• If you are trying to reset your account password then don't forget to check spam folder in your mailbox. Also Mark it as "not spam" or you won't be able to click on the link.

Adultery ನೀತು

Samar2154

Well-Known Member
2,258
1,247
159
ಎಲ್ಲರಿಗೂ ಮುಂದಿನ ಅಪ್ಡೇಟ್ ನೀತು ಮತ್ತು ನೀಗ್ರೋಗಳ ನಡುವಿನ ಸೆಕ್ಸ್ ಎಂಬುದು ಪಕ್ಕಾ ಆಗೋಗಿತ್ತು ನಾನು ಸಹ ಅದೇ ರೀತಿ ಚಿಂತನೆ ಮಾಡಿದ್ದೆ. ಆದರೆ ನೀತು ಹಾಗು ರಿಕ್ ನಡುವಿನ ಸೆಕ್ಸ್ ಬೇರೆಯದ್ದೇ ರೀತಿಯಲ್ಲಿ ಬರೆದಿದ್ದಾಗಿದೆ ಜೊತೆಗೆ ರಜನಿ—ಪ್ರೀತಿ ಇಬ್ಬರೂ ಮಸಾಡ್ ನೆಪದಲ್ಲಿ ಮೂರು ಮೂರು ನೀಗ್ರೋಗಳ ಜೊತೆಗೂಡಿ ಸೆಕ್ಸ್ ಆಚರಣೆ ಮಾಡಿದ್ದಾರೆ. ಅವರಿಬ್ಬರಿಗಿಂತ ವಿಭಿನ್ನವಾಗಿ ನೀತುಳನ್ನು ತೋರಿಸುವುದರ ಬಗ್ಗೆ ತುಂಬ ಯೋಚಿಸಿದ ಬಳಿಕ ನೀತುಳ ನೀಗ್ರೋ ಜೊತೆಗಿನ ಸೆಕ್ಸ್ ಡ್ರಾಪ್ ಮಾಡ್ಬಿಟ್ಟೆ. ಓದುಗರೆಲ್ಲರೂ ಇದೇ ಬರುತ್ತೆಂದು ಮೊದಲೇ ಊಹಿಸಿರುವಾಗ ಅದಕ್ಕಿಂತ ಕೊಂಚ ಭಿನ್ನವಾಗಿಯೇ ತಾನೇ ಬರಹಗಾರ ಯೋಚಿಸಬೇಕು ಆಗಲೇ ಕಥೆಯಲ್ಲಿ ಥ್ರಿಲ್ ಇರೋದಕ್ಕೆ ಸಾಧ್ಯ. ಇವತ್ತಿನ ಮೊದಲ ಭಾಗದ ಅಪ್ಡೇಟ್ ನಿಮ್ಮೆಲ್ಲರಿಗೂ ಸ್ವಲ್ಪ ಬೇಸರ ಮೂಡಿಸುತ್ತೆ ಅದು ನನಗೂ ಗೊತ್ತಿದೆ ಆದರೆ ಕೊನೆಯ ಭಾಗ ಮಿಸ್ ಮಾಡದೆ ಓದಿ ಅಲ್ಲೇ ಇರೋದು ಥ್ರಿಲ್.

ಧನ್ಯವಾದ.


ಭಾಗ 278


ಎಲ್ಲರ ಜೊತೆ ಸಮಯ ಕಳೆದು ಕಾಟೇಜಿಗೆ ಹಿಂದಿರುಗಿದ ನೀತು ಸ್ನಾನ ಮುಗಿಸಿ ಕಪ್ಪು ಬಣ್ಣದ ಮೇಲೆ ಕೆಂಪು...ನೀಲಿ...ಹಳದಿ... ಪಿಂಕ್...ಹಸಿರು ಬಣ್ಣಗಳ ಹೂವಿನ ಚಿತ್ತಾರವಿದ್ದ ಕಾಚ ಧರಿಸಿ ಕೆಂಪನೇ ಡಿಸೈನರ್ ಬ್ರಾ ತೊಟ್ಟು ರೆಡಿಯಾದಳು. ಊರಿನಲ್ಲಿರುವ ತಂಗಿಗೆ ಫೋನ್ ಮಾಡಿದಾಗ......

ಅನುಷ......ಹೇಗಿದ್ದೀರ ಅಕ್ಕ ? ಅಲ್ಲೀಗ ರಾತ್ರಿಯಾಗಿರಬೇಕಲ್ವ ? ಇನ್ನೂ ವಿಮಾನಗಳ ಹಾರಾಟ ಪ್ರಾರಂಭವಾಗಿಲ್ವಾ ?

ನೀತು.......ನಮಗೇನೇ ಅನು ಕೆಲಸವಿಲ್ಲ ಕಾರ್ಯವಿಲ್ಲ ಸುಮ್ಮನೆ ತಿಂದ್ಕೊಂಡ್ ಇಲ್ಲೇ ಆರಾಮವಾಗಿದ್ದೀವಿ. ವಿಮಾನ ಹಾರಾಟಗಳು ನಾಳೆ ಮಧ್ಯಾಹ್ನದ ನಂತರ ಪ್ರಾರಂಭವಾಗುತ್ತಂತೆ. ನೀನೇನು ಗಂಡನಿಗೆ ಫೋನ್ ಮಾಡಿ ವಿಚಿರಿಸಿಕೊಳ್ತಿಲ್ವಾ ?

ಅನುಷ.......ಇಲ್ಲಾಕ್ಕ ದಿನಕ್ಕತ್ತು ಸಲ ಅವರೇ ಫೋನ್ ಮಾಡ್ತಾರೆ ಆದ್ರೆ ನನ್ಜೊತೆ ಮಾತನಾಡಲಿಕ್ಕಲ್ಲ ಮಗಳು ಮತ್ತಿತ್ತರ ಮಕ್ಕಳ ಜೊತೆಗೇ ಅವರ ಮಾತು ನಾನು ನಾಮಕಾವಸ್ಥೆಗೆ ಮಾತ್ರವೇ.

ಇವರ ಮಾತುಗಳನ್ನು ಕೇಳುತ್ತಿದ್ದ ಶೀಲಾ.....ಹೆಂಡತಿಯ ಬೆಲೆ ಮಗಳು ಬರೋವರೆಗಷ್ಟೆ ಆಮೇಲೆ ಅಪ್ಪನಿಗೆಲ್ಲವೂ ಮಗಳೇ ಆಗಿರ್ತಾಳೆ ಕಣೆ. ನೀನೇನೇ ಬ್ರೆಜಿ಼ಲ್ಲಿಂದ ಹೊರಡೋ ಲಕ್ಷಣವೇ ಕಾಣ್ತಿಲ್ವಲ್ಲ ಸ್ಪೀಕರ್ ಆನಾಗಿದೆ ಮಾತಾಡು.

ನೀತು ಎಲ್ಲರ ಜೊತೆಗೂ ಹರಟೆ ಹೊಡೆದು......ನನ್ನ ಮಗಳೆಲ್ಲಿ ?

ಸುಮ.....ಅವಳು ಅತ್ತೆ ಮಾವನ ಜೊತೆ ಮುಂಜಾನೆ ಬೇಗನೆದ್ದು ದೇವಸ್ಥಾನದ ಪೂಜೆಗೆ ಹೋದ್ಳು ನಿಧಿ ಕೂಡ ಜೊತೆಗೋಗಿದ್ದಾಳೆ. ಇವತ್ತು ದೇವಸ್ಥಾನದಲ್ಲಿ ಎಲ್ಲಾ ಮಕ್ಕಳ ಹೆಸರಿನಲ್ಲಿ ಅಭಿಶೇಕಕ್ಕೆ ಕೊಟ್ಟಿದ್ರು ಅದಕ್ಕೆ ಹೋಗಿದ್ದಾರೆ.

ಇನ್ನೂ ಕೆಲಕಾಲ ಮಾತಾಡಿ ಫೋನಿಟ್ಟಾಗ ಕಾಟೇಜಿನ ಬೆಲ್ ಶಬ್ದ ಮೊಳಗಿದ್ದು ಬಾಗಿಲು ತೆರೆದಾಗ ಮೂವರು ಸುರಸುಂದರಿಯಾದ ವಿದೇಶಿ ಹುಡುಗಿಯರು ಹೊರಗೆ ನಿಂತಿದ್ದರು. ಇನ್ನೂ 20—21 ವರ್ಷವಿರಬಹುದೆಂದು ನೋಡುತ್ತಲೇ ಗ್ರಹಿಸಿದ ನೀತು ಒಳಗೆ ಬರುವಂತೆ ಕರೆದು ಬಾಗಿಲು ಹಾಕಿದಳು. ನೀತು ಯೌವನಾವಸ್ಥೆಗೆ ಬಂದು ಮದುವೆಯಾಗಿ ಇಂದಿನವರೆಗೂ ಕೇವಲ ಎರಡೇ ಎರಡು ಸಲ ಪಾರ್ಲರಿನ ಮೆಟ್ಟಿಲನ್ನು ಹತ್ತಿದ್ದು ಆಕೆಯ ಶೃಂಗಾರ ಎಲ್ಲವೂ ಕೇವಲ ಮನೆಯೊಳಗೇ ನಡೆಯುತ್ತಿತ್ತು. ಇತ್ತೀಚೆಗೆ ಒಟ್ಟು ಕುಟುಂಬವಾದ ಬಳಿಕವೂ ಮನೆಯ ಹೆಂಗಸರು ಪಾರ್ಲರಿಗೆ ಆಗಾಗ ತೆರಳುತ್ತಿದ್ದರೂ ನೀತು ಮಾತ್ರ ಅದರ ಕಡೆ ಮುಖವನ್ನೂ ಹಾಕುವ ಮನಸ್ಸು ಮಾಡಿರಲಿಲ್ಲ. ಆಯುರ್ವೇದದ ದ್ರವ್ಯಗಳಿಂದ ತಲೆಗೂದಲ ಕೇಶರಾಶಿ ದಟ್ಟವಾಗಿ ಬೆಳೆದಿದ್ದು ಅದರ ತುದಿಗಳು ವಕ್ರ ವಕ್ರವಾಗಿರುವುದನ್ನು ಗಮನಿಸಿದಾಗಲೆಲ್ಲ ಕೆಲವೊಮ್ಮೆ ಅವನ್ನು ನೀಟಾಗಿ ಕಟ್ ಮಾಡಿಸಬೇಕೆಂದು ಅನಿಸಿದ್ದರೂ ಕೂಡ ಮನೆ..ಮಕ್ಕಳು...ವ್ಯವಹಾರಗಳ ಜವಾಬ್ದಾರಿಗಳಿಂದ ಅದಕ್ಕೂ ಅವಕಾಶ ದೊರೆತಿರಲಿಲ್ಲ. ಈಗ್ಯಾವುದೇ ಕೆಲಸ ಕಾರ್ಯವಿಲ್ಲದೆ ಬ್ರೆಜಿ಼ಲ್ ದೇಶದ ರೆಸಾರ್ಟಿನಲ್ಲಿ ನೊಣ ಹೊಡೆಯುತ್ತಿದ್ದ ಕಾರಣ ಇದನ್ನಾದರೂ ಮಾಡಿಸಿಕೊಳ್ಳೋಣವೆಂದು ಯೋಚಿಸಿಯೇ ಈ ಬಗ್ಗೆ ವಿಚಾರಿಸಿ ಬ್ಯೂಟಿಷಿಯನ್ ಈ ಹುಡುಗಿಯರನ್ನು ಕಾಟೇಜಿಗೆ ಕರೆಸಿಕೊಂಡಿದ್ದಳು.

