು ಹೇಳಿ ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರುವುದೆಂಬುದರ ಬಗ್ಗೆ ವಿವರಿಸಿದಾಗ ನೀತು ಫುಲ್ ಖುಷಿಯಾಗಿ ಗಂಡನ ತುಟಿಗೆ ಮುತ್ತಿಟ್ಟಳು.
ಹರೀಶ......ಅಂತೂ ನೀನು ಜೀವನದ ಮೊದಲ ವಿದೇಶ ಪ್ರಯಾಣ ಮಾಡಲು ಹೊರಟಿದ್ದೀಯ ?
ನೀತು.......ಅವರಿಬ್ಬರು ಕಪಟಿ ಮೋಸಗಾರ...ಕೊಲೆಗಾರರನ್ನೆಳೆದು ತರಲಿಕ್ಕೆ ನಾನೆಲ್ಲಿಗಾದ್ರೂ ಹೋಗಲು ಸಿದ್ದ. ಆದರಿಲ್ಲಿ ಚಿನ್ನಿ ಒಬ್ಬಳೇ ಇರ್ತಾಳಾ ?
ಹರೀಶ.....ಅವಳ ಬಗ್ಗೆ ಚಿಂತಿಸ್ಬೇಡ ಕಣೆ ಆದರೆ ನಮ್ಮ ಮಕ್ಕಳಿಬ್ಬರ ಹಿಂದೆ ಬಿದ್ದಿರುವ ವಿಶಾಲ್—ಸುಜೋಯ್ ಕುಟುಂಬ ಸರ್ವನಾಶ ಆಗಲೇಬೇಕಾದ್ದು ತುಂಬ ಮುಖ್ಯ. ಆದರೆ ವಿಶಾಲ್ ಮನೆಯೊಬ್ಬ ಸದಸ್ಯೆ ಬಗ್ಗೆ......
ನೀತು.......ನೀವ್ಯಾರ ಬಗ್ಗೆ ಮಾತಾಡ್ತಿದ್ದೀರೆಂದು ಗೊತ್ತಾಯ್ತು ನೀವು ಅದರ ಬಗ್ಗೆ ಯೋಚಿಸ್ಬೇಡಿ ನಾನೆಲ್ಲಾ ನೋಡಿಕೊಳ್ತೀನಿ.
ಇಬ್ಬರೂ ಮನೆಗೆ ಹಿಂದಿರುಗಿದಾಗ ಒಂದು ದೊಡ್ಡ ಬಾಕ್ಸ್ ಪಾರ್ಸಲ್ ಬಂದಿದ್ದು ರಕ್ಷಕರು ಅದನ್ನು ಚೆಕಿಂಗ್ ಮಾಡಿ ಮನೆಯೊಳಗಿಡಲು ಕೊಂಡೊಯ್ಯುತ್ತಿದ್ದರು.
ನೀತು.......ಏನಿದು ?
ರಕ್ಷಕ......ಮಾತೆ ಪ್ಯಾರಿಸಿನಿಂದ ಪಾರ್ಸಲ್ ಬಂದಿದೆ ಸುಭಾಷ್ ಸರ್ ಕಳಿಸಿರೋದು.
ಹರೀಶ.......ಕೊಡಪ್ಪ ನಾನೇ ತೆಗೆದುಕೊಂಡೋಗ್ತೀನಿ.
ಒಳಗೆ ಬಂದು ಬಾಕ್ಸ್ ತೆರೆದರೆ ಅದರಲ್ಲಿ ಪ್ಯಾರಿಸಿನಲ್ಲಿ ದೊರೆಯುವ ವಿವಿಧ ರೀತಿಯ ಚಾಕ್ಲೇಟ್ಸ್.....ಬಿಸ್ಕೆಟ್ಸ್ ಹಾಗು ಇನ್ನಿತರ ತಿನಿಸುಗಳ ಪದಾರ್ಥಗಳಿದ್ದು ನವದಂಪತಿ ಅದನ್ನು ನಿಶಾಳಿಗಾಗಿ ಖರೀಧಿಸಿದ್ದು ಇಲ್ಲಿಗದನ್ನು ಕಳುಹಿಸಿದ್ದರು. ನಿಧಿ—ನಿಕಿತಾ ಅಣ್ಣ ಅತ್ತಿಗೆಯ ಜೊತೆ ವೀಡಿಯೋ ಕಾಲ್ ಮುಖೇನ ಮಾತನಾಡುತ್ತ ಬಂದು......
