3
ವಿಮಲಮ್ಮನ ಗಂಡ, ಅಂದರೆ ಸರೋಜಳ ತಂದೆ ಹಾಗೂ ನವೀನನ ತಾತ, ಶಿವಪ್ಪ ತೀರಿಕೊಂಡು ಅಂದಿಗೆ ಸರಿಯಾಗಿ ಒಂದು ತಿಂಗಳಾಗಿತ್ತು. ಎರಡು ವರ್ಷ ಹಾಸಿಗೆಯ ಮೇಲೆ ನರಳಿ ನರಳಿ ಕೊನೆಗೆ ಮುಕ್ತಿ ಸಿಕ್ಕಿತು ಅವನಿಗೆ. ಅವನು ತೀರಿಕೊಂಡಾಗ ವಿಮಲಮ್ಮಲಿಗೆ ದುಃಖಕ್ಕಿಂತ ಸಮಾಧಾನ ಹೆಚ್ಚಾಗಿತ್ತು.
ಅವಳ ಗಂಡ ನರಳುವುದು ನೋಡುವುದು ತಪ್ಪಿತು ಎಂದಷ್ಟೇ ಅಲ್ಲ, ಇನ್ನೂ ಅವಳು ಇಷ್ಟ ಬಂದಂತೆ ಇರಬಹುದು ಎಂದು. ನವೀನನಿಗೂ ಹಾಗೆ ಎನಿಸಿತು. ತಾತನ ನೋಡುವ ನೆಪದಲ್ಲಿ ವಾರ್ ವಾರವೂ ಬಂದು ಅಜ್ಜಿ ಮನೆಯಲ್ಲಿ ಇದ್ದು ಹೋಗುತ್ತಿದ್ದ.
ಹೀಗೆ ಬಂದು ಅವರ ಆರೈಕೆ, ಸುಖ ಸುಖಗಳಲ್ಲಿ ಭಾಗಿಯಾಗಿ ಆ ಇಬ್ಬರು ವೃದ್ಧರಿಗೆ ತೀರ ಹತ್ತಿರವಾಗಿದ್ದ. ಅವನ ಬಂಧುಗಳು, ಕಸಿನ್ಸ್, ಅಷ್ಟೇ ಯಾಕೆ, ಅವನ ಸ್ವಂತ ತಂದೆ ತಾಯಿ ಅವನ ತಾತನ ಕಡೆ ಹೆಚ್ಚು ಗಮನ ಕೊಡದೆ ಹೋದರು. ಮೊದಮೊದಲು ಹಾಸಿಗೆ ಹಿಡಿದಾಗ ಅವರೆಲ್ಲ ಬಂದು ನೋಡುತ್ತಿದ್ದರೂ, ಕಾಲ ಕ್ರಮೇಣ ಅವರನ್ನು ನೋಡಲು ಬರುತ್ತಿದ್ದವನು ನವೀನ ಒಬ್ಬನೇ.