ನೀತು.......ಹಲೋ ತಲೆ ಕೂದಲು ಸೊಂಟದವರೆಗೂ ಬಂದ್ಡಿಟ್ಟಿದೆ ಅದಕ್ಕೇ ಸ್ವಲ್ಪ ಕಿರಿಕಿರಿಯಾಗ್ತಿದೆ ಇವನ್ನು ಕೊಂಚ ಶಾರ್ಟ್ ಮಾಡಿ ಆದರೆ ಜಾಸ್ತಿ ಬೇಡ ಒಂದತ್ತಿಂಚುದ್ದ ಕತ್ತರಿಸಿದರೆ ಸಾಕು.

ಹುಡುಗಿ1.....ನೀವೇನೂ ಚಿಂತೆ ಮಾಡ್ಬೇಡಿ ಮೇಡಂ ನೀವು ಬುಕ್ ಮಾಡಿರುವ ಡೈಮೆಂಡ್ ಪ್ಯಾಕೇಜಿನಲ್ಲಿ ಎಲ್ಲಾ ರೀತಿಯ ಬ್ಯೂಟಿ ಔಟ್ಲುಕ್ ಮಾಡಿಸಿಕೊಳ್ಳಲು ಅವಕಾಶವಿರುತ್ತೆ.

ಹುಡುಗಿ2......ಮೇಡಂ ನೀವೀಗಲೇ ತುಂಬ ಸುಂದರವಾಗಿದ್ದೀರ ನಮಗೆ ಜಾಸ್ತಿ ಕೆಲಸವೇ ಇರೊಲ್ಲ ನೀವೇನೂ ಯೋಚಿಸಬೇಡಿ ನಾವೆಲ್ಲವನ್ನೂ ಅಚ್ಚುಕಟ್ಟಾಗಿ ಮಾಡಿಕೊಡ್ತೀವಿ.

ಮುಂದಿನೆರಡು ಘಂಟೆಗಳಲ್ಲಿ ನೀತುವಿನ ಕಾಯಕಲ್ಪ ಬದಲಾಗೊ ರೀತಿ ಅವಳ ಹೇರ್ ಕಟಿಂಗ್ ಮಾಡಿ ಉದ್ದನೇ ಪೋನಿಟೈಲ್ ಹಾಕಲಾಗಿದ್ದು ಜೊತೆಗೆ ನೈಲ್ಸ್ ಬ್ಯೂಟಿ..ಮಾನಿಕ್ಯೂರ್ ಹಾಗು ವ್ಯಾಕ್ಸಿಂಗ್ ಜೊತೆ ಇನ್ನೂ ಹಲವು ರೀತಿಯ ಸೌಂದರ್ಯವರ್ಧಕ ಆಗುವಂತಹ ವಿಧಾನಗಳನ್ನು ಅನುಸರಿಸಿ ನೀತುವಿನ ಒಟ್ಟಾರೆ ಔಟ್ಲುಕ್ ಇನ್ನೂ ಆಕರ್ಶಕವಾಗುವಂತೆ ಮಾಡಲಾಯಿತು. ನೀತು ತನ್ನ ಪ್ರತಿಬಿಂಬವನ್ನು ನೋಡಿಕೊಂಡು ಮೂವರು ಹುಡುಗಿಯರ ಕೆಲಸಕ್ಕೆ ಮೆಚ್ಚುಗೆ ತಿಳಿಸಿ ಅವರಿಗೆ ಭಕ್ಷೀಸ್ ಕೊಟ್ಟು ಕಳುಹಿಸಿದ ನೀತು ತಕ್ಷಣವೇ ಗಂಡನಿಗೆ ವೀಡಿಯೋ ಕಾಲ್ ಮಾಡಿ ತನ್ನೆದುರು ಇದ್ದಂತ ಟೇಬಲ್ ಮೇಲೆ ಪೋನಿಟ್ಟು ತಾನದರ ಮುಂದೆ ನಿಂತಳು
ಮಡದಿಯ ಹೊಸತನದಿಂದ ಕಂಗೊಳಿಸುತ್ತಿದ್ದ ರೂಪಲಾವಣ್ಯಕ್ಕೆ ಬೆರಗಾಗಿ ದಂಗಾಗಿದ್ದ ಹರೀಶ ಎಚ್ಚೆತ್ತುಕೊಳ್ಳಲು ಒಂದೆರಡು ನಿಮಿಷವೇ ಹಿಡಿಯಿತು.

ಹರೀಶ......ನೀತು ನಾವಿಬ್ರೂ ಜೊತೆಯಾಗಿ ಹೊರಗೆ ಹೋದಾಗ ಸರ್ ನಿಮ್ಮ ಹಿರಿಮಗಳಾ ಅಂತ್ಯಾರಾದ್ರೂ ಕೇಳ್ಬಿಟ್ರೆ ನನ್ ಗತಿ...

ನೀತು ಮುಗುಳ್ನಗುತ್ತ......ರೀ ಸುಮ್ಮನೆ ತಮಾಷೆ ಮಾಡ್ಬೇಡಿ ಕಣ್ರಿ ನಾನೇನೂ ಜಾಸ್ತಿ ಮಾಡಿಸಿಲ್ಲ ಕೂದಲು ತುಂಬಾ ಉದ್ದವಾಗಿತ್ತಲ್ಲ ಅದನ್ನೇ ಸ್ವಲ್ಪ ಶಾರ್ಟ್ ಮಾಡಿಸಿದ್ದೀನಷ್ಟೆ. ಯಾಕ್ರಿ ಚೆನ್ನಾಗಿಲ್ವ ?

ಹರೀಶ......ಜನ ಮೊದಲೇ ನಿನಗೆ 39 ವರ್ಷವೆಂದರೆ ನಂಬ್ತಿಲ್ಲ ನಿನಗಿನ್ನೂ 27—28 ಇರಬಹುದು ಅಂದ್ಕೊಳ್ತಿದ್ದಾರೆ ಈಗಂತೂ ಕಾಲೇಜ್ ಓದ್ತಿರೋ ಹುಡುಗಿ ಅಂದ್ಕೊಂಡ್ರೂ ಆಶ್ಚರ್ಯವಿಲ್ಲ. ನಿಜಕ್ಕೂ ದೇವಲೋಕದ ಅಪ್ಸರೆಗಿಂತಲೂ ಸುಂದರವಾಗಿದ್ದೀಯ ನನ್ನಿಂದ ಕಣ್ಣು ಮಿಟುಕಿಸೋದಕ್ಕೂ ಆಗ್ತಿಲ್ಲ ಲೈಂಲ್ಲಿರು ಕೆಳಗಿನ ಟಿವಿಗೆ ಕನೆಕ್ಟ್ ಮಾಡ್ತೀನಿ ಎಲ್ಲರೂ ನನ್ನೀ ಹೆಂಡತಿಯ ಹೊಸ ರೂಪ ರಾಶಿಯನ್ನು ನೋಡಲಿ.

ನೀತು ನಾಚುತ್ತ.....ರೀ ಪ್ಲೀಸ್ ಬೇಡ ಅವರೇನು ಅಂದ್ಕೊಳಲ್ಲ.

ಹರೀಶ.....ಅದನ್ನವರ ಬಾಯಿಂದಲೇ ಕೇಳುವಂತೆ ನಿನ್ನ ಹಿರಿಯ ಮಗಳೇ ಬಂದ್ಲು ಅವಳನ್ನೇ ಕೇಳ್ನೋಡು.

ನಿಧಿ ಒಳಗೆ ಬರುತ್ತ.....ಏನ್ ಕೇಳ್ಬೇಕಪ್ಪ ? ಅಮ್ಮನ ವೀಡಿಯೋ ಕಾಲ್ ಬಂದಿದ್ಯಾ ( ಎಂದೇಳಿ ಫೋನ್ ನೋಡಿದಾಗವಳ ಕಣ್ಣು ಅಚ್ಚರಿಯಿಂದ ಅರಳಿಕೊಂಡಿದ್ದು ಖುಷಿಯಿಂದ ತುಟಿಗಳಲ್ಲಿ ನಗೆ ಮೂಡಿತು ) ಅಮ್ಮ ಸೂಪರ್ರಾಗಿ ಕಾಣಿಸ್ತಿದ್ದೀರ ನಿಜಕ್ಕೂ ಮೈಂಡ್ ಬ್ಲೋಯಿಂಗ್.

ನೀತು.......ನಿಜವಾಗ್ಲೂ ಚೆನ್ನಾಗಿದೆ ತಾನೇ ನಿಧಿ ಸ್ವಲ್ಪ ಕಟಿಂಗ್ ಮಾಡಿಸಿದ್ದೀನಷ್ಟೆ.

ನಿಧಿ......ಅಮ್ಮ ಇದನ್ನೇ ನಿಮಗೆ ನಾನು..ಅತ್ತೆ...ಆಂಟಿ ಎಲ್ರೂ ಎಷ್ಟು ದಿನಗಳಿಂದ ಹೇಳ್ತಿದ್ವಿ ನೀವೋ ಮನಸ್ಸೇ ಮಾಡ್ತಿರಲಿಲ್ವಲ್ಲ ಸಧ್ಯ ಈಗಲಾದ್ರೂ ಮಾಡಿಸಿದ್ರಲ್ಲ. ನೀವೇನ್ ಜಾಸ್ತಿ ತುಂಡಾಗಿ ಕಟ್ ಮಾಡಿಸಿಲ್ಲ ಸ್ವಲ್ಪವೇ ಕಟ್ ಮಾಡಿಸಿರೋದು. ಅಪ್ಪ ಕೆಳಗಿನ ಟಿವಿಗೆ ಕನೆಕ್ಟ್ ಮಾಡಿ ಅಜ್ಜಿ..ತಾತ...ಎಲ್ಲರೂ ಅಮ್ಮನ ಈ ಹೊಸ ಲುಕ್ ನೋಡಲಿ.

ಹರೀಶ......ನಾನದನ್ನೇ ಹೇಳ್ತಿದ್ದೆ ಕಣಮ್ಮ ನಿಮ್ಮಮ್ಮನೇ ಬೇಡ ಅವರೇನು ಅಂದ್ಕೊಳಲ್ಲ ಅಂತಿದ್ದಾಳೆ.

ನಿಧಿ.....ಅಮ್ಮ ನೀನೇನ್ ಬಾಬ್ ಕಟ್ ಮಾಡಿಸಿಕೊಂಡಿದ್ದೀರ ಇಲ್ವಲ್ಲ ಎಲ್ರೂ ನಿಮ್ಮಿ ಲುಕ್ ನೋಡಿ ಹೊಗಳ್ತಾರೆ. ನಡೀರಿ ಅಪ್ಪ ಎಲ್ರೂ ನಿಮಗಾಗಿ ಕಾಯ್ತಿದ್ದಾರೆ.