ನಿಧಿ.......ಅಣ್ಣ ನೀವು ಕಳಿಸಿರುವ ಪಾರ್ಸಲ್ ಬಂದಿದೆ.
ಹರೀಶ.....ಇದೇನೋ ಇಷ್ಟೊಂದು ಐಟ್ಸಂ ಕಳಿಸಿದ್ದೀಯಲ್ಲ.
ಸುಭಾಷ್.......ಸರ್ ಇದು ಕೇವಲ ಪ್ಯಾರಿನದ್ದಷ್ಟೇ ನಾವು ಬರುವಾಗ ಜರ್ಮನಿ ಹಾಗು ಸ್ವಿಜ಼ರಲ್ಯಾಂಡಿನ ಐಟ್ಸಂ ತರ್ತೀವಿ ರುಚಿಯಾಗಿದೆ ಸರ್ ನೀವೂ ಟೇಸ್ಟ್ ನೋಡಿ.
ಪ್ರೀತಿ.......ಹೂಂ ಕಣೋ ನೋಡ್ಲೇಬೇಕು ನೀನಿಷ್ಟೊಂದು ಬಗೆಬಗೆ ವೆರೈಟಿ ಐಟ್ಸಂ ಕಳಿಸಿದ್ದೀಯಲ್ಲ.
ಸುಮ.....ಅಲ್ಲೆಲ್ಲವೂ ಆರಾಮವಾಗಿದೆಯಾ ? ನಿಮಗೆ ಅಲ್ಲೇನೂ ತೊಂದರೆಯಾಗ್ತಿಲ್ಲ ತಾನೇ ?
ಸುಭಾಷ್.......ಇಲ್ಲ ಅತ್ತೆ ಏನೂ ತೊಂದರೆಯಿಲ್ಲ ಜಾಲಿಯಾಗಿದೆ.
ಸೌಭಾಗ್ಯ......ಜಾಲಿಯಾಗಿದೆ ಅಂತ ಊರನ್ನೇ ಮರೆತುಬಿಟ್ಯಾ.
ಪಾವನ ಅತ್ತೆಗೆ ವಂಧಿಸಿ.......ಅತ್ತೆ ನಾನೂ ಹೋಗೋಣ ಅಂದೆ......
ರಜನಿ.......ನಿಮ್ಮತ್ತೆ ಸುಮ್ಮನೆ ತಮಾಷೆ ಮಾಡ್ತಿರೋದು ಪಾವನ ನೀನೇನೂ ತಲೆ ಕೆಡಿಸಿಕೊಳ್ಬೇಡ ಜಾಲಿಯಾಗಿ ಟೈಂ ಕಳೆದು ಬನ್ನಿ.
ಸೌಭಾಗ್ಯ......ಹೌದಮ್ಮ ಪಾವನ ಆರಾಮವಾಗಿ ಸುತ್ತಾಡಿಕೊಂಡು ಬನ್ನಿ ಅಲ್ಲಿಗೆ ಪದೇ ಪದೇ ಹೋಗಲಿಕ್ಕಾಗುತ್ತಾ ?
ಇವರ ಮಾತೀಕತೆ ಮುಂದುವರಿದಿದ್ದರೆ.......
ನೀತು.......ನಿಧಿ ಕೆಳಗೆ ಕೆಲವೇ ಬಾಕ್ಸ್ ಇರಲಿ ಉಳಿದಿದ್ದು ಮೇಲಿನ ನಮ್ಮ ರೂಂ ಸಜ್ಜಾ ಸೆಲ್ಫಿನಲ್ಲಿಟ್ಟು ಬಾ ಚಿಲ್ಟಾರಿ ನೋಡಿದ್ರೆ ಬಿಡಲ್ಲ.
ನಿಕಿತಾ........ಆಂಟಿ ಇಬ್ಬರೂ ನಿಮ್ಮ ರೂಮಲ್ಲೇ ಮಲಗಿಕೊಂಡು ಟಿವಿ ನೋಡ್ತಿದ್ದಾರಲ್ಲ.
ನಿಧಿ.......ಬಾಕ್ಸ್ ಮೇಲ್ಯಾವುದೇ ಚಿತ್ರಗಳಿಲ್ಲ ಗೊತ್ತಾಗಲ್ಲ ನಡಿ.
ನೀತು.......ಹಾಗೇ ಇಬ್ರನ್ನೂ ಕೆಳಗೆ ಕಳಿಸಮ್ಮ.
* *
* *
.......continue