ನೀತುವಿನ ಹೊಸ ಔಟ್ಲುಕ್ ನೋಡಿ ಎಲ್ಲರೂ ಹೊಗಳಿದರೆ...

ವಿಕ್ರಂ.....ನಿನ್ಜೊತೆ ನನ್ನ ನೋಡಿದ್ರೆ ಸರ್ ನಿಮ್ಮ ಮಗಳಾ ಅಂತ ಜನರು ಕೇಳೇ ಕೇಳ್ತಾರೆ ಕಣಮ್ಮ.

ನೀತು.....ಅಣ್ಣ ಸುಮ್ಮನೆ ಏನೇನೋ ಹೇಳ್ಬೇಡಿ.

ರವಿ......ವಿಕ್ರಂ ನಿಜಾನೇ ಹೇಳ್ತಿದ್ದಾನೆ ಕಣಮ್ಮ ನಿಜಕ್ಕೂ ನಿಧಿ.... ಗಿರೀಶ ನಿನ್ನ ಮಕ್ಕಳೆಂದ್ರೆ ಯಾರೂ ನಂಬಲ್ಲ ಚಿನ್ನೀನ ಮಾತ್ರ ಮಗಳೆಂದು ಒಪ್ಪಿಕೊಳ್ತಾರೆ ಕಣಮ್ಮ ನೀತು ನಿಜವಾಗ್ಲೂ ತುಂಬ ಮುದ್ದಾಗಿ ಕಾಣ್ತಿದ್ದೀಯ.

ನೀತು......ಎಲ್ಲಿ ನನ್ ಮಗಳು—ತಂಗಿ ಇಬ್ಬರೇ ಕಾಣ್ತಿಲ್ಲ ಅವಳ ತಮ್ಮ ತಂಗೀರೆಲ್ಲ ಇಲ್ಲೇ ಇದ್ದಾರೆ ಅವಳೊಬ್ಬಳೇ ಕಾಣೆ.

ಗಿರೀಶ.....ಆಚೆ ಕೋತಿಗಳಿಗೆ ಊಟ ಕೊಡ್ತಿದ್ಳು ಬಂದ್ಲು ನೋಡಿ.

ಅರ್ಧ ಘಂಟೆಗೂ ಹೆಚ್ಚು ಕಾಲ ಮನೆಯವರ ಜೊತೆ ಮಾತುಕತೆ ನಡೆದಿದ್ದರೆ ಅದರಲ್ಲೆಚ್ಚಾಗಿ ನಿಶಾಳೇ ಅಮ್ಮನ ಬಳಿ ಮಾತಾಡಿದ್ದು ತನಗೆ ತೋಚಿದ್ದನ್ನೆಲ್ಲ ಹೇಳುತ್ತಿದ್ದಳು. ನೀತು ಫೋನಿಟ್ಟು ತಾನೂ ನೀಗ್ರೋಗಳಿಂದ ಮಸಾಜ್ ಸೇವೆ ಪಡೆದುಕೊಳ್ಳಲಾ ಬೇಡವಾ ಅಂತ ಚಿಂತನ ಮಂಥನ ನಡೆಸಿದರೂ ಅವಳಿಗ್ಯಾವುದೇ ನಿಷ್ಕರ್ಷ ತೆಗೆದುಕೊಳ್ಳಲು ಸಾಧ್ಯವಾಗಿರಲಿಲ್ಲ. ಅದೇ ಸಮಯಕ್ಕೆ ಬಂದಂತ ಫೋನ್ ರಿಸೀವ್ ಮಾಡುತ್ತ......

ನೀತು.......ಹೇಳಪ್ಪ ಅಜಯ್ ಏನಿಷ್ಟೊತ್ತಲ್ಲಿ ? ಏನ್ ವಿಷಯ ?

ಅಜಯ್.....ಮಾತೆ ಫೋನಲ್ಲಿ ಹೇಳೋದಕ್ಕಿಂತ ನಿಮ್ಮ ಕಾಟೇಜ್ ಹತ್ತಿರ ನಾನೀಗ ಬರಬಹುದಾ ?

ನೀತು......ಬಾರಪ್ಪ ನಾನಿನ್ನೂ ಮಲಗಿಲ್ಲ.

ನಾಲ್ಕೈದು ನಿಮಿಷದಲ್ಲೇ ನೀತುವಿನೆದುರು ಕುಳಿತು......

ಅಜಯ್.....ನನಗೀಗಷ್ಟೇ ಒಂದು ವಿಷಯ ತಿಳಿಯಿತು ಅದನ್ನು ತಿಳಿಸಲೆಂದೇ ನಾನಿಲ್ಲಿಗೆ ಬಂದು ನಿಮಗೆ ತೊಂದರೆ ಕೊಟ್ಟೆ.

ನೀತು.....ನನಗೇನೂ ತೊಂದರೆಯಿಲ್ಲ ಕಣೊ ಏನ್ ವಿಷಯ ?

ಅಜಯ್.......ಮಾತೆ ಮೂರು ದಿನಗಳ ಹಿಂದೆ ಬ್ರೆಜಿ಼ಲ್ ದೇಶದ ಸಂಸ್ಥಾನದ ವ್ಯವಹಾರಗಳನ್ನು ನಾವ್ಯಾರಿಗೆ ಮಾರಾಟ ಮಾಡಿದ್ದೆವೋ ಅವರೀಗ ಅದನ್ನೆಲ್ಲಾ ಇನ್ನೊಬ್ಬರಿಗೆ ಮಾರಾಟ ಮಾಡ್ತಿದ್ದಾರೆಂದು ವಿಷಯ ತಿಳಿಯಿತು. ಅಲ್ಲಿನ ಮಾನೇಜರ್ ಬಳಿ ನನ್ನ ನಂಬರ್ ಕೊಟ್ಟಿದ್ದೆ ಈಗವರೇ ಫೋನ್ ಮಾಡಿ ಈ ವಿಷಯ ಹೇಳಿದ್ರು.

ನೀತು....ನಾವು ಮಾರಾಟ ಮಾಡಿದ್ದಾಯ್ತಲ್ಲ ಈಗ ಅದನ್ನೆಲ್ಲಾ ಕೊಂಡು ಕೊಂಡಿರುವವರು ಏನಾದರೂ ಮಾಡಿಕೊಳ್ಳಲಿ ಬಿಡು ನಮಗೂ ಅದಕ್ಕೂ ಏನೂ ಸಂಭಂಧವಿಲ್ಲ ಅದು ಅವರಿಚ್ಚೆ.

ಅಜಯ್.....ಮೂರು ದಿನಗಳ ಹಿಂದಷ್ಟೆ ನಮ್ಮಿಂದ ಖರೀಧಿಸಿದ ವ್ಯವಹಾರಗಳನ್ನು ಇನ್ನೊಬ್ಬರಿಗೆ ಮಾರಾಟ ಮಾಡ್ತಿರೋದ್ರಿಂದ ನಮಗಿಲ್ಲಿನ ದೇಶದ ಕಾನೂನಿನ ತೊಡಕೇನಾದರೂ ಆಗಬಹುದ ಅಂತ ಯೋಚನೆ ಬಂದು ನಾನಿಲ್ಲಿಗೆ ಓಡೋಡಿ ಬಂದೆ ಮಾತೆ.

ನೀತು ಅವನ ತಲೆ ನೇವರಿಸಿ....ಹಾಗೇನೂ ಆಗಲ್ಲ ಕಣಪ್ಪ ನೀನು ಸುಮ್ಮನೆ ಯೋಚಿಸಿ ಹೆದರಿಕೊಂಡಿದ್ದೀಯ ಅಷ್ಟೆ. ಸಂಸ್ಥಾನದ ವ್ಯವಹಾರಗಳನ್ನು ಮಾರಾಟ ಮಾಡಿರುವ ಬಗೆಗಿನ ಎಲ್ಲ ರೀತಿ ದಾಖಲೆ ಪ್ರತಿಗಳನ್ನು ನಾವು ಈ ದೇಶದ ಸಃಬಃಧಪಟ್ಟಿರುವ ಸರ್ಕಾರಿ ಕಛೇರಿಗಳಿಗೂ ಸಲ್ಲಿಸಿದ್ದೀವಲ್ಲ. ಈಗ ಸಂಸ್ಥಾನಕ್ಕೂ ಈ ದೇಶದಲ್ಲಿ ಮೊದಲಿದ್ದ ವ್ಯವಹಾರಗಳಿಗೂ ಯಾವುದೇ ರೀತಿಯ ಸಂಬಂಧವಿಲ್ಲ ಅವರೇನಾದ್ರೂ ಮಾಡಿಕೊಳ್ಳಲಿ ಬಿಡು ಅವರ ಜೊತೆಗಿನ ನಮ್ಮ ವ್ಯವಹಾರ ಮುಗೀದ ಅಧ್ಯಾಯ. ಇದರಿಲಿ ಪಕ್ಕಕ್ಕಿಡು ನೀನೇನು ಮದುವೆಯಾಗುವ ಯೋಚನೆ ಮಾಡಿಲ್ವ ?

ಅಜಯ್ ನಾಚಿಕೊಂಡು.....ಇಲ್ಲ ಮಾತೆ ಮದುವೆ ಬಗ್ಗೆ ನಮಗೆ ಯೋಚನೆಯೇ ಬರಲ್ಲ.

ನೀತು.....ಯಾಕಪ್ಪ ?

ಅಜಯ್..ನಮ್ಮೀ ಜೀವನ ಸೂರ್ಯವಂಶಿ ರಾಜಮನೆತನ ಹಾಗು ಸಂಸ್ಥಾನದ ಸುರಕ್ಷತೆಗೆಂದೇ ಮೀಸಲಾಗಿದೆ ಜೊತೆಗೀಗ ನಮ್ಮ ಮಾತೆ ಆಗಿರುವ ನಿಮ್ಮ ಹಾಗು ನಿಮ್ಮ ಕುಟುಂಬದವರ ಸುರಕ್ಷತೆ ಮತ್ರ ನಮ್ಮ ಜೀವನದ ಉದ್ದೇಶ ಬೇರಿನ್ಯಾವುದರ ಕಡೆಗೂ ನಮ್ಮ ಗಮನ ಹರಿಯುವುದೇ ಇಲ್ಲ.

ನೀತು......ಅಲ್ಲ ಕಣೊ ನಿನಗಿನ್ನೂ 34 ವರ್ಷ ಮದುವೆಯಾಗಿ ಹೆಂಡತಿಯ ಜೊತೆ ಸಂಸಾರ ಮಾಡಿದ್ರೆ ಸಂಸ್ಥಾನದ ರಕ್ಷಣೆಗೆ ಅದು ಯಾವ ರೀತಿಯಲ್ಲಿ ಅಡ್ಡಿಯಾಗುತ್ತೆ ನನಗಂತೂ ಆರ್ಥವಾಗ್ತಿಲ್ಲ.

ಅಜಯ್......ಮಾತೆ ಅಜೀವನ ಪರ್ಯಂತ ಬಹ್ಮಚಾರಿಗಳಾಗಿ ಉಳಿತ್ತೀವೆಂದು ಧೀಕ್ಷೆ ಸ್ವೀಕರಿಸಿದ ನಂತರವೇ ರಕ್ಷಕರಾಗುವುದಕ್ಕೆ ನಮಗೆ ನೀಡಲಾಗುವ ಶಿಕ್ಷಣ ಪ್ರಾರಂಭವಾಗೋದು. ಶಿಕ್ಷಣದ ಸಮಯದಲ್ಲಿ ಬ್ರಹ್ಮಚರ್ಯದ ಕಠೋರ ನಿಯಮ ಪಾಲನೆ ಮಾಡುವುದಕ್ಕೂ ನಮಗೆ ತರಬೇತಿ ದೊರೆತಿರುತ್ತೆ. ಹಾಗಾಗಿ ಹೆಂಡತಿ ಮದುವೆ ಇದ್ಯಾವುದರ ಕಡೆಗೂ ನಮ್ಮಲ್ಯಾರ ಗಮನವೂ ಹೊರಳುವುದೇ ಇಲ್ಲ. ಈ ವಿಷಯವಾಗಿ ನಮ್ಮ ಮನಸ್ಸಿನಲ್ಯಾವ ಪ್ರಶ್ನೆಗಳೂ ಉದ್ಬವ ಆಗದ ರೀತಿ ನಮಗೆ ಶಿಕ್ಷಣ ಕೊಡಲಾಗಿರುತ್ತೆ.

ನೀತು........ಆಯ್ತಪ್ಪ ಮದುವೆ ವಿಷಯ ಮಾತಾಡಲ್ಲ ಆದರೆ ನಾನೀ ವಿಷಯವನ್ನೇಕೆ ಕೇಳ್ತಿದ್ದೀನಿ ಅನ್ನೋದು ನಿನಗೂ ಕೂಡ ತಿಳಿದಿರಲಿ. ಈಗ ನನ್ನ ಹಾಗು ಕುಟುಂಬದ ಸದಸ್ಯರು ಹಾಗು ಸಂಸ್ಥಾನದ ರಕ್ಷಣೆಗೆ ನೀವುಗಳಿದ್ದೀರಿ ಜೊತೆಗೆ ನಿಧಿಗಿನ್ನೂ 20 ವರ್ಷ ಅವಳ ಜೊತೆಗೂ ನೀವುಗಳೇ ಇರ್ತೀರಿ ಅದರಲ್ಲೆರಡು ಮಾತಿಲ್ಲ. ಆದರೆ ನಿಶಾ ಅವಳಿಗಿನ್ನೂ ಎರಡುವರೆ ವರ್ಷ ಕೂಡ ತುಂಬಿಲ್ಲ ಮುಂದೆ ಅವಳು ವಯಸ್ಕಳಾಗುವಷ್ಟರಲ್ಲಿ ನೀವೆಲ್ಲರು ಒಂದು ನಿರ್ಧಿಷ್ಟ ವಯಸ್ಸನ್ನು ದಾಟಿರುತ್ತೀರ ಅಗವಳ ಜೊತೆಗೆ ಹೆಗಲಿಗೆ ಹೆಗಲನ್ನು ಕೊಟ್ಟು ಅವಳನ್ಯಾರು ರಕ್ಷಣೆ ಮಾಡ್ತಾರೆ ಇದೇ ನನ್ನ ತಲೆಯಲ್ಲಿ ತುಂಬ ದಿನಗಳಿಂದ ಕಾಡುತ್ತಿರೋ ಪ್ರಶ್ನೆ. ಇದರ ಬಗ್ಗೆ ರಾಣಾ...ವಿಕ್ರಂ ಸಿಂಗ್ ಜೊತೆಗೂ ಮಾತನಾಡಬೇಕೆಂದಿದ್ದೆ ಆದರೆ ಸಮಯ ಒದಗಿ ಬಂದಿರಲಿಲ್ಲ. ಈಗಿಲ್ಲ ನಾವು ಕೆರಸವೇ ಇಲ್ಲದೆ ಕೂತಿದ್ದೀವಲ್ಲ ಅದಕ್ಕೆ ನಿನ್ನೇ ಕೇಳ್ತಿದ್ದೀನಿ ನೀವೂ ಮದುವೆ ಸಂಸಾರ ಮಾಡಿಕೊಂಡರೆ ಮುಂದೆ ನಿಮ್ಮ ಮಕ್ಕಳು ನಿಶಾಳಿಗೆ ನೆರವಾಗಿ ಇರಬಹುದಲ್ಲ ಅಂತ. ಇದರಲ್ಲಿ ನನ್ನ ಸ್ವಾರ್ಥ ಅಂತಲೇ ತಿಳಿದುಕೋ ಆದರೆ ಮಗಳ ಜೊತೆಗೆ ಸಂಸ್ಥಾನದ ಮುಂದಿನ ಮಹರಾಣಿ ಆಗುವವಳ ಭವಿಷ್ಯದ ದೃಷ್ಟಿಯಿಂದ ಯೋಚಿಸಿ ನಾನೀ ಪ್ರಶ್ನೆ ಕೇಳ್ತಿದ್ದೀನಿ.

ಅಜಯ್.......ಹಿರಿಯ ರಾಜಕುಮಾರಿ ಇರುವಾಗ ಕಿರಿಯವರು ಮುಂದಿನ ಮಹರಾಣಿ ಯಾಕೆ ಮಾತೆ ?

ನೀತು ನಗುತ್ತ.....ಊಟ ಮಾಡಿದ್ಯಾ ?

ಅಜಯ್.....ಕ್ಷಮಿಸಿ ಮಾತೆ ನಾನು ಹೆಚ್ಚಿಗೆಯೇ ಕೇಳ್ಬಿಟ್ಟೆ ಅನ್ಸುತ್ತೆ

ನೀತು.......ಅಯ್ಯೋ ಹಾಗೇನಿಲ್ಲ ಕಣೋ ನನಗೆ ಹೊಟ್ಟೆ ಹಸಿತಿದೆ ನಿನ್ನದೂ ಊಟವಾಗಿಲ್ಲದಿದ್ರೆ ಒಟ್ಟಿಗೆ ಆರ್ಡರ್ ಮಾಡ್ತೀನಿ ಅಂತ.

ಅಜಯ್.......ಇನ್ನೂ ಆಗಿಲ್ಲ ಮಾತೆ.

ನೀತು ಊಟಕ್ಕೆ ಆರ್ಡರ್ ಮಾಡಿ.....ನಡಿ ಹೊರಗೆ ಗಾರ್ಡನ್ನಿನಲ್ಲಿ ಕುಳಿತು ಮಾತಾಡಣ (ಗಾರ್ಡನ್ನಿಗೆ ಬಂದಾಗ ) ಅಜಯ್ ನಿಮ್ಮ ಹಿರಿಯ ರಾಜಕುಮಾರಿ ನಿಧಿ 14 ವರ್ಷ ಅಪ್ಪ ಅಮ್ಮ ಇಬ್ಬರಿಂದ ದೂರವಾಗಿ ಆಶ್ರಮದ ಕಠೋರ ಜೀವನದಲ್ಲಿದ್ದವಳು. ಒಂದು ವರ್ಷದ ಹಿಂದಷ್ಟೆ ಅವಳು ಮರಳಿ ಈ ತಾಯಿಯ ಮಡಿಲಿಗೆ ಬಂದು ಸೇರಿರುವಾಗ ಅರಮನೆ....ಮಹರಾಣಿಯ ಕರ್ತವ್ಯಗಳಲ್ಲಿ ತೊಡಗಿಸಿಕೊಳಳುವುದಕ್ಕೆ ಅವಳು ಒಪ್ಪಿಕೊಳ್ತಿಲ್ಲ. ಅದಕ್ಕೆ ಅಪ್ಪ ಅಮ್ಮನ ಬಳಿ ಖಡಾಖಂಡಿತವಾಗಿ ಹೇಳ್ಬಿಟ್ಳು ರಾಜಕುಮಾರಿಯ ಎಲ್ಲಾ ಜವಾಬ್ದಾರಿಗಳನ್ನು ವಿಭಾಯಿಸಲು ನಾನು ಸಿದ್ದ ಆದರೆ ಮಹರಾಣಿಯ ಪಟ್ಟ ನಿಶಾಳಿಗೇ ಮೀಸಲಿರಬೇಕು ಅನ್ನೋದು ಅವಳ ಕಂಡಿಷನ್. ನಿಧಿಯೇನು ಚಿಕ್ಕ ಹುಡುಗಿಯಲ್ವಲ್ಲ ನಾವು ಬೈದು ಬುದ್ದಿ ಹೇಳುವುದಕ್ಕೆ 14 ವರ್ಷ ಗುರುಗಳ ಹತ್ತಿರವಿದ್ದು ಅವಳೆಲ್ಲಾ ರೀತಿಯಲ್ಲೂ ಪ್ರಬುದ್ದಳಾಗಿ ಬೆಳೆದಿದ್ದಾಳೆ. ಇದರ ಜೊತೆ ಒಂದು ವಯಸ್ಸಿಗೆ ಬಂದಾಗ ನಾವು ಮಕ್ಕಳನ್ನು ನಮ್ಮ ಗೆಳೆಯರ ರೀತಿ ನೋಡಿಕೊಳ್ಳುವುದು ಅಗತ್ಯ. ಅವರ ಮನಸ್ಸಿನ ಯೋಚನೆಗಳ ಜೊತೆಗೆ ಅವರಿಗೆ ಭವಿಷ್ಯದ ಬಗ್ಗೆ ಇರುವಂತಹ ದೃಷ್ಟಿಕೋನವನ್ನು ತಾಳ್ಮೆಯಿಂದ ಕೇಳಿ ಅದಕ್ಕೆ ಸರಿಯಾದ ದಾರಿ ತೋರಿಸಿ ಕರೆದೊಯ್ಯುವುದು ತಂದೆ ತಾಯಿಯ ಕರ್ತವ್ಯ. ಈಗ ಗಿರೀಶನನ್ನೇ ಉದಾಹರಣೆಗೆ ತೆಗೆದುಕೋ ಚಿಕ್ಕಂದಿನಿಂದಲೂ ಅವನು ಡಾಕ್ಟರಾಗಲೆಂಬುದೇ ನನ್ನಾಸೆಯಾಗಿತ್ತು ಆಗ ನಾವುಗಳು ಇದ್ದಿದ್ದೇ ಕೇವಲ ನಾಲ್ಕು ಜನರ ಸಂಸಾರ. ಈಗಿನ ಬದಲಾಗಿರುವ ಸನ್ನಿವೇಶದಲ್ಲಿ ಅಕ್ಕನ ಬೆನ್ನುಲೆಬಾಗಿ ನಿಲ್ಲುವ ನಿರ್ಧಾರ ಅವನೇ ತೆಗೆದುಕೊಂಡಿರುವಾಗ ನಾವೂ ಅವನ ಆಲೋಚನೆಗಳನ್ನು ಮನ್ನಿಸಿ ಜೊತೆಗಿರಬೇಕೇ ಹೊರತು ಅವನಿಗೆ ಬಲವಂತವಾಗಿ ಇದನ್ನೇ ಮಾಡಬೇಕೆಂದು ಒತ್ತಡ ಹೇರಬಾರದು ಅದು ತಪ್ಪು.

ಅಜಯ್......ಎಲ್ಲವೂ ಅರ್ಥವಾಯ್ತು ಮಾತೆ ನಿಮ್ಮ ಮತ್ತು ಸರ್ ಮಾರ್ಗದರ್ಶನ ಮತ್ತು ಆಶೀರ್ವಾದ ಇರುವಾಗ ಯಾವ ಮಕ್ಕಳು ಕೂಡ ತಪ್ಪು ದಾರಿಯಿನ್ನು ಆಯ್ಕೆ ಮಾಡಿಕೊಳ್ಳಲು ಸಾಧ್ಯವಿಲ್ವಲ್ಲ. (ಸೆಕ್ಸ್ ಒಂದನ್ನು ಬಿಟ್ಟು ಏಕೆಂದರೆ ಅದರಲ್ಲಿ ಅಪ್ಪ ಅಮಮಂದಿರೇ ಸರಿಯಿಲ್ವಲ್ಲ ) ಈಗ ನಿಮ್ಮ ಮನಸ್ಸಿನಲ್ಲಿರುವ ಭವಿಷ್ಯದ ಪ್ರಶ್ನೆಗೆ ಉತ್ತರ ಹೇಳ್ತೀನಿ ಇದನ್ನು ಸಧ್ಯಕ್ಕೆ ನಿಮ್ಮ ಹತ್ತಿರ ವಿಕ್ರಂ ಸಿಂಗ್ ಅಥವ ರಾಣಾ ಇಬ್ಬರಲ್ಯಾರು ಹೇಳುವುದಿಲ್ಲ. ನಿಮ್ಮಲ್ಲಿ ನನಗೆ ತಾಯಿ....ಅಕ್ಕ....ಮಾರ್ಗದರ್ಶಕಿ ಎಲ್ಲದರ ಅನುಭೂತಿಯಾಗೊ ಕಾರಣ ನಿಮ್ಮಿಂದೇನನ್ನೂ ಮುಚ್ಚಿಡುವುದಕ್ಕೆ ನನ್ನಿಂದ ಸಾಧ್ಯವೇ ಇಲ್ಲದ ಮಾತು. ನಾನು ನೀವು ಅಥವ ಹುಟ್ಟಿರುವ ಯಾವುದೇ ವ್ಯಕ್ತಿಯಾಗಿರಲಿ ಈ ಭೂಮಿಯ ಮೇಲೆ ಶಾಶ್ವತವಲ್ಲ ಇದೆಲ್ಲವೂ ಸೃಷ್ಟಿಯ ನಿಯಮ. ಈಗ ಸಂಸ್ಥಾನದ ಹಾಗು ಕುಟುಂಬದ ರಕ್ಷಣೆ ಜವಾಬ್ದಾರಿಗಳನ್ನು ನಾವೇಳು ಜನ ರಕ್ಷಕ ಪ್ರಮುಖರಾಗಿ ಎಲ್ಲಾ ಕಾರ್ಯ ನಿರ್ವಹಹಿಸ್ತಿದ್ದೀವಿ. ನಮ್ಮ ನಂತರ ಯಾರೆಂಬುದು ನಿಮ್ಮ ಮನಸ್ಸಿನಲ್ಲಿರುವ ಪ್ರಶ್ನೆ ಅದಕ್ಕೂ ತಯಾರಿ ನಡಿತಿದೆ.

ನೀತು......ತಯಾರಿಯಾ ? ಯಾವ ರೀತಿಯದ್ದು ? ನನ್ನ ಗಮನಕ್ಕೆ ಇಲ್ಲಿವರೆಗೂ ಅಂತದ್ದೇನೂ ಬಂದೇ ಇಲ್ವಲ್ಲ ಅಜಯ್.

ಅಜಯ್.......ನಾವೆಲ್ಲರೂ ಸೇರಿ ನಿಮ್ಮಿಂದ ಮುಚ್ಚಿಟ್ಟಿರುವಂತ ರಹಸ್ಯ ಇದೊಂದೇ ಮಾತೆ ಅದನ್ನು ಹೇಳುವುದಕ್ಕಿಂತ ಮುಂಚೆ ನಿಮ್ಮಿಂದ ಮುಚ್ಚಿಟ್ಟಿರುವುದಕ್ಕೆ ನಾನು ಕ್ಷಮೆ ಕೋರುವೆ. ನಮ್ಮ ಮುಂದಿನ ಪೀಳಿಗೆಯ ರಕ್ಷಕರ ತಯಾರಿ 12 ವರ್ಷಗಳ ಹಿಂದೆಯೆ ಪ್ರಾರಂಭವಾಗಿದೆ. ರಾಣಾ ಜೊತೆ ನಾವುಗಳು ಅರಮನೆಯನ್ನು ತ್ಯಜಿಸಿದ ಮೂರ್ನಾಲ್ಕು ವರ್ಷದ ಬಳಿಕ ಮಹರಾಣಿಯವರು ಗುರುಗಳಾದ ಶ್ಯಾಮ ವಸಿಷ್ಠರ ಜೊತೆ ಪುಷ್ಕರಕ್ಕೆ ಆಗಮಿಸಿದ್ದರು. ಅಲ್ಲಿಯೇ ಹೊಸ ಪೀಳಿಗೆಯ ರಕ್ಷಕರನ್ನು ಸಜ್ಜುಗೊಳಿಸುವ ಕಾರ್ಯಕ್ಕೆ ಚಾಲನೆ ದೊರೆಯಿತು. ಇದೇ ಪದ್ದತಿ ನಮ್ಮ ದೇಶಕ್ಕೆ ಸ್ವಾತಂತ್ರ ದೊರೆತ ನಂತರದಿಂದಲೂ ನಡೆದುಕೊಂಡು ಬರ್ತಿದೆ ಅದಕ್ಕೂ ಮುಂಚೆ ರಾಜರ ಆಳ್ವಿಕೆಯೇ ಇತ್ತಲ್ಲ. ಸ್ವಾತಂತ್ರ ದೊರೆತ ನಂತರದ ಮೂರನೇ ಪೀಳಿಗೆ ರಕ್ಷಕರಾಗಿ ನಾವುಗಳೆಲ್ಲರೂ ನೇಮಕಗೊಂಡಿದ್ದು ನಮ್ಮನ್ನು ಹಿರಿಯ ಮಹರಾಜರೇ ಗೌರವಿಸಿ ಆಲಂಗಿಸಿಕೊಂಡು ಬರಮಾಡಿಕೊಂಡರು.

ನೀತು.....ಈ ನೇಮಕಾತಿ ಪ್ರಕ್ರಿಯೆಗಳು ಹೇಗೆ ನಡೆಯುತ್ತೆ ?

ಅಜಯ್....ಪ್ರತಿಯೊಬ್ಬರೂ ರಕ್ಷಕರಾಗಲು ಸಾಧ್ಯವಿಲ್ವಲ್ಲ ಮಾತೆ ವಿಶೇಷ ಗುಣವಿರುವ ಮಗುವನ್ನೇ ಆಯ್ಕೆ ಮಾಡಿಕೊಳ್ಳಲಾಗುತ್ತೆ ಅದೇಗೆ ಅಂತ ನನಗೆ ತಿಳಿದಿಲ್ಲ ಅದನ್ನೆಲ್ಲಾ ಆಶ್ರಮದ ಗುರುಗಳ ಮುಂದಾಳತ್ವದಲ್ಲಿ ಅವರೇ ನೋಡಿಕೊಳ್ತಾರೆ.

ನೀತು.....ಆ ಮಕ್ಕಳ ತಂತೆ ತಾಯಿ ವಿರೋಧಿಸಿದರೆ ?

ಅಜಯ್......ದೇಶದ ಉದ್ದಗಲಕ್ಕೂ ಅನಾಥರಾಗಿರುವ ಮಕ್ಕಳೇ ರಕ್ಷಕರನ್ನಾಗಿ ಪರಿವರ್ತನೆಗೊಳ್ಳಲು ಆಯ್ತೆ ಮಾಡಿಕೊಳ್ಳಲಾಗುತ್ತೆ ಮಾತೆ ಅವರಲ್ಲಿ ಕೆಲವು ರಕ್ಷಕರು ಮದುವೆಯಾಗಿದ್ದರೆ ಅವರು ಇಚ್ಚಿಸಿದಲ್ಲಿ ಅವರ ಮಕ್ಕಳನ್ನೂ ಪರೀಕ್ಷಿಸಿದ ನಂತರವೇ ಆಯ್ಕೆ ಮಾಡಿಕೊಳ್ಳೋದು. ಮಗುವಿಗೆ ಒಂದು ವರ್ಷ ತುಂಬುವುದಕ್ಕೂ ಮುಂಚೆಯೇ ಗುರುಗಳು ತಮ್ಮ ವಿಧಾನದಿಂದ ಆ ಮಗು ರಕ್ಷಕ ತಂಡದ ಸದಸ್ಯನಾಗಲು ಸೂಕ್ತನಾ ಎಂದು ಆಯ್ತೆ ಮಾಡ್ತಾರೆ. ಸಧ್ಯಕ್ಕೀಗ 10000 ಮಕ್ಕಳಿಗೆ ರಕ್ಷಕರ ತರಬೇತಿ ಜೊತೆಜೊತೆಗೆ ಆಧ್ಯಾತ್ಮಿಕ....ಸಾಮಾಜಿಕ....ನೈತಿಕ....ಮನೋಸ್ಥೈರ್ಯ ವೃದ್ದಿ... ಯುದ್ದ ಕಲೆಯೀ ಜೊತೆಗೆ ಆಧುನಿಕ ಯುಗದ ಬಗ್ಗೆಯೂ ತರಬೇತಿ ಕೊಡಲಾಗ್ತಿದೆ. ಈಗಾ ಮಕ್ಕಳಿಗೆ ಬಹುಶಃ 8—9 ವರ್ಷ ಇರಬಹುದು ಅವರಿಗೆ 20 ವರ್ಷ ತುಂಬಿದಾಗ ಎಲ್ಲಾ ರೀತಿಯ ಶಿಕ್ಷಣವನ್ನು ಮುಗಿಸಿ ರಕ್ಷಕರಾಗಿ ನೇಮಕಗೊಳ್ತಾರೆ.

ನೀತು.....ಈಗಾ ಮಕ್ಕಳ ಶಿಕ್ಷಣ ಎಲ್ಲಿ ನಡೆಯುತ್ತಿದೆ ಅಜಯ್ ?

ಅಜಯ್......ಮಕ್ಕಳಿಗೆ ಐದು ವರ್ಷ ತುಂಬುವ ತನಕ ಎಲ್ಲರೂ ಹೃಷಿಕೇಶದ ಒಂದು ಆಶ್ರಮದಲ್ಲಿದ್ದರು ನಂತರದ ಪ್ರಾಥಮಿಕ ಶಿಕ್ಷಣ ಪುಷ್ಕರ ಮತ್ತು ಜೈಪುರದಲ್ಲಿ ಮುಂದಿನೆರಡು ವರ್ಷಗಳ ತನಕವೂ ನಡೆಯಿತು. ಈಗಾ ಮಕ್ಕಳೆಲ್ಲಿದ್ದಾರೆಂದು ಗುರುಗಳು.. ರಾಣಾ...ವಿಕ್ರಂ ಸಿಂಗ್ ಮೂವರಿಗಷ್ಟೇ ಗೊತ್ತಿದೆ ಮಾತೆ. ನೀವು ಅವರ ಬಳಿ ವಿಚಾರಿಸಿದರೆಲ್ಲವೂ ತಿಳಿಯುತ್ತೆ.

ನೀತು.......ಸಧ್ಯಕ್ಕೀಗ ಬೇಡ ಸಮಯ ನೋಡಿಕೊಂಡು ನಾನು ಗುರುಗಳ ಬಳಿಯೇ ಈ ವಿಷಯದ ಬಗ್ಗೆ ಪ್ರಸ್ತಾಪ ಮಾಡ್ತೀನಿ. ನಡಿ ಊಟವೂ ಬಂತು.

ಇಬ್ಬರೂ ಊಟ ಮುಗಿಸಿ ರಾತ್ರಿ ಎರಡರವರೆಗೂ ಮಾತುಕತೆ ಆಡುತ್ತ ಕುಳಿತಿದ್ದು ಅವನಿಗೋಗಿ ಮಲಗುವಂತೇಳಿದ ನೀತುವಿನ ತಲೆಯಲ್ಲಿ ಭವಿಷ್ಯಕ್ಕಾಗಿ ರಕ್ಷಕರನ್ನು ಅದಾಗಲೇ ಸಿದ್ದಪಡಿಸುತ್ತಿದ್ದ ವಿಷಯವೇ ಸುತ್ತುತ್ತಲಿತ್ತು.
* *
* *


....continue
 
Last edited:

Samar2154

Well-Known Member
2,258
1,247
159
Continue.......


ಭವಿಷ್ಯದ ಒಂದು ಸಣ್ಣನೇ ಝಲಕ್........

ನಿಶಾಳಿಗೆ ಕಳೆದ ತಿಂಗಳಿನ ವಿಜಯದಶಮಿಯಂದು ನಾಲ್ಕು ವರ್ಷ ತುಂಬಿದ್ದು ದೀಪಾವಳಿ ಹಬ್ಬಕ್ಕೂ ಮುನ್ನ ಮನೆಯ ಎಲ್ಲಾ ಸದಸ್ಯರನ್ನೊಳ್ಳಗೊಂಡು ಗೋವಿಂದಾಚಾರ್ಯರು ಮತ್ತವರ ಇಬ್ಬರು ಶಿಷ್ಯರ ಜೊತೆ ಶೃಂಗೇರಿ ಶಾರದಾ ಮಾತೆಯ ದರ್ಶನ ಪಡೆದು ವಿಶೇಷ ಪೂಜಾ ಕಾರ್ಯಗಳನ್ನು ನೆರವೇರಿಸಲಾಯಿತು. ಶೃಂಗೇರಿ ಗುರುಗಳ ಪಾದಪೂಜೆ ಮಾಡಿ ಮನೆಯ ಮಕ್ಕಳನ್ನೂ ಸೇರಿ ಹಿರಿಯರೆಲ್ಲರೂ ಅವರ ಆಶೀರ್ವಾದ ಪಡೆದು ಪ್ರಸಾದ ಸ್ವೀಕರಿಸಿದ ನಂತರ ಅನ್ನಪೂರ್ಣೇಶ್ವರಿಯ ದರ್ಶನ ಮಾಡಲಿಕ್ಕೆ ಹೊರನಾಡಿಗೆ ತಲುಪಿದರು. ಮನೆಯ ಪ್ರಿತೀ ಮಕ್ಕಳ ಹುಟ್ಟಿದ ದಿನದಂದು ನಿರಂತರವಾಗಿ ಹೊರನಾಡಿನ ಅನ್ನಪೂರ್ಣೇಶ್ವರಿಯ ಸನ್ನಿಧಾನದಲ್ಲಿ ಅನ್ನ ಸಂತರ್ಪಣೆಯ ಕಾರ್ಯ ನಡೆಯಲೆಂದು ಅವರ ಹೆಸರಿನಲ್ಲಿ ಹಣ ಜಮೆ ಮಾಡಲಾಯಿತು. ಮನೆಯಲ್ಲಿ ದಿನನಿತ್ಯ ಉಪಯೋಗಿಸುವ ಸ್ಪೈಸಿ ಸಾಂಬಾರು ಪದಾರ್ಥಗಳನ್ನು ಖರೀಧಿಸಿ ಅಲ್ಲಿಂದ ಹೊರಟಾಗ ಸಮಯ 2:00 ಘಂಟೆ ಆಗಿತ್ತು. ಎಲ್ಲರೂ ವಾಹನಗಳನ್ನೇರಿದರೆ ಕೊನೆಯಲ್ಲಿ ರೇಂಜ್ ರೋವರ್ ಕಾರಿನಲ್ಲಿ ವಿಕ್ರಂ ಸಿಂಗ್...ರಾಣಾ..ಹರೀಶ...ನೀತು ತಮ್ಮ ಕಿರಿಯ ಮಗಳು ನಿಶಾಳೊಟ್ತಿಗೆ ಕುಳಿತರು. ನಿಶಾ ತನ್ನ ಅಕ್ಕನನ್ನು ಬಿಡದೆ ಅವಳನ್ನೂ ಸಹ ಜೊತೆಯಲ್ಲೇ ಬರಬೇಕೆಂದು ಎಳೆತಂದಿದ್ದಳು. (ಈ ಅಕ್ಕ ಯಾರೆಂಬುದು ಕೂಡ ಸಸ್ಪೆನ್ಸ್ ಮುಂದೆ ತಿಳಿಯಲಿದೆ ) ಇವರುಗಳಿದ್ದ ಕಾರಿನ ಹಿಂದೆ ಮುಂದೆ ರಕ್ಷಕರ ಎರಡು ಕಾರುಗಳು ಕೂಡ ಚಲಿಸುತ್ತಿದ್ದವು. ನಿಶಾ...ಅಕ್ಕ..ಅಪ್ಪ...ಅಮ್ಮನ ಜೊತೆ ಕುಟಲೆ ತಮಾಷೆ ಮಾಡುತ್ತ ಖರೀಧಿಸಿದ್ದ ಒಣ ದ್ರಾಕ್ಷಿಯನ್ನು ಒಂದೊಂದಾಗೇ ಪೋಣಿಸುತ್ತಿದ್ದಳು.

ಹರೀಶ......ಕಂದ ನಾಳೆ ಸ್ಕೂಲಿಗೆ ಹೋಗ್ಬೇಕು ನೀನು ಹೋಂ ವರ್ಕ್ ಮಾಡಿದ್ದೀಯ ?

ನಿಶಾ......ಹೂಂ ಪಪ್ಪ ABCD...ಆಇಈ....ಎಲ್ಲ 3 ಸಲ ಆಗಲೇ ಬರೆದಾಯ್ತು.

ನೀತು.......ನಿನ್ನ ಮಿಸ್ ಎಷ್ಟು ಸಲ ಬರ್ಕೊಂಡ್ ಬನ್ನಿ ಅಂತ ಹೇಳಿದ್ದಮ್ಮ ಕಂದ ?

ಅಕ್ಕ......5 ಸಲ ಬರೀಬೇಕಾಗಿತ್ತಲ್ವ ಚಿನ್ನಿ.

ನಿಶಾ ತಲೆ ಕುಣಿಸುತ್ತ.......ಹೂಂ ಮಮ್ಮಇನ್ನು 2 ಸಲ ಮನೆಗೆ ಹೋದಾಗ ಬರಿತೀನಿ ಆಯ್ತ.

ನೀತು ಮಗಳ ಕೆನ್ನೆ ತಡವುತ್ತ......ಆಯ್ತು ಕಂದ. ನೀನೀಗ ತಾಚಿ ಮಾಡ್ತೀಯಾ ?

ನಿಶಾ......ಇಲ್ಲ ಮಮ್ಮ ನಂಗೆ ನಿದ್ದೆ ಬರ್ತಿಲ್ಲ.

ಹರೀಶ.....ಎಲ್ಲಿ ರಾಣಾ ನಮ್ಮನೆಯ ಕಾರುಗಳೆಲ್ಲ ನಮಗಿಂತ ಮುಂದೆ ಹೋಗಿರುವಂತಿದೆ.

ರಾಣಾ.......ಹೌದು ಸರ್.

ವಿಕ್ರಂ ಸಿಂಗ್......ಅವರೆಲ್ಲರೂ ನಮಗಿಂತ ಮುಂಚಿತವಾಗಿಯೇ ಹೊರಟಿದ್ದು ಸರ್ ಅದಕ್ಕೆ ಮುಂದೆ ಹೋಗಿದ್ದಾರೆ.

ಹರೀಶ......ನೀನ್ ಆರಾಮವಾಗೇ ಓಡಿಸು ರಾಣಾ ಅರ್ಜೆಂಟಿಲ್ಲ.

ಹೀಗೆಯೇ ಕೆಲ ದೂರ ಸಾಗಿದಾಗ ಇವರುಗಳಿದ್ದ ಕಾರು ಇದ್ದಕ್ಕಿದ್ದ ಹಾಗೆಯೇ ವೇಗ ಪಡೆದುಕೊಳ್ಳುತ್ತ ಇವರ ಮುಂದೆ ಹೋಗ್ತಿದ್ದ ರಕ್ಷಕರ ಕಾರನ್ನು ಹಿಂದಿಕ್ಕಿ ಮುನ್ನುಗ್ಗಿತು. ರಾಣಾ ಎಷ್ಟೇ ಪ್ರಯತ್ನ ಮಾಡುತ್ತಿದ್ದರೂ ಸಹ ಕಾರಿನ ಸ್ಟೇರಿಂಗ್ ಒಂದನ್ನು ಬಿಟ್ಟರೆ ಮಿಕ್ಕ ಯಾವುದೂ ಸಹ ಕೆಲಸ ಮಾಡುತ್ತಿರಲಿಲ್ಲ.

ನೀತು......ರಾಣಾ ಇಷ್ಟು ಸ್ಪೀಡಾಗ್ಯಾಕೆ ನಿಧಾನಕ್ಕೇ ಹೋಗು.

ಅಷ್ಟರಲ್ಲಾಗಲೇ ರಾಣಾ ತಲೆಯಿಂದ ಹರಿಯಲಾರಂಭಿಸಿದ ಬೆವರು ಅವನ ಎದೆ ಭಾಗದವರೆಗೂ ತೋಯಿಸಿ ಬಿಟ್ಟಿತ್ತು.

ಹರೀಶ........ರಾಣಾ ಯಾಕಿಷ್ಟು ಬೆವರುತ್ತಿದ್ದೀಯ ? ಏನಾಯ್ತು ? ನಿನಗೆ ಆರೋಗ್ಯ ಸರಿಯಿಲ್ಲದಿದ್ದರೆ ರೆಸ್ಟ್ ಮಾಡು ವಿಕ್ರಂ ಕಾರ್ ಓಡಿಸ್ತಾನೆ ಬಿಡು.

ರಾಣಾ ಏಕಾಗ್ರತೆಯಿಂದ ಮುಂದೆ ನೋಡಿಕೊಂಡು ಡ್ರೈವಿಂಗ್ ಮಾಡುತ್ತಲೇ........ನನ್ನ ಆರೋಗ್ಯಕ್ಕೇನೂ ಆಗಿಲ್ಲ ಸರ್ ಆದರೆ ಕಾರಿನ ಆರೋಗ್ಯ ಹದಗೆಟ್ಟಿದೆ.

ಹರೀಶ.......ಹಾಗಂದ್ರೇನು ರಾಣಾ ?

ರಾಣಾ......ಸರ್ ಕಾರಿನ ಸ್ಟೇರಿಂಗ್ ಬಿಟ್ಟು ಮಿಕ್ಕಿದ್ಯಾವುದೂ ಸಹ ಕೆಲಸ ಮಾಡ್ತಿಲ್ಲ. ಬ್ರೇಕ್...ಕ್ಲಚ್...ಆಕ್ಸಿಲರೇಟರ್...ಹ್ಯಾಂಡ್ ಬ್ರೇಕ್ ಎಲ್ಲವೂ ಫ್ಯೇಲಾಗಿದೆ.

ಹರೀಶ ಹೌಹಾರಿ....ವಾಟ್ ? ಏನ್ ಹೇಳ್ತಿದ್ದೀಯ ರಾಣಾ ?

ರಾಣಾ.....ಸರ್ ಗಾಡಿಯ ಸ್ಟೇರಿಂಗ್ ಮಾತ್ರ ನನ್ನ ಕಂಟ್ರೋಲಲ್ಲಿದೆ ಮತ್ತಿನ್ಯಾವುದೂ ಕೆಲಸ ಮಾಡ್ತಿಲ್ಲ.

ರಾಣಾ ಮಾತನ್ನು ಕೇಳಿ ದಂಪತಿಗಳು ಹೆದರಿದ್ದರೆ ಮಕ್ಕಳಿಬ್ಬರನ್ನು ನೀತು ಬಿಗಿಯಾಗಿ ತಬ್ಬಿಕೊಂಡು ತಮ್ಮನ್ನೀ ಸಂಕಷ್ಟದಿಂದ ನೀವೇ ಕಾಪಾಡಬೇಕೆಂದು ದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಇವರ ಹಿಂದೆ ಮುಂದೆ ಬರುತ್ತಿದ್ದ ಕಾರುಗಳಲ್ಲಿ ಸುಮೇರ್...ದಿಲೇರ್ ಸಿಂಗ್ ಇಬ್ಬರಿದ್ದು ರಾಣಾ ಯಾಕೀ ರೀತಿ ಕಾರನ್ನು ವೇಗವಾಗಿ ಮುಂದಕ್ಕೆ ಓಡಿಸಿಕೊಂಡು ಹೋಗ್ತಿದ್ದಾನೆಂದು ತಿಳಿಯದೆ ತಾವುಗಳೂ ಅವನ ಕಾರಿನ ಹಿಂದೆ ವೇಗವಾಗಿ ಹೊರಟರು.
* *
* *
ಇತ್ತ ಮನೆಯವರು ಸಾಕಷ್ಟು ಮುಂದೆ ಬಂದಿದ್ದು ಹಿಂದೆಯೇ ಬರಬೇಕಿದ್ದ ಕಾರುಗಳ್ಯಾಕಿನ್ನೂ ಬರುತ್ತಿಲ್ಲವೆಂದು ಕಾರುಗಳನ್ನು ಸರಿಯಾದ ಜಾಗ ನೋಡಿ ನಿಲ್ಲಿಸಿಕೊಂಡು ಕಾಯತೊಡಗಿದರು.

ರೇವಂತ್.....ನೀತು...ಭಾವ ಇಬ್ಬರ ಫೋನ್ ಕನೆಕ್ಟಾಗ್ತಿಲ್ಲ.

ಅನುಷ....ನಾವೂ ಟ್ರೈ ಮಾಡ್ತಿದ್ದೀವಿ ಅಣ್ಣ ಆದ್ರೆ ಸಿಗ್ತಿಲ್ಲ.

ಸುರೇಶ......ಅಲ್ನೋಡಿ ಬಂದ್ರಲ್ಳ......ಎನ್ನುತ್ತ ಕೈ ತೋರಿಸಿದರೂ ಸಹ ರಾಣಾ ಚಲಾಯಿಸುತ್ತಿದ್ದ ಕಾರು ನಿಲ್ಲದೆ ಶರವೇಗದಲ್ಲಿ ಮುಂದೋಡಿದರೆ ಅವನ ಹಿಂದೆಯೇ ಸುಮೇರ್ ಕಾರು ಕೂಡ ನುಗ್ಗಿತು. ಆದರೆ ದಿಲೇರ್ ಸಿಂಗ್ ಇವರ ಬಳಿ ಕಾರು ನಿಲ್ಲಿಸಿದಾಗ..

ನಿಧಿ.....ಏನಿದು ದಿಲೇರ್ ಸಿಂಗ್ ? ಅವರಿಬ್ಬರೇನು ಕಾರಿನ ರೇಸ್ ಮಾಡ್ತಿದ್ದಾರಾ ? ಒಳಗೆ ನಮ್ಮಮ್ಮ ತಂಗಿಯರಿದ್ದಾರೆ ಅನ್ನೋದು ಅವರಿಗೆ ಗೊತ್ತಾಗ್ತಿಲ್ವಾ.

ದಿಲೇರ್ ಸಿಂಗ್......ನನಗದರ ಬಗ್ಗೆ ಏನೂ ಗೊತ್ತಿಲ್ಲ ಯುವರಾಣಿ ಸ್ವಲ್ಪ ಹಿಂದಿನವರೆಗೂ ರಾಣಾನ ಕಾರು ನಮ್ಮಿಬ್ಬರ ನಡುವೆಯೇ ನಿಧಾನ ಗತಿಯಲ್ಲಿ ಬರ್ತಿತ್ತು. ಆಮೇಲೇನಾಯ್ತೋ ನನಗೆ ತಿಳಿದಿಲ್ಲ ಇದ್ದಕ್ಕಿದ್ದಂತೆ ಅವರ ಕಾರು ಅನಿಯಂತ್ರಿತ ವೇಗದಲ್ಲಿ ನಮ್ಮನ್ನು ಹಿಂದಿಕ್ಕಿ ಮುಂದೋಡಿತು.

ಆಚಾರ್ಯರು ಅಷ್ಟೊತ್ತೂ ಕಣ್ಮುಚ್ಚಿಕೊಂಡು ಧ್ಯಾನದಲ್ಲಿದ್ದು..... ಏನೋ ತೊಂದರೆ ಏದುರಾಗಿದೆ ನಿಧಿ ಬೇಗ ನಡಿ ನಾವವರನ್ನು ಹಿಂಬಾಲಿಸಿಕೊಂಡು ಹೋಗ್ಬೇಕು.

ಮನೆಯ ಗಂಡಸರು ಕಾರುಗಳನ್ನೇರಿದರೆ ಹೆಂಗಸರನ್ನು ಮಕ್ಕಳ ಜೊತೆ ಗುರುಗಳ ಆದೇಶದ ಮೇರೆಗೆ ಎರಡು ವ್ಯಾನುಗಳಲ್ಲಿ ಮನೆ ಕಡೆ ಕಳುಹಿಸಲಾಯಿತು. ಸುಮ...ಸವಿತಾ...ರಜನಿ ಮತ್ತಿತರರು ತಾವೂ ನೀತು ಸಹಾಯಕ್ಕೆ ಬರ್ತೀವೆಂದರೂ ಗುರುಗಳೇ ಆದೇಶ ಮಾಡಿರುವುದರಿಂದ ಅವರೇನೂ ಮಾತನಾಡಲಾಗದೆ ಮನೆಯ ಕಡೆ ಹೋಗಬೇಕಾಯ್ತು. ನಾಲ್ಕು ಕಾರುಗಳು ಒಂದರ ಹಿಂದೆ ಮತ್ತೊಂದು ಶರವೇಗದಲ್ಲಿ ಚಲಿಸುತ್ತಿದ್ದಾಗ ಅವರಿಗೆಗೆ ಸುಮೇರ್ ಓಡಿಸುತ್ತಿದ್ದ ಕಾರು ಮುಖ್ಯ ರಸ್ತೆ ಬಿಟ್ಟು ಬೆಟ್ಟದಿಂದ ಕೆಳಗಿರುವ ಕಾಡಿನ ರಸ್ತೆಯತ್ತ ತಿರುಗಿದ್ದನ್ನು ಕಂಡು ತಾವುಗಳೂ ಸಹ ಅತ್ತಲೇ ಕಾರುಗಳನ್ನು ತಿರುಗಿಸಿದರು.
* *
* *
ಮನೆಯವರೆಲ್ಲರೂ ತಮ್ಮನ್ನು ಕಾಯುತ್ತ ನಿಂತಿರುವುದನ್ನು ಕಂಡು ಅವರಿಗೆ ವಿಷಯವೇನೆಂದು ತಿಳಿಸಲೆಂದು ಫೋನ್ ನೋಡಿದರೆ ಅದರಲ್ಲೂ ಸಿಗ್ನಲ್ ಇರಲಿಲ್ಲ.

ನೀತು.......ರೀ ಇದ್ದಕ್ಕಿದ್ದಂತೆ ಇದೇನಾಗ್ತಿದೆ ?

ಹರೀಶ......ಏನೂ ಆಗಲ್ಲ ಹೆದರಬೇಡ ಧೈರ್ಯವಾಗಿರು ನೀತು. ರಾಣಾ ಮುಖ್ಯ ರಸ್ತೆಯಲ್ಲಿ ವಾಹನ ಜಾಸ್ತಿಯಾದೆ ಮುಂದೋಗಿ ಎಡಕ್ಕೆ ತಿರುಗಿಸು ಕಾಡಿನ ರಸ್ತೆ ಅಲ್ಯಾವುದಾದರೂ ಸಣ್ಣ ಪುಟ್ಟ ಗುಡ್ಡ ಮರಕ್ಕೆ ಗುದ್ದಿಸಿ ಕಾರನ್ನು ನಿಲ್ಲಿಸಬಹುದು.

ಹರೀಶ ಹೇಳಿದಂತೆಯೇ ರಾಣಾ ಕಾರನ್ನು ಇಳಿಜಾರಿನ ರಸ್ತೆಯಲ್ಲಿ ತಿರುಗಿಸಿದಾಗ ಕಾರಿನ ವೇಗ ಇನ್ನೂ ಹೆಚ್ಚಿತು.

ಅಕ್ಕನ ಮಡಿಲಲ್ಲಿ ಕುಳಿತಿದ್ದ ನಿಶಾ.....ಅಕ್ಕ ಏನಾಯ್ತು ?

ಅಕ್ಕ.......ಏನಿಲ್ಲ ಬಂಗಾರಿ ನೀನು ಕಣ್ಣು ಮುಚ್ಚಿಕೊಂಡಿರು ಕಂದ.

ನಿಶಾ......ಸರಿ ಅಕ್ಕ......ಎಂದೇಳಿ ಕಣ್ಮುಚ್ಚಿಕೊಂಡು ಅಕ್ಕನನ್ನು ತಬ್ಬಿಕೊಂಡರೆ ನೀತು ಮಕ್ಕಳಿಬ್ಬರನ್ನು ಒಂದು ಕಡೆಯಿಂದ ತನ್ನ ತೆಕ್ಕೆಯಲ್ಲಿ ತೆಗೆದುಕೊಂಡಿದ್ದಳು.

ರಾಣಾ ಕಾರನ್ನು ಹಿಂಬಾಲಿಸಿಕೊಂಡು ಹೋಗುತ್ತಿದ್ದ ಸುಮೇರ್ ಕೂಡ ದಟ್ಟವಾದ ಕಾಡಿನ ರಸ್ತೆಯಲ್ಲಿ ಮುನ್ನುಗ್ಗಿತು. ಒಂದು ತಿರುವಿನಲ್ಲಿ ಕಾರನ್ನು ತಿರುಗಿಸಿದಾಗ ಏದುರಿಗೇ ದೊಢ್ಡದಾಗಿರುವ ಮರವೊಂದು ರಸ್ತೆಗಡ್ಡಲಾಗಿ ಬಿದ್ದಿರುವುದನ್ನು ಕಂಡು ಸಮಯಕ್ಕೆ ಸರಿಯಾಗಿ ಕಾರನ್ನು ನಿಲ್ಲಿಸಿದನು. ಸುಮೇರ್ ಚಾಕಚಕ್ಯತೆಯನ್ನು ತೋರಿಸದಿದ್ದಿದ್ದರೆ ಅವನ ಕಾರು ಮರಕ್ಕೆ ಗುದ್ದಿ ಅದರೊಳಗಿದ್ದ ರಕ್ಷಕರ ಪ್ರಾಣಾಪಾಯ ಆಗುವ ಸಂಭವವಿತ್ತು. ಸುಮೇರ್ ಕೆಳಗೆ ಇಳಿದರೆ ಅವನಿಂದೆಯೇ ರಕ್ಷಕರು ಕೆಳಗಿಳಿದು ರಾಣಾ ಡ್ರೈವಿಂಗ್ ಮಾಡುತ್ತಿದ್ದ ಕಾರು ಇಲ್ಲಿಂದೇಗೆ ಮುಂದಕ್ಕೋಯ್ತೆಂಬುದನ್ನು ಸುತ್ತಲೂ ನೋಡುತ್ತಿದ್ದರು. ಅಷ್ಟರಲ್ಲಿ ಇವರ ಹಿಂದೆಯೇ ಬಂದಿದ್ದ ನಾಲ್ಕು ಕಾರುಗಳು ಸುಮೇರ್ ಕಾರು ನಿಲ್ಲಿಸಿರುವುದನ್ನು ಕಂಡು ತಾವೂ ನಿಲ್ಲಿಸಿ ಕೆಳಗಿಳಿದರು.

ಪ್ರತಾಪ್.....ಅಣ್ಣ ಅತ್ತಿಗೆಯ ಕಾರೆಲ್ಲಿ ಸುಮೇರ್ ?

ಸುಮೇರ್......ಅದೇ ಗೊತ್ತಾಗ್ತಿಲ್ಲ ರಸ್ತೆಯಲ್ಲಿಷ್ಟು ದೊಡ್ಡ ಮರ ಬಿದ್ದಿದೆ ಆದರವರ ಕಾರೇ ಕಾಣಿಸ್ತಿಲ್ಲ.

ಅಶೋಕ......ಈ ಮರ ಬೀಳುವುದಕ್ಕೂ ಮುಂಚೆ ಅವರುಗಳಿದ್ದ ಕಾರು ಮುಂದೋಗಿರಬಹುದಲ್ವ.

ನಿಧಿ......ನಾವಿಲ್ಲೇ ನಿಂತು ಮಾತನಾಡ್ತಿದ್ರೇನೂ ಪ್ರಯೋಜನವಿಲ್ಲ ರಾಣಾ ಕಾರನ್ಯಾಕೆ ಅಷ್ಟು ಸ್ಪೀಡಾಗಿ ಓಡಿಸ್ತಿರೋದು ಅದು ಕೂಡ ಈ ಕಾಡಿನ ರಸ್ತೆಗ್ಯಾಕೆ ಬಂದಿದ್ದು ? (ಭಯದಿಂದ) ಕಾರಿನ ಬ್ರೇಕ್ ಏನಾದ್ರೂ ಫೇಲಾಯ್ತಾ ?

ಅವಳ ಮಾತಿಗೆ ಮಿಕ್ಕವರ ಗುಂಡಿಗೆಯೇ ನಡುಗಿದರೆ......

ಸುಭಾಷ್........ನಾವಿಲ್ಲಿಂದ ಮುಂದೆ ಕಾರಲ್ಲಿ ಹೋಗಲಿಕ್ಕಾಗಲ್ಲ ಈ ಮರ ದಾಟಿಕೊಂಡೇ ಮುಂದೋಗಿ ನೋಡೋಣ ಗಿರೀಶ ನಡಿ
ಎಲ್ರೂ ಬನ್ನಿ.....ಎಂದೇಳಿ ಮರ ದಾಟಲು ಮುಂದಾದನು.

ಆಚಾರ್ಯರು......ನಿಲ್ಲು ಸುಭಾಷ್ ನಮಗ್ಯಾವುದೋ ಅಶುಭದ ಸೂಚನೆ ಸಿಗ್ತಿದೆ ಯಾರೂ ಮರದ ಹತ್ತಿರವೂ ಹೋಗ್ಬೇಡಿ ಹಿಂದೆ ಬಂದು ನಿಲ್ಲಿ.

ಆಚಾರ್ಯರು ತಮ್ಮ ಜೋಳಿಗೆಯಿಂದ ಮಂತ್ರಿಸಿದ್ದ ಕುಂಕುಮ ತೆಗೆದುಕೊಂಡು ರಸ್ತೆಗಡ್ಡ ಬಿದ್ದಿರುವ ಮರದ ಮೇಲೆ ಉದುರಿಸಿ ಕಣ್ಮುಚ್ಚಿಕೊಂಡು ಮಂತ್ರ ಜಪಿಸತೊಡಗಿದರು. ಮಧ್ಯಾಹ್ನದ ಮೂರು ಘಂಟೆ ಸಮಯದಲ್ಲಿ ಸೂರ್ಯ ತನ್ನ ಪ್ರಕಾಶವನ್ನು ಬೀರುತ್ತಿರುವ ಸಮಯದಲ್ಲಿ ಇದ್ದಕ್ಕಿದ್ದಂತೆ ಆಗಸದಲ್ಲಿ ಕಪ್ಪನೆಯ ಕಾರ್ಮೋಡಗಳು ಆವರಿಸಿಕೊಳ್ಳಲು ಶುರುವಾಯ್ತು. ಕೆಲವೇ ನಿಮಿಷಗಳಲ್ಲಿ ಆ ಕಾಡಿನ ಭಾಗವನ್ನೆಲ್ಲಾ ಸಂಪೂರ್ಣವಾಗಿ ಕಾರ್ಮೋಡಗಳು ಆವರಿಸಿಕೊಂಡಾಗ ಎಚ್ಚೆತ್ತ ಆಚಾರ್ಯರ ಕಣ್ಣುಗಳಲ್ಲಿ ಭಯ ಮತ್ತು ಮುಖ ಯಾವುದೋ ಗಂಡಾಂತರ ಏದುರಾಗಿರುವ ಮುನ್ಸೂಚನೆಯಿಂದ ಬಿಳಿಚಿಕೊಂಡಿತ್ತು.

ನಿಧಿ......ಗುರುಗಳೇ ಏನಾಯ್ತು ? ನಾವೀಗ ಮರ ದಾಟಿ ಮುಂದೆ ಹೋಗಬಹುದಾ ?

ಆಚಾರ್ಯರು ತಡವರಿಸುತ್ತಲೇ ಜೋರಾಗಿ........ಬೇಡ..ಬೇಡ... ನಿಧಿ ಈ ಮರದ ಮುಂದೆ ಸಾವಿದೆ ಯಾರೂ ಹೋಗ್ಬೇಡಿ ಇದು ನನ್ನಾಜ್ಞೆ ಅಂತಲೇ ಭಾವಿಸಿ ಮುಂದಕ್ಯಾರೂ ಹೋಗ್ಬಾರ್ದು.

ರವಿ.......ಯಾಕೆ ಗುರುಗಳೇ ಈ ಮರದ ಮುಂದೆ ಸಾವಿದೆ ಅಂತ ಹೇಳ್ತಿದ್ದೀರಲ್ಲ ನಮಗೇನೂ ಅರ್ಥವಾಗ್ತಿಲ್ಲ.

ಸುಭಾಷ್.......ಈ ಮರದ ಮುಂದೆ ಯಾರಿದ್ದಾರೆ ಗುರುಗಳೇ ?

ಆಚಾರ್ಯರು ನಡುಗುವ ದನಿಯಲ್ಲೇ.....ಅಘೋರಿ...ಕಪಟಿ... ತಂತ್ರ ಮಂತ್ರವಾಗಿ ತಾರಕನಾಥ್ ಇದೆಲ್ಲ ಅವನದ್ದೇ ಮಾಯಾ ಜಾಲ ಮುಂದಕ್ಯಾರೂ ಹೋಗ್ಬೇಡಿ. ಇಲ್ಲಿಂದ ಮುಂದೆ ಸಾವು ಖಚಿತ.


ಅಘೋರಿ...ಮಂತ್ರವಾದಿ ತಾರಕನಾಥ್ ಈ ಕಥೆಯ ಪ್ರಮುಖ ಖಳನಾಯಕ. ಇದರ ಪೂರ್ತಿ ವಿವರಣೆ ಮುಂದೇನಾಯ್ತು ಅಂತ ಕಥೆ ಮುಂದೆ ಸಾಗಿದಾಗ ನಿಮಗೇ ತಿಳಿಯುತ್ತೆ ನಾವಿನ್ನೂ ಕೂಡ ಒಂದುವರೆ ವರ್ಷ ಕಥೆಯಲ್ಲಿ ಹಿಂದಿದ್ದೀವಲ್ಲ ಇದು ಸಣ್ಣದೊಂದು ಝಲಕ್ ಮಾತ್ರವೇ ಜೊತೆಗೆ ಕಥೆಯ ಪ್ರಮುಖ ಖಳನಾಯಕನ ಪರಿಚಯ ಮಾಡಿಸಿರೋದ್ದಷ್ಟೆ.
 
Last edited:

Raj gudde

Member
184
42
28
ಸುಪರ್ ಜಲಕ್ . ಕಳನಾಯಕನ ಪಾತ್ರ ತಂದಿರೊದು‌ ವಾವ್...... ಕತೆಯಂತು‌ ವರ್ಣನೆ ಮಾಡೊಕೆ‌ ಆಗ್ತಾ ಇಲ್ಲಾ.... ಮುಂದಿನ ಬಾಗ ಬೇಗ ಬರಲಿ‌...
 
  • Like
Reactions: Samar2154
